Asianet Suvarna News Asianet Suvarna News

ಮಲಗೋ ಕೋಣೆಯಲ್ಲಿ ರಾಕ್ಷಸ... 3 ವರ್ಷದ ಮಗಳ ಮಾತು ಕಲ್ಪನೆ ಎಂದು ನಿರ್ಲಕ್ಷಿಸಿದ ಪೋಷಕರಿಗೆ ಶಾಕ್

ಆಗಷ್ಟೇ ಮಾತು  ಕಲಿತು ತೊದಲು ನುಡಿ ಆಡುವ ಮಕ್ಕಳ ಕಲ್ಪನಾ ಲೋಕವೇ ಬೇರೆಯೇ ಆಗಿರುತ್ತದೆ. ಹೀಗಾಗಿ ಮಕ್ಕಳ ಮಾತನ್ನು ಬಹಳ ಗಂಭೀರವಾಗಿ ಪರಿಗಣಿಸುವವರು ಬಹಳ ಅಪರೂಪ ಹೀಗಿರುವಾಗ ಅಮೆರಿಕಾದಲ್ಲಿ ಮೂರು ವರ್ಷದ ಮಗುವೊಂದು ತಾನು ವಾಸ ಮಾಡುವ ಕೋಣೆಯಲ್ಲಿ ರಾಕ್ಷಸನಿದ್ದಾನೆ ಎಂದು ಹಲವು ಬಾರಿ ಪೋಷಕರ ಬಳಿ ಹೇಳಿದ್ದಾಳೆ.

Demon in Sleeping room parents who ignored 3 year old daughters words as imagination later shocked seeing fact akb
Author
First Published May 4, 2024, 3:21 PM IST

ಉತ್ತರ ಕರೋಲಿನಾ: ಸಾಮಾನ್ಯವಾಗಿ ಭಾರತದಲ್ಲಿ ಸಣ್ಣ ಮಕ್ಕಳು ಪೋಷಕರ ಜೊತೆಗೆ ಮಲಗುತ್ತಾರೆ. ಆದರೆ ವಿದೇಶದಲ್ಲಿ ಹಾಗಲ್ಲ,  ಮಕ್ಕಳನ್ನು ಸಣ್ಣ ವಯಸಸ್ಸಿನಲ್ಲಿಯೇ ಬೇರೆಯದೇ ರೂಮ್‌ನಲ್ಲಿ ಮಲಗಿಸುತ್ತಾರೆ. ಮತ್ತೊಂದೆಡೆ ಆಗಷ್ಟೇ ಮಾತು  ಕಲಿತು ತೊದಲು ನುಡಿ ಆಡುವ ಮಕ್ಕಳ ಕಲ್ಪನಾ ಲೋಕವೇ ಬೇರೆಯೇ ಆಗಿರುತ್ತದೆ. ಹೀಗಾಗಿ ಮಕ್ಕಳ ಮಾತನ್ನು ಬಹಳ ಗಂಭೀರವಾಗಿ ಪರಿಗಣಿಸುವವರು ಬಹಳ ಅಪರೂಪ ಹೀಗಿರುವಾಗ ಅಮೆರಿಕಾದಲ್ಲಿ ಮೂರು ವರ್ಷದ ಮಗುವೊಂದು ತಾನು ವಾಸ ಮಾಡುವ ಕೋಣೆಯಲ್ಲಿ ರಾಕ್ಷಸನಿದ್ದಾನೆ ಎಂದು ಹಲವು ಬಾರಿ ಪೋಷಕರ ಬಳಿ ಹೇಳಿದ್ದಾಳೆ. ಆದರೆ ಪೋಷಕರು ಎಂದಿನಂತೆ ಕಾಮಿಕ್ ಕಾರ್ಟೂನ್ ನೋಡುವ ಮಕ್ಕಳ ಭ್ರಮೆ ಇದು ಎಂದು ಮಗವಿನ ಮಾತನ್ನು ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷ್ಯ ಮಾಡಿದ್ದಾರೆ.  ಆದರೆ ಪೋಷಕರ ಊಹೆ ಇಲ್ಲಿ ತಪ್ಪಾಗಿದೆ.

ಹಾಗಾದರೆ ಇದ್ದಿದ್ದೇನು?
ಉತ್ತರ ಕೆರೊಲಿನಾದ ಚಾರ್ಲೊಟ್‌ನಲ್ಲಿರುವ ತನ್ನ ಪೋಷಕರ ಫಾರ್ಮ್‌ಹೌಸ್‌ನಲ್ಲಿ ವಾಸ ಮಾಡುವ 3 ವರ್ಷ ವಯಸ್ಸಿನ ಸೇಲರ್ ಕ್ಲಾಸ್ ತನ್ನ ಮಲಗುವ ಕೋಣೆಯಲ್ಲಿ ರಾಕ್ಷಸರಿದ್ದಾರೆ ಎಂಬ ದೂರು ಹೇಳಿದಾಗ ಪೋಷಕರು ಅದರ ಬಗ್ಗೆ ಗಮನಹರಿಸಿಲ್ಲ, 

ಬಾಲಕಿ ಸೇಲರ್‌ನ ತಾಯಿ, ಆಶ್ಲೇ ಮಾಸ್ಸಿಸ್ ಕ್ಲಾಸ್ ಮತ್ತು ಆಕೆಯ ಪತಿ ಆರಂಭದಲ್ಲಿ ಮಗುವಿನ ದೂರಿನ ಬಗ್ಗೆ ಹೆಚ್ಚು ಗಮನಹರಿಸದೇ ಬಹುಶಃ ಆಕೆ ಇತ್ತೀಚೆಗೆ ಪಿಕ್ಸರ್‌, ಮೊನ್‌ಸ್ಟಾರ್ ಮುಂತಾದ ಸಿನಿಮಾಗಳನ್ನು ವೀಕ್ಷಿಸಿದ್ದು, ಅದರಿಂದ ಪ್ರಭಾವಕ್ಕೀಡಾಗಿದ್ದಾಳೆ ಎಂದು ಭಾವಿಸಿದ್ದಾರೆ.  ಬರೀ ಇಷ್ಟೇ ಅಲ್ಲ ಈ ದಂಪತಿ ಮಗಳಿಗೆ ಒಂದು ಬಾಟಲ್ ನೀರು ಕೊಟ್ಟು ಮೋನ್‌ಸ್ಟಾರ್(ರಾಕ್ಷಸರು) ಬಂದರೆ ನೀರನ್ನು ಸ್ಪ್ರೇ ಮಾಡಿ ರಾಕ್ಷಸರನ್ನು ಓಡಿಸಬಹುದು ಎಂದು ಹೇಳಿದ್ದರು ಎಂದು ಇವರ ಮನೆಯ ವಿನ್ಯಾಸಕ ಮಾಸ್ಸಿಸ್ ಕ್ಲಾಸ್ ಬಿಬಿಸಿಗೆ ಹೇಳಿದ್ದಾರೆ.

ಮನೆ ಕೆಡವುತ್ತಿರುವಾಗ ಮಲಗುವ ಕೋಣೆಯ ಗೋಡೆಯೊಳಗೆ ಪತ್ತೆಯಾಯ್ತು 5 ಕಾಳಿಂಗ ಸರ್ಪ, ಬಿಚ್ಚಿಬಿದ್ದ ಶಿಕ್ಷಕ

ಆದರೆ ಇವರ ಈ ಪ್ಲಾನ್ ಕೆಲಸ ಮಾಡಲಿಲ್ಲ, ನಂತರದ ತಿಂಗಳುಗಳಲ್ಲಿ,ಬಾಲಕಿ ಸೇಲರ್‌ಗೆ ತನ್ನ ಕೋಣೆಯಲ್ಲಿ ಏನೋ ಇದೇ ಎಂಬ ಬಾವನೆ ಮತ್ತಷ್ಟು ಬಲವಾಗಿತ್ತು. ಅಲ್ಲದೇ ಈ ಬಗ್ಗೆ ಅಮ್ಮನೊಂದಿಗೆ ಆಕೆಯ ದೂರು ಕೂಡ ಹೆಚ್ಚಾಗಿತ್ತು. ಹೀಗಾಗಿ ತಾಯಿಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ರೂಮಿನಲ್ಲಿ ಸುತ್ತಮುತ್ತಲೂ ಗಮನಿಸಲು ಶುರು ಮಾಡಿದಾಗ ಆಕೆಗೆ ತಮ್ಮ ಶತಮಾನಗಳಷ್ಟು ಹಿಂದಿನ ಆ ಮನೆಯಲ್ಲಿ ಹಾಗೂ ಮನೆಯ ಚಿಮಣಿಯಲ್ಲಿ ಜೇನುನೊಣಗಳು ಗುಂಪು ಗುಂಪು ಸುತ್ತುವುದನ್ನು ಅವರು ಗಮನಿಸಿದರು. ಬಹುಶಃ ಇವುಗಳ ಝೇಂಕಾರವನ್ನೇ ಬಾಲಕಿ ಸೇಲರ್ ವಾಸ ಮಾಡುವ ಕೋಣೆಯ ಸೀಲಿಂಗ್ ಬಳಿ ಕೇಳಿರಬಹುದು ಎಂದು ಅವರು ಭಾವಿಸಿದ್ದರು.

ಕೂಡಲೇ ಆಕೆ ಕೀಟ ನಿಯಂತ್ರಣ ಕಂಪನಿಯನ್ನು ಸಂಪರ್ಕಿಸಿದ್ದು, ಅವರು ಬಂದು ಮನೆಯನ್ನು ಪರಿಶೀಲಿಸಿದಾಗ  ಈ ಜೇನುನೋಣಗಳು ತಮ್ಮ ಮಗಳು ಮಲಗುವ ಕೋಣೆಯ ಮೇಲ್ಭಾಗದಲ್ಲಿರುವ ಮರದ ಹಲಗೆಯ ಕಡೆಗೆ ಚಲಿಸುತ್ತಿರುವುದು ಕಾಣಿಸಿದೆ.  ಇಲ್ಲಿ ಜೇನುನೊಣಗಳು ತಮ್ಮ ಗೂಡು ಕಟ್ಟಲು ಆರಂಭಿಸಿ ಸುಮಾರು 8 ತಿಂಗಳುಗಳೇ ಕಳೆದಿವೆ ಎಂದು ಮನೆ ಪರಿಶೀಲಿಸಿದ ಜೇನು ನೊಣ ಸಾಕಾಣೆದಾರರೊಬ್ಬರು ಬಿಬಿಸಿಗೆ ತಿಳಿಸಿದ್ದಾರೆ. 

ಅವು ಕ್ರಿಸ್‌ಮಸ್ ರೀತಿ ಬೆಳಗುತ್ತಿದ್ದವು ಎಂದು ಬಾಲಕಿಯ ತಾಯಿ ಮಾಸ್ಸೀಸ್ ಕ್ಲಾಸ್ ಹೇಳಿದ್ದಾರೆ. ಇತ್ತ ಈ ಮನೆಯಿಂದ ಜೇನುಸಾಕಣೆದಾರ ಒಂದು 55,000 ಹಾಗೂ ಮತ್ತೊಂದು 65,000 ಹಾಗೂ 100 LBಯ 45 kg ಜೇನಿನ ಎರಿಯನ್ನು ಅಲ್ಲಿಂದ ತೆಗೆದಿದ್ದಾರೆ. ಈ ಜೇನುನೊಣಗಳಿಂದ ತನಗೆ 20 ಸಾವಿರ ಡಾಲರ್ ನಷ್ಟ ಆಗಿದೆ ಎಂದು ಬಾಲಕಿಯ ತಾಯಿ ಹೇಳಿದ್ದಾಳೆ. ಈತ ಬಾಲಕಿ ಜೇನು ಸಾಕಾಣೆದಾರನನ್ನು ರಾಕ್ಷಸರ ಹಂತಕ ಎಂದು ಹೇಳುತ್ತಿದ್ದ ಆತನ ಕೆಲಸಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾಳೆ. ಈ ಜೇನುನೊಣಗಳು ಮರದಿಂದ ಅವೃತವಾದ ಗೋಡೆಗಳ ಒಳಗೆ ಆಳವಾಗಿ ಗೂಡು ಮಾಡಿದ್ದವು. ಆದರೆ ಅದೃಷ್ಟವಶಾತ್ ಈ ಜೇನುನೊಣಗಳು ಬಾಲಕಿಗೆ ಏನು ಹಾನಿ ಮಾಡಿಲ್ಲ..

ಹಣ ನೀಡಿ ಸಾಹಸಕ್ಕೆ ಕೈ ಹಾಕಿ! ಜೇನುನೊಣಗಳ ಜೊತೆ ರಾತ್ರಿ ಕಳೆಯೋ ಆಫರ್

Latest Videos
Follow Us:
Download App:
  • android
  • ios