ಕಳಸಾ-ಬಂಡೂರಿ: ವನ್ಯಜೀವಿ ಮಂಡಳಿ ಕೇಳಿದ ಮಾಹಿತಿ ಕರ್ನಾಟಕ ನೀಡಿಲ್ಲ, ಪ್ರಹ್ಲಾದ್ ಜೋಶಿ
ಅಗತ್ಯ ಮಾಹಿತಿ ನೀಡಿದರೆ ಸಚಿವ ಭೂಪೇಂದ್ರ ಯಾಧವ್ ಅವರೊಂದಿಗೆ ಮಾತನಾಡಿ ಅನುಮತಿ ಕೊಡಿಸುತ್ತೇನೆ. ಕಳಸಾ-ಬಂಡೂರಿ, ಮಹದಾಯಿಗೆ ಅತಿ ಹೆಚ್ಚು ಅಡ್ಡಗಾಲು ಹಾಕಿದ್ದೇ ಕಾಂಗ್ರೆಸ್. ಸೋನಿಯಾ ಗಾಂಧಿ ಗೋವಾಕ್ಕೆ ಹೋಗಿ ಕರ್ನಾಟಕಕ್ಕೆ ಹನಿ ನೀರು ಕೊಡಬೇಡಿ ಎಂದಿದ್ದರು ಎಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ(ಫೆ.27): ಕಳಸಾ-ಬಂಡೂರಿ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಪರಿಸರ ಇಲಾಖೆಯಿಂದ ವಿನಾಯಿತಿಯೂ ಸಿಕ್ಕಿದೆ. ಆದರೆ ವನ್ಯ ಜೀವಿ ಮಂಡಳಿ ಅನುಮತಿ ಕೊಡುವುದು ಮಾತ್ರ ಬಾಕಿಯುಳಿದಿದೆ. ಈ ಸಂಬಂಧ ರಾಜ್ಯ ಸರ್ಕಾರದಿಂದ ಕೆಲ ಮಾಹಿತಿ ಕೇಳಿದೆ. ಅದನ್ನು ರಾಜ್ಯ ಸರ್ಕಾರ ಇನ್ನೂ ಕೊಟ್ಟಿಲ್ಲ. ಹೀಗಾಗಿ ಸಮಸ್ಯೆಯಾಗಿದೆ ಅಷ್ಟೇ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಪರಿಸರ ಇಲಾಖೆಯಿಂದ ವಿನಾಯಿತಿ ಸಿಕ್ಕಿದೆ. ಈ ವಿಷಯ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಗೊತ್ತಿಲ್ಲ. ವನ್ಯಜೀವಿ ಮಂಡಳಿಗೆ ರಾಜ್ಯ ಸರ್ಕಾರ ಕೆಲವೊಂದಿಷ್ಟು ಮಾಹಿತಿ ನೀಡಬೇಕಿದೆ. ಆ ಕೆಲಸ ಅದು ಮಾಡುತ್ತಿಲ್ಲ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಮಹದಾಯಿ ಯೋಜನೆಗೆ ದಾಖಲೆ ಕೊಡಲಿ, ಕೇಂದ್ರದಿಂದ ಅನುಮೋದನೆ ಕೊಡಿಸ್ತೇವೆ: ಬಸವರಾಜ ಬೊಮ್ಮಾಯಿ
ಅಗತ್ಯ ಮಾಹಿತಿ ನೀಡಿದರೆ ಸಚಿವ ಭೂಪೇಂದ್ರ ಯಾಧವ್ ಅವರೊಂದಿಗೆ ಮಾತನಾಡಿ ಅನುಮತಿ ಕೊಡಿಸುತ್ತೇನೆ. ಕಳಸಾ-ಬಂಡೂರಿ, ಮಹದಾಯಿಗೆ ಅತಿ ಹೆಚ್ಚು ಅಡ್ಡಗಾಲು ಹಾಕಿದ್ದೇ ಕಾಂಗ್ರೆಸ್. ಸೋನಿಯಾ ಗಾಂಧಿ ಗೋವಾಕ್ಕೆ ಹೋಗಿ ಕರ್ನಾಟಕಕ್ಕೆ ಹನಿ ನೀರು ಕೊಡಬೇಡಿ ಎಂದಿದ್ದರು ಎಂದರು.