ರಾಯಚೂರು: ತೋಟದ ಮನೆಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ಚಿರತೆ ದಾಳಿ!
ತೋಟದ ಮನೆಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ಚಿರತೆ ದಾಳಿ ನಡೆಸಿ ಬಲಿ ಪಡೆದ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಜಾಲಹಳ್ಳಿ ಗ್ರಾಮದ ಮುದ್ದುರಂಗಪ್ಪ ಎಂಬುವವರಿಗೆ ಸೇರಿದ ಹಸು. ಎರಡು ವರ್ಷ ಪ್ರಾಯದ ಹಸುವಿನ ಮೇಲೆ ದಾಳಿ ನಡೆಸಿರುವ ಚಿರತೆ ಅರ್ಧ ತಿಂದು ಓಡಿಹೋಗಿದೆ.
ರಾಯಚೂರು (ಮಾ.4): ತೋಟದ ಮನೆಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ಚಿರತೆ ದಾಳಿ ನಡೆಸಿ ಬಲಿ ಪಡೆದ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಜಾಲಹಳ್ಳಿ ಗ್ರಾಮದ ಮುದ್ದುರಂಗಪ್ಪ ಎಂಬುವವರಿಗೆ ಸೇರಿದ ಹಸು. ಎರಡು ವರ್ಷ ಪ್ರಾಯದ ಹಸುವಿನ ಮೇಲೆ ದಾಳಿ ನಡೆಸಿರುವ ಚಿರತೆ ಅರ್ಧ ತಿಂದು ಓಡಿಹೋಗಿದೆ.
ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಮೀನಿನಲ್ಲಿ ಚಿರತೆ ಓಡಾಡಿದ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು,, ಚಿರತೆ ಸೆರೆಗೆ ಮುಂದಾದ ಅರಣ್ಯಾಧಿಕಾರಿಗಳು.
ಕೊಡಗಿನಲ್ಲಿ ಮಿತಿಮೀರಿದ ಗಜರಾಜನ ಹಾವಳಿ: 10 ವರ್ಷದಲ್ಲಿ ಕಾಡಾನೆ ದಾಳಿಗೆ 20 ಜನರ ಸಾವು
ರಾಯಚೂರು ಸುತ್ತಮುತ್ತ ಚಿರತೆ ಹಾವಳಿ: ಬಿಸಿಲುನಾಡು ರಾಯಚೂರು ಹೇಳಿಕೊಳ್ಳುವಂತಹ ಅರಣ್ಯಪ್ರದೇಶವಿಲ್ಲ. ಗುಡ್ಡಗಾಡು ಬಯಲು ಪ್ರದೇಶವಾದ್ದರಿಂದ ಜಿಲ್ಲೆಯಲ್ಲಿ ಸಾಮಾನ್ಯವಾಗಿ ನರಿ ತೋಳಗಳಿವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಚಿರತೆಗಳು ಅಲ್ಲಲ್ಲಿ ಪ್ರತ್ಯವಾಗಿ ಜನವಸತಿ ಪ್ರದೇಶಗಳ ಮೇಲೆ ದಾಳಿ ಮಾಡುತ್ತಿರುವುದು ಆತಂಕ ಮೂಡಿಸಿದೆ.
ಚಿತ್ರದುರ್ಗದಲ್ಲಿ ಹೆಚ್ಚಾದ ಕೋಳಿ ಫಾರಂ, ವಾಸನೆ ಹುಡುಕಿ ಬಂದು ದಾಳಿ ಮಾಡುತ್ತಿದೆ ಚಿರತೆ
ಕಳೆದ ವರ್ಷ ರಾಯಚೂರು ಜಿಲ್ಲೆಯ ನೀರಮಾನ್ವಿ ಸುತ್ತಮುತ್ತಲಿನ ಬೆಟ್ಟಗಳಲ್ಲಿ ಪದೇಪದೆ ಚಿರತೆ ಕಾಣಿಸಿಕೊಂಡಿತ್ತು. ಒಂದನ್ನು ಸೆರೆ ಹಿಡಿದರೆ ಮತ್ತೊಂದು ಪ್ರತ್ಯಕ್ಷವಾಗಿತ್ತು. ಇದೀಗ ದೇವದುರ್ಗದ ಜಾಲಹಳ್ಳಿಯಲ್ಲೂ ಚಿರತೆ ಪ್ರತ್ಯಕ್ಷವಾಗಿರುವುದು ಆಹಾರ ಅರಸಿ ಬಿಸಿಲು ನಾಡಿಗೆ ಚಿರತೆಗಳು ಬಂದಿರುವುದು ರೈತರಲ್ಲಿ ಆತಂಕ ಮೂಡಿಸಿರುವುದಂತೂ ಹೌದು.