Asianet Suvarna News Asianet Suvarna News

ಝೂನಲ್ಲಿದ್ದ ಮೊಸಳೆಯ ಹೊಟ್ಟೆಯೊಳಗಿದ್ದ 70ಕ್ಕೂ ಹೆಚ್ಚು ನಾಣ್ಯಗಳ ಹೊರತೆಗೆದ ವೈದ್ಯರು

 36 ವರ್ಷದ ಮೊಸಳೆಯ ಹೊಟ್ಟೆಯೊಳಗೆ 70ಕ್ಕೂ ಹೆಚ್ಚು ನಾಣ್ಯಗಳು ಪತ್ತೆಯಾದ ಘಟನೆ  ವಿದೇಶದ ಮೃಗಾಲಯವೊಂದರಲ್ಲಿ ನಡೆದಿದೆ. ಘಟನೆಯಿಂದ ಕಳವಳಗೊಂಡಿರುವ ಝೂ ಅಧಿಕಾರಿಗಳು  ಹಾಗೂ ಪಶು ವೈದ್ಯರು ಪ್ರಾಣಿಗಳಿರುವ ಸ್ಥಳದಲ್ಲಿ ನಾಣ್ಯಗಳನ್ನು ಎಸೆಯದಂತೆ ಮನವಿ ಮಾಡಿದ್ದಾರೆ.  

Doctors extracted more than 70 coins from the stomach of a crocodile in the zoo akb
Author
First Published Feb 20, 2024, 3:32 PM IST

ಒಹಾಮ: 36 ವರ್ಷದ ಮೊಸಳೆಯ ಹೊಟ್ಟೆಯೊಳಗೆ 70ಕ್ಕೂ ಹೆಚ್ಚು ನಾಣ್ಯಗಳು ಪತ್ತೆಯಾದ ಘಟನೆ  ವಿದೇಶದ ಮೃಗಾಲಯವೊಂದರಲ್ಲಿ ನಡೆದಿದೆ. ಘಟನೆಯಿಂದ ಕಳವಳಗೊಂಡಿರುವ ಝೂ ಅಧಿಕಾರಿಗಳು  ಹಾಗೂ ಪಶು ವೈದ್ಯರು ಪ್ರಾಣಿಗಳಿರುವ ಸ್ಥಳದಲ್ಲಿ ನಾಣ್ಯಗಳನ್ನು ಎಸೆಯದಂತೆ ಮನವಿ ಮಾಡಿದ್ದಾರೆ.  ಅಮೆರಿಕಾದ ಒಮಹಾದಲ್ಲಿರುವ ಹೆನ್ರಿ ಡೋರ್ಲಿ ಮೃಗಾಲಯ ಮತ್ತು ಅಕ್ವೇರಿಯಂನಲ್ಲಿ ಈ ಘಟನೆ ನಡೆದಿದೆ. 

36 ವರ್ಷ ವಯಸ್ಸಿನ  ಅಲಿಗೇಟರ್ ಅಥವಾ ಮೊಸಳೆ ಥಿಬೋಡಾಕ್ಸ್‌ ಆಹಾರ ತಿನ್ನುವುದನ್ನು ನಿಲ್ಲಿಸಿದ್ದು, ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ ಸ್ಕ್ಯಾನಿಂಗ್ ಮಾಡಿದಾಗ ಮೊಸಳೆಯ ಹೊಟ್ಟೆಯೊಳಗೆ ನಾಣ್ಯಗಳು ಇರುವುದು ಕಂಡು ಬಂದಿದೆ. ಬಳಿಕ ಶಸ್ತ್ರಚಿಕಿತ್ಸೆ ನಡೆಸಿ 70 ನಾಣ್ಯಗಳನ್ನು ಮೊಸಳೆಯ ಹೊಟ್ಟೆಯಿಂದ ಹೊರತೆಗೆದು ಮೊಸಳೆ ಥಿಯೋಡಾಕ್ಸ್‌ನನ್ನು ರಕ್ಷಿಸಲಾಗಿದೆ. 

ಮ್ಯಾಚ್‌ ನೋಡಲು ಮೊಸಳೆಯೊಂದಿಗೆ ಸ್ಟೇಡಿಯಂಗೆ ಬಂದ ಅಭಿಮಾನಿ: ದಂಗಾದ ಭದ್ರತಾ ಸಿಬ್ಬಂದಿ

ಈ ಬಗ್ಗೆ ಮಾತನಾಡಿದ  ಹೆನ್ರಿ ಡೋರ್ಲಿ  ಮೃಗಾಲಯದ ಪಶುವೈದ್ಯರಾದ ಡಾ ಕ್ರಿಸ್ಟಿನಾ ಪ್ಲೂಗ್, ಈ ಝೂಗೆ ಅಥವಾ ಮೃಗಾಲಯಕ್ಕೆ ಭೇಟಿ ನೀಡುವ ಸಂದರ್ಶಕರು ಅಲಿಗೇಟರ್ ಅಥವಾ ಮೊಸಳೆ ಇರುವ ಸ್ಥಳಕ್ಕೆ ನಾಣ್ಯಗಳನ್ನು ಎಸೆಯುತ್ತಾರೆ. ಇದು ತುಂಬಾ ಅಪಾಯಕಾರಿ ಅಭ್ಯಾಸವಾಗಿದ್ದು, ಪ್ರಾಣಿಗಳ ಜೀವಕ್ಕೆ ಅಪಾಯ ತರಬಲ್ಲದು ಎಂದು ಹೇಳಿದ್ದಾರೆ. ಆಹಾರ ತಿನ್ನುವುದನ್ನು ನಿಲ್ಲಿಸಿದ ಥಿಬೊಡಾಕ್ಸ್ ಗೆ ಅರಿವಳಿಕೆ ನೀಡಿ ತಪಾಸಣೆಗೆ ಒಳಪಡಿಸಿದಾಗ ಅದರ ದೇಹದೊಳಗೆ ನಾಣ್ಯಗಳು ಇರುವುದು ಕಂಡು ಬಂತು ಎಂದು ಅವರು ಹೇಳಿದ್ದಾರೆ. 

ಪ್ಲಾಸ್ಟಿಕ್ ಪೈಪ್ ಮೂಲಕ ಹೊಟ್ಟೆಯೊಳಗೆ ಕ್ಯಾಮರಾ ಕಳುಹಿಸಿ ತಪಾಸಣೆ ನಡೆಸಲಾಯಿತು. ಬಳಿಕ ಯಶಸ್ವಿಯಾಗಿ ನಾಣ್ಯಗಳನ್ನು ಹೊರತೆಗೆಯಲಾಗಿತ್ತು. ಶಸ್ತ್ರಚಿಕಿತ್ಸೆ ನಂತರ ಥಿಯೋಡಾಕ್ಸ್ ಚೇತರಿಸಿಕೊಂಡಿದ್ದು, ಅದನ್ನು ಅದರ ಆವಾಸಸ್ಥಾನಕ್ಕೆ ಬಿಡಲಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಘಟನೆಯ ಬಳಿಕ ಝೂಗೆ ಆಗಮಿಸುವ ಜನರಿಗೆ ಝೂನಲ್ಲಿರುವ ನೀಟಿನ ಮೂಲಗಳಿಗೆ ನಾಣ್ಯಗಳನ್ನು ಎಸೆಯದಂತೆ ಸೂಚಿಸಲಾಗಿದೆ.

ಸತ್ತಿದೆ ಎಂದು ಭಾವಿಸಿ ಜೀವಂತ ಮೊಸಳೆ ಹಿಡಿಯಲು ಹೋದ ಅರಣ್ಯ ಸಿಬ್ಬಂದಿ! ಮುಂದೇನಾಯ್ತು ನೋಡಿ!

Follow Us:
Download App:
  • android
  • ios