India Gate  

(Search results - 331)
 • International4, Jul 2020, 6:24 PM

  59 ಚೀನೀ ಆ್ಯಪ್‌ ನಿಷೇಧ; ಭಾರತೀಯ ಎಂಜಿನೀಯರ್‌ಗಳು ತಯಾರಿಸ್ತಾರಾ ಹೊಸ ಆ್ಯಪ್‌?

  ಭಾರತದ ಭದ್ರತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಕೇಂದ್ರ ಸರ್ಕಾರ 59 ಆ್ಯಪ್‌ಗಳನ್ನೇನೋ ನಿಷೇಧ ಮಾಡಿದೆ. ಆದರೆ ಒಂದು ವೇಳೆ ಇದಕ್ಕೆ ಪ್ರತಿಯಾಗಿ ಚೀನಾ ಭಾರತದ ಆ್ಯಪ್‌ಗಳನ್ನು ನಿಷೇಧ ಮಾಡಬೇಕೆಂದರೆ ನಾವು ಅಭಿವೃದ್ಧಿಪಡಿಸಿದ ಒಂದು ಆ್ಯಪನ್ನೂ ಚೀನೀಯರು ಉಪಯೋಗಿಸುತ್ತಿಲ್ಲ. ಚೀನೀಯರು ಬಿಡಿ, ನಾವು ಕೂಡ ನಮ್ಮ ಆ್ಯಪ್‌ಗಳನ್ನು ಬಳಕೆ ಮಾಡುತ್ತಿಲ್ಲ.

 • International4, Jul 2020, 4:04 PM

  ಚೀನಾ ಸಂಘರ್ಷ: ನಿಜಕ್ಕೂ ಭಾರತದ ಪರ ನಿಲ್ಲುತ್ತಾ ಅಮೆರಿಕಾ?

  ಅಂತಾರಾಷ್ಟ್ರೀಯ ರಾಜಕೀಯ ಪರಿಣತರು ಹೇಳುವ ಪ್ರಕಾರ, ಚೀನಾ-ಭಾರತದ ಈಗಿನ ತಿಕ್ಕಾಟಕ್ಕೆ ಗಡಿ ತಂಟೆ ಮೇಲ್ನೋಟಕ್ಕೆ ಕಾಣುವ ಕಾರಣ ಹೌದಾದರೂ ತೆರೆಯ ಹಿಂದಿನ ಕಾರಣ ಅಮೆರಿಕದ ಜೊತೆ ಬೆಳೆಯುತ್ತಿರುವ ಭಾರತದ ಸಾಮೀಪ್ಯ. 

 • India4, Jul 2020, 1:41 PM

  11 ಸಾವಿರ ಅಡಿ ಎತ್ತರದ ನೀಮೂಗೆ ನಮೋ ಭೇಟಿ; ಮೋದಿ ಫಿಟ್ನೆಸ್ ಸಿಕ್ರೆಟ್ ಇದು..!

  ಯುದ್ಧ ಪರಿಸ್ಥಿತಿಯಲ್ಲಿ ಗಡಿಗೆ ಹೋಗಿ ಸ್ವತಃ ಸೈನಿಕರ ಮನೋಬಲ ಹಿಗ್ಗಿಸುವುದು ಯಾವುದೇ ದೇಶದ ಯುದ್ಧಕಾಲದ ನಾಯಕತ್ವ ಮಾಡಲೇಬೇಕಾದ ಕೆಲಸ. 1971ರಲ್ಲಿ ಪೂರ್ವ ಪಾಕಿಸ್ತಾನವನ್ನು ಬೇರ್ಪಡಿಸುವ ಮುಂಚೆ ಇಂದಿರಾಗಾಂಧಿ ಲೇಹ್‌ಗೆ ಹೋಗಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿ ಬಂದಿದ್ದರು. 

 • India4, Jul 2020, 10:23 AM

  ಗಡಿಯಲ್ಲಿ ಮೋದಿ ಘರ್ಜನೆ; ಲಡಾಖ್‌ ಭೇಟಿಯ ಸಂದೇಶವೇನು?

  ಜೂನ್‌ 30 ರಂದು ಭಾರತ ಮತ್ತು ಚೀನಾದ ಸೇನಾ ಕಮಾಂಡರ್‌ಗಳ ನಡುವೆ ಸುಮಾರು 12 ತಾಸು ಮಾತುಕತೆ ನಡೆದಿದೆ. ಆದರೆ ಪ್ಯಾಂಗಾಂಗ್‌ ತ್ಸೋ ಮತ್ತು ಗಲ್ವಾನ್‌ ಕಣಿವೆಯಲ್ಲಿ ಏಪ್ರಿಲ್‌ ನಂತರ ಹಿಡಿದಿಟ್ಟುಕೊಂಡಿರುವ ಪ್ರದೇಶಗಳಿಂದ ಹಿಂದೆ ಹೋಗಲು ಚೀನಾ ತಯಾರಿಲ್ಲ. ಚಳಿಗಾಲ ಇನ್ನೂ 5 ತಿಂಗಳು ದೂರವಿದೆ. 

 • state27, Jun 2020, 4:50 PM

  ಮಾಜಿ ಸಂಸದರಾಗಿದ್ದ ಜಗನ್ನಾಥ ಜೋಶಿಯವರ ಹತ್ತು ಮಜೆದಾರ್ ಪ್ರಸಂಗಗಳು

  ಜಗನ್ನಾಥ ರಾವ್ ಜೋಶಿ ಎಂದರೆ ಸಾಕು ಜನಸಂಘದ ಜಮಾನಾದ ನಾಯಕರ ಕಿವಿ ನಿಮಿರುತ್ತವೆ.ಸಂಘದ ಪ್ರಚಾರಕರಾಗಿ ಬಂದು ಜನಸಂಘದ ಜವಾಬ್ದಾರಿ ವಹಿಸಿ ಕೊಂಡ ಜಗನ್ನಾಥ ರಾವ್ ಕೇಂದ್ರ ಸರ್ಕಾರದ ಒಳ್ಳೆಯ ಪಗಾರ್ ತರುತ್ತಿದ್ದ ನೌಕರಿ ತೃಜಿಸಿ ರಾಜಕಾರಣಕ್ಕೆ ಬಂದವರು.ಅಟಲ್ ಬಿಹಾರಿ ಅವರಂತೆ ಜೀವನ ಪರ್ಯಂತ ಬ್ರಹ್ಮಚಾರಿ ಆಗಿಯೇ ಉಳಿದು ಸಂಸದರಾದರು ಕೂಡ ಸನ್ಯಾಸಿ ಯಂತೆ ಜೀವನ ಸವೆಸಿದವರು.

 • state26, Jun 2020, 6:04 PM

  ಬಿಜೆಪಿಯಲ್ಲಿದ್ದರು ಹೀಗೊಬ್ಬ ಅಪರೂಪದ ಸಂಸದ..!

  ನರಗುಂದದ ಜಗನ್ನಾಥ ರಾವ್‌ ಜೋಶಿ ಒಮ್ಮೆಯೂ ಹುಟ್ಟೂರಾದ ಧಾರವಾಡ ಜಿಲ್ಲೆಯಿಂದ ಗೆಲ್ಲಲಾಗಲಿಲ್ಲ. ಆದರೆ ಜನಸಂಘದಿಂದ ಭೋಪಾಲ್‌ಗೆ ಹೋಗಿ ಗೆದ್ದರು.

 • India26, Jun 2020, 5:42 PM

  ಅಮಿತ್‌ ಶಾ ಫುಲ್ ಆಕ್ಟೀವ್; ಸಂಕಟದಲ್ಲಿ ಉದ್ಧವ್‌, ಕೇಜ್ರಿವಾಲ್‌..!

  ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಕಾಂಗ್ರೆಸ್‌ ನಡುವೆ ಕೊರೋನಾ ಕಾರಣದಿಂದ ಬಿರುಕು ಮೂಡುತ್ತಿದೆ. ಉದ್ಧವ್‌ ಠಾಕ್ರೆ ಕಾರ್ಯವೈಖರಿಗೆ ಕಾಂಗ್ರೆಸ್‌ ಶಾಸಕರು ಬೇಸತ್ತಿದ್ದು, ಎಲ್ಲ ಫೈಲ್‌ಗಳನ್ನು ತಡೆಹಿಡಿದಿದ್ದಾರೆ ಎನ್ನುವುದು ಸಿಟ್ಟಿಗೆ ಮುಖ್ಯ ಕಾರಣ.

 • India26, Jun 2020, 5:26 PM

  ಕೋವಿಡ್‌ ಶುರುವಾದ ಮೇಲೆ ರಾಜನಾಥ್‌ ಸಿಂಗ್‌ ಫುಲ್‌ ಶೈನಿಂಗ್‌; ಕಾರಣ ಇಂಟರೆಸ್ಟಿಂಗ್..!

  ಮೋದಿ ಸರ್ಕಾರಕ್ಕೆ ಕೋವಿಡ್‌-19 ಕಾಟ ಶುರುವಾದ ಮೇಲೆ ಏಕಾಏಕಿ ರಾಜನಾಥ್‌ ಸಿಂಗ್‌ ಸರ್ಕಾರದ ಮುಖವಾಗಿ ಕಾಣಿಸಿಕೊಳ್ಳತೊಡಗಿದ್ದಾರೆ. ಕೋವಿಡ್‌ ನಿಯಂತ್ರಣದ ಸಚಿವರ ಸಮಿತಿಯ ಜವಾಬ್ದಾರಿಯನ್ನು ಅಮಿತ್‌ ಶಾಗೆ ಬಿಟ್ಟು, ಇನ್ನಿತರ ವ್ಯವಹಾರಗಳ ಹೊಣೆಯನ್ನು ರಾಜನಾಥ್‌ ಸಿಂಗ್‌ ಅವರಿಗೆ ಕೊಟ್ಟಮೋದಿ ಈಗ ಚೀನಾ ಘರ್ಷಣೆ, ನೇಪಾಳ ಕಿರಿಕಿರಿ ಬಗ್ಗೆ ಕೂಡ ರಾಜನಾಥ್‌ ಸಿಂಗ್‌ರಿಂದಲೇ ಹೇಳಿಕೆ ಕೊಡಿಸುತ್ತಿದ್ದಾರೆ.

 • India26, Jun 2020, 4:18 PM

  ನೇಪಾಳದ ಕಿರಿಕ್; ರಾಂ ಮಾಧವ್‌ ಮತ್ತೆ ಮೋದಿಗೆ ಹತ್ತಿರ

  ಅಸ್ಸಾಂನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ತಾನೇ ಕಾರಣ ಎಂದು ಹೇಳಿಕೆ ಕೊಟ್ಟನಂತರ ಪ್ರಧಾನಿ ಮೋದಿ ದೂರ ಇಟ್ಟಿದ್ದ ಬಿಜೆಪಿ ನಾಯಕ ರಾಮ್‌ಮಾಧವ್‌, ಸಾಕಷ್ಟುಕಸರತ್ತು ಮಾಡಿ ಆರ್‌ಎಸ್‌ಎಸ್‌ ಮಧ್ಯಸ್ಥಿಕೆಯ ಕಾರಣದಿಂದ ಮತ್ತೆ ಮೋದಿ ಸಾಹೇಬರಿಗೆ ಹತ್ತಿರವಾಗುತ್ತಿದ್ದಾರೆ. 

 • International26, Jun 2020, 3:54 PM

  ಹೆಚ್ಚುತ್ತಿದೆ ಇಂಡೋ- ಅಮೆರಿಕನ್ ಬಾಂಧವ್ಯ; ಚೀನಾಗೆ ಕಂಗಾಲು

  ಮೇಲ್ನೋಟಕ್ಕೆ ಭಾರತ-ಚೀನಾ ಸಂಬಂಧಗಳ ಸ್ಥಿತ್ಯಂತರಕ್ಕೆ ಗಡಿ ತಂಟೆ ಕಾರಣ ಎಂದು ಚೀನಾದ ವಿದೇಶಾಂಗ ಇಲಾಖೆ ಹೇಳುತ್ತಿದ್ದರೂ ಚೀನಾ ಏನು ಯೋಚಿಸುತ್ತದೆ ಎಂಬುದನ್ನು ತಿಳಿಯಪಡಿಸುವ ಗ್ಲೋಬಲ್‌ ಟೈಮ್ಸ್‌ ಪ್ರಕಾರ, ಹೆಚ್ಚುತ್ತಿರುವ ಇಂಡೋ-ಅಮೆರಿಕನ್‌ ಸಾಮೀಪ್ಯ ಚೀನಾದ ನಿದ್ದೆಗೆಡಿಸಿದೆ.

 • International26, Jun 2020, 1:34 PM

  ಭಾರತದ ವಿರುದ್ಧ ನೇಪಾಳವನ್ನು ಎತ್ತಿ ಕಟ್ಟುತ್ತಿದೆ ಕುತಂತ್ರಿ ಚೀನಾ

  ಈಗ ಉತ್ತರಾಖಂಡ್‌ನಲ್ಲಿ ಲಿಪುಲೇಖ್‌ ಪಾಸ್‌ವರೆಗೆ 80 ಕಿಲೋಮೀಟರ್‌ ರಸ್ತೆ ನಿರ್ಮಿಸಲಾಗಿದ್ದು, 85 ಪ್ರತಿಶತ ಯಾತ್ರೆ ಭಾರತದಲ್ಲೇ ಮಾಡಿ ಚೀನಾದಲ್ಲಿ ಸ್ವಲ್ಪವೇ ದೂರ ಕ್ರಮಿಸಿದರೆ ಮಾನಸ ಸರೋವರಕ್ಕೆ ತಲುಪಬಹುದು. ಈ ಲಿಪುಲೇಖ್‌ ಇರುವುದು ಭಾರತ-ಚೀನಾ-ನೇಪಾಳದ ಜಂಟಿ ಗಡಿಯಲ್ಲಿ. ಹೀಗಾಗಿ ಚೀನಾದ ಕುಮ್ಮಕ್ಕಿನಿಂದ ನೇಪಾಳ ಕ್ಯಾತೆ ತೆಗೆದಿದೆ.

 • International26, Jun 2020, 10:53 AM

  ಭಾರತ ಹಣಿಯಲು ಚೀನಾ ಮೆಗಾ ಪ್ಲಾನ್‌; ಇದಕ್ಕೆಲ್ಲಾ ಭಾರತ ಹೆದರಲ್ಲ ಬಿಡಿ..!

  ಒಂದು ಕಡೆ ಕೊರೋನಾ ವೈರಸ್ಸಿನ ಕಾರಣದಿಂದ ಚೀನಾ ತನ್ನ ಸುತ್ತಮುತ್ತಲಿನ ರಾಷ್ಟ್ರಗಳಾದ ವಿಯೆಟ್ನಾಂ, ದಕ್ಷಿಣ ಕೊರಿಯಾ, ಮಂಗೋಲಿಯಾ, ಜಪಾನ್‌ ಜೊತೆಗಿನ ಸಂಬಂಧಗಳನ್ನು ಪೂರ್ತಿಯಾಗಿ ಕೆಡಿಸಿಕೊಂಡಿದೆ. ಇದಕ್ಕೆ ಬಹುತೇಕ ಎಲ್ಲಾ ನೆರೆ ರಾಷ್ಟ್ರಗಳ ಜೊತೆ ಇರುವ ಗಡಿ ತಂಟೆ ಕೂಡ ಪ್ರಮುಖ ಕಾರಣ. ಆದರೆ ಚೀನಾ ನಿಧಾನವಾಗಿ ಭಾರತದ ಅಕ್ಕಪಕ್ಕದ ರಾಷ್ಟ್ರಗಳನ್ನೂ ಕೆರಳಿಸಿ, ಪುಸಲಾಯಿಸಿ ವಿರೋಧ ಸೂಚಿಸುವಂತೆ ಒತ್ತಡ ಹೇರುತ್ತಿದೆ. 

 • International20, Jun 2020, 1:15 PM

  ಲಡಾಕ್ ಸಂಘರ್ಷ: ಅಕ್ಸಾಯ್‌ ಚಿನ್‌ ಕೈತಪ್ಪಿದ್ದು ಹೇಗೆ?

  1956ರಲ್ಲಿ ಸೇನಾ ಮುಖ್ಯಸ್ಥ ಜನರಲ್ ತಿಮ್ಮಯ್ಯ ಬ್ರಿಟಿಷ್‌ ಪರ್ವತಾರೋಹಿ ಸಿಡ್ನಿ ವಿಗ್ನಾಲ್‌ ಅವರನ್ನು ಅಕ್ಸಾಯ್‌ ಚಿನ್‌ನಲ್ಲಿ ಚೀನಾ ಟಿಬೆಟ್‌ವರೆಗೆ ರಸ್ತೆ ನಿರ್ಮಿಸುತ್ತಿದೆಯೇ ಎಂದು ನೋಡಿ ಬರಲು ಬೇಹುಗಾರಿಕೆಗೆ ಕಳುಹಿಸುತ್ತಾರೆ. ಆತ ನೀಡಿದ ವರದಿಯನ್ನು ಪ್ರಧಾನಿ ಮುಂದಿಟ್ಟಾಗ ಅಲ್ಲಿಯೇ ಇದ್ದ ವಿದೇಶಾಂಗ ಸಚಿವ ಕೃಷ್ಣ ಮೆನನ್‌ ‘ನೀವೆಲ್ಲ ಅಮೆರಿಕದ ಸಿಐಎಗೋಸ್ಕರ ಕೆಲಸ ಮಾಡುತ್ತಿದ್ದೀರಿ’ ಎಂದರಂತೆ. 

 • International20, Jun 2020, 12:32 PM

  ಗಡಿ ಬಗ್ಗೆ ಚೀನಾ ಜತೆ ಮಾತಾಡಲು ಒಪ್ಪದ ನೆಹರು; ಲಡಾಕ್‌ನತ್ತ ನುಗ್ಗಿದ ಚೀನೀ ಸೈನಿಕರು

  ಲಡಾಖ್‌ನ ಹತ್ತಿರದವರೆಗೆ ಬಂದು ಕುಳಿತಿದ್ದ ಚೀನಾ ಭಾರತದ ಜೊತೆ ಗಡಿ ತಂಟೆ ಮಾಡಲಿಕ್ಕಿಲ್ಲ ಎಂಬ ಭ್ರಮೆಯಲ್ಲೇ 1949 ರಿಂದ 1954 ರ ವರೆಗೆ ನೆಹರು ಕಮ್ಯುನಿಸ್ಟ್‌ ಚೀನಾದ ಉದಯ ಶತಮಾನದ ಅದ್ಭುತ ಎಂದು ಭಾಷಣ ಮಾಡುತ್ತಿದ್ದರು. ಟಿಬೆಟ್‌ ಆಕ್ರಮಣದ ನಂತರ ರಾಯಭಾರಿ ಪಣಿಕ್ಕರ್‌ ಅವರನ್ನು ನೆಹರು ಅವರೇ ಚೌ ಎನ್‌ ಲಾಯ್ ಬಳಿ ಕಳುಹಿಸಿದರೂ ಕೂಡ ಚೀನಾ ಆ ಬಗ್ಗೆ ಮಾತನ್ನೇ ಆಡಲಿಲ್ಲ.

 • International20, Jun 2020, 9:35 AM

  ಚೀನಾಗೆ ಲಾಸಾ ಆಕ್ರಮಣ ತಯಾರಿಯಾದ್ರೆ, ನೆಹರೂಗೆ ಚೀನಾಗೆ ವಿಟೋ ಕೊಡಿಸುವ ತಯಾರಿ.!

  ಇತಿಹಾಸದ ತಪ್ಪುಗಳಿಂದ ವರ್ತಮಾನದಲ್ಲಿ ಪಾಠ ಕಲಿಯಬೇಕು ಹೌದು. ಆದರೆ ಇತಿಹಾಸದಲ್ಲಿ ಮಾಡಿದ ಮಹಾ ಪ್ರಮಾದದಿಂದ ವರ್ತಮಾನ ಮತ್ತು ಭವಿಷ್ಯದ ತಲೆಮಾರುಗಳು ಮುಜುಗರ, ಅವಮಾನ, ಹಿಂಸೆ ಅನುಭವಿಸುತ್ತಲೇ ಇರಬೇಕಾಗುತ್ತದೆ ಎನ್ನುವುದಕ್ಕೆ ಚೀನಾ ಗಡಿಯಲ್ಲಿ ಆಗಾಗ ನಡೆಯುತ್ತಿರುವ ಕ್ಯಾತೆಗಳೇ ಸಾಕ್ಷಿ.