ಗಂಧದ ಗುಡಿ 50ನೇ ವರ್ಷ ಸಂಭ್ರಮಾಚರಣೆ ಪ್ರಯುಕ್ತ ಅಗರಬತ್ತಿ ಬಿಡುಗಡೆ ಮಾಡಿದ ದೊಡ್ಡಮನೆ ಸೊಸೆ. ವಿಶೇಷತೆಗಳು ಏನು ಗೊತ್ತಾ?  

ವರನಟ ಡಾ. ರಾಜ್‌ಕುಮಾರ್ 95ನೇ ಹುಟ್ಟುಹಬ್ಬ ಸಂಭ್ರಮದಲ್ಲಿ ಗಂಧದ ಗುಡಿ ಅಗರಬತ್ತಿಯನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಲಾಂಚ್ ಮಾಡಿದ್ದಾರೆ. ಏಪ್ರಿಲ್ 24, 1929 ರಾಜ್‌ಕುಮಾರ್ ಜನ್ಮ ದಿನ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ರಾಜ್‌ ಕುಮಾರ್ ಪುಣ್ಯಭೂಮಿಗೆ ಕುಟುಂಬಸ್ಥರು ಪೂಜೆ ಸಲ್ಲಿಸಿದ್ದಾರೆ. ನಮ್ಮನ್ನು ಅಗಲಿ 18 ವರ್ಷಗಳು ಕಳೆದರೂ ಅವರ ಸಿನಿಮಾಗಳ ಮೂಲಕ ನಮ್ಮ ಜೊತೆಗಿದ್ದಾರೆ. 

'ಗಂಧದ ಗುಡಿಯಲ್ಲಿ ಅಗರಬತ್ತಿ ಮಾಡಲು ಕಾರಣವಿದೆ. ರಾಜೇಶ್‌ ಅವರು ಅಗರಬತ್ತಿ ಇಂಡಸ್ಟ್ರಿಯಲ್ಲಿ ಇರುವುದು, ಅಪ್ಪು ಇದ್ದಾಗ ಈ ಆಫರ್ ತಂದಿದ್ದರು ಆಗ ಮಾತನಾಡುತ್ತೀನಿ ಎಂದು ಹೇಳಿ ಬಿಟ್ಟಿದ್ದೆ. ಮತ್ತೆ ಸಪೋರ್ಟ್ ಮಾಡಿ ಎಂದು ಪ್ರಪೋಸಲ್‌ ತಂದಿಟ್ಟರು' ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್.

ಅಪ್ಪು ವೀಕ್‌ನೆಸ್‌ ಗಾಂಧಿನಗರದಲ್ಲಿ ಇರುವ ಆ ಅಂಗಡಿ; ಸೀಕ್ರೆಟ್‌ ರಿವೀಲ್ ಮಾಡಿದ ಹೊನ್ನವಳ್ಳಿ ಕೃಷ್ಣ

'ಗಂಧದ ಗುಡಿ ಚಿತ್ರಕ್ಕೆ 50ನೇ ವರ್ಷ ಅನ್ನೋದು ನಮ್ಮ ಹೆಮ್ಮೆ. ಅಶ್ವಿನಿ ಮೇಡಂ ಅವರ ಜೊತೆ ಕೈ ಜೋಡಿಸಿ ಕೆಲಸ ಮಾಡುತ್ತಿರುವುದು ನಮ್ಮ ಖುಷಿ ನಮ್ಮ ಹೆಮ್ಮೆ. ಅಗರಬತ್ತಿ ಮೂಲಕ ಅಪ್ಪು ಸರ್‌ನ ಪ್ರತಿಯೊಬ್ಬರ ಮನೆಗೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡುತ್ತಿದ್ದೀವಿ. ಸೋಷಿಯಲ್ ಇಂಪ್ಯಾಕ್ಟ್‌ ಕ್ರಿಯೇಟ್ ಮಾಡುವ ರೀತಿಯಲ್ಲಿ ಈ ಅಗರಬತ್ತಿಯನ್ನು ತಯಾರಿ ಮಾಡಲಾಗಿದೆ. ಅಗರಬತ್ತಿ ಮಾಡಲು ಗ್ರೌಂಡ್ ವಾಟರ್ ಬಳಸುತ್ತೀನಿ ವಾಟರ್‌ ಫ್ರಂ ಏರ್‌ ಬಳಸುತ್ತಿದ್ದೀವಿ ಅದು ದೊಡ್ಡ ಇಂಪ್ಯಾಕ್ಟ್‌ ಮತ್ತೊಂದು ಏನೆಂದರೆ ಪ್ರತಿಯೊಂದು ಡಬ್ಬಕ್ಕೂ ನೇಟಿವ್‌ ಮರಗಳನ್ನು ನೆಟ್ಟುತ್ತಿದ್ದೀವಿ. ವೇಸ್ಟ್‌ ಹೂಗಳನ್ನು ಬಳಸಿ ಅಗರಬತ್ತಿ ಮಾಡುತ್ತಿದ್ದೀವಿ. ಅಪ್ಪು ಸರ್‌ ಇದ್ದಾಗಲೇ ಮಾತುಕತೆ ಆಗಿತ್ತು ಕೆಲವು ಕಾರಣಗಳಿಂದ ಆಗಿರಲಿಲ್ಲ ಈಗ ನಡೆಯುತ್ತಿದೆ. 

ತಂದೆ ಹುಷಾರು ತಪ್ಪಿದಾಗ ಜವಾಬ್ದಾರಿ ಬಂತು, ಮನೆಗೆ ಹಣ ಎಲ್ಲಿಂದ ಬರುತ್ತೆ ಗೊತ್ತಾಗಿತ್ತು: ಯುವ ರಾಜ್‌ಕುಮಾರ್

'ಅಪ್ಪು ಇದ್ದಾಗ ಮಾತುಕತೆ ಆಗಿತ್ತು ಆದರೆ ಅಗ್ರೀಮೆಂಟ್‌ ಆಗಿರಲಿಲ್ಲ. ಈ ರೀತಿ ಏನೋ ಮಾಡಬೇಕು ಅನ್ನುವ ಆಲೋಚನೆ ಬಂದಿತ್ತು. ಕಾರಣಾಂತರಗಳಿಂದ ಮಾಡಲು ಆಗಿರಲಿಲ್ಲ ಈಗ ಮಾಡುವ ಸಮಯ ಬಂದಿದೆ' ಅಶ್ವಿನಿ ಪುನೀತ್.