Monsoon  

(Search results - 1068)
 • parliament

  IndiaJul 29, 2021, 8:39 AM IST

  ಕಾಗದ ಹರಿದು ಸ್ಪೀಕರ್‌ ಪೀಠದತ್ತ ಎಸೆದ ಕಾಂಗ್ರೆಸ್‌ ಸಂಸದರು!

  * 10 ಸಂಸದರ ಅಮಾನತಿಗಾಗಿ ಸರ್ಕಾರ ಗೊತ್ತುವಳಿಗೆ ನಿರ್ಧಾರ

  * ಕಾಗದ ಹರಿದು ಸ್ಪೀಕರ್‌ ಪೀಠದತ್ತ ಎಸೆದ ಕಾಂಗ್ರೆಸ್‌ ಸಂಸದರು

 • undefined

  WomanJul 28, 2021, 4:49 PM IST

  ಯೋನಿ ತುರಿಕೆ ಮತ್ತು ಉರಿ ಶಮನಗೊಳಿಸಲು ಐದು ಸರಳ ಮನೆಮದ್ದುಗಳಿವು

  ಮಹಿಳೆಯರು ಯೋನಿ ತುರಿಕೆ, ಶುಷ್ಕತೆ ಮತ್ತು ಉರಿಯ ತೊಂದರೆಯಿಂದ ಬಳಲುತ್ತಿರುವ ಸಾಮಾನ್ಯ ಋತುವೆಂದರೆ ಮಾನ್ಸೂನ್. ಈ ಚಿಹ್ನೆಗಳು ಸಾಮಾನ್ಯವಾಗಿ ಗಂಭೀರವಾದ ಯಾವುದರ ಸಂಕೇತವಲ್ಲದಿದ್ದರೂ, ಇವುಗಳನ್ನು ನಿರ್ಲಕ್ಷಿಸಬಾರದು. ಯೋನಿ ತುರಿಕೆ ಮತ್ತು ಶುಷ್ಕತೆಯು ಬ್ಯಾಕ್ಟೀರಿಯಾದ ಸೋಂಕು, ಯೀಸ್ಟ್ ಸೋಂಕು ಅಥವಾ ಎಸ್ಜಿಮಾದಿಂದ ಆಗಿರಬಹುದು. ಗಟ್ಟಿಯಾದ ಸಾಬೂನು ಮತ್ತು ಬಾಡಿ ವಾಶ್ ಅನ್ನು ಬಳಸುವುದರಿಂದ ಯೋನಿ ಸುತ್ತಲಿನ ಚರ್ಮಕ್ಕೆ ಕಿರಿಕಿರಿಯಾಗಬಹುದು ಮತ್ತು ಅಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.

 • <p>Dead body found</p>

  Karnataka DistrictsJul 28, 2021, 3:37 PM IST

  ಚಿಂಚೋಳಿ: ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ವೃದ್ಧನ ಶವ ಪತ್ತೆ

  ಮುಲ್ಲಾಮಾರಿ ನದಿ ನೀರು ಇನ್ನೊಂದು ಮಾನವ ಜೀವ ಬಲಿ ಪಡೆದಿದೆ. 2 ವಾರದ ಇಂದೆ ಪೋತಂಗಲ್‌ ರೈತ ಪ್ರಲ್ಹಾದ್‌ ಎಂಬಾತ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ. ಆತನ ಶವವೇ ಇನ್ನೂ ಸಿಕ್ಕಿಲ್ಲ, ಏತನ್ಮಧ್ಯೆ ತಾಲೂಕಿನ ಗಾರಂಪಳ್ಳಿ ಗ್ರಾಮದ ಹತ್ತಿರ ಮುಲ್ಲಾಮಾರಿ ನೀರಿನ ಸೆಳೆತಕ್ಕೆ ವೃದ್ಧ ಕೊಚ್ಚಿಕೊಂಡು ಹೋಗಿ ಮೃತಪಟ್ಟಿರುವ ಘಟನೆ ನಡೆದಿದೆ.

 • <p>Basavasagara Dam&nbsp;</p>

  Karnataka DistrictsJul 28, 2021, 3:19 PM IST

  ಮತ್ತೆ ಕೃಷ್ಣೆ ಪ್ರವಾಹ ಭೀತಿ: ಹೊರಹರಿವು ಏರಿಳಿತ..!

  ಸಮೀಪದ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಮತ್ತೆ ಹೆಚ್ಚಾಗಿದ್ದು, ಜಲಾಶಯದಿಂದ ಮಂಗಳವಾರ 3.05 ಲಕ್ಷ ಕ್ಯುಸೆಕ್‌ ನೀರು ಬಿಡಲಾಯಿತು. ಜಲಾಶಯದಿಂದ ಹರಿಬರುತ್ತಿದ್ದ ನೀರಿನ ಪ್ರಮಾಣ ಕಳೆದೆರಡು ದಿನಗಳಿಂದ ಕಡಿಮೆಯಾಗಿತ್ತು. ಆದರೆ ಮಂಗಳವಾರದಿಂದ ಮತ್ತೆ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಜಾಸ್ತಿಯಾಗಿರುವುದರಿಂದ ಪ್ರವಾಹ ಭೀತಿಯಲ್ಲೇ ನದಿ ತೀರದ ಜನತೆ ದಿನದೂಡುವಂತಾಗಿದೆ.
   

 • ಭಾರೀ ಮಳೆಯಿಂದಾಗಿ ನೀರಿನಲ್ಲಿ ನಿಂತ ಬಳೆ

  Karnataka DistrictsJul 28, 2021, 1:35 PM IST

  ರಾಯಚೂರು: ಎಲೆಬಿಚ್ಚಾಲಿಯ ರಾಯರ ಜಪದಕಟ್ಟೆ ಮುಳುಗಡೆ

  ಇಷ್ಟು ದಿನ ಕೃಷ್ಣಾ ನದಿ ಪಾತ್ರದ ಹಳ್ಳಿಗಳ ಜನ ಎದುರಿಸುತ್ತಿರುವ ಪ್ರವಾಹ ಭೀತಿಯು ಇದೀಗ ತುಂಗಭದ್ರಾ ನದಿಪಾತ್ರದ ಹಳ್ಳಿಗಳಿಗೂ ಹಬ್ಬಿದೆ.
   

 • Flood

  Karnataka DistrictsJul 28, 2021, 12:50 PM IST

  ಬಾಗಲಕೋಟೆ: ಕೃಷ್ಣಾ ಅಬ್ಬರಕ್ಕೆ ನದಿ ತೀರದ ಜನ ತಬ್ಬಿಬ್ಬು, ಹೆಚ್ಚಿದ ಪ್ರವಾಹ ಆತಂಕ

  ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ಹೊರಬಿಡುತ್ತಿರುವ ನೀರು ಜಲಾನಯನ ಪ್ರದೇಶದಲ್ಲಿನ ಮಳೆಯ ಕಾರಣ ಮಂಗಳವಾರ ಮತ್ತಷ್ಟು ನೀರು ಹಿಪ್ಪರಗಿ ಜಲಾಶಯಕ್ಕೆ ಹರಿದು ಬರುತ್ತಿದೆ. ಅಣೆಕಟ್ಟೆಗೆ ಅಂಟಿಕೊಂಡೇ ಇರುವ ಕುಲಹಳ್ಳಿ ಗ್ರಾಮದೊಳಗೆ ನೀರು ನುಗ್ಗುತ್ತಿದ್ದು, ನದಿ ಸಮೀಪವಿರುವ ಕುಟುಂಬಗಳನ್ನು ಸರ್ಕಾರಿ ಶಾಲೆಗಳಲ್ಲಿ ಹಾಗೂ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿ ಸ್ಥಳಾಂತರಿಸುವಲ್ಲಿ ತಾಲೂಕಾಡಳಿತ ಕ್ರಮ ಕೈಗೊಂಡಿದೆ.
   

 • Flood

  Karnataka DistrictsJul 28, 2021, 10:33 AM IST

  ಗದಗ: ಅಂತೂ ತಗ್ಗಿದ ಪ್ರವಾಹ, ಶಾಂತಳಾದ ಮಲಪ್ರಭೆ

  ಜಿಲ್ಲೆಯಾದ್ಯಂತ ಮಳೆ ಕಡಿಮೆಯಾಗಿ 3 ದಿನಗಳೇ ಕಳೆದಿದ್ದರೂ ಪ್ರವಾಹದ ಸಂಕಷ್ಟ ಮಾತ್ರ ದಿನೇ ದಿನೇ ಹೆಚ್ಚುತ್ತಲೇ ಸಾಗಿದ್ದು, ನರಗುಂದ ತಾಲೂಕಿನ ಲಖಮಾಪುರ, ಕೊಣ್ಣೂರು ಗ್ರಾಮಗಳಲ್ಲಿ ಪ್ರವಾಹ ಸ್ಥಿತಿ ಮುಂದುವರಿದ್ದು, ಕೊಣ್ಣೂರು ಸಮೀಪದಲ್ಲಿ ಹೆದ್ದಾರಿ ಮೇಲೆ ಸೋಮವಾರದಿಂದ ಹರಿಯುತ್ತಿರುವ ಮಲಪ್ರಭಾ ನದಿ ಮಂಗಳವಾರವೂ ಯಥಾಸ್ಥಿತಿ ಮುಂದುವರಿದ್ದು, ಹೆದ್ದಾರಿ ಸಂಚಾರ ಕೂಡಾ ಬಂದ್‌ ಆಗಿದೆ.

 • Uttara Kannada
  Video Icon

  Karnataka DistrictsJul 28, 2021, 10:00 AM IST

  ಉತ್ತರ ಕನ್ನಡದಲ್ಲಿ ಪ್ರವಾಹ ತಂದ ಸಂಕಷ್ಟ: ಪರಿಹಾರಕ್ಕಾಗಿ ಸಂತ್ರಸ್ತರ ಒತ್ತಾಯ

  ಅಧಿಕಾರಿಗಳು ಅರ್ಧ ಗಂಟೆಯ ಮೊದಲು ನೀರು ಬರುತ್ತೆ ಬೇರೆಡೆ ಹೋಗಿ ಅಂತಾರೆ. ಸರಕಾರ ನಮಗೆ ಬೇರೆ ಕಡೆ ಮನೆ ಕಟ್ಟಲು ಜಾಗ ಕೊಟ್ಟಿಲ್ಲ, ಪರಿಹಾರನೂ ನೀಡಿಲ್ಲ. ನಮ್ಮ ಮನೆ ಅತಿಕ್ರಮಣ ಜಾಗದಲ್ಲಿರೋದು ನಾವೆಲ್ಲಿ ಬೇರೆಡೆ ಹೋಗೋದು? ಅಂತ ನೆರೆ ಸಂತ್ರಸ್ತರು ತಮ್ಮ ಅಳಲು ತೋಡಿಕೊಂಡ ಘಟನೆ ಜಿಲ್ಲೆಯಲ್ಲಿ ನಡೆದಿದೆ.
   

 • Uttara Kannada
  Video Icon

  Karnataka DistrictsJul 28, 2021, 8:42 AM IST

  ಕಾರವಾರ: 'ಕೊನೆ ಕ್ಷಣದಲ್ಲಿ ನೀರು ಬಿಡುವ ಮಾಹಿತಿಯಿಂದ ಅವಾಂತರ'

  ಅಧಿಕಾರಿಗಳು ನೀರು ಬಿಡುವ ಮೊದಲು ಸರಿಯಾದ ಮಾಹಿತಿ ನೀಡಿಲ್ಲ. ನೀರು ಬಿಡೋ ಹತ್ತು- ಹದಿನೈದು ನಿಮಿಷ ಮೊದಲು ಹೇಳಿದ್ರೆ ನಾವೇನು ಮಾಡೋದು?.ಕಳೆದ ವರ್ಷವೂ ನೆರೆ ಬಂದಾಗ ಸರಕಾರದಿಂದ ಯಾವುದೇ ಪರಿಹಾರ ದೊರಕಿಲ್ಲ.

 • undefined

  IndiaJul 28, 2021, 8:10 AM IST

  ಕಾಂಗ್ರೆಸ್‌ ಬಣ್ಣ ಬಯಲು ಮಾಡಿ: ಬಿಜೆಪಿ ಸಂಸದರಿಗೆ ಮೋದಿ ಕರೆ!

  * ಪೆಗಾಸಸ್‌ ಸೇರಿ ಇನ್ನಿತರ ವಿಚಾರಗಳ ಸಂಬಂಧ ವಿಪಕ್ಷಗಳ ಗದ್ದಲ

  * ಕಾಂಗ್ರೆಸ್‌ ಬಣ್ಣ ಬಯಲು ಮಾಡಿ: ಬಿಜೆಪಿ ಸಂಸದರಿಗೆ ಮೋದಿ ಕರೆ

  * ಎಲ್ಲಾ ವಿಚಾರಗಳ ಬಗ್ಗೆ ಚರ್ಚೆಗೆ ಸರ್ಕಾರ ಸಿದ್ಧವಿದೆ

  * ಉದ್ದೇಶಪೂರ್ವಕವಾಗಿಯೇ ಕಾಂಗ್ರೆಸ್‌ನಿಂದ ಗದ್ದಲ: ಮೋದಿ

 • Supa Dam

  Karnataka DistrictsJul 28, 2021, 8:05 AM IST

  ಕಾರವಾರ: ಸೂಪಾ ಜಲಾಶಯಕ್ಕೆ ಹೆಚ್ಚಿದ ಒಳಹರಿವು

  ಜಿಲ್ಲೆಯ ವಿವಿಧೆಡೆ ಮಳೆ ಕಡಿಮೆಯಾಗಿದ್ದು, ಸೂಪಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ಸಾಧಾರಣ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಒಳ ಹರಿವು ಹೆಚ್ಚಾಗಿದ್ದು, ಇದೇ ರೀತಿ ಮುಂದುವರಿದರೆ ನೀರನ್ನು ಬಿಡುವ ಎಚ್ಚರಿಕೆ ನೀಡಲಾಗಿದೆ.
   

 • undefined

  FoodJul 27, 2021, 3:27 PM IST

  ಮಳೆಗಾಲ, ಅಕ್ಕೀಲಿ ಹುಳ ಆಗ್ತಿದ್ಯಾ? ಹೀಗ್ ಮಾಡಿ ನೋಡಿ

  ಮಳೆಗಾಲದಲ್ಲಿ ತೇವಾಂಶವು ಅಕ್ಕಿಯಲ್ಲಿ ಕೀಟಗಳನ್ನು ಸೃಷ್ಟಿಸುತ್ತದೆ. ಛೇ ಅಕ್ಕಿಯಲ್ಲಿ ಹುಳ ಆದರೆ ಅದನ್ನು ಆರಿಸಿಕೊಂಡು ತಿನ್ನುವುದೂ ಕಷ್ಟ, ಎಸೆಯಲು ಮನಸ್ಸೇ ಬರುವುದಿಲ್ಲ. ಅಷ್ಟೇ ಅಲ್ಲ, ನೀವು ಅವುಗಳನ್ನು ಸ್ವಚ್ಛಗೊಳಿಸಲು ಬಯಸಿದರೆ, ಅದು ಬಹಳ ಸಮಯ ತೆಗೆದುಕೊಳ್ಳುತ್ತದೆ ಮತ್ತು ಅಕ್ಕಿ ಬೇಯಿಸುವಾಗ ಹುಳು ಉಳಿದಿರುವ ಸಾಧ್ಯತೆ ಕೂಡ ಇರುತ್ತದೆ. ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಇಲ್ಲಿ ಹೇಳಿರುವ ಈ ವಿಧಾನ ಅನುಸರಿಸಬಹುದು.

 • undefined
  Video Icon

  Karnataka DistrictsJul 27, 2021, 2:01 PM IST

  ಮುಂದುವರೆದ ಕೃಷ್ಣಾ ಪ್ರವಾಹದ ಅಬ್ಬರ : ಕಾಲೇಜು ಜಲಾವೃತ

  ಅಥಣಿ ತಾಲೂಕಿನ ಸತ್ತಿ ಗ್ರಾಮದಿಂದ ಏಷ್ಯಾನೆಟ್ ಸುವರ್ಣ ನ್ಯೂಸ್‌ ಗ್ರೌಂಡ್ ರಿಪೋರ್ಟ್ ಇಲ್ಲಿದೆ.

  ಸತ್ತಿ ಗ್ರಾಮದ ಅಥಣಿ ರಸ್ತೆಯಲ್ಲಿರೋ  ಇನ್ಪೋಸಿಸ್ ಪ್ರತಿಷ್ಠಾನದ ಪಿ.ಯು. ಕಾಲೇಜು ಜಲಾವೃತವಾಗಿದ್ದು, ಇಡೀ ಕಾಲೇಜನ್ನ ನೀರು ಸುತ್ತುವರೆದಿದೆ.  

 • undefined
  Video Icon

  Karnataka DistrictsJul 27, 2021, 1:05 PM IST

  ಪ್ರವಾಹಕ್ಕೆ ಸಂಪೂರ್ಣ ಮುಳುಗಿದ ಸೇತುವೆ : ಸಂಪರ್ಕ ಕಟ್

  ಹಲ್ಯಾಳ-ದರೂರ ಬ್ರಿಡ್ಜ್ ಸಂಪೂರ್ಣ ಮುಳುಗಡೆಯಾಗಿದ್ದು ಜತ್ತ್-ಜಾಂಬೋಟ ರಾಜ್ಯ ಹೆದ್ದಾರಿ ಸಂಚಾರ ಸಂಪೂರ್ಣ ಬಂದ್ ಆಗಿದೆ.  ಅಥಣಿ ತಾಲೂಕಾ ಕೇಂದ್ರದ ಜೊತೆಗೆ 10ಕ್ಕೂ ಅಧಿಕ ಗ್ರಾಮಗಳು  ಸಂಪರ್ಕ‌ ಕಳೆದುಕೊಂಡಿವೆ.

  ದರೂರು, ತೀರ್ಥ, ಸಪ್ತಸಾಗರ, ನದಿ ಇಂಗಳಗಾಂವ ಸೇರಿದಂತೆ 10ಕ್ಕು ಅಧಿಕ ಗ್ರಾಮಗಳ  ಸಂಪರ್ಕ ಕಟ್ ಆಗಿದೆ. ಬೆಳಗಾವಿ ಜಿಲ್ಲೆಯ ಸೌಂದತ್ತಿ, ಗೋಕಾಕ್, ರಾಯಭಾಗ ಸೇರಿ ಹಲವು ತಾಲೂಕುಗಳ ಜೊತೆಗು ಅಥಣಿ ಸಂಪರ್ಕ ಕಟ್ ಆಗಿದೆ.  ಸೇತುವೆ ಮುಳುಗಿ ಮೇಲೆ  4ಅಡಿಗೂ ಅಧಿಕ ನೀರು ನಿಂತಿದೆ.  

 • tungabhadra
  Video Icon

  Karnataka DistrictsJul 27, 2021, 7:55 AM IST

  ತುಂಬಿದ ತುಂಗಭದ್ರಾ : ಎಲ್ಲಾ ಗೇಟ್ ಓಪನ್

  ಭಾರಿ ಮಳೆಯಾದ ಹಿನ್ನೆಲೆಯಲ್ಲಿ ವಿಜಯನಗರದ ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. 

  ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದುಬರುತ್ತಿರುವ ಪರಿಣಾಮದಿಂದಾಗಿ  ಡ್ಯಾಮಿನ ಎಲ್ಲಾ 33 ಕ್ರೆಸ್ಟ್‌ ಗೇಟ್‌ಗಳನ್ನು ಓಪನ್ ಮಾಡಲಾಗಿದೆ.