Asianet Suvarna News Asianet Suvarna News

ಬೆಂಗಳೂರಲ್ಲಿ ಭಾರೀ ಮಳೆ; ಈ ಪ್ರದೇಶಗಳ ವಾಹನ ಚಾಲಕರಿಗೆ ಪೊಲೀಸರಿಂದ ಮಹತ್ವದ ಸಂಚಾರ ಸಲಹೆ

ಮಳೆಗಾಲ ಮುಗಿತು ಅನ್ನೋದ್ರೊಳಗೆ ಮತ್ತೆ ರಾಜ್ಯಾದ್ಯಂತ ಅಬ್ಬರಿಸಿದ ಮಳೆರಾಯ. ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನದಿಂದಲೇ ಶುರುವಾದ ಮಳೆ ಹಲವೆಡೆ ಧಾರಾಕಾರವಾಗಿ ಸುರಿದಿದೆ. ತಾಸು ಸುರಿದ ಭಾರೀ ಮಳೆಗೆ ರಸ್ತೆಗಳು ಜಲಾವೃತಗೊಂಡಿರುವುದರಿಂದ  ವಾಹನ ಸಂಚಾರರು ಪರದಾಡುವಂತಾಗಿದೆ. 

Heavy rain in bengaluru today Advice from Traffic Police rav
Author
First Published Nov 6, 2023, 8:22 PM IST

ಬೆಂಗಳೂರು (ನ.6): ಮಳೆಗಾಲ ಮುಗಿತು ಅನ್ನೋದ್ರೊಳಗೆ ಮತ್ತೆ ರಾಜ್ಯಾದ್ಯಂತ ಅಬ್ಬರಿಸಿದ ಮಳೆರಾಯ. ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನದಿಂದಲೇ ಶುರುವಾದ ಮಳೆ ಹಲವೆಡೆ ಧಾರಾಕಾರವಾಗಿ ಸುರಿದಿದೆ. ತಾಸು ಸುರಿದ ಭಾರೀ ಮಳೆಗೆ ರಸ್ತೆಗಳು ಜಲಾವೃತಗೊಂಡಿರುವುದರಿಂದ  ವಾಹನ ಸಂಚಾರರು ಪರದಾಡುವಂತಾಗಿದೆ. 

ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಸಂಚಾರ ಪೊಲೀಸರು ಸುಗಮ ವಾಹನ ಸಂಚಾರಕ್ಕೆ ಅಡ್ಡಿಯಾಗಿರುವ ಪ್ರದೇಶಗಳ ಬಗ್ಗೆ ಮಾಹಿತಿ ನೀಡಿದ್ದು, ಆ ಮಾರ್ಗಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ಮಾರ್ಗ ಬದಲಾವಣೆಗೆ ಸಲಹೆ ನೀಡಿದ್ದಾರೆ.

ಮಳೆ ಕೊರತೆ: ಆಹಾರ ಉತ್ಪಾದನೆ ಅರ್ಧಕ್ಕರ್ಧ ಕುಸಿತ!

ಕೆ. ಆರ್ ಪುರ ಸಂಚಾರ ಠಾಣಾ ಸರಹದ್ದಿನಲ್ಲಿ ಮಳೆಯಾಗಿದ್ದು,  ಕಸ್ತೂರಿ ನಗರ ರಿಂಗ್ ರಸ್ತೆಯ ಟಿನ್ ಫ್ಯಾಕ್ಟರಿ ಕಡೆಯಿಂದ ಆರ್.ಎಂ ನಗರ ಸಿಗ್ನಲ್ 
ಜಂಕ್ಷನ್ ( ಹೆಬ್ಬಾಳ) ಕಡೆ ವಾಹನಗಳ ಸಂಚಾರ ನಿಧಾನಗತಿಯಲ್ಲಿರುತ್ತದೆ ಎಂದು ಸಂಚಾರ ಪೊಲೀಸ್ ಟ್ವೀಟ್ ಖಾತೆ ಮಾಹಿತಿ ನೀಡಿದೆ. 

ಇನ್ನು ಬಾಣಸವಾಡಿ ಮುಖ್ಯರಸ್ತೆಯಲ್ಲಿ (ಜೈ ಭಾರತ್ ನಗರ ಪೆಟ್ರೋಲ್ ಬಂಕ್ ಬಳಿ) ರಸ್ತೆ ಜಲಾವೃತಗೊಂಡಿದ್ದು,  ನಿಧಾನಗತಿಯ ಸಂಚಾರವಿದೆ. 

ಎಂ.ಎಂ.ಟಿ ಜಂಕ್ಷನ್ ಹತ್ತಿರ ಹ್ಯಾಂಗಿಂಗ್ ಬ್ರಿಡ್ಜ್ ಮೇಲೆ KSRTC ಬಸ್ ಕೆಟ್ಟು ನಿಂತಿದ್ದು ಕೆ.ಆರ್ ಪುರ ಕಡೆ ಸಂಚಾರ ನಿಧಾನಗತಿಯಲ್ಲಿರುತ್ತದೆ. ಇದನ್ನು ಶೀಘ್ರದಲ್ಲೇ  ತೆರವುಗೊಳಿಸಲಾಗುವುದು ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ. 

ಇನ್ನು ವಿದ್ಯಾ ಶಿಲ್ಪ ಕೆಳಸೇತುವೆ ಸರ್ವೀಸ್ ರಸ್ತೆ ಜಲಾವೃತಗೊಂಡಿದ್ದ ಕಾರಣ ನಿಧಾನಗತಿಯ ವಾಹನಸಂಚಾರವಿದೆ. ಈ ಹಿನ್ನೆಲೆಯಲ್ಲಿ ಸಂಚಾರ ಮಾರ್ಗವನ್ನು ಕೊಗಿಲು ಜಂಕ್ಷನ್ ಕಡೆಗೆ ತಿರುಗಿಸಲಾಗಿದೆ. 

8ರವರೆಗೆ ಸಾಧಾರಣದಿಂದ ಭಾರಿ ಮಳೆಯಾಗುವ ಸಂಭವ

Follow Us:
Download App:
  • android
  • ios