Asianet Suvarna News Asianet Suvarna News

ವಿಜಯನಗರ: ಜಿಲ್ಲೆಗೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ, ಬೆಳೆ ವೀಕ್ಷಣೆ

ರಾಜ್ಯದಲ್ಲಿ ತೀವ್ರ ಬರಗಾಲ ಉಂಟಾಗಿದ್ದು, ವಿಜಯನಗರ ಜಿಲ್ಲೆಯ ಎಲ್ಲ ತಾಲೂಕುಗಳು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆ ಬರ ಪರಿಸ್ಥಿತಿ ಅಧ್ಯಯನ ಮಾಡಲು ವಿಜಯನಗರ ಜಿಲ್ಲೆಗೆ ಐಎಎಸ್ ಅಧಿಕಾರಿಗಳ ತಂಡ ಭೇಟಿ ನೀಡಿತು.

Central Govt drought study team visit crop Inspection at vijayanagar rav
Author
First Published Oct 7, 2023, 12:39 PM IST

ವಿಜಯನಗರ (ಅ.7): ರಾಜ್ಯದಲ್ಲಿ ಮಳೆ ಅಭಾವದಿಂದ ತೀವ್ರ ಬರಗಾಲ ಉಂಟಾಗಿದ್ದು, ವಿಜಯನಗರ ಜಿಲ್ಲೆಯ ಎಲ್ಲ ತಾಲೂಕುಗಳು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆ ಬರ ಪರಿಸ್ಥಿತಿ ಅಧ್ಯಯನ ಮಾಡಲು ವಿಜಯನಗರ ಜಿಲ್ಲೆಗೆ ಐಎಎಸ್ ಅಧಿಕಾರಿಗಳ ತಂಡ ಭೇಟಿ ನೀಡಿತು.

ಹೊಸಪೇಟೆ ತಾಲ್ಲೂಕಿನ ನಂದಿಬಂಡಿ ಗ್ರಾಮದಲ್ಲಿ ಬರ ವೀಕ್ಷಣೆ ಮಾಡಿದ ತಂಡ. ಗೂಡೂಸಾಬ್,  ಶಂಕರ್ ನಾಯ್ಕ್ , ಬಸಪ್ಪ, ಈಡಿಗರ ಕೆಂಚಪ್ಪ,  ಧರ್ಮರಾಜ ಶೆಟ್ಟಿ, ಜಿ. ಭೀಮಪ್ಪ, ಮಹಾದೇವ್, ಸಾದಣ್ಣ , ದುರುಗಪ್ಪ ಎಂಬ ರೈತರಿಂದ ಬರ ಅಧ್ಯಯನ ತಂಡ ಮಾಹಿತಿ ಪಡೆದರು.

ಕೇಂದ್ರ ಬರ ಅಧ್ಯಯನ ತಂಡದಿಂದ ಬರ ಪರಿಸ್ಥಿತಿ ಪರಿಶೀಲನೆ

ಕೇಂದ್ರ ಕುಡಿಯುವ ನೀರು ಹೆಚ್ಚುವರಿ ಸಲಹೆಗಾರ ಡಿ. ರಾಜಶೇಖರ್ ರಿಂದ ಪರಿಶೀಲನೆ. ಜಿಲ್ಲೆಯ ಹಲವು ಕಡೆ ಸಂಪೂರ್ಣ ಬೆಳೆ ಹಾನಿಯಾಗಿದೆ. ಕೆಲವೆಡೆ ಬೆಳೆ ಇದ್ದರೂ ಉಂಟಾಗಿರುವ ತೀವ್ರ ಇಳುವರಿ ಕುಸಿತದ ಬಗ್ಗೆ ಮನವರಿಕೆ ಮಾಡಿದರು. ಅಧಿಕಾರಿಗಳ ಭೇಟಿ ವೇಳೆ ಕಂದಾಯ, ತೋಟಗಾರಿಕೆ, ಕೃಷಿ ಅಧಿಕಾರಿಗಳಿಂದ ಮಳೆಯ ವಾಸ್ತವದ ಬಗ್ಗೆ ಮನವರಿಕೆ ಮಾಡಿದರು. ವಿಜಯನಗರ ಜಿಲ್ಲಾಧಿಕಾರಿ ದಿವಾಕರ್, ಸಿಇಒ ಸದಾಶಿವ ಪ್ರಭು,  ಕೃಷಿ ಜೆಡಿ ಶರಣಪ್ಪ ಮುದುಗಲ್ ಕೇಂದ್ರ ತಂಡದೊಂದಿಗೆ ಸಾಥ್ ನೀಡಿದರು.

ಮಳೆ-ಬೆಳೆ ಇಲ್ಲ, ಪರಿಹಾರ ಕೊಡದೆ ಇದ್ದ ವಿಷವೇ ಗತಿ: ಕೇಂದ್ರ ಬರ ಅಧ್ಯಯನ ತಂಡದ ಎದುರು ಆತ್ಮಹತ್ಯೆಗೆ ಯತ್ನ

Follow Us:
Download App:
  • android
  • ios