Asianet Suvarna News Asianet Suvarna News

ಬಂಗಾಳದಲ್ಲಿ ಬಿರುಗಾಳಿ ಸಹಿತ ಮಳೆಗೆ ನಾಲ್ವರು ಮೃತ, 150 ಮಂದಿಗೆ ಗಾಯ!

ಪಶ್ಚಿಮ ಬಂಗಾಳದ ಜಲ್‌ಪೈಗುರಿಯಲ್ಲಿ ಸುಂಟರಗಾಳಿ, ಭಾರಿ ಮಳೆಗೆ ಅನಾಹುತ ಸಂಭವಿಸಿದೆ. ಬಿರುಗಾಳಿಯ ರಭಸಕ್ಕೆ ವಾಹನಗಳು ಮಾರುದ್ದ ದೂರಕ್ಕೆ ಅಪ್ಪಳಿಸಿದೆ. ಮನೆಗಳು ಧರೆಗುರುಳಿಸಿದೆ. ಮರಗಳು ನೆಲಸಮಗೊಂಡಿದೆ. ಈ ದುರ್ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು, 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
 

Storm and Heavy rain cause massive damage in West Bengal 4 dead 150 injured ckm
Author
First Published Mar 31, 2024, 8:21 PM IST

ಕೋಲ್ಕತಾ(ಮಾ.31) ದೇಶದ ಬಹುತೇಕ ಭಾಗದಲ್ಲಿ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದೆ. ಮಳೆ ಮುನ್ಸೂಚನೆಗಳಿವೆ. ಕೆಲವೆಡೆ ಮಳೆಯ ಸಿಂಚನವಾಗಿದೆ. ಆದರೆ ಈ ವರ್ಷದ  ಮೊದಲ ಸುಂಟರಗಾಳಿ ಪಶ್ಚಿಮ ಬಂಗಾಳ ಜಲ್‌ಪೈಗುರಿ ಜಿಲ್ಲೆಗೆ ಅಪ್ಪಳಿಸಿದೆ. ಭಾರಿ ಮಳೆ ಹಾಗೂ ಸುಂಟರಗಾಳಿಯಿಂದ ಭಾರಿ ಅವಾಂತರ ನಡೆದಿದೆ. ವಾಹನಗಳು ಜಖಂ ಗೊಂಡಿದೆ. ಮರಳಗಳು, ಮನೆ, ಗೋಡೆಗಳು ನೆಲಸಮಗೊಂಡಿದೆ. ಈ ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು, 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಜಲ್‌ಪೈಗುರಿ ಹಾಗೂ ಮೈನಗುರಿ ವಲಯದಲ್ಲಿ ಸುಂಟರಗಾಳಿ ಹಾಗೂ ಭಾರಿ ಮಳೆ ಅನಾಹುತ ಸೃಷ್ಟಿಸಿದೆ. ಸುಂಟರ ಗಾಳಿ ರಭಸಕ್ಕೆ ವಾಹನಗಳು ಪಲ್ಟಿಯಾಗಿದೆ. ಗಾಯಗೊಂಡವರನ್ನು ಜಲ್‌ಪೈಗುರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಾಗಿದೆ. ಮೃತಪಟ್ಟ ನಾಲ್ವರ ಪೈಕಿ ಇಬ್ಬರಾದ 49 ವರ್ಷದ ಅನಿಮಾ ರಾಯ್, 52 ವರ್ಷದ ದಿಜೇಂದ್ರ ನಾರಾಯಣ ಸರ್ಕಾರ್ ಎಂದು ಗುರುತಿಸಲಾಗಿದೆ.  ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಸ್ಥಳೀಯ ಟಿಎಂಸಿ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ. ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ವ್ಯವಸ್ಥೆ ಮಾಡುವಂತೆ ಸ್ಥಳೀಯ ಜನನಾಕರಿಗೆ ಸೂಚಿಸಿದ್ದಾರೆ. ಇತ್ತ ಮೆಡಿಕಲ್ ಕಾಲೇಜಿಗೆ ತೆರಳಿ ಗಾಯಗೊಂಡವರನ್ನು ಭೇಟಿಯಾಗಲು ಮುಂದಾಗಿದ್ದಾರೆ.

ಬೀದರ್‌: ಏಕಾಏಕಿ ಭಾರೀ ಗಾಳಿ, ಸಿಡಿಲು ಗುಡುಗು ಸಹಿತ ಮಳೆ; ಆತಂಕಗೊಂಡ ಜನರು!

ಜಲ್‌ಪೈಗುರಿಯಲ್ಲಿರುವ ಹಲವು ಗೋಶಾಲೆಗಳ ಮೇಲ್ಜಾವಣಿ ಹಾರಿ ಹೋಗಿದೆ. ಗೋಡೆಗಳು ಮಗುಚಿ ಬಿದ್ದಿದೆ. ಜಾನುವಾರುಗಳು ಕೂಡ ಸಂಕಷ್ಟಕ್ಕೆ ಸಿಲುಕಿದೆ. ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಇದೇ ವೇಳೆ ಸರ್ಕಾರದಿಂದ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಇತ್ತ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಸ್ಥಳೀಯ ಜಲ್ಲಾಡಳಿತಕ್ಕೆ ಮಮತಾ ಬ್ಯಾನರ್ಜಿ ಸೂಚನೆ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಮಮತಾ ಬ್ಯಾನರ್ಜಿ, ಇಂದು ಮಧ್ಯಾಹ್ನ ಬೀಸಿದ ಸುಂಟರಗಾಳಿ ಹಾಗೂ ಭಾರಿ ಮಳೆಗೆ ಭಾರಿ ಅನಾಹುತ ಸಂಭವಿಸಿದೆ. ಈ ಘಟನೆ ನೋವು ತರಿಸಿದೆ. ಘಟನೆಯಲ್ಲಿ ಕೆಲವರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಗಾಯಗೊಂಡವರ ಸೂಕ್ತ ಚಿಕಿತ್ಸೆಗೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ. ಹಲವರು ಮನೆ ಕಳೆದುಕೊಂಡಿದ್ದಾರೆ. ಸಂಕಷ್ಟಕ್ಕಿ ಸಿಲುಕಿರುವ ಜನರಿಗೆ ಸರ್ಕಾರ ನೆರವು ನೀಡಲಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಮೃತರ ಕುಟುಂಬಗಳಿಗೆ ಜಿಲ್ಲಾಡಳಿತ ಪರಿಹಾರ ನೀಡಲಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. 

ಬೆಂಗಳೂರಲ್ಲಿ ಜಾರಿಯಾಗಲಿದೆ ಸಮುದಾಯಿಕ ಮಳೆನೀರು ಕೊಯ್ಲು ಯೋಜನೆ; ಕೆರೆಗಳ ಸುತ್ತಲಿನ ಮನೆಗಳಿಗೆ ಅಳವಡಿಕೆ
 

Follow Us:
Download App:
  • android
  • ios