Asianet Suvarna News Asianet Suvarna News
278 results for "

ಅಂತ್ಯಸಂಸ್ಕಾರ

"
Actor puneeth rajkumar last rites in kanteerava studio bengaluru on Oct 31 rbjActor puneeth rajkumar last rites in kanteerava studio bengaluru on Oct 31 rbj

ಭಾನುವಾರ (ಅ.31) ಅಪ್ಪನ ಸಮಾಧಿಯ ಪಕ್ಕದಲ್ಲಿಯೇ ಅಪ್ಪು ಅಂತ್ಯಸಂಸ್ಕಾರ

* ಅಪ್ಪನ ಸಮಾಧಿಯ ಪಕ್ಕದಲ್ಲಿಯೇ ಮಗನ ಅಂತ್ಯಸಂಸ್ಕಾರ
* ಕಂಠೀರವ ಸ್ಟುಡಿಯೋ ಆವರಣದಲ್ಲಿ  ಪುನೀತ್ ರಾಜ್‌ಕುಮಾರ್ ಅಂತ್ಯಸಂಸ್ಕಾರ
* ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ರಾಜ್ಯ ಸರ್ಕಾರ ಆದೇಶ

Sandalwood Oct 29, 2021, 8:45 PM IST

Funeral to Olive ridley sea turtle Dhareswhara uttara Kannada mahFuneral to Olive ridley sea turtle Dhareswhara uttara Kannada mah

ಧಾರೇಶ್ವರದ ಮೀನುಗಾರ ಸಮಾಜದಿಂದ ಕಡಲಾಮೆಗೆ ಗೌರವದ ಅಂತಿಮ ನಮನ

ಮೃತ ಕಡಲಾಮೆ ಧಾರೇಶ್ವರ ಕಡಲಾಮೆ ಸಂರಕ್ಷಣಾ ಕೇಂದ್ರದ ಕಡಲತೀರದಲ್ಲಿ ಕಾಣಿಸಿಕೊಂಡಿತ್ತು. ಮೀನುಗಾರ ಯುವ ಮುಖಂಡ ರವಿ ಅಂಬಿಗರವರ ನೇತ್ರತ್ವದಲ್ಲಿ ಅರಣ್ಯ ಇಲಾಖೆ ಸಹಯೋಗದೊಂದಿಗೆ ಮೃತದೇಹದ ಮರಣೊತ್ತರ ಕಾರ್ಯ ನೇರವೇರಿಸಲಾಯಿತು. ನಂತರ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

Karnataka Districts Sep 30, 2021, 7:50 PM IST

Funeral of Buddhist Monk 15 Days After His Death at Mundgod in Uttara Kannada grgFuneral of Buddhist Monk 15 Days After His Death at Mundgod in Uttara Kannada grg

ಮುಂಡಗೋಡ: ದೇಹತ್ಯಾಗ ಮಾಡಿ 15ನೇ ದಿನಕ್ಕೆ ಬೌದ್ಧ ಸನ್ಯಾಸಿಯ ಅಂತ್ಯಸಂಸ್ಕಾರ..!

ಪ್ರಾಣ ಹೋದರೂ ಆತ್ಮ ಹೋಗಿಲ್ಲ ಎಂಬ ನಂಬಿಕೆಯಿಂದ 14 ದಿನಗಳಿಂದ ಮೃತದೇಹವನ್ನು ಇಟ್ಟುಕೊಂಡು ಪೂಜಿಸಲಾಗುತ್ತಿದ್ದ ಟಿಬೇಟಿಯನ್‌ ಹಿರಿಯ ಸನ್ಯಾಸಿಯ(Buddhist Monk) ಅಂತಿಮ ಸಂಸ್ಕಾರವನ್ನು 15ನೇ ದಿನವಾದ ಗುರುವಾರ ಸಕಲ ಗೌರವ ಮೆರವಣಿಗೆ ನಡೆಸಿ ಟಿಬೆಟಿಯನ್‌ ಧಾರ್ಮಿಕ ಪೂಜಾ ವಿಧಿ ವಿಧಾನದೊಂದಿಗೆ ನೆರವೇರಿಸಲಾಯಿತು.
 

Karnataka Districts Sep 24, 2021, 2:03 PM IST

After 13 Months Fallen Indian Army Soldier Gets Burial With Full Honours mahAfter 13 Months Fallen Indian Army Soldier Gets Burial With Full Honours mah

13  ತಿಂಗಳ ನಂತರ ಅಂತ್ಯಸಂಸ್ಕಾರ, ಶರೀರ ಹುಡುಕಲು ಪ್ರತಿ ದಿನ ಹೋರಾಡುತ್ತಿದ್ದ ತಂದೆ!

ಯೋಧನ ತಂದೆ  ಮಂಜೂರ್ ಅಹ್ಮದ್ ವಾಗೇ ಮಗನ ಅಂತ್ಯಕ್ರಿಯೆ ನೆರವೇರಿದ್ದರೆ. ನಾಪತ್ತೆಯಾಗಿದ್ದ ಯೋಧನ ಶರೀರ ಒಂದು ವರ್ಷದ ನಂತರ ಸಿಕ್ಕಿತ್ತು. ಸಾವಿರಾರು ಜನರು ಅಂತಿಮ ವಿಧಿಯಲ್ಲಿ ಪಾಲ್ಗೊಂಡು ಯೋಧನಿಗೆ ನಮನ ಸಲ್ಲಿಸಿದರು. ತವರಿಗೆ ಯೋಧನ ಪಾರ್ಥಿವ ಶರೀರ ತೆಗೆದುಕೊಂಡು ಹೋದಾಗ ಇಡೀ ಊರೆ ಕಣ್ಣೀರಾಗಿತ್ತು. ಪುಷ್ಪಗಳ ಸುರಿಮಳೆ ಸುರಿಸಲಾಯಿತು. 

India Sep 24, 2021, 12:33 AM IST

Monkey cremated traditionally in Kalaburagi District mahMonkey cremated traditionally in Kalaburagi District mah
Video Icon

ಕಲಬುರಗಿ; ಊರಿನ ಪ್ರೀತಿಗೆ ಪಾತ್ರವಾಗಿದ್ದ ಮಂಗನಿಗೆ ಸಂಪ್ರದಾಯ ಅಂತ್ಯಸಂಸ್ಕಾರ

ಕೋವಿಡ್ ನಂತ್ರ ಸಮಾಜದಲ್ಲಿನ ಹಲವು ಆಚರಣೆ, ಪದ್ದತಿಗಳು ಬದಲಾಗಿವೆ.. ಬಂಧು, ಮಿತ್ರರು ಅಗಲಿದರೂ ಅವರ ಅಂತ್ಯಕ್ರಿಯೆಗೂ ಹೋಗದೇ ವಾಟ್ಸಪನಲ್ಲಿ RIP ಅಂತ ಸಂದೇಶ ಕಳುಹಿಸುವ ಪರಿಸ್ಥಿತಿ ಸೃಷ್ಟಿಯಾಗಿದೆ.  ಆದ್ರೆ ಇಲ್ಲಿ, ಮನುಷ್ಯ ಅಲ್ಲ, ಮಂಗ ಸತ್ರೂ ಗ್ರಾಮಸ್ಥರೆಲ್ಲಾ ಸೇರಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಮಂಗನ ಶವಕ್ಕೆ ಸ್ನಾನ ಮಾಡಿಸಿ, ಹೊಸ ಬಟ್ಟೆ, ಕಿರಿಟ ತೊಡಿಸಿ, ಸಂಪ್ರದಾಯಬದ್ದವಾಗಿ ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.. ಅಷ್ಟೇ ಅಲ್ಲ, ಗ್ರಾಮಸ್ಥರೆಲ್ಲರಿಗೆ ಪ್ರಸಾದ ವ್ಯವಸ್ಥೆ ಸಹ ಮಾಡಿ ಮಂಗನ ಮೇಲೆ ಭಕ್ತಿ ಭಾವ ಮೆರೆದಿದ್ದಾರೆ.‌ ಈ ಮಂಗ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಅರಳಗುಂಡಗಿ ಗ್ರಾಮಸ್ಥರೊಂದಿಗೆ ಕಳೆದ ಕೆಲ ವರ್ಷಗಳಿಂದ ಅವಿನಾಭಾವ ಸಂಬಂಧ ಹೊಂದಿತ್ತು.. ಗ್ರಾಮದ ಇತರೇ ಸಾಕು ಪ್ರಾಣಿಗಳಂತೆ ಎಲ್ಲೆಡೆ ಸುತ್ತಾಡುತ್ತಾ ಎಲ್ಲರ ಪ್ರೀತಿಗೆ ಪಾತ್ರವಾಗಿತ್ತು.. ಆದ್ರೆ ನಿನ್ನೆ ಬೀದಿನಾಯಿಗಳ ದಾಳಿಯಿಂದ ಮಂಗ ಪ್ರಾಣ ಕಳೆದುಕೊಂಡಾಗ ಅರಳಗುಂಡಗಿ ಗ್ರಾಮಸ್ಥರು ಕಣ್ಣಿರಿನೊಂದಿಗೆ ಈ ರೀತಿ ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ನೆರವೇರಿಸುವ ಮೂಲಕ ಮಾದರಿಯಾಗಿದ್ದಾರೆ.

Karnataka Districts Sep 23, 2021, 9:49 PM IST

40 villagers tested Covid positive who took part on cremation snr40 villagers tested Covid positive who took part on cremation snr
Video Icon

ಮಂಡ್ಯದಲ್ಲಿ ಮೂರನೆ ಅಲೆ ಭೀತಿ : ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡ 40 ಮಂದಿಗೆ ಸೋಂಕು

ರಾಜ್ಯದಲ್ಲಿ ಮತ್ತೆ ಕೊರೋನಾ ಮಹಾಮಾರಿ ಅಟ್ಟಹಾಸ ನಿಧಾನವಾಗಿ ಹೆಚ್ಚಾಗುತ್ತಿದ್ದು, ಇದೀಗ ಮಂಡ್ಯದಲ್ಲಿ ಒಂದೇ ಗ್ರಾಮದ 40 ಮಂದಿ ಸೋಂಕಿಗೆ ಒಳಗಾಗಿದ್ದಾರೆ.  ಕೊರೋನಾ ಮರೆತು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ತಿಮ್ಮನಕೊಪ್ಪಲು ಗ್ರಾಮಸ್ಥರಿಗೆ ಶಾಕ್ ಎದುರಾಗಿದೆ. ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ 40 ಜನರಿಗೆ ಕೊರೋನಾ ಸೋಂಕು ತಗುಲಿದೆ.   

 ಸೋಂಕು ದಿನೇ ದಿನೆ ಹೆಚ್ಚಾಗುತ್ತಲೇ ಇದ್ದು ಇದರಿಂದ ತಿಮ್ಮನಕೊಪ್ಪಲು ಗ್ರಾಮದಲ್ಲಿ ಕೊವಿಡ್ 3ನೇ ಅಲೆ ಭೀತಿ ಎದುರಾಗಿದೆ. 

Karnataka Districts Aug 15, 2021, 2:44 PM IST

Bihar 19 year old boy killed over love affair in Muzaffarpur village podBihar 19 year old boy killed over love affair in Muzaffarpur village pod

ಪ್ರೇಮ ಪ್ರಕರಣ: ಯುವಕನಿಗೆ ಥಳಿಸಿ, ಗುಪ್ತಾಂಗ ಕತ್ತರಿಸಿದ್ರು: ಪ್ರೇಯಸಿ ಮನೆ ಎದುರೇ ಚಿತೆ!

* ಬಿಹಾರದ ಮುಜಫರ್‌ಪುರದಲ್ಲಿ ಯುವಕನ ಹತ್ಯೆ

* ದೊಣ್ಣೆ ಮತ್ತು ಕಬ್ಬಿಣದ ಸರಳುಗಳಿಂದ ಥಳಿಸಿ ಯುವಕನನ್ನು ಕೊಂದ ಆರೋಪಿಗಳು

* ಪ್ರಿಯತಮೆ ಮನೆ ಎದುರೇ ಅಂತ್ಯಸಂಸ್ಕಾರ

CRIME Jul 25, 2021, 4:13 PM IST

Daughter Wrote SSLC Exam In Mourning of Fathers Death in Yadgir grgDaughter Wrote SSLC Exam In Mourning of Fathers Death in Yadgir grg

ಯಾದಗಿರಿ: ತಂದೆ ಸಾವಿನ ಶೋಕದಲ್ಲೂ SSLC ಪರೀಕ್ಷೆ ಬರೆದ ಪುತ್ರಿ..!

ಬೆಳೆನಷ್ಟ, ಸಾಲಬಾಧೆ ಸಂಕಷ್ಟದಿಂದ ನೊಂದ ರೈತನೊಬ್ಬ ತುಂಬಿ ಹರಿಯುತ್ತಿದ್ದ ಕಾಲುವೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಪಿತೃಶೋಕದ ನಡುವೆಯೂ ಈತನ ಪುತ್ರಿ ಗುರುವಾರ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಅಂತ್ಯಸಂಸ್ಕಾರದಲ್ಲಿ ಭಾಗಿಯಾದ ಮನಕಲುಕುವ ಘಟನೆ ವರದಿಯಾಗಿದೆ.
 

Education Jul 23, 2021, 7:28 AM IST

Husband Committed Suicide After Wife Dies at Belthangady in Dakshina Kannada grgHusband Committed Suicide After Wife Dies at Belthangady in Dakshina Kannada grg

ಪತ್ನಿ ಅಂತ್ಯಸಂಸ್ಕಾರ ವೇಳೆ ಶಾಮಿಯಾನಕ್ಕೆ ನೇಣು ಬಿಗಿದು ಪತಿಯೂ ಆತ್ಮಹತ್ಯೆ

ಪತ್ನಿ ಆತ್ಮಹತ್ಯೆ ಮಾಡಿಕೊಂಡದ್ದರಿಂದ ಮನನೊಂದ ಪತಿ, ಆಕೆಯ ಅಂತ್ಯಸಂಸ್ಕಾರಕ್ಕೆ ಹಾಕಲಾಗಿದ್ದ ಶಾಮಿಯಾನದ ಕಂಬಕ್ಕೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದ ಮುಡಿಪಿರೆ ಎಂಬಲ್ಲಿ ನಡೆದಿದೆ. 
 

CRIME Jul 19, 2021, 7:31 AM IST

Congress Leader BK Hariprasad Slams BJP grgCongress Leader BK Hariprasad Slams BJP grg

'ಬಿಜೆಪಿಯ ಅಂತ್ಯಸಂಸ್ಕಾರ ಮಾಡದ ಹೊರತು ದೇಶಕ್ಕೆ ಉಳಿಗಾಲವಿಲ್ಲ'

ಜನರ ಹೆಣದ ಮೇಲೆಯೂ ಹಣ ಗಳಿಸುವ ದಂಧೆ ಮಾಡಿಕೊಂಡ ಬಿಜೆಪಿಯ ಅಂತ್ಯಸಂಸ್ಕಾರವನ್ನು ಮಾಡದ ಹೊರತು ದೇಶಕ್ಕೆ ಉಳಿಗಾಲವಿಲ್ಲ ಎಂದು ಹಿರಿಯ ಕಾಂಗ್ರೆಸ್‌ ಮುಖಂಡ ಬಿ.ಕೆ. ಹರಿಪ್ರಸಾದ ವಾಗ್ದಾಳಿ ನಡೆಸಿದ್ದಾರೆ. 
 

Karnataka Districts Jul 18, 2021, 10:24 AM IST

Funeral on the Road at Lakshmeshwara in Gadag grgFuneral on the Road at Lakshmeshwara in Gadag grg

ಗದಗ: ರಸ್ತೆಯ ಮೇಲೆಯೇ ಶವ ಸಂಸ್ಕಾರ..!

ಸಮೀಪದ ಬಟ್ಟೂರ ಗ್ರಾಮದಲ್ಲಿ ಯಾರಾದರೂ ಸತ್ತರೆ ಅವರನ್ನು ರಸ್ತೆಯ ಮೇಲೆಯೇ ಅಂತ್ಯಸಂಸ್ಕಾರ ಮಾಡಲಾಗುತ್ತದೆ!.
 

Karnataka Districts Jul 16, 2021, 11:39 AM IST

Funds for cremation scheme for poor released in Uttara Kannada hlsFunds for cremation scheme for poor released in Uttara Kannada hls
Video Icon

ಉತ್ತರ ಕನ್ನಡ: ಅಂತ್ಯಸಂಸ್ಕಾರಕ್ಕಾಗಿ ರಾಜ್ಯ ಸರ್ಕಾರದಿಂದ ತುರ್ತು ನಿಧಿ ಬಿಡುಗಡೆ

ರಾಜ್ಯ ಸರ್ಕಾರದ ಅಂತ್ಯಸಂಸ್ಕಾರ ಯೋಜನೆಯಡಿ ಫಲಾನುಭವಿಗಳಿಗೆ ವಿತರಣೆಗಾಗಿ ಕಳೆದ 5 ವರ್ಷಗಳ ಬಳಿಕ ಉತ್ತರಕನ್ನಡ ಜಿಲ್ಲೆಗೆ ಸರಕಾರ 3.02 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.

Karnataka Districts Jul 13, 2021, 5:57 PM IST

No Money For The Cremation Of Mother Jharkhand man commits Suicide podNo Money For The Cremation Of Mother Jharkhand man commits Suicide pod

ಅಮ್ಮನ ಅಂತ್ಯಸಂಸ್ಕಾರಕ್ಕೆ ಹಣವಿಲ್ಲ, ನೇಣಿಗೆ ಶರಣಾದ ಮಗ!

ಕೊರೋನಾ ಕೊಟ್ಟಿರುವ ನೋವು ಅಷ್ಟಿಷ್ಟಲ್ಲ, ಇದನ್ನು ಯಾರೂ ಎಂದಿಗೂ ಮರೆಯಲಾರರು. ಇದರ ಅಟ್ಟಹಾಸಕ್ಕೆ ಅನೇಕ ಮನೆಗಳು ನಾಶವಾಗಿವೆ, ಅನೇಕರು ಉದ್ಯೋಗ ಕಳೆದುಕೊಂಡು ಒಂದೊತ್ತಿನ ಊಟವಿಲ್ಲದೇ ಪರದಾಡುವ ಸ್ಥಿತಿ ಬಂದಿದೆ. ಇನ್ನು ಕೆಲವರು ತಮ್ಮ ಆಪ್ತರನ್ನು ಕಳೆದುಕೊಂಡಿದ್ದಾರೆ. ಸದ್ಯ ಝಾರ್ಖಂಡ್‌ನಲ್ಲೂ ಇಂತಹುದೇ ಮನಕಲಕುವ ಘಟನೆ ನಡೆದಿದೆ. ಇಲ್ಲೊಬ್ಬ ಮಗ ತನ್ನ ತಾಯಿ ಅಂತ್ಯಸಂಸ್ಕಾರ ನೆರವೇರಿಸಲು ಹಣವಿಲ್ಲವೆಂದು, ಬೇರೆ ದಾರಿ ಕಾಣದೇ ಆತ್ಮಹತ್ಯೆಗೆ ಶರಣಾಗಿದ್ದಾನೆ.

India Jun 27, 2021, 2:20 PM IST

Villagers Attempt to Funeral Infront of Grama Panchat at Ranibennur in Haveri grgVillagers Attempt to Funeral Infront of Grama Panchat at Ranibennur in Haveri grg

ರಾಣಿಬೆನ್ನೂರು: ಶವಸಂಸ್ಕಾರಕ್ಕೆ ಅಡ್ಡಿ, ಗ್ರಾಪಂ ಎದುರು ದಹನಕ್ಕೆ ಯತ್ನ

ಶವಸಂಸ್ಕಾರಕ್ಕೆ ಸ್ಮಶಾನ ಜಾಗೆ ಇರುವ ಹೊಲದ ಮಾಲೀಕರು ಅಡ್ಡಿಪಡಿಸಿದ್ದರಿಂದ ಮೃತಪಟ್ಟ ಮಹಿಳೆಯೊಬ್ಬರ ಸಂಬಂಧಿಕರು ಹಾಗೂ ಗ್ರಾಮಸ್ಥರು ರೊಚ್ಚಿಗೆದ್ದು ಗ್ರಾಪಂ ಕಚೇರಿ ಮುಂಭಾಗದಲ್ಲಿಯೇ ಸಂಸ್ಕಾರಕ್ಕೆ ಮುಂದಾದ ಘಟನೆ ಶನಿವಾರ ತಾಲೂಕಿನ ಹರನಗಿರಿ ಗ್ರಾಮದಲ್ಲಿ ನಡೆದಿದೆ.
 

Karnataka Districts Jun 27, 2021, 1:00 PM IST

Bajarangdal activists perform Covid 19 infected man s last rites in Koppa taluk mahBajarangdal activists perform Covid 19 infected man s last rites in Koppa taluk mah
Video Icon

ಕೊಪ್ಪ;  ಧಾರಾಕಾರ ಮಳೆ ನಡುವೆ ಸೋಂಕಿತನ ಶವಕ್ಕೆ ಅಂತ್ಯಸಂಸ್ಕಾರ

ಧಾರಾಕಾರ ಮಳೆಯಲ್ಲಿ ಒಂದು ಕಿಲೋಮೀಟರ್ ದೂರ ಸೋಂಕಿತನ ಶವ ಹೊತ್ತೊಯ್ದು ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಭಜರಂಗದಳದ ಕಾರ್ಯಕರ್ತರು ಗೌರವದ ವಿದಾಯ ನೀಡಿದ್ದಾರೆ. ಕೊಪ್ಪ ತಾಲೂಕಿನ ಶಿವಪ್ಪ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದರು. ಸಂಘಟನೆಗಳು ಸಂಕಷ್ಟದ ಸಂದರ್ಭ ಈ ರೀತಿಯ ಮಾದರಿ ಕೆಲಸ ಮಾಡಿಕೊಂಡೇ ಬಂದಿವೆ. 

Karnataka Districts Jun 20, 2021, 8:08 PM IST