ರಾಜಕೀಯ ಪ್ರೇರಿತ ಆರೋಪಕ್ಕೆ ಅದೇ ರೀತಿ ಉತ್ತರ: ಸಚಿವ ಶಿವರಾಜ ತಂಗಡಗಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜಕೀಯ ಪ್ರೇರಿತವಾಗಿ ಆರೋಪಗಳನ್ನು ಮಾಡುತ್ತಿರುವ ಬಿಜೆಪಿ-ಜೆಡಿಎಸ್ ಪಕ್ಷಗಳಿಗೆ ರಾಜಕೀಯ ಪ್ರೇರಿತವಾಗಿಯೇ ಉತ್ತರ ನೀಡುವುದಕ್ಕಾಗಿ ಮಾನ್ವಿಯಲ್ಲಿ ಸ್ವಾಭಿಮಾನಿ ಸಮಾವೇಶವನ್ನು ನಡೆಸಲಾಗಿದೆ ಎಂದು ಹಿಂದುಳಿದ ವರ್ಗಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ತಿರುಗೇಟು ನೀಡಿದರು.
ರಾಯಚೂರು (ಅ.07): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜಕೀಯ ಪ್ರೇರಿತವಾಗಿ ಆರೋಪಗಳನ್ನು ಮಾಡುತ್ತಿರುವ ಬಿಜೆಪಿ-ಜೆಡಿಎಸ್ ಪಕ್ಷಗಳಿಗೆ ರಾಜಕೀಯ ಪ್ರೇರಿತವಾಗಿಯೇ ಉತ್ತರ ನೀಡುವುದಕ್ಕಾಗಿ ಮಾನ್ವಿಯಲ್ಲಿ ಸ್ವಾಭಿಮಾನಿ ಸಮಾವೇಶವನ್ನು ನಡೆಸಲಾಗಿದೆ ಎಂದು ಹಿಂದುಳಿದ ವರ್ಗಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ತಿರುಗೇಟು ನೀಡಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಪಕ್ಷಗಳು ನಡೆಸಿರುವ ಹಗರಣದ ಆರೋಪವು ರಾಜಕೀಯ ಪ್ರೇರಿತವಾಗಿವೆ. ಏನಿದೆ ಸಿದ್ದರಾಮಯ್ಯ ಅವರ ಮೇಲೇ ಆರೋಪ? ಅವರೇನು ಕಡತಕ್ಕೆ ಸಹಿ ಹಾಕಿದ್ದಾರೆ. ಮುಖ್ಯಮಂತ್ರಿಯಾಗಿ ನಿವೇಶನ ನೀಡಿದ್ದಾರಾ? ಸಿದ್ದರಾಮಯ್ಯರನ್ನು ಕುಗ್ಗಿಸಲು ರಾಜಕೀಯ ಪ್ರೇರಣೆಯೀಂದ ಕೂಡಿದ ಬಿಜೆಪಿ-ಜೆಡಿಎಸ್ ಕಾರ್ಯಕ್ರಮವಾಗಿದ್ದು. ಇದಕ್ಕೆ ಯಾರು ಬಗ್ಗಲ್ಲ, ವಿಶೇಷವಾಗಿ ಸಿಎಂ ಸಿದ್ದರಾಮಯ್ಯ ಅವರು ಬಗ್ಗಲ್ಲ ಎಂದರು.
ಮಾನ್ವಿ ಸ್ವಾಭಿಮಾನದ ಸಮಾವೇಶದ ಕುರಿತು ಪ್ರತಿಕ್ರಿಯಿಸಿದ ಅವರು ವಿಪಕ್ಷಗಳು ರಾಜಕೀಯ ಪ್ರೇರಣೆಯಿಂದ ಆರೋಪ ಮಾಡುತ್ತಿದ್ದು ಅದೇ ರೀತಿಯಲ್ಲಿ ಅವರಿಗೆ ಉತ್ತರಿಸುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರು. ಈ ಹಿಂದೆ ಬಿಜೆಪಿ ಅವರು ಪಾದಯಾತ್ರೆ ಮಾಡಿದರಲ್ಲ ಜನ ಸೇರಿದ್ದರಾ? ಜನರಿಂದ ಸ್ಪಂದನೆ ಸಿಕ್ಕಿತಾ? ಅದಕ್ಕಿಂತ ಮುಂಚೆ ಕಾಂಗ್ರೆಸ್ ಸಮಾವೇಶ ಮಾಡಿದಾಗ ಸಾಕಷ್ಟು ಜನ ಸೇರಿದ್ದರು. ಬಿಜೆಪಿಯ ಮೋದಿ, ಶಾ ಅವರು ರಾಜ್ಯಪಾಲರ ಕಚೇರಿಯನ್ನು ಬಿಜೆಪಿ ಕಚೇರಿಯನ್ನಾಗಿಸಿಕೊಂಡಿದ್ದಾರೆ ಎಂದು ದೂರಿದರು.
ಸಿದ್ದರಾಮಯ್ಯಗೆ ಕನ್ನಡರಾಮಯ್ಯ ಎಂದು ಹೆಸರಿಡಬೇಕು: ಸಚಿವ ಶಿವರಾಜ ತಂಗಡಗಿ
ಸಿದ್ದರಾಮಯ್ಯ ಅವರು 5 ಸಾವಿರ ಅಕ್ರಮ ಕೋಟಿ ಬೇನಾಮಿ ಆಸ್ತಿಯನ್ನು ಮಾಡಿದ್ದು ಅದನ್ನು ತನಿಖೆ ಮಾಡಬೇಕು ಎಂದು ಶಾಸಕ ಜನಾರ್ದನ ರೆಡ್ಡಿ ಅವರು ಆರೋಪಕ್ಕೆ ಉತ್ತರಿಸಿದ ತಂಗಡಗಿ ಕಾಗೆ ಕೋಗಿಲೆಯನ್ನು ನೋಡಿ ಎಷ್ಟು ಕಪ್ಪಾಗಿದೆ ಎಂದು ಹೇಳಿದಂತಿ ಜನಾರ್ಧನ ರೆಡ್ಡಿ ಅವರ ಹೇಳಿಕೆ. ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವ ನೈತಿಕತೆಯ ಜನಾರ್ಧನರೆಡ್ಡಿ ಅವರಿಗೆ ಇದೆಯೇ? ಅವರು ಯಾಕೆ ಜೈಲಿಗೆ ಹೋದರು, ಅದರ ಬಗ್ಗೆ ಮಾತನಾಡಲು ಆಗುತ್ತದೆಯೇ. ಮೈಯಲ್ಲ ಕೆಸರು ಬಡಿದುಕೊಂಡು ಬೇರೆಯವರ ಬಗ್ಗೆ ಮಾತನಾಡುವುದು ತಪ್ಪು, ಬಿಜೆಪಿಗರು ಹೇಗಿದ್ದಾರೆ ಎಂದರೆ ತಮ್ಮ ತಟ್ಟೆಯಲ್ಲಿ ಕತ್ತೆ ಬಿದ್ದಿದೆ ಅದನ್ನು ನೋಡದೇ ಮಂದಿ ತಟ್ಟೆ ಸೋಣ ಬಿದ್ದಿದೆ ಎಂದು ಹೇಳುತ್ತಿದ್ದಾರೆ ಎಂದು ಕುಟುಕಿದರು.