* ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದಲ್ಲಿ ನಡೆದ ಘಟನೆ*  ಪತಿಗೆ ತೀವ್ರ ಕುಡಿತದ ಚಟ* ಈ ಸಂಬಂಧ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲು 

ಬೆಳ್ತಂಗಡಿ(ಜು.19): ಪತ್ನಿ ಆತ್ಮಹತ್ಯೆ ಮಾಡಿಕೊಂಡದ್ದರಿಂದ ಮನನೊಂದ ಪತಿ, ಆಕೆಯ ಅಂತ್ಯಸಂಸ್ಕಾರಕ್ಕೆ ಹಾಕಲಾಗಿದ್ದ ಶಾಮಿಯಾನದ ಕಂಬಕ್ಕೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದ ಮುಡಿಪಿರೆ ಎಂಬಲ್ಲಿ ನಡೆದಿದೆ. 

ಚಂದ್ರಾವತಿ (49) ಅವರು ಮನೆಯ ಪಕ್ಕದ ಗೇರುಮರಕ್ಕೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಮರುದಿನ ಅವರ ಪತಿ ಶಿವಪ್ಪ ಗೌಡ(56) ಎಂಬವರೂ ಇದೇ ಕೃತ್ಯವೆಸಗಿದ್ದಾರೆ. 

ಮಾಟಕ್ಕೆ ಹೆದರಿ ಇಬ್ಬರು ಮಕ್ಕಳ ಕೊಂದ ತಂದೆ, ರಕ್ತ ದೇವರಿಗೆ ಅರ್ಪಣೆ!

ಪತಿಗೆ ತೀವ್ರ ಕುಡಿತದ ಚಟ, ಪತಿಗೆ ವಾಸಿಯಾಗದ ದೀರ್ಘ ಕಾಲದ ಅಸೌಖ್ಯ ಮತ್ತು ಮಕ್ಕಳಾಗದೆ ಇರುವ ಬಗ್ಗೆ ಮಾನಸಿಕವಾಗಿ ನೊಂದಿದ್ದ ಚಂದ್ರಾವತಿ ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ. ದಂಪತಿ ತಾಯಿ ನಾಗಮ್ಮರೊಂದಿಗೆ ವಾಸ್ತವ್ಯವಿದ್ದರು. ಇದೀಗ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದು, ತಾಯಿ ಒಬ್ಬಂಟಿಯಾಗಿದ್ದಾರೆ. ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.