Asianet Suvarna News Asianet Suvarna News

ಅಕ್ಟೋಬರ್​ 11ಕ್ಕೆ ಮಾರ್ಟಿನ್ ಮಹಾ ಬಿರುಗಾಳಿ: ಇವರೇ ನೋಡಿ ಹಾಲಿವುಡ್​ ಶೈಲಿಯ ಮಾರ್ಟಿನ್​​ ಶಕ್ತಿ!

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಅಬ್ಬರಿಸೋಕೆ ಅಖಾಡ ಸಜ್ಜಾಗಿದೆ. ಅದಕ್ಕೆ ಟೈಮ್ ಕೂಡ ಫಿಕ್ಸ್ ಆಗಿದೆ. ಇನ್ನೇನಿದ್ರು ಪ್ರೇಕ್ಷಕ ಆ ಅಖಾಡದಲ್ಲಿ ಧ್ರುವನ ಅಬ್ಬರ ನೋಡೋದೊಂದೇ ಭಾಕಿ. ಅದು ಮಾರ್ಟಿನ್ ಅಖಾಡ. 

First Published Oct 5, 2024, 10:46 AM IST | Last Updated Oct 5, 2024, 10:46 AM IST

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಅಬ್ಬರಿಸೋಕೆ ಅಖಾಡ ಸಜ್ಜಾಗಿದೆ. ಅದಕ್ಕೆ ಟೈಮ್ ಕೂಡ ಫಿಕ್ಸ್ ಆಗಿದೆ. ಇನ್ನೇನಿದ್ರು ಪ್ರೇಕ್ಷಕ ಆ ಅಖಾಡದಲ್ಲಿ ಧ್ರುವನ ಅಬ್ಬರ ನೋಡೋದೊಂದೇ ಭಾಕಿ. ಅದು ಮಾರ್ಟಿನ್ ಅಖಾಡ. ಹಾಗಾದ್ರೆ 3 ವರ್ಷದಿಂದ ಸಿದ್ಧವಾಗಿರೋ ಮಾರ್ಟಿನ್​ನ ಅಖಾಡದ ಹಿಂದಿನ ಶಕ್ತಿ ಯಾರು..? ಅವರ ಶ್ರಮ ಹೇಗಿತ್ತು. ಮಾರ್ಟಿನ್. ಕನ್ನಡಿಗರು ಕಣ್ಣಿಟ್ಟು ಕಾಯುತ್ತಿರೋ ಸಿನಿಮಾ ಕನ್ನಡಿಗರೇ ಬಾಣಸಿಗರಾಗಿ ಸಿದ್ಧಪಡಿಸಿರೋ ಸ್ಯಾಂಡಲ್​ವುಡ್​ನ ಮತ್ತೊಂದು ಪ್ಯಾನ್​ ಇಂಡಿಯಾ ಹಬ್ಬದೂಟ. ಮಾರ್ಟಿನ್​​ನ ಮೂರು ವರ್ಷದ ಶ್ರಮ ಅಕ್ಟೋಬರ್​ 11ಕ್ಕೆ ತೆರೆ ಮೇಲೆ ತೆರೆದುಕೊಳ್ಳಲಿದೆ. ಮಾರ್ಟಿನ್ ಟ್ರೈಲರ್​, ಟೀಸರ್ ಸ್ಯಾಂಪಲ್ಸ್ ನೋಡಿದವರು ಈ ಸಿನಿಮಾ ಈ ಮಟ್ಟಕ್ಕೆ ಅದ್ಧೂರಿಯಾಗಿ ಸೃಷ್ಟಿಯಾಗಿದ್ದು ಹೇಗೆ ಅಂತ ಕೇಳ್ತಿದ್ದಾರೆ. ಅದರ ಹಿಂದಿನ ಶಕ್ತಿ ಯುಕ್ತಿ ಆ ಆರು ಜನ. ಮಾರ್ಟಿನ್ ಹಾಲಿವುಡ್​​ ರೇಂಜ್​​ನಲ್ಲಿ ಕಾಣ್ತಿದೆ. ಅದಕ್ಕೆ ಕಾರಣ ಟೆಕ್ನಿಕಲಿ ತುಂಬಾ ಸ್ಟ್ರಾಂಗ್ ಆಗಿದೆ ಅನ್ನೋದು. 

ಸ್ಯಾಂಪಲ್ಸ್​ ನಿಂದಲೇ ಮಾರ್ಟಿನ್​ ಆ ನಂಬಿಕೆ ಹುಟ್ಟಿಸಿದೆ. ಇದಕ್ಕೆಲ್ಲಾ ಕಾರಣ ನಿರ್ಮಾಪಕ ಉದಯ್ ಕೆ ಮೆಹ್ತಾ, ನಿರ್ದೇಶಕ ಎ.ಪಿ ಅರ್ಜುನ್, ಛಾಯಗ್ರಹಕ ಸತ್ಯ ಹೆಗಡೆ, ಸ್ಟಂಟ್ ಮಾಸ್ಟರ್​ ರವಿವರ್ಮಾ ಆರ್ಟ್​ ಡೈರೆಕ್ಟರ್ ಮೋಹನ್ ಬಿ ಕೆರೆ. ಹಾಗು ಸಂಗೀತ ನಿರ್ದೇಶಕ ರವಿ ಬಸ್ರೂರು. ಮಾಸ್​ ಎಂಟರ್​ಟೈನ್ಮೆಂಟ್ ಮಾರ್ಟಿನ್ ನಲ್ಲಿ ಆ್ಯಕ್ಷನ್ ಧಮಾಕ ಕಾಣ್ತಿದೆ. ಧ್ರುವ ಸರ್ಜಾ ಸೋಲ್ಜರ್​​​ ಆಗಿ ಬಂದಿದ್ದಾರೆ. ಒಂದ್ ಕಡೆ ವಾರ್​ ಫೀಲ್ಡ್​ ಮತ್ತೊಂದು ಕಡೆ ಜೈಲು. ಅದರಲ್ಲಿ ರಣಹದ್ದುಗಳಂತೆ ಕಾದಾಡೋ ದೈತ್ಯ ಪ್ರತಿಭೆಗಳು. ಇವರ ಮಧ್ಯೆ ಕಾದಾಟ ಸೃಷ್ಟಿಸಿದ್ದು ಒನ್​ ಆ್ಯಂಡ್ ಓನ್ಲಿ ರವಿ ವರ್ಮಾ.. ಇವರ ಬಗ್ಗೆ ನಿಮಗೆ ಹೇಳ್ಬೇಕಿಲ್ಲ ಬಿಡಿ. ಇವರು ಪ್ಯಾನ್ ಇಂಡಿಯಾ ಸ್ಟಂಟ್ ಮಾಸ್ಟರ್​.

ಸಲ್ಮಾನ್ ಖಾನ್​ರಿಂದ ಹಿಡಿದು ರಜನಿಕಾಂತ್​, ಯಶ್​ ಪ್ರಭಾಸ್ ವರೆಗೂ ಎಲ್ಲರಿಗೂ ಸ್ಟಂಟ್ ಡೈರೆಕ್ಟ್ ಮಾಡಿದವರು. ಈಗ ಮಾರ್ಟಿನ್​ನ ಆಕ್ಷನ್ ಹಿಂದಿನ ಶಕ್ತಿ ಕೂಡ ಇವರೇ. ಮಾರ್ಟಿನ್ ಟ್ರೈಲರ್ ನೋಡಿದವರಿಗೆ ಗೊತ್ತಾಗುತ್ತೆ ಈ ಸಿನಿಮಾ ಟೆಕ್ನಿಕಲಿ ಎಷ್ಟು ಸ್ಟ್ರಾಂಗ್ ಇದೆ ಅಂತ. ಹಾಲಿವುಡ್​​ನ ನೇಚರ್ ಕಾಣ್ತಿದೆ. ಕೆಜಿಎಫ್​​​ ಸಿನಿಮಾದ  ಮ್ಯೂಸಿಕ್ ಮಾಂತ್ರಿಕ ರವಿ ಬಸ್ರೂರು ಮಾರ್ಟಿನ್​​ಗೆ ಕ್ವಾಲಿಟಿ ಟ್ಯೂನ್ ಹಾಕಿದ್ದಾರೆ. ಕನ್ನಡದ ಕೆಲವೇ ಕೆಲವು ಸ್ಟೈಲೀಶ್, ಟ್ಯಾಲೆಂಟೆಡ್​ ಛಾಯಾಗ್ರಹಕರಲ್ಲಿ ಸತ್ಯ ಹೆಗಡೆ ಕೂಡ ಒಬ್ರು. ಮಾರ್ಟಿನ್ ಸೆರೆಯಾಗಿದ್ದು ಇವರ ಕ್ಯಾಮೆರಾ ಕಣ್ಣಲ್ಲೇ. ಆ ಕಡೆ ಆರ್ಟ್ ಡೈರೆಕ್ಟರ್ ಮೋಹನ್ ಬಿ ಕೆ ಈ ಸಿನಿಮಾದ ವಿಶ್ಯುವಲ್ ಟ್ರೀಟ್​​​​​​ಗೆ ಅದ್ಧೂರಿ ಸೆಟ್ ಹಾಕಿದ್ದಾರೆ. 105 ಕೋಟಿ ಬಜೆಟ್​ನಲ್ಲಿ ಹೆಚ್ಚು ಖರ್ಚಾಗಿದ್ದು ಇದೇ ಸೆಟ್​ಗೆ.

Video Top Stories