ನೆರೆ ಅಧ್ಯಯನ ಮಾಡಲು ಕೇಂದ್ರ ತಂಡ ರಾಜ್ಯಕ್ಕೆ ಆಗಮಿಸಿದ್ದು, ಮೂರು ದಿನಗಳ ಕಾಲ ಪ್ರವಾಹದಿಂದ ಉಂಟಾದ ಹಾನಿ ಪ್ರದೇಶಗಳಿಗೆ ಭೇಟಿ ನೀಡಲಿದೆ.
state Dec 13, 2020, 8:03 PM IST
ಕಳೆದ ಎರಡು ವರ್ಷಗಳಿಂದ ಉತ್ತರ ಕರ್ನಾಟಕದ ಜನರು ಸತತ ಪ್ರವಾಹದಿಂದ ಕಷ್ಟ ಪಟ್ಟಿದ್ದಾರೆ. ರೈತರು ಸೇರಿ ಎಲ್ಲಾ ವರ್ಗದ ಜನರು ತುಂಬಾ ಸಂಕಷ್ಟದಲ್ಲಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಕಳೆದ ಎರಡು ಚಳಿಗಾಲದ ಅಧಿವೇಶನ ಸುವರ್ಣಸೌಧದಲ್ಲಿ ನಡೆಸಿಲ್ಲ. 400 ರಿಂದ 500 ಕೋಟಿ ಖರ್ಚು ಮಾಡಿ ಸುವರ್ಣಸೌಧ ಕಟ್ಟಿದ್ದಾರೆ. ಆದರೆ ಎರಡು ವರ್ಷಗಳಿಂದ ಸುವರ್ಣಸೌಧದಲ್ಲಿ ಅಧಿವೇಶನ ಕರೆದಿಲ್ಲ. ಸುವರ್ಣಸೌಧವನ್ನು ಬಾರ್ & ರೆಸ್ಟೋರೆಂಟ್ ಮಾಡಿ ಎಂದು ವಾಟ್ಸಪ್ಗಳಲ್ಲಿ ಹರದಾಡುತ್ತಿದೆ, ನಗೆಪಾಟಿಲಿಗೀಡಾಗಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕೆಪಿಸಿಸಿ ವಕ್ತಾರೆ ಹಾಗೂ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹರಿಹಾಯ್ದಿದ್ದಾರೆ.
Karnataka Districts Dec 4, 2020, 1:26 PM IST
ಧಾರವಾಡದಲ್ಲಿ ಜನಪ್ರತಿನಿಧಿಗಳಿಂದಲೇ ಭಾರೀ ಗೋಲ್ಮಾಲ್ ನಡೆದಿದೆ. ಪ್ರವಾಹ ಸಂತ್ರಸ್ತರ ಮನೆ ಹಂಚಿಕೆಯಲ್ಲಿ ಭಾರೀ ಅವ್ಯವಹಾರ ನಡೆದಿರುವ ಆರೋಪ ಕೇಳಿ ಬಂದಿದೆ.
state Dec 1, 2020, 5:12 PM IST
ಆತ ಮನೆ ಮಗನಲ್ಲ, ಮನೆ ಹಾಳ.. ಆತ ಪಕ್ಷಕ್ಕೆ ನಿಷ್ಟನಾಗಿರದೇ ಅನೇಕರ ರಾಜೀನಾಮೆಗೆ ಕಾರಣವಾಗಿದ್ದಾಗಿ ಶಾಸಕರೋರ್ವರ ವಿರುದ್ಧ ಖಡಕ್ ವಾಕ್ ಪ್ರವಾಹ ಮಾಡಲಾಗಿದೆ.
Karnataka Districts Nov 17, 2020, 8:02 AM IST
ಕೇಂದ್ರ ಸರ್ಕಾರವು ರಾಜ್ಯಕ್ಕೆ ನೆರೆ ಪರಿಹಾರವಾಗಿ 577 ಕೋಟಿ ರು. ಬಿಡುಗಡೆ ಮಾಡಿದೆ. ಇದು ಮೊದಲ ಕಂತು ಅಷ್ಟೇ. ಕೇಂದ್ರದಿಂದ ಇನ್ನಷ್ಟು ನೆರವು ದೊರೆಯುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶನಿವಾರ ಹೇಳಿದ್ದಾರೆ.
state Nov 15, 2020, 11:19 AM IST
ರಾಜ್ಯದಲ್ಲಿ ಪ್ರವಾಹದಿಂದ 25 ಸಾವಿರ ಕೋಟಿಗೂ ಅಧಿಕ ನಷ್ಟ ಉಂಟಾಗಿದೆ. ಈ ಬಗ್ಗೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ
state Nov 10, 2020, 8:24 AM IST
2019ರಲ್ಲಿ ಬೆಣ್ಣೆಹಳ್ಳ, ಮಲಪ್ರಭಾ ನದಿಯ ಪ್ರವಾಹ ಹಾಗೂ ಮಳೆಯ ಅತೀವೃಷ್ಟಿಯಿಂದ ಬಿದ್ದ ಮನೆಗಳಿಗೆ ಪರಿಹಾರ ಸುಕ್ಕಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರ್ಕಾರದ ಪಟ್ಟಿಯನ್ನು ಸೇರದ ಬಿದ್ದ ಮನೆಗಳು ಇನ್ನು ಕಾಣುತ್ತವೆ.
Karnataka Districts Nov 8, 2020, 11:16 AM IST
ಈ ಬಾರಿ ನಮಗೆ ಕನ್ನಡ ರಾಜ್ಯೋತ್ಸವ ಸಿಹಿ-ಕಹಿಯಾಗಿ ಮಾರ್ಪಟ್ಟಿದೆ. ಕೋವಿಡ್-ಪ್ರವಾಹ ಸಂಕಷ್ಟದ ನಡುವೆ ಕನ್ನಡ ರಾಜ್ಯೋತ್ಸವವನ್ನ ಆಚರಣೆ ಮಾಡಬೇಕಾಗಿದೆ. ಭೀಮಾ ನದಿ ಪ್ರವಾಹದಲ್ಲಿ ಹಾನಿಯಾದ ಮನೆಗಳಿಗೆ ಪರಿಹಾರ ನೀಡುವ ಕಾರ್ಯ ಪ್ರಗತಿಯಲ್ಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
Karnataka Districts Nov 1, 2020, 3:58 PM IST
ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ನೆರೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಸೂಕ್ತ ಪರಿಹಾರಕ್ಕಾಗಿ ಕೇಂದ್ರವನ್ನು ಒತ್ತಾಯಿಸಬೇಕು. ನಿಮಗೆ (ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ) ಧೈರ್ಯವಿಲ್ಲದಿದ್ದರೆ ಸರ್ವಪಕ್ಷಗಳ ನಿಯೋಗವನ್ನು ಕರೆದುಕೊಂಡು ಹೋಗಿ ಹಣ ಬಿಡುಗಡೆಗೆ ನಾವು ಒತ್ತಾಯಿಸುತ್ತೇವೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
state Oct 30, 2020, 10:34 AM IST
ಭೀಕರ ಮಳೆಯಿಂದ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಂಪೂರ್ಣ ಹಾನಿಯಾಗಿದೆ. ಕೇಂದ್ರ ಸರ್ಕಾರ ಕೂಡಲೇ 50 ಸಾವಿರ ಕೋಟಿ ಪರಿಹಾರ ಘೋಷಣೆ ಮಾಡಬೇಕೆಂದು ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ಒತ್ತಾಯಿಸಿದ್ದಾರೆ.
Karnataka Districts Oct 28, 2020, 3:01 PM IST
ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಹೊಸಕೆರೆಹಳ್ಳಿಯ ಕೆಲ ವಿದ್ಯಾರ್ಥಿಗಳ ನೋಟ್ ಬುಕ್ ಮತ್ತು ಓದುವ ಪುಸ್ತಕ ಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದವು. ಈ ಬಗ್ಗೆ ಮಾಧ್ಯಮಗಳಲ್ಲಿ ಬಂದ ಸುದ್ದಿಯನ್ನು ಗಮನಿಸಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಕಾವೇರಿ ನಿವಾಸಕ್ಕೆ ವಿದ್ಯಾರ್ಥಿಗಳನ್ನು ಕರೆಯಿಸಿ ಅವರಿಗೆ ನೋಟ್ ಬುಕ್ ಗಳನ್ನು ವಿತರಿಸಿ ಪುಸ್ತಕಗಳನ್ನು ಕೊಂಡುಕೊಳ್ಳಲು ಆರ್ಥಿಕ ನೆರವನ್ನು ನೀಡಿದರು
Education Oct 27, 2020, 8:40 PM IST
ಯಪ್ಪಾ, ನೀವು ಹೊಳಿ ಬಂದು ಹೋದಾಗೊಮ್ಮೆ ಬಂದು ಹೋಗ್ತೀರಿ, ಹಿಂಗ ಮಾಡೋದಕ್ಕಿಂತ ಮಹಾರಾಷ್ಟ್ರದವ್ರು ಬೇಕಾಬಿಟ್ಟಿ ನೀರ ಬಿಡೋದನ್ನ ತುಸು ನಿಲ್ಸಿದ್ರ ವೈನಾಗ್ತೈತಿ, ಹೀಂಗ ಬರೋದಕ್ಕಿಂತ ಮೊದ್ಲು ಆ ಕೆಲ್ಸ ಮಾಡ್ರಿ ಯಪ್ಪಾ’
Karnataka Districts Oct 27, 2020, 2:18 PM IST
ಜೇವರ್ಗಿ(ಅ.27): ಅತಿವೃಷ್ಟಿ, ಪ್ರವಾಹದಿಂದ ರೈತಾಪಿ ವರ್ಗ ಹಾಗೂ ಭೀಮಾ ತೀರದ ಗ್ರಾಮಸ್ಥರು ತಮ್ಮ ಮನೆಗಳನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಕೂಡಲೇ ನೊಂದವರಿಗೆ ಸಮರ್ಪಕ ಪರಿಹಾರದ ಜೊತೆಗೆ ಸೂರು ಕಲ್ಪಿಸಿ ಕೊಡಬೇಕೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
Karnataka Districts Oct 27, 2020, 1:16 PM IST
ಯಾದಗಿರಿಯಲ್ಲಿ ಸಿದ್ದರಾಮಯ್ಯ ಅವರು ಪ್ರವಾಹ ಸಂತ್ರಸ್ತರ ಭೇಟಿ ನೆಪದಲ್ಲಿ ರೋಡ್ ಶೋ ಮಾಡಿದ್ದಾರೆ.
Politics Oct 26, 2020, 8:02 PM IST
ರಾಜ್ಯ ರಾಜಕಾರಣದಲ್ಲಿ ಸದ್ಯ `ಧಮ್’ ಭಾರಿ ಸದ್ದು ಮಾಡುತ್ತಿದೆ. ಸಿದ್ದರಾಮಯ್ಯ, ಬಿಜೆಪಿ ನಾಯಕರ ಮಧ್ಯೆ ಈ ಧಮ್ ವಾಗ್ಯುದ್ಧ ಜೋರಾಗಿ ನಡೆಯುತ್ತಿದೆ.
Politics Oct 25, 2020, 3:25 PM IST