ಸೆಮಿಕಾನ್ ಬಿಡಿ, ಕರ್ನಾಟಕದಲ್ಲಿ ಅಭಿವೃದ್ದಿಗೂ ಹಣವಿಲ್ಲ: ಪ್ರಿಯಾಂಕ್ ಖರ್ಗೆ ವಿರುದ್ಧ ರಾಜೀವ್ ಚಂದ್ರಶೇಖರ್‌ ಕಿಡಿ

ಖರ್ಗೆ ಜೂನಿಯ‌ರ್ ಅವರೇ ನೀವೇ ಹೇಳಬೇಕು. ಹಲವು ರಾಜ್ಯಗಳು ಕೇಂದ್ರದ ಸಬ್ಸಿಡಿಗೆ ಹೆಚ್ಚುವರಿಯಾಗಿ ಪ್ರೋತ್ಸಾಹ ಹಣ ನೀಡುತ್ತಿವೆ, ಆದರೆ ಕರ್ನಾಟಕದ ಆರ್ಥಿಕತೆಯು ದುಃಖಕರವಾಗಿ ದುರ್ಬಲವಾಗಿದೆ ಮತ್ತು ದಿವಾಳಿಯಾಗಿದೆ. ಸೆಮಿಕಾನ್ ಬಿಡಿ, ಸಾಮಾನ್ಯ ಅಭಿವೃದ್ಧಿಗೂ ಹಣವಿಲ್ಲ ಎಂದ ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್‌ 

Former Union Minister Rajeev Chandrasekhar Slams Karnataka Minister Priyank Kharge grg

ನವದೆಹಲಿ(ಸೆ.25):  ಕರ್ನಾಟಕದಲ್ಲಿ ಎಲ್ಲ ರೀತಿಯ ಅನುಕೂಲಗಳು ಇದ್ದರೂ ಸೆಮಿಕಂಡಕ್ಟರ್ ಕಂಪನಿಗಳು ಗುಜರಾತ್‌ನಲ್ಲಿ ಹೂಡಿಕೆ ಮಾಡುತ್ತಿರುವುದು ದುರದೃಷ್ಟಕರ. ಪ್ರಧಾನಿ ಹುದ್ದೆಯಲ್ಲಿದ್ದವರು ಸಿಎಂ ರೀತಿ ವರ್ತಿಸಬಾರದು ಎಂದು ಐಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಬೆಂಗಳೂರು ಟೆಕ್‌ ಶೃಂಗಸಭೆ (ಬಿಟಿಎಸ್) ಅಂಗವಾಗಿ ನಗರ ದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮಾತ್ರ ನಾಡಿ, ನಮ್ಮ ರಾಜ್ಯದಲ್ಲಿ ಕೌಶಲ್ಯ, ಸಂಶೋಧನೆ ಜತೆಗೆ ಕಂಪನಿಗೆ ಬೇಕಾಗುವ ಉತ್ತಮ ಪರಿಸರ ಹಾಗೂ ಜಾಗತಿಕ ಅಗತ್ಯವನ್ನು ಪೂರೈಸುವ ವ್ಯವಸ್ಥೆ ಇದ್ದರೂ ಸೆಮಿಕಂಡಕ್ಟರ್ ಕಂಪನಿಗಳು ಗುಜರಾತ್‌ಗೆ ಹೋಗುತ್ತಿರುವು ದರ ಕುರಿತು ತುಂಬಾ ಚಿಂತಿತನಾಗಿದ್ದು, ಇದಕ್ಕೆ ಕೇಂದ್ರ ಸರ್ಕಾರವೇ ಕಾರಣ ಹೇಳಬೇಕು ಎಂದು ಹೇಳಿದರು.

ಕರ್ನಾಟಕದಲ್ಲಿರೋದು ಜನಪರ ಸರ್ಕಾರವಲ್ಲ ಇದು MNC Government: ರಾಜೀವ್ ಚಂದ್ರಶೇಖರ್‌ ವಾಗ್ದಾಳಿ

ಸೆಮಿಕಾನ್ ಬಿಡಿ, ರಾಜ್ಯದಲ್ಲಿ ಅಭಿವೃದ್ದಿಗೂ ಹಣವಿಲ್ಲ'

ನವದೆಹಲಿ: ಭಾರತ ಸರ್ಕಾರವು ತನ್ನ ಪ್ರಭಾವ ಬಳಸಿ ಸೆಮಿಕಂಡಕ್ಟರ್‌ ಬಂಡವಾಳವನ್ನು ಗುಜರಾತ್ ಕಡೆಗೆ ತಿರುಗಿಸುತ್ತಿದೆ ಎಂಬ ಆರೋಪಕ್ಕೆ ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್‌ ಕಿಡಿಕಾರಿದ್ದಾರೆ. ಟ್ವೀಟ್ ಮಾಡಿರುವ ರಾಜೀವ್, 'ಖರ್ಗೆ ಜೂನಿಯ‌ರ್ ಅವರೇ ನೀವೇ ಹೇಳಬೇಕು. ಹಲವು ರಾಜ್ಯಗಳು ಕೇಂದ್ರದ ಸಬ್ಸಿಡಿಗೆ ಹೆಚ್ಚುವರಿಯಾಗಿ ಪ್ರೋತ್ಸಾಹ ಹಣ ನೀಡುತ್ತಿವೆ, ಆದರೆ ಕರ್ನಾಟಕದ ಆರ್ಥಿಕತೆಯು ದುಃಖಕರವಾಗಿ ದುರ್ಬಲವಾಗಿದೆ ಮತ್ತು ದಿವಾಳಿಯಾಗಿದೆ. ಸೆಮಿಕಾನ್ ಬಿಡಿ, ಸಾಮಾನ್ಯ ಅಭಿವೃದ್ಧಿಗೂ ಹಣವಿಲ್ಲ ಎಂದಿದ್ದಾರೆ.
 

Latest Videos
Follow Us:
Download App:
  • android
  • ios