ಕ್ರೌನ್ ಕಂಪನಿಯ ಸೂಟ್‌ಕೇಸ್ ಇದಾಗಿದ್ದು, ಸೆನ್ಸಾರ್ ಇರುವ ಸೂಟ್‌ಕೇಸ್ ಆಗಿರುವ ಕಾರಣ ಶಬ್ದ ಬರುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಪೊಲೀಸರು 

ಕೋಲಾರ(ಸೆ.25): ಹೆದ್ದಾರಿ ಪಕ್ಕದಲ್ಲಿ ಕಂಡು ಬಂದ ಸೂಟ್‌ಕೇಸ್‌ವೊಂದು ಪತ್ತೆಯಾಗಿದೆ. ನಗರ ಹೊರವಲಯದ ಟಮಕ ಬಳಿ ಸೂಟ್ ಕೇಸ್ ಕಂಡು ಬಂದಿದೆ. ಸೂಟ್‌ಕೇಸ್‌ನಿಂದ ಶಬ್ದ ಹೊರ ಬರುತ್ತಿದೆ. ಸ್ಫೋಟಕ ಇರುವ ಅನುಮಾನದ ಹಿನ್ನೆಲೆಯಲ್ಲಿ ಸ್ಥಳೀಯರು ಆತಂಕದಲ್ಲಿದ್ದಾರೆ. 

ಸ್ಥಳಕ್ಕೆ ಶ್ವಾನ ದಳ, ಗಲ್ ಪೇಟೆ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಭೇಟಿ ನೀಡಿದ್ದಾರೆ. ಸೂಟ್‌ಕೇಸ್‌ನಿಂದ ಬರುತ್ತಿರುವ ಶಬ್ದದಿಂದ ಸ್ಥಳೀರಯರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ. ಸೂಟ್‌ಕೇಸ್ ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ರವಿಶಂಕರ್, ಶ್ವಾನ ದಳ, ಬಾಂಬ್ ಸ್ಕ್ವಾಡ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿದ್ದಾರೆ. 

Bengaluru Fridge Murder: ಸೂಟ್‌ಕೇಸ್‌ನಲ್ಲಿ ಡೆಡ್‌ ಬಾಡಿ ಸಾಗಿಸಲು ಪ್ಲ್ಯಾನ್‌ ಮಾಡಿದ್ದ ಹಂತಕ!

ಕ್ರೌನ್ ಕಂಪನಿಯ ಸೂಟ್‌ಕೇಸ್ ಇದಾಗಿದ್ದು, ಸೆನ್ಸಾರ್ ಇರುವ ಸೂಟ್‌ಕೇಸ್ ಆಗಿರುವ ಕಾರಣ ಶಬ್ದ ಬರುತ್ತಿದೆ ಎಂದು ಪೊಲೀಸರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಇದೀಗ ಬಾಂಬ್ ತಜ್ಞರು ಹಾಗೂ ಕೋಲಾರ ಎಸ್ಪಿ ನಿಖಿಲ್.ಬಿ ಭೇಟಿ ನೀಡಿದ್ದಾರೆ.