Asianet Suvarna News Asianet Suvarna News

ಬಿಎಸ್‌ವೈ 3 ವರ್ಷ ಸಿಎಂ ಆಗಿ ಮುಂದುವರೆಯುತ್ತಾರೆ: ಸಚಿವೆ ಜೊಲ್ಲೆ

ದಕ್ಷಿಣ-ಉತ್ತರ ಕರ್ನಾಟಕ ನೆರೆ ಪರಿಹಾರ ನೀಡುವಲ್ಲಿ ತಾರತಮ್ಯ| ಬೆಂಗಳೂರಿನಲ್ಲಿ 25 ಸಾವಿರ ಪರಿಹಾರ ನೀಡಿದ ವಿಚಾರ ನನಗೆ ಗಮನಕ್ಕೆ ಬಂದಿಲ್ಲ| ಎಲ್ಲ ಕಡೆಗೂ ಸರಿಸಮನಾಗಿ ಪರಿಹಾರ ನೀಡುವುದು ನಮ್ಮ ಕರ್ತವ್ಯ| ಪರಿಹಾರದಲ್ಲಿ ತಾರತಮ್ಯವಾಗಿದ್ದಲ್ಲಿ ಸರಿ ಪಡೆಸುತ್ತೇವೆ ಎಂದ ಸಚಿವೆ ಶಶಿಕಲಾ ಜೊಲ್ಲೆ| 

Minister Shashikala Jolle Talks Over CM BS Yediyurappa grg
Author
Bengaluru, First Published Nov 1, 2020, 3:58 PM IST

ವಿಜಯಪುರ(ನ.01):  ಈ ಬಾರಿ ನಮಗೆ ಕನ್ನಡ ರಾಜ್ಯೋತ್ಸವ ಸಿಹಿ-ಕಹಿಯಾಗಿ ಮಾರ್ಪಟ್ಟಿದೆ. ಕೋವಿಡ್-ಪ್ರವಾಹ ಸಂಕಷ್ಟದ ನಡುವೆ ಕನ್ನಡ ರಾಜ್ಯೋತ್ಸವವನ್ನ ಆಚರಣೆ ಮಾಡಬೇಕಾಗಿದೆ. ಭೀಮಾ ನದಿ ಪ್ರವಾಹದಲ್ಲಿ ಹಾನಿಯಾದ ಮನೆಗಳಿಗೆ ಪರಿಹಾರ ನೀಡುವ ಕಾರ್ಯ ಪ್ರಗತಿಯಲ್ಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ. 

ಇಂದು(ಭಾನುವಾರ) ನಗರದಲ್ಲಿ ನಡೆದ ರಾಜ್ಯೋತ್ಸವ ಧ್ವಜಾರೋಹಣ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವೆ ಜೊಲ್ಲೆ, ದಕ್ಷಿಣ-ಉತ್ತರ ಕರ್ನಾಟಕ ನೆರೆ ಪರಿಹಾರ ನೀಡುವಲ್ಲಿ ತಾರತಮ್ಯ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ 25 ಸಾವಿರ ಪರಿಹಾರ ನೀಡಿದ ವಿಚಾರ ನನಗೆ ಗಮನಕ್ಕೆ ಬಂದಿಲ್ಲ.  ಎಲ್ಲ ಕಡೆಗೂ ಸರಿಸಮನಾಗಿ ಪರಿಹಾರ ನೀಡುವುದು ನಮ್ಮ ಕರ್ತವ್ಯವಾಗಿದೆ.  ಪರಿಹಾರದಲ್ಲಿ ತಾರತಮ್ಯವಾಗಿದ್ದಲ್ಲಿ ಸರಿ ಪಡೆಸುತ್ತೇವೆ ಎಂದು ಭರವಸೆ ನೀಡಿದ್ದಾರೆ. 

ಮೂರು ವರ್ಷ ಬಿಎಸ್‌ವೈ ಸಿಎಂ ಅನ್ನೋಕ್ಕಾಗಲ್ಲ: ಮತ್ತೆ ನಾಯಕತ್ವ ಬದಲಾವಣೆಯ ಹುಳ ಬಿಟ್ಟ ಯತ್ನಾಳ್‌..!

ಭೀಮಾ ತೀರದಲ್ಲಿ ಮೀನುಗಾರಿಗೆ ಉಂಟಾದ ಹಾನಿಯ ಬಗ್ಗೆಯು ಮಾಹಿತಿ ಪಡೆದಿದ್ದೇವೆ. ರೈತರ ಪಂಪಸೆಟ್‌ಗಳು ಹಾನಿಯಾದ ಬಗ್ಗೆ ಮಾಹಿತಿ ತೆಗೆದುಕೊಳ್ಳುತ್ತೇವೆ. ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುತ್ತೇವೆ ಎಂದು ತಿಳಿಸಿದ್ದಾರೆ. 
ಸಿಎಂ ಆಗಿ ಯಡಿಯೂರಪ್ಪ ಮೂರು ವರ್ಷ ಮುಂದುವರೆಯುತ್ತಾರೆ ಎಂದು ಹೇಳೋದಿಲ್ಲ ಎಂದ ಯತ್ನಾಳ್ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವೆ ಶಶಿಕಲಾ ಜೊಲ್ಲೆ, ಬಿಎಸ್‌ವೈ 3 ವರ್ಷ ಸಿಎಂ ಆಗಿ ಮುಂದುವರೆಯುತ್ತಾರೆ. ಇದ್ರಲ್ಲಿ ಡೌಟೆ ಇಲ್ಲಾ, ಆದ್ರೆ ಯತ್ನಾಳ್ ಅಣ್ಣನವರು ಯಾಕೆ ಹೀಗೆ ಹೇಳ್ತಿದ್ದಾರೆ ಅನ್ನೋದು ಗೊತ್ತಾಗುತ್ತಿಲ್ಲ. ಅವರು ಹಿರಿಯ ಶಾಸಕರಾಗಿದ್ದಾರೆ ಅವರ ಬಗ್ಗೆ ಗೌರವ ಇದೆ. ಅವರು ಹೀಗೆ ಮಾತಾಡಬಾರದು ಎಂದು ತಿಳಿಸಿದ್ದಾರೆ. 
 

Follow Us:
Download App:
  • android
  • ios