Asianet Suvarna News Asianet Suvarna News
4697 results for "

ಲಾಕ್‌ಡೌನ್

"
Covid19 likely to enter to Karnataka Green Zone ChamarajnagarCovid19 likely to enter to Karnataka Green Zone Chamarajnagar
Video Icon

ರಾಜ್ಯದ ಏಕೈಕ ಗ್ರೀನ್‌ಝೋನ್ ಚಾಮರಾಜನಗರಕ್ಕೂ ಕೊರೊನಾ ವಕ್ಕರಿಸಿತಾ?

ರಾಜ್ಯದ ಏಕೈಕ ಗ್ರೀನ್‌ಝೋನ್ ಚಾಮರಾಜನಗರಕ್ಕೂ ಕೊರೊನಾ ವಕ್ಕರಿಸಿತಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಚಾಮರಾಜನಗರಕ್ಕೂ ಮಹಾರಾಷ್ಟ್ರ ಲಿಂಕ್ ಕಂಟಕವಾಗಿದೆ. ಕೊಳ್ಳೇಗಾಲ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಯನ್ನು ಕೊರೊನಾ ಶಂಕೆ ಹಿನ್ನೆಲೆ ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಕೊರೊನಾ ಹೌದೋ, ಇಲ್ಲವೋ ಎಂದು ತಿಳಿದುಕೊಳ್ಳಲು ಇಂದು ಸಂಜೆ ಹೆಲ್ತ್‌ ಬುಲೆಟಿನ್‌ವರೆಗೆ ಕಾಯಲೇಬೇಕು. 

state Jun 9, 2020, 12:04 PM IST

liquor Shop theft 6 Accused arrest in Honnali Davanagereliquor Shop theft 6 Accused arrest in Honnali Davanagere

ಮದ್ಯದಂಗಡಿಯಲ್ಲಿ ಕಳ್ಳತನ; 6 ಆರೋಪಿಗಳ ಬಂಧನ

ಬಂಧಿತ ಆರೋಪಿಗಳು ಚನ್ನಗಿರಿ ತಾಲೂಕಿನ ನಿವಾಸಿಗಳು. ರಮೇಶ್‌, ಮರಿಯಪ್ಪ ಅಲಿಯಾಸ್‌ ಮಾರಿ, ಎಚ್‌.ಗೋಪಿ, ತಮ್ಮಯ್ಯ, ಶಶಿಕುಮಾರ್‌ ಹಾಗೂ ಒಬ್ಬ ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಸೇರಿ ಒಟ್ಟು ಆರು ಜನ ಆರೋಪಿಗಳನ್ನು ಬಂಧಿಸಲಾಗಿದೆ. ಜೊತೆಗೆ 2 ಬೈಕ್‌ ಹಾಗೂ ಕೃತ್ಯಕ್ಕೆ ಬಳಸಿದ ಕಬ್ಬಿಣ ರಾಡ್‌, ಆ್ಯಕ್ಸೆಲ್‌ ಬ್ಲೇಡ್‌ ಹಾಗೂ 9 ಸಾವಿರ ರುಪಾಯಿ ನಗದು ವಶಕ್ಕೆ ಪಡೆಯಲಾಗಿದೆ.

CRIME Jun 9, 2020, 12:03 PM IST

Devotees thronged to temples as it reopened for darshanamDevotees thronged to temples as it reopened for darshanam
Video Icon

ಭಕ್ತರಿಗೆ ದರ್ಶನ ಕೊಟ್ಟ ಬನಶಂಕರಿ; ಬಾದಾಮಿಯಲ್ಲಿ ಹೀಗಿದೆ ವ್ಯವಸ್ಥೆ

ಲಾಕ್‌ಡೌನ್ ಹಿನ್ನಲೆಯಲ್ಲಿ ಕಳೆದ ಎರಡೂವರೆ ತಿಂಗಳಿಂದ ಬಾಗಿಲು ಹಾಕಿದ್ದ ಬಹತೇಕ ಧಾರ್ಮಿಕ ಕೇಂದ್ರಗಳು ಸೋಮವಾರದಿಂದ ತೆರೆದಿವೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಭಕ್ತರು ದರ್ಶನ ಪಡೆಯಲು ಆಗಮಿಸುತ್ತಿಲ್ಲ. ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲೂ ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯಗೊಳಿಸಲಾಗಿದ್ದು ಬೆರಳೆಣಿಕೆಯಷ್ಟು ಭಕ್ತರು ಕಂಡು ಬಂದ ದೃಶ್ಯ ಸಾಮಾನ್ಯವಾಗಿತ್ತು. ಬಾಗಲಕೋಟೆ ಜಿಲ್ಲೆ ಬಾದಾಮಿ ಬನಶಂಕರಿ ದೇವಾಲಯದಲ್ಲಿ ಹೇಗಿದೆ ವ್ಯವಸ್ಥೆ? ಭಕ್ತರು ಹೇಗೆ ಬರುತ್ತಿದ್ದಾರೆ? ನಮ್ಮ ಪ್ರತಿನಿಧಿ ಸ್ಥಳದಿಂದಲೇ ವರದಿ ಮಾಡಿದ್ದಾರೆ. ಇಲ್ಲಿದೆ ನೋಡಿ..! 

state Jun 9, 2020, 11:10 AM IST

Dharmasthala Manjunatha temple reopened for devotees for darshanamDharmasthala Manjunatha temple reopened for devotees for darshanam
Video Icon

ಲಾಕ್‌ಡೌನ್ ಬಳಿಕ ಭಕ್ತರಿಗೆ ದರ್ಶನ ಕೊಟ್ಟ ಧರ್ಮಸ್ಥಳ ಮಂಜುನಾಥ ಸ್ವಾಮಿ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅನ್ನದಾನಕ್ಕೆ ಅದರದ್ದೇ ಆದ ಪ್ರಾಮುಖ್ಯತೆಯಿದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಅನ್ನದಾನ ವಿತರಣೆಗೆ ಅವಕಾಶ ಕಲ್ಪಿಸಲಾಗಿದೆ. ಧರ್ಮಸ್ಥಳಕ್ಕೆ ಎಂಟರಿಂದ 10 ಸಾವಿರ ಮಂದಿ ಭಕ್ತರು ಭೇಟಿ ನೀಡುವ ನಿರೀಕ್ಷೆಯಿದೆ ಎನ್ನಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Karnataka Districts Jun 9, 2020, 11:00 AM IST

Church and masjid not opened in udupiChurch and masjid not opened in udupi

ಚರ್ಚ್, ಮಸೀದಿಗಳು ತೆರೆಯಲಿಲ್ಲ, ದೇಗುಲಗಳಲ್ಲಿ ಭಕ್ತರಿಲ್ಲ

ಧಾರ್ಮಿಕ ಕೇಂದ್ರಗಳನ್ನು ಸೋಮವಾರದಿಂದ ತೆರೆಯುವುದಕ್ಕೆ ಸರ್ಕಾರ ಅನುಮತಿ ನೀಡಿದ್ದರೂ, ಉಡುಪಿ ಜಿಲ್ಲೆಯಲ್ಲಿ ಚಚ್‌ರ್‍ಗಳು ಮತ್ತು ಮಸೀದಿಗಳು ಸಾರ್ವಜನಿಕರಿಗೆ ತೆರೆಯಲಿಲ್ಲ. ಕೊಲ್ಲೂರು ಮೂಕಾಂಬಿಕಾ ಸೇರಿದಂತೆ ಮುಜರಾಯಿ ಇಲಾಖೆಯ ದೇವಾಲಯಗಳು ಭಕ್ತರ ಭೇಟಿಗೆ ಅವಕಾಶ ನೀಡಿದ್ದವು. ಆದರೆ ಉಡುಪಿ ಕೃಷ್ಣಮಠ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಿಲ್ಲ.

Karnataka Districts Jun 9, 2020, 8:31 AM IST

Photo gallery of First day temple reopen in dharmasthalaPhoto gallery of First day temple reopen in dharmasthala

ಲಾಕ್‌ಡೌನ್ ನಂತರ ಧರ್ಮಸ್ಥಳದಲ್ಲಿ ಹೀಗಿತ್ತು ಮೊದಲ ದಿನ: ಅನ್ನದಾನ ಆರಂಭ

ಜೂನ್ 08 ರಿಂದ ಧಾರ್ಮಿಕ ಕೇಂದ್ರಗಳು ಪುನಾರಂಭಗೊಂಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರುವ ಧರ್ಮಸ್ಥಳದ ಮಂಜುನಾಥ ದೇವಸ್ಥಾನವೂ ತೆರೆದಿದ್ದು, ಮೊದಲ ದಿನ ಹೀಗಿತ್ತು ದೇವಾಲಯ.. ಇಲ್ಲಿವೆ ಫೋಟೋಸ್

Karnataka Districts Jun 9, 2020, 8:15 AM IST

covid19 new positive cases decreases in udupicovid19 new positive cases decreases in udupi

ಉಡುಪಿ: 45 ಮಂದಿಗೆ ಸೋಂಕು, 113 ಮಂದಿ ಗುಣಮುಖ

ಕಳೆದೊಂದು ವಾರ ಉಡುಪಿ ಜಿಲ್ಲೆಯನ್ನು ತೀವ್ರ ಆತಂಕಕ್ಕೆ ಈಡು ಮಾಡಿದ್ದ ಕೊರೋನಾ ಪೀಡಿತರ ಸಂಖ್ಯೆ ಈ ವಾರದಲ್ಲಿ ಗಣನೀಯವಾಗಿ ಕಡಿಮೆಯಾಗುತ್ತಿದೆ. ಸೋಮವಾರ 45 ಮಂದಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಸೋಂಕಿತರ ಒಟ್ಟು ಸಂಖ್ಯೆ 946ಕ್ಕೇರಿದೆ. ಇದೇ ವೇಳೆ 113 ಮಂದಿ ಸೋಂಕು ಮುಕ್ತರಾಗಿ ಬಿಡುಗಡೆಯಾಗಿದ್ದಾರೆ.

Karnataka Districts Jun 9, 2020, 7:33 AM IST

People in udupi still taking parcels from hotel not dare to sit and have food from restaurantPeople in udupi still taking parcels from hotel not dare to sit and have food from restaurant

ಜನರಿಗೆ ಹೊಟೇಲ್‌ನಲ್ಲಿ ಕುಳಿತು ಉಣ್ಣುವ ಧೈರ್ಯ ಇನ್ನೂ ಬಂದಿಲ್ಲ!

ಉಡುಪಿ ಜಿಲ್ಲೆಯಲ್ಲಿ ಸೋಮವಾರ ಹೊಟೇಲ್‌, ರೆಸ್ಟೋರೆಂಟ್‌ಗಳು ಕಾರ್ಯಾರಂಭಿಸಿವೆ. ಆದರೆ ಕೊರೋನಾ ಭೀತಿಯಿಂದಾಗಿ ಗ್ರಾಹಕರಿಗೆ ಮಾತ್ರ ಹೊಟೇಲ್‌ಗಳಲ್ಲಿ ಕುಳಿತು ಉಣ್ಣುವ ಧೈರ್ಯ ಇನ್ನೂ ಬಂದಿಲ್ಲ. ಶೇ.25ರಷ್ಟುಗ್ರಾಹಕರು ಮಾತ್ರ ಹೊಟೇಲ್‌ನಲ್ಲಿ ಊಟ ಮಾಡಿದ್ದಾರೆ.

Karnataka Districts Jun 9, 2020, 7:18 AM IST

bjp protest against bjp in dakshina kannadabjp protest against bjp in dakshina kannada

ಗಡಿ ತೆರವಿಗೆ ಆಗಮಿಸಿ ಬಿಜೆಪಿ ವಿರುದ್ಧವೇ ಬಿಜೆಪಿಗರ ಪ್ರತಿಭಟನೆ!

ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬಂದ್‌ ಮಾಡಿರುವ ದ.ಕ. ಗಡಿ ಪ್ರದೇಶದಲ್ಲಿ ಮುಕ್ತ ವಾಹನ ಸಂಚಾರಕ್ಕೆ ಅವಕಾಶ ನೀಡುವಂತೆ ಆಗ್ರಹಿಸಿ ಕಾಸರಗೋಡು ಬಿಜೆಪಿ ಮುಖಂಡರು ಸೋಮವಾರ ದ.ಕ. ಜಿಲ್ಲೆಯ ಬಿಜೆಪಿ ಆಡಳಿತ ವಿರುದ್ಧವೇ ಪ್ರತಿಭಟನೆ ನಡೆಸಿದ ವಿದ್ಯಮಾನ ನಡೆದಿದೆ.

Karnataka Districts Jun 9, 2020, 7:06 AM IST

soraba BJP MLA Kumar Bangarappa visits dharmasthala and takes Blessing God Manjunathsoraba BJP MLA Kumar Bangarappa visits dharmasthala and takes Blessing God Manjunath

ದೇಗುಲ ಓಪನ್ ಆಗುತ್ತಿದ್ದಂತೆಯೇ ಧರ್ಮಸ್ಥಳಕ್ಕೆ ಕುಮಾರ್ ಬಂಗಾರಪ್ಪ: ಕಾರಿಗೂ ವಿಶೇಷ ಪೂಜೆ

ಕೊರೋನಾ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿನಿಂದ ಲಾಕ್‍ಡೌನ್ ಆಗಿ ಮುಚ್ಚಲ್ಪಟ್ಟಿದ್ದ ದೇವಸ್ಥಾನಗಳು ಸಾರ್ವಜನಿಕ ದರ್ಶನಕ್ಕೆ ಮುಕ್ತವಾದ ಹಿನ್ನೆಲೆಯಲ್ಲಿ ಇಂದು (ಸೋಮವಾರ) ರಾಜ್ಯದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಿದ್ದು , ಭಕ್ತರು ದೇವರ ದರ್ಶನ ಪಡೆದರು. ಇನ್ನು ಸೊರಬ ಕ್ಷೇತ್ರದ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಅವರು ಧರ್ಮಸ್ಥಳ ಮಂಜುನಾಥನ ಮೊರೆ ಹೋಗಿದ್ದಾರೆ. ಅಲ್ಲದೇ ತಮ್ಮ ಕಾರಿಗೂ ಮಂಜುನಾಥಸ್ವಾಮಿ ದರ್ಶನ ಮಾಡಿಸಿದ್ದಾರೆ. 
 

Politics Jun 8, 2020, 10:48 PM IST

Bajaj hikes avenger street 160 and 220 price in IndiaBajaj hikes avenger street 160 and 220 price in India

ಲಾಕ್‌ಡೌನ್ ಸಡಿಲ: ಬಜಾಜ್ ಅವೆಂಜರ್ ಸ್ಟ್ರೀಟ್ ಬೈಕ್ ಬೆಲೆ ಹೆಚ್ಚಳ!

ಕೊರೋನಾ ವೈರಸ್ ಕಾರಣ ಸ್ಥಗಿತಗೊಂಡಿದ್ದ ಆಟೋಮೊಬೈಲ್ ಕಂಪನಿಗಳು ಪುನರ್ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಹಲವು ವಾಹನಗಳ ಬೆಲೆ ಕೂಡ ಏರಿಕೆಯಾಗಿದೆ. ಇದೀಗ ಬಜಾಜ್ ಸ್ಟ್ರೀಟ್ ಬೈಕ್ ಬೆಲೆ ಏರಿಕೆಯಾಗಿದೆ. ಬೆಲೆ ಹೆಚ್ಚಳದ ವಿವರ ಇಲ್ಲಿದೆ.

Automobile Jun 8, 2020, 9:16 PM IST

India army killed 9 Hizb ul Mujahideen terrorists in Shopian district of Jammu KashmirIndia army killed 9 Hizb ul Mujahideen terrorists in Shopian district of Jammu Kashmir

ಶೋಪಿಯಾನ್ ಎನ್‌ಕೌಂಟರ್; 24 ಗಂಟೆಯಲ್ಲಿ 9 ಉಗ್ರರ ಹೊಡೆದುರಳಿಸಿದ ಭಾರತೀಯ ಸೇನೆ!

ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ವೇಳೆ ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಉಗ್ರರ ಉಪಟಳ ಹೆಚ್ಚಾಗಿದೆ. ಕಳೆದೆರಡು ತಿಂಗಳಿನಿಂದ ಭಾರತೀಯ ಸೇನೆ ನಿರಂತರವಾಗಿ ಉಗ್ರರ ಜೊತೆ ಹೋರಾಟ ಮಾಡುತ್ತಲೇ ಇದೆ. ಇದೀಗ ಸತತ 2 ದಿನದ ಗುಂಡಿನ ಚಕಮಕಿಯಲ್ಲಿ 9 ಉಗ್ರರನ್ನು ಹೊಡೆದುರುಳಿಸಿದೆ.

India Jun 8, 2020, 7:38 PM IST

India Rounds With Delhi Manju malls restaurant reopens in Unlock1India Rounds With Delhi Manju malls restaurant reopens in Unlock1
Video Icon

ದೆಹಲಿಯಲ್ಲಿ ಮಾಲ್, ರೆಸ್ಟೋರೆಂಟ್ ಆರಂಭ, ಆರೋಗ್ಯಕ್ಕೆ ಮೊದಲ ಆದ್ಯತೆ!

ಕೊರೋನಾ ಹಾಗೂ ಲಾಕ್‌ಡೌನ್‌ನಿಂದ ಸ್ಥಗಿತಗೊಂಡಿದ್ದ ಶಾಪಿಂಗ್ ಮಾಲ್, ರೆಸ್ಟೋರೆಂಟ್‌ಗಳು ಮತ್ತೆ ಆರಂಭಗೊಂಡಿದೆ. ದೆಹಲಿಯಲ್ಲೀಗ ಮಾಲ್‌ಗಳು ಆರಂಭಗೊಂಡಿದೆ. ಮಾಲ್ ಪ್ರವೇಶಿಸಲು ಹಲವು ಮಾರ್ಗಸೂಚಿಗಳನ್ನು ಪಾಲಿಸಬೇಕು. ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಲಾಗಿದ್ದು, ವ್ಯಾಪಾರ-ವಹಿವಾಟು ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಅನ್‌ಲಾಕ್1ನಲ್ಲಿ ದೆಹಲಿ ಹೇಗಿದೆ? ಇಂಡಿಯಾ ರೌಂಡ್ಸ್ ವಿಥ್ ಡೆಲ್ಲಿ ಮಂಜು ಕಾರ್ಯಕ್ರಮದಲ್ಲಿ ಸಂಪೂರ್ಣ ವಿವರ

India Jun 8, 2020, 7:03 PM IST

Tamil Nadu Father rapes 14 year-old daughter repeatedly impregnates herTamil Nadu Father rapes 14 year-old daughter repeatedly impregnates her

ಲಾಕ್‌ಡೌನ್ ಮಧ್ಯೆ 'ಮೃಗ'ನಾದ ಅಪ್ಪ: ಮಗಳ ರೇಪ್, ಗರ್ಭಿಣಿಯಾದಾಗ ಬಯಲಾಯ್ತು ಸತ್ಯ!

ಭಾರತದಲ್ಲಿ ಕೊರೋನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಲಾಕ್‌ಡೌನ್ ಹೇರಲಾಗಿದೆ. ಹೀಗಿರುವಾಗ ತಮಿಳುನಾಡಿನಲ್ಲಿ ಶಾಕಿಂಗ್ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿ ಶನಿವಾರದಂದು ಪೊಲೀಸರು ವ್ಯಕ್ತಿಯೊಬಬ್ಬನನ್ನು ಬಂಧಿಸಿದ್ದಾರೆ.. ಈತನ ವಿರುದ್ಧ ಲಾಕ್‌ಡೌನ್ ವೇಳೆ ಮೂರು ತಿಂಗಳವರೆಗೆ ನಿರಂತರವಾಗಿ ಮಗಳನ್ನು ರೇಪ್ ಮಾಡಿರುವ ಆರೋಪ ಕೇಳಿ ಬಂದಿದೆ. ಇಷ್ಟೇ ಅಲ್ಲದೇ ಮಗಳು ಗರ್ಭಿಣಿ ಕೂಡಾ ಆಗಿದ್ದಾಳೆ.

CRIME Jun 8, 2020, 5:34 PM IST

Karnataka government plan to implement reverse quarantineKarnataka government plan to implement reverse quarantine

ಕೊರೋನಾ ತಡೆಗೆ ಕರ್ನಾಟಕದ ಸರ್ಕಾರದ ಮತ್ತೊಂದು ಹೆಜ್ಜೆ; ರಿವರ್ಸ್ ಕ್ವಾರಂಟೈನ್‌ಗೆ ತಯಾರಿ!

 ಕೊರೋನಾ ವೈರಸ್ ಲಾಕ್‌ಡೌನ್ 4ನೇ ಹಂತ ಮುಗಿದೆ. ಇದೀಗ ಅನ್‌ಲಾಕ್ 1 ಜಾರಿಯಾಗಿದೆ. ಆರಂಭಿಕ 2 ಹಂತದ ಲಾಕ್‌ಡೌನ್‌ನಲ್ಲಿ ಮೆತ್ತಗಿದ್ದ ಕೊರೋನಾ ವೈರಸ್ ಇದೀಗ ಭಾರತದಲ್ಲಿ ಅಟ್ಟಹಾಸ ಮೆರೆಯುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಕರ್ನಾಟಕ ಸರ್ಕಾರ ಇದೀಗ ಹೊಸ ಸೂತ್ರಕ್ಕೆ ಮುಂದಾಗಿದೆ. ರಾಜ್ಯದಲ್ಲಿ ರಿವರ್ಸ್ ಕ್ವಾರಂಟೈನ್‌ಗೆ ಪ್ಲಾನ್ ಮಾಡಿದೆ.

state Jun 8, 2020, 3:09 PM IST