ಜನರ ಗಮನ ಗಿಟ್ಟಿಸಿಕೊಳ್ಳಲು ಜಗಳವಾಡಿದ ಜಗದೀಶ್. ಲಾಯರ್ ಸಾಬ್‌ ಮಾಡುತ್ತಿರುವ ಪ್ಲ್ಯಾನ್‌ಗೆ ನೆಟ್ಟಿಗರು ಗರಂ....

ಬಿಗ್ ಬಾಸ್ ಸೀಸನ್ 11ರಲ್ಲಿ ನಾಲ್ಕನೇ ದಿನಕ್ಕೆ ಹಾಟ್ ಹಾಟ್ ಚರ್ಚೆ ಮತ್ತು ಜಗಳ ಶುರುವಾಗಿದೆ. ಮನೆಯಲ್ಲಿ ಇರುವ 16 ಜನರ ವಿರುದ್ಧ ತಿರುಗಿ ಬಿದ್ದ ಲಾಯರ್ ಜಗದೀಶ್ ಇದೀಗ ಕ್ಯಾಮೆರಾ ಮುಂದೆ ಕ್ಷಮೆ ಕೇಳಿದ್ದಾರೆ. 'I will expose bigg boss, I will destroy bigg boss' ಎಂದು ಕೂಗಾಡಿ ಕಿರುಚಾಡಿ ಮನೆಯಿಂದ ಹೊರ ನಡೆಯಲು ನಿರ್ಧರಿಸಿದ್ದರು. ಅಂದಿನ ಟಾಸ್ಕ್‌ ಮುಗಿದು ದಿನ ಕಳೆದ ಮೇಲೆ ಜಗದೀಶ್ ವರಸೆ ಬದಲಾಯಿಸಿದ್ದಾರೆ. ಮೊದಲು ಬಿಗ್ ಬಾಸ್ ಬಳಿ ಕ್ಷಮೆ ಕೇಳಿದ್ದಾರೆ ಆನಂತರ ಮನೆಯಲ್ಲಿ ಇರುವ ಇತ್ತರ ಸ್ಪರ್ಧಿಗಳ ಬಳಿ ಕ್ಷಮೆ ಕೇಳಿದ್ದಾರೆ.

ಧನರಾಜ್‌ ಬಳಿ ಕ್ಷಮೆ: 

'ಸಾರಿ ಅದು ಆಟದ ಭಾಗವಾಗಿ ನಾನು ಮಾತನಾಡಿದ್ದು ಅಲ್ಲಿ ಮಾಡಿದ್ದು ಬರೀ ಆಟ ಅಷ್ಟೇ. ಪರ್ಸನಲ್ ಏನೂ ಇಲ್ಲ ನೀನು ಫಿಸಿಕಲಿ ಚಿಕ್ಕದಾಗಿದ್ದರೂ ಮೆಂಟಲಿ ಸ್ಟ್ರಾಂಗ್ ಅಂತ ನಾನು ತೋರಿಸಿದ್ದೀನಿ ಅಲ್ಲಿ. ನೀನು ಯಾರನ್ನು ಬೇಕಾದರೂ ಎದುರು ಹಾಕಿಕೊಳ್ಳಬಹುದು ಅಂತ ನಾನು ಅಲ್ಲಿ ತೋರಿಸಿದ್ದೇನೆ. ಇದು 100% ಪ್ಲ್ಯಾನ್ಡ್‌. ಯಾಕೆ ನಾನು ಮಂಗಳೂರಿನವರ ಹೆಸರು ತೆಗೆದಿದ್ದು ಅಂದ್ರೆ ಅದು ನಿನ್ನ ಮಾರ್ಕೆಟ್ ಬೆಳೆಸೋದೇ ಹಾಗೆ. ರಾಜಕಾರಣಿಗಳು ಮಾಡೋದನ್ನು ನೋಡಿಲ್ವಾ?ನ ಜಗದೀಶ್ ಅಂದ್ರೆ ಒಂದುಹಬಾ ಮೇನ್ಟೇನ್ ಮಾಡಬೇಕು ಅಂತ ಮಾಡಿದ್ದು ನಿನ್ನನ್ನು ಬಲಿಪಶು ಮಾಡಬೇಕು ಅಂತಲ್ಲ ನೀನು ಕೂಡ ಹಾಗೆ ಎಗರಾಡಿದೆ ಅಲ್ವಾ ಖರಾಬಾಗಿ ಮ್ಯಾಚ್ ಆಯ್ತು. ನೀನು ಕೌಂಟರ್ ಕೊಟ್ಟಿಲ್ಲ ಅಂದಿದ್ದರೆ ಜನ ನನ್ನನ್ನು ಬೈಯ್ಕೊಂಡಿರೋರು. ಸಣ್ಣ ಹುಡುಗನ ಮೇಳೆ ಹೋಗಿದ್ದಾನೆ ಅಂತ ಆದರೆ ನೀನು ಕೌಂಟರ್ ಕೊಟ್ಟಿದ್ದಕ್ಕೆ ನಮಗೆ ಟಿಆರ್‌ಪಿ ಬಂತು. ನಾನು ಎಲ್ಲರನ್ನು ಸಿಕ್ಕಾಪಟ್ಟೆ ಪ್ರವೋಕ್ ಮಾಡ್ತೀನಿ. ನಿಮಗೆ ನಾನು ಬೇಕು ಅಂತಲೇ ಪ್ರವೋಕ್ ಮಾಡಿದ್ದು. ಜನರಿಗೆ ಮಜಾ ಸಿಗಬೇಕು ಅಲ್ಲದೆ ಕಲರ್ಸ್ ಮತ್ತು ಬಿಗ್ ಬಾಸ್ ಫೇಮಸ್ ಆಗಬೇಕು. ನಿನ್ನ ನೀನು ಹೀರೋ ಆದೆ ಗುರು' ಎಂದು ಲಾಯರ್ ಜಗದೀಶ್ ಮಾತನಾಡಿದ್ದಾರೆ. 

1 ಗಂಟೆ ತಡವಾಗಿ ಬಂದ ಮಿನಿಸ್ಟರ್‌ನೇ ಮಾತನಾಡಿಸಲಿಲ್ಲ ತಂದೆ ಪಿ ಲಂಕೇಶ್: ಇಂದ್ರಜಿತ್‌

ಮನೆ ಮಂದಿಯ ಕೌಂಟರ್: 

'ಮಲಗಿದ್ದು ಎದ್ಮೇಲೆ ಪಿತ್ತ ಎಲ್ಲಾ ಇಳೀತೇನೋ...ಇವತ್ತು ಎಲ್ಲರೂ ಒಳ್ಳೆಯವರಾಗೋದ್ರಾ? ಬಿಗ್ ಬಾಸ್‌ನವರು, ಡೈರೆಕ್ಟರ್‌, ಎಲ್ಲ ಒಳ್ಳೆಯವರಾದರಾ?' ಎಂದು ಮಾನಸಾ ಕಾಮೆಂಟ್ ಮಾಡಿದ್ದಾರೆ. ತಕ್ಷಣವೇ ಪಕ್ಕದ್ದಲ್ಲಿದ್ದ ಚೈತ್ರಾ 'ಜಗದೀಶ್‌ರನ್ನು ಯಾವುದೇ ಕಾರಣಕ್ಕೂ ನಂಬಬೇಡಿ. ಹಿಡೆಯುವ ಹಾಗೆ ಪ್ರೋವೋಕ್ ಮಾಡ್ತಾರೆ ಅಷ್ಟೇ' ಎಂದಿದ್ದಾರೆ. ಜಗದೀಶ್ ಮಾಡಿದ ತಪ್ಪುಗಳು ಹೆಚ್ಚಾದ ಕಾರಣ ಸ್ವರ್ಗ ವಾಸಿಗಳ ಸಾಮಾಗ್ರಿಯನ್ನು ಬಿಗ್ ಬಾಸ್ ಹಿಂಪಡೆದುಕೊಂಡಿದ್ದರು, 'ನಿಮ್ಮ ಸೌಕರ್ಯಗಳು ನಿಮ್ಮದಷ್ಟೇ ಎಂದು ನಿಮಗೆ ಮನವರಿಕೆ ಆಗಿದೆ ಎಂದು ಭಾವಿಸುತ್ತೇನೆ' ಎಂದು ಅಡುಗೆ ಸಾಮಾಗ್ರಿಗಳನ್ನೆಲ್ಲಾ ವಾಪಸ್ ಕೊಟ್ಟಿದ್ದಾರೆ. 

ಅಪ್ಪ ಅಮ್ಮ ಇಂಡಸ್ಟ್ರಿಯಲ್ಲಿ ಇದ್ದರೂ ನಾನು ಅವಕಾಶಗಳನ್ನು ಗಿಟ್ಟಿಸಿಕೊಳ್ಳಬೇಕಿತ್ತು: ಸಿಹಿ ಕಹಿ ಚಂದ್ರು ಪುತ್ರಿ ಹೇಳಿಕೆ ವೈರಲ್!