Asianet Suvarna News Asianet Suvarna News

ಜನರಿಗೆ ಹೊಟೇಲ್‌ನಲ್ಲಿ ಕುಳಿತು ಉಣ್ಣುವ ಧೈರ್ಯ ಇನ್ನೂ ಬಂದಿಲ್ಲ!

ಉಡುಪಿ ಜಿಲ್ಲೆಯಲ್ಲಿ ಸೋಮವಾರ ಹೊಟೇಲ್‌, ರೆಸ್ಟೋರೆಂಟ್‌ಗಳು ಕಾರ್ಯಾರಂಭಿಸಿವೆ. ಆದರೆ ಕೊರೋನಾ ಭೀತಿಯಿಂದಾಗಿ ಗ್ರಾಹಕರಿಗೆ ಮಾತ್ರ ಹೊಟೇಲ್‌ಗಳಲ್ಲಿ ಕುಳಿತು ಉಣ್ಣುವ ಧೈರ್ಯ ಇನ್ನೂ ಬಂದಿಲ್ಲ. ಶೇ.25ರಷ್ಟುಗ್ರಾಹಕರು ಮಾತ್ರ ಹೊಟೇಲ್‌ನಲ್ಲಿ ಊಟ ಮಾಡಿದ್ದಾರೆ.

People in udupi still taking parcels from hotel not dare to sit and have food from restaurant
Author
Bangalore, First Published Jun 9, 2020, 7:18 AM IST

ಉಡುಪಿ(ಜೂ.09): ಜಿಲ್ಲೆಯಲ್ಲಿ ಸೋಮವಾರ ಹೊಟೇಲ್‌, ರೆಸ್ಟೋರೆಂಟ್‌ಗಳು ಕಾರ್ಯಾರಂಭಿಸಿವೆ. ಆದರೆ ಕೊರೋನಾ ಭೀತಿಯಿಂದಾಗಿ ಗ್ರಾಹಕರಿಗೆ ಮಾತ್ರ ಹೊಟೇಲ್‌ಗಳಲ್ಲಿ ಕುಳಿತು ಉಣ್ಣುವ ಧೈರ್ಯ ಇನ್ನೂ ಬಂದಿಲ್ಲ. ಶೇ.25ರಷ್ಟುಗ್ರಾಹಕರು ಮಾತ್ರ ಹೊಟೇಲ್‌ನಲ್ಲಿ ಊಟ ಮಾಡಿದ್ದಾರೆ.

ಜಿಲ್ಲೆಯಲ್ಲಿ ಸುಮಾರು 200ಕ್ಕೂ ಅಧಿಕ ಚಿಕ್ಕ, ದೊಡ್ಡ ಹೊಟೇಲ್‌, ರೆಸ್ಟೋರೆಂಟ್‌ಗಳಿವೆ. ಬಹುತೇಕ ಎಲ್ಲ ಹೊಟೇಲ್‌ಗಳು ಈಗಾಗಲೇ ಪಾರ್ಸೆಲ್‌ಗಳನ್ನು ಕೊಡುತ್ತಿದ್ದವು. ಸೋಮವಾರದಿಂದ ಗ್ರಾಹಕರಿಗೆ ಹೊಟೇಲ್‌ನಲ್ಲಿಯೇ ಆಹಾರ ಪೂರೈಕೆ ಆರಂಭಿಸಿವೆ. ಮೊದಲ ದಿನ ಟೇಬಲ್‌, ಕುರ್ಚಿಗಳ ಮಧ್ಯೆ ಸಾಮಾಜಿಕ ಅಂತರ, ಸ್ಯಾನಿಟೈಸರ್‌, ಮಾಸ್ಕ್ ಇತ್ಯಾದಿ ಕಡ್ಡಾಯ ನಿಮಯಗಳನ್ನು ಪಾಲಿಸಿವೆ. ಆದರೆ ಗ್ರಾಹಕರ ಸಂಖ್ಯೆ ನಿರೀಕ್ಷೆಯಷ್ಟಿರಲಿಲ್ಲ.

ದೇಗುಲ ಓಪನ್ ಆಗುತ್ತಿದ್ದಂತೆಯೇ ಧರ್ಮಸ್ಥಳಕ್ಕೆ ಕುಮಾರ್ ಬಂಗಾರಪ್ಪ: ಕಾರಿಗೂ ವಿಶೇಷ ಪೂಜೆ

ಕಚೇರಿ ಇತ್ಯಾದಿ ಕೆಲಸಕ್ಕೆ ಹೋಗುವ ಸಾಕಷ್ಟುಉದ್ಯೋಗಿಗಳು, ಹೊಟೇಲ್‌ ಮುಚ್ಚಿದ್ದರಿಂದ ಮನೆಯಿಂದ ಬುತ್ತಿ ತರುವ ಅಭ್ಯಾಸ ಮಾಡಿಕೊಂಡಿದ್ದಾರೆ. ಇದು ಕೂಡ ಹೊಟೇಲ್‌ ಉದ್ಯಮಕ್ಕೆ ಸಾಕಷ್ಟುನಷ್ಟಉಂಟು ಮಾಡಲಿದೆ ಎನ್ನುತ್ತಾರೆ ಹೊಟೇಲ್‌ ಮಾಲೀಕರು.

ಈಗಲೂ ಪಾರ್ಸೆಲ್‌ ಊಟ ಕೇಳುತ್ತಿದ್ದಾರೆ

ಜನರಲ್ಲಿ ಕೊರೋನಾ ಭೀತಿ ಜೋರಾಗಿದೆ. ಜನ ಇನ್ನೂ ಪೂರ್ಣ ಪ್ರಮಾಣದಲ್ಲಿ ಮನೆಯಿಂದ ಹೊರಗೆ ಬರುತ್ತಿಲ್ಲ. ಆದ್ದರಿಂದ ಹೊಟೇಲಿನಲ್ಲಿ ನಿರೀಕ್ಷಿತ ವ್ಯವಹಾರ ಇಲ್ಲ. ಹೊಟೇಲಿನಲ್ಲಿ ಕುಳಿತು ಊಟ ಮಾಡಲು ತುಂಬಾ ಮಂದಿ ಗ್ರಾಹಕರು ಇನ್ನೂ ಸಿದ್ಧರಾಗಿಲ್ಲ. ಸೊಮವಾರ ಕೂಡ ಪಾರ್ಸೆಲ್‌ ಊಟ ಕೇಳಿಕೊಂಡು ತುಂಬಾ ಜನರ ಬಂದಿದ್ದರು ಎಂದು ಹೊಟೇಲ್‌ ಮಾಲೀಕ ರತ್ನಾಕರ ಶೆಟ್ಟಿಹೇಳಿದ್ದಾರೆ.

Follow Us:
Download App:
  • android
  • ios