ಸಿದ್ದರಾಮಯ್ಯ ಜೀವನಾಧರಿತ 'ಲೀಡರ್ ರಾಮಯ್ಯ' ಚಿತ್ರದ ಚಿತ್ರೀಕರಣ ವಿಳಂಬ; ತಮಿಳಿನ ಆ ಸ್ಟಾರ್ ನಟನಿಗೆ ಕಾಯುತ್ತಿದೆ ಚಿತ್ರತಂಡ?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೀವನ ಚರಿತ್ರೆಯುಳ್ಳ ಲೀಡರ್ ರಾಮಯ್ಯ ಚಿತ್ರದ ಚಿತ್ರೀಕರಣ ಸ್ವಲ್ಪ ಮಟ್ಟಿಗೆ ವಿಳಂಬವಾಗುತ್ತಿದೆ ಎಂದು ನಿರ್ಮಾಪಕ ಹಯ್ಯಾತ್ ಪೀರ್ ಹೇಳಿದರು.

Leader Ramaiah biopic explores life of CM Siddaramaiah awaited vijay sethupati dates rav

 ಗಂಗಾವತಿ (ಅ.4) : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೀವನ ಚರಿತ್ರೆಯುಳ್ಳ ಲೀಡರ್ ರಾಮಯ್ಯ ಚಿತ್ರದ ಚಿತ್ರೀಕರಣ ಸ್ವಲ್ಪ ಮಟ್ಟಿಗೆ ವಿಳಂಬವಾಗುತ್ತಿದೆ ಎಂದು ನಿರ್ಮಾಪಕ ಹಯ್ಯಾತ್ ಪೀರ್ ಹೇಳಿದರು.

ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಜೀವನ ಆಧಾರಿತ ಚಿತ್ರದ ಚಿತ್ರೀಕರಣ ಮುಂದುವರಿಯುತ್ತಿದ್ದು, ಈಗಾಗಲೇ ಒಂದು ಹಂತದ ಚಿತ್ರೀಕರಣ ಕೂಡ ಮುಕ್ತಾಯವಾಗಿದೆ. ಸಿದ್ದರಾಮಯ್ಯ ಅವರ ಪಾತ್ರಕ್ಕೆ ಬೇರೆ ನಟರೂ ಸರಿ ಹೋಗಲಿಲ್ಲ.

ವಿಜಯ್ ಸೇತುಪತಿ ಅವರ ಕಾಲಶೀಟ್ ಅವಶ್ಯವಾಗಿತ್ತು. ಸೇತುಪತಿ ಅವರೇ ನಾಯಕರಾಗಿದ್ದರಿಂದ ವಿಳಂಬವಾಗುತ್ತಿದೆ ಎಂದು ಹೇಳಿದರು. ಈಗಾಗಲೇ ಸಿದ್ದರಾಮಯ್ಯ ಬಾಲ್ಯದ ಬಗ್ಗೆ ಮಾಸ್ಟರ್ ನಿಹಾನ್ ಎನ್ನುವರಿಂದ ಅಭಿನಯ ಮಾಡಿಸಲಾಗಿದೆ. ಸಿದ್ದರಾಮಯ್ಯ ಕಾಲೇಜು ದಿನ ಮತ್ತು ಪ್ರಾಥಮಿಕ, ಪ್ರೌಢ ಶಿಕ್ಷಣದ ಬಗ್ಗೆ ಶೂಟಿಂಗ್ ಮಾಡಬೇಕಿತ್ತು. ಆದರೆ ಸೇತುಪತಿ ಅವರ ದಿನಾಂಕ ಬರಲಿಲ್ಲ. ಈ ಕಾರಣಕ್ಕೆ ವಿಳಂಬವಾಗಿದೆ ಎಂದರು.

ಮುಡಾ ಕೇಸ್‌ನಲ್ಲಿ ಸಾಕ್ಷ್ಯನಾಶ: ಸಿದ್ದರಾಮಯ್ಯ ವಿರುದ್ಧ ಇ.ಡಿ.ಗೆ 2ನೇ ಕಂಪ್ಲೇಂಟ್

ಪ್ರಸ್ತುತ ಮುಡಾ ಹಗರಣದ ಆರೋಪ ಕೇಳಿ ಬಂದಿದ್ದರಿಂದ ಅದರ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ. ಆದರೆ ಹಗರಣಕ್ಕೂ ಚಿತ್ರೀಕರಣಕ್ಕೂ ಯಾವುದೇ ಸಂಬಂಧ ಇಲ್ಲ ಎಂದರು. ನನ್ನ ವೈಯಕ್ತಿಕ ಕೆಲಸದಿಂದ‌ ಸಿನಿಮಾ ಶೂಟಿಂಗ್ ತಾತ್ಕಾಲಿಕವಾಗಿ ಬಂದ್ ಆಗಿದೆ. ಸೇತುಪತಿ ಅವರ ಡೇಟ್ ಸಿಕ್ಕ ಮೇಲೆ ಚಿತ್ರೀಕರಣ ಆರಂಭ ಮಾಡುತ್ತೇವೆ ಎಂದು ಹೇಳಿದರು.

Latest Videos
Follow Us:
Download App:
  • android
  • ios