ಲಾಕ್‌ಡೌನ್ ಸಡಿಲ: ಬಜಾಜ್ ಅವೆಂಜರ್ ಸ್ಟ್ರೀಟ್ ಬೈಕ್ ಬೆಲೆ ಹೆಚ್ಚಳ!

ಕೊರೋನಾ ವೈರಸ್ ಕಾರಣ ಸ್ಥಗಿತಗೊಂಡಿದ್ದ ಆಟೋಮೊಬೈಲ್ ಕಂಪನಿಗಳು ಪುನರ್ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಹಲವು ವಾಹನಗಳ ಬೆಲೆ ಕೂಡ ಏರಿಕೆಯಾಗಿದೆ. ಇದೀಗ ಬಜಾಜ್ ಸ್ಟ್ರೀಟ್ ಬೈಕ್ ಬೆಲೆ ಏರಿಕೆಯಾಗಿದೆ. ಬೆಲೆ ಹೆಚ್ಚಳದ ವಿವರ ಇಲ್ಲಿದೆ.

Bajaj hikes avenger street 160 and 220 price in India

ನವದೆಹಲಿ(ಜೂ.08): ಕೊರೋನಾ ವೈರಸ್ ಕಾರಣ ಆಟೋಮೊಬೈಲ್ ಕಂಪನಿಗಳಿಗೆ ತೀವ್ರ ಹೊಡೆತ ಬಿದ್ದಿದೆ. ಲಾಕ್‌ಡೌನ್ ಮೊದಲೇ ಭಾರತೀಯ ಆಟೋಮೊಬೈಲ್ ಕಂಪನಿಗಳು ಸ್ಥಗಿತಗೊಂಡಿತ್ತು. ಇದೀಗ ಲಾಕ್‌ಡೌನ್ ಸಡಿಲಗೊಂಡಿದೆ. ಆಟೋಮೊಬೈಲ್ ಕಂಪನಿಗಳು ಪುನರ್ ಆರಂಭಗೊಂಡಿದೆ. ಆದರೆ ಬಿಡಿ ಭಾಗಗಳ, ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದ ಇದೀಗ ವಾಹನಗಳ ಬೆಲೆಯೂ ಏರಿಕೆಯಾಗಿದೆ. ಬಜಾಜ್ ಇದೀಗ ತನ್ನ ಅವೆಂಜರ್ ಸ್ಟ್ರೀಟ್ ಬೈಕ್ ಬೆಲೆ ಹೆಚ್ಚಿಸಿದೆ.

ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ಬಜಾಜ್ ಡೀಲರ್‌ಶಿಪ್, ಸರ್ವೀಸ್ ಸೆಂಟರ್ ಆರಂಭ!

ಬಜಾಜ್ ಅವೆಂಜರ್ ಸ್ಟ್ರೀಟ್ 160 ಹಾಗೂ 220 ಬೈಕ್ ಬೆಲೆ ಏರಿಕೆಯಾಗಿದೆ. ಬಜಾಜ್ ಅವೆಂಜರ್ ಸ್ಟ್ರೀಟ್ 160  ಬೈಕ್ ಬೆಲೆ  1,216 ರೂಪಾಯಿ ಹಾಗೂ  ಅವೆಂಜರ್ ಸ್ಟ್ರೀಟ್ 220   ಬೈಕ್ ಬೆಲೆ 2,500 ರೂಪಾಯಿ ಹೆಚ್ಚಳವಾಗಿದೆ. ಮೂಲಕ ಅವೆಂಜರ್ 160 ಹಾಗೂ 220 ಪರಿಷ್ಕೃತ ದರ  94,893 ರೂಪಾಯಿ ಹಾಗೂ  119,174 ರೂಪಾಯಿಗಳಾಗಿದೆ.

ನೌಕರರಿಗೆ ಸಂಪೂರ್ಣ ವೇತನ, ಯಾವುದೇ ಕಡಿತವಿಲ್ಲ ಎಂದ ಬಜಾಜ್!.

ಅವೆಂಜರ್ 160 ಸ್ಟ್ರೀಟ್ ಬೈಕ್ 160 cc ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಹಾಗೂ ಫ್ಯೂಯೆಲ್ ಇಂಜೆಕ್ಟ್ ಎಂಜಿನ್ ಹೊಂದಿದ್ದು,  14.8 bhp ಪವರ್ ಹಾಗೂ  13.7 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.  ಅವೆಂಜರ್ ಕ್ರ್ಯೂಸ್ 220  ಬೈಕ್ 220 cc ಸಿಂಗಲ್ ಸಿಲಿಂಜರ್ ಎಂಜಿನ್ ಹೊಂದಿದ್ದು,  18.7 bhp ಪವರ್ ಹಾಗೂ  17.5 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  ಎರಡೂ ಬೈಕ್ 5-ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. 

Latest Videos
Follow Us:
Download App:
  • android
  • ios