Asianet Suvarna News Asianet Suvarna News

ಲಾಕ್‌ಡೌನ್ ಬಳಿಕ ಭಕ್ತರಿಗೆ ದರ್ಶನ ಕೊಟ್ಟ ಧರ್ಮಸ್ಥಳ ಮಂಜುನಾಥ ಸ್ವಾಮಿ

ಧರ್ಮಸ್ಥಳ ದೇವಸ್ಥಾನದ ಭದ್ರತಾ ಸಿಬ್ಬಂದಿಗಳು ಹ್ಯಾಡ್ ಗ್ಲೌಸ್, ಫೇಸ್ ಶೀಲ್ಡ್ ಹಾಕಿಕೊಂಡು ದೇವಸ್ಥಾನಕ್ಕೆ ಬರುವ ಭಕ್ತರಿಗೆ ಸ್ಯಾನಿಟೈಸರ್ ಹಾಕಿ ಸ್ಕ್ಯಾನಿಂಗ್ ಮಾಡಿ ಒಳಬಿಡುತ್ತಿದ್ದಾರೆ.

First Published Jun 9, 2020, 11:00 AM IST | Last Updated Jun 9, 2020, 11:00 AM IST

ಧರ್ಮಸ್ಥಳ(ಜೂ.09): ಎರಡುವರೆ ತಿಂಗಳುಗಳ ಬಳಿಕ ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಸ್ಥಾನ ಬಾಗಿಲು ತೆರೆದಿದ್ದು, ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಕೊರೋನಾ ಭೀತಿಯ ನಡುವೆಯೂ ಧರ್ಮಸ್ಥಳ ದೇವಸ್ಥಾನದಲ್ಲಿ ಸಕಲ ಸಿದ್ದತೆಯೊಂದಿಗೆ ಭಕ್ತರಿಗೆ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ.

ಧರ್ಮಸ್ಥಳ ದೇವಸ್ಥಾನದ ಭದ್ರತಾ ಸಿಬ್ಬಂದಿಗಳು ಹ್ಯಾಡ್ ಗ್ಲೌಸ್, ಫೇಸ್ ಶೀಲ್ಡ್ ಹಾಕಿಕೊಂಡು ದೇವಸ್ಥಾನಕ್ಕೆ ಬರುವ ಭಕ್ತರಿಗೆ ಸ್ಯಾನಿಟೈಸರ್ ಹಾಕಿ ಸ್ಕ್ಯಾನಿಂಗ್ ಮಾಡಿ ಒಳಬಿಡುತ್ತಿದ್ದಾರೆ.

ರುದ್ರಾಭಿಷೇಕ, ಗುದ್ದಲಿಪೂಜೆ: ಬುಧವಾರದಿಂದ ರಾಮಮಂದಿರ ನಿರ್ಮಾಣ ಶುರು!

ಇನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅನ್ನದಾನಕ್ಕೆ ಅದರದ್ದೇ ಆದ ಪ್ರಾಮುಖ್ಯತೆಯಿದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಅನ್ನದಾನ ವಿತರಣೆಗೆ ಅವಕಾಶ ಕಲ್ಪಿಸಲಾಗಿದೆ. ಧರ್ಮಸ್ಥಳಕ್ಕೆ ಎಂಟರಿಂದ 10 ಸಾವಿರ ಮಂದಿ ಭಕ್ತರು ಭೇಟಿ ನೀಡುವ ನಿರೀಕ್ಷೆಯಿದೆ ಎನ್ನಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.