ದೇಗುಲ ಓಪನ್ ಆಗುತ್ತಿದ್ದಂತೆಯೇ ಧರ್ಮಸ್ಥಳಕ್ಕೆ ಕುಮಾರ್ ಬಂಗಾರಪ್ಪ: ಕಾರಿಗೂ ವಿಶೇಷ ಪೂಜೆ

First Published Jun 8, 2020, 10:48 PM IST

ಕೊರೋನಾ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿನಿಂದ ಲಾಕ್‍ಡೌನ್ ಆಗಿ ಮುಚ್ಚಲ್ಪಟ್ಟಿದ್ದ ದೇವಸ್ಥಾನಗಳು ಸಾರ್ವಜನಿಕ ದರ್ಶನಕ್ಕೆ ಮುಕ್ತವಾದ ಹಿನ್ನೆಲೆಯಲ್ಲಿ ಇಂದು (ಸೋಮವಾರ) ರಾಜ್ಯದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಿದ್ದು , ಭಕ್ತರು ದೇವರ ದರ್ಶನ ಪಡೆದರು. ಇನ್ನು ಸೊರಬ ಕ್ಷೇತ್ರದ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಅವರು ಧರ್ಮಸ್ಥಳ ಮಂಜುನಾಥನ ಮೊರೆ ಹೋಗಿದ್ದಾರೆ. ಅಲ್ಲದೇ ತಮ್ಮ ಕಾರಿಗೂ ಮಂಜುನಾಥಸ್ವಾಮಿ ದರ್ಶನ ಮಾಡಿಸಿದ್ದಾರೆ.