ಸಚಿವ ಸ್ಥಾನ ಸಿಕ್ಕರೂ ನನಗೆ ಒಂದು ನೋವಿದೆ. ಒಂದು ಕಡೆ ಖುಷಿಯಿದ್ದರೆ ಇನ್ನೊಂದು ಕಡೆ ನಮ್ಮ ಜನ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂಬ ನೋವಿದೆ ಎಂದು ನೂತನ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
Karnataka Districts Aug 21, 2019, 3:03 PM IST
ರಾಜ್ಯದಲ್ಲಿ ಈಗಾಗಲೇ ಭೀಕರ ಪ್ರವಾಹ ಪರಿಸ್ಥಿತಿಯಿಂದ ಲಕ್ಷಾಂತರ ಜನರ ಬದುಕು ಬೀದಿಗೆ ಬಿದ್ದಿದೆ. ಆಸ್ತಿ ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಚಿಕ್ಕಮಗಳೂರಲ್ಲಿ ಬೆಟ್ಟವೊಂದು ಕುಸಿದು ಅನಾಹುತ ಸೃಷ್ಟಿಸಿತ್ತು. ಈ ಅನಾಹುತದ ಬಗ್ಗೆ ಪ್ರಕೃತಿ ಒಂದು ವಾರದ ಮೊದಲೇ ಚಿಕ್ಕಮುನ್ಸೂಚನೆಯನ್ನೂ ನೀಡಿತ್ತು.
Karnataka Districts Aug 21, 2019, 1:22 PM IST
ನೂತನ ಸಚಿವ ಸಿ.ಟಿ ರವಿ ತಮ್ಮ ಕ್ಷೇತ್ರದ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಜನರ ಮುಂದೆ ಸಚಿವರು ಕಣ್ಣೀರು ಹಾಕಿದರು.
Karnataka Districts Aug 21, 2019, 12:44 PM IST
ಬರಕ್ಕೆ ₹1029.39 ಕೋಟಿ, ನೆರೆಗಿಲ್ಲ ನಯಾಪೈಸೆ!| ಹಿಂಗಾರು ಬೆಳೆನಷ್ಟಕ್ಕೆ ಸಾವಿರ ಕೋಟಿ ಬಿಡುಗಡೆ ಮಾಡಿದ ಕೇಂದ್ರ | ರಾಜ್ಯ ಕೇಳಿದು ್ದ ಈ ಬಾರಿಯ ಪ್ರವಾಹಕ್ಕೆ ಸಂಬಂಧಿಸಿ ಮೌನ ಮುರಿಯದ ಕೇಂದ್ರ
NEWS Aug 21, 2019, 12:03 PM IST
ನೆರೆ ಸಂತ್ರಸ್ತರಿಗೀಗ ಹೊಸ ಸವಾಲು ಎದುರಾಗಿದೆ. ಭಾರೀ ಪ್ರವಾಹದಿಂದ ಬಾವಿಗಳು ಸಂಪೂರ್ಣ ತುಂಬಿದ್ದು ಕೆಸರಿನಿಂದಾವೃತವಾದ ಬಾವಿಗಳ ಸ್ವಚ್ಛತೆಯೇ ದೊಡ್ಡ ಸವಾಲಾಗಿದೆ.
Karnataka Districts Aug 21, 2019, 11:38 AM IST
ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 5,500 ಕುಟುಂಬಗಳು ನೆರೆಬಾಧಿತ ಎಂದು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಅತಿವೃಷ್ಟಿಹಾಗೂ ನೆರೆಯಿಂದಾಗಿ ಉಂಟಾಗಿರುವ ಹಾನಿ ಅಂದಾಜಿಸಲಾಗುತ್ತಿದ್ದು, ಪರಿಹಾರ ಮತ್ತು ಪುನರ್ವಸತಿ ಕಾರ್ಯ ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ ಎಂದರು.
Karnataka Districts Aug 21, 2019, 11:33 AM IST
ಪ್ರವಾಹದಿಂದ ಸಂಪೂರ್ಣವಾಗಿ ಮನೆ ಕಳೆದುಕೊಂಡವರಿಗೆ ಮಾಸಿಕ 5 ಸಾವಿರ ರು. ಬಾಡಿಗೆ ಹಣ ಪಾವತಿ ಮಾಡಲು ಶಿವಮೊಗ್ಗ ಜಿಲ್ಲಾಡಳಿತ ನಿರ್ಧರಿಸಿದೆ. ಈ ರೀತಿ ಬಾಡಿಗೆ ಹಣ ಗರಿಷ್ಠ10 ತಿಂಗಳಿಗೆ ಸೀಮಿತಗೊಳಿಸಿ, ಮನೆ ಮತ್ತೆ ನಿರ್ಮಿಸುವವರೆಗೆ ತಾತ್ಕಾಲಿಕ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಹೇಳಿದರು.
Karnataka Districts Aug 21, 2019, 11:15 AM IST
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮೆಲ್ಮೈ ಸುಳಿಗಾಗಿ ಪ್ರಭಾವದಿಂದ ಮಳೆಯ ಪ್ರಮಾಣ ಹೆಚ್ಚಲಿದೆ ಎಂದು ಹೇಳಿದೆ.
NEWS Aug 21, 2019, 11:10 AM IST
ಪ್ರವಾಹದಿಂದ ಸಂತ್ರಸ್ತರಾದ ಜನರಿಗೆ ಬಿಸಿಬಿಸಿ ದಾವಣಗೆರೆ ಬೆಣ್ಣೆ ದೋಸೆ ಉಣಬಡಿಸಲಾಯಿತು. ಬೆಳಗಾವಿಯ ಹುಕ್ಕೇರಿ ತಾಲೂಕಿನಲ್ಲಿ ದಾವಣಗೆರೆ ಜಿಲ್ಲಾ ಶ್ರೀ ಅನ್ನಪೂರ್ಣೇಶ್ವರ ಅಡುಗೆ ತಯಾರಕರ ಕ್ಷೇಮಾಭಿವೃದ್ಧಿ ಸಂಘದವರು ಬೆಣ್ಣೆ ದೋಸೆ, ಶಿರಾ, ಪೊಂಗಲ್, ಚಟ್ನಿ, ಬಿಸಿ ಬಿಸಿಯಾಗಿ ತಯಾರಿಸಿ ನೆರೆ ಸಂತ್ರಸ್ತರಿಗೆ ಬಡಿಸಿದರು.
Karnataka Districts Aug 21, 2019, 10:15 AM IST
ಮಹಾಪ್ರವಾಹದಿಂದಾಗಿ ಚಿಕ್ಕೋಡಿ ಹಾಗೂ ನಿಪ್ಪಾಣಿಯಲ್ಲಿ ಮುಳುಗಿದ್ದ ಸೇತುವೆಗಳಲ್ಲಿ 6 ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ. ಆದರೆ ಇನ್ನೂ 4 ಸೇತುವೆ ಮುಳುಗಡೆಯಾಗಿರುವ ಸ್ಥಿತಿಯಲ್ಲಿದೆ. ಸೇತುವೆಗಳು ಮುಳುಗಿದ್ದು, ಜನರು ಪರ್ಯಾಯ ರಸ್ತೆಗಳ ಮೂಲಕ ಸುತ್ತಿ ಬಳಸಿ ಓಡಾಡುತ್ತಿದ್ದಾರೆ.
Karnataka Districts Aug 21, 2019, 9:59 AM IST
ನೆರೆ ಪ್ರವಾಹಕ್ಕೂ ಯಡಿಯೂರಪ್ಪ ಸಿಎಂ ಆಗುವುದಕ್ಕೂ ಸಂಬಂಧ ಇದೇಯಾ? ಹೌದು ಅಂತಾರೆ ಮಾಜಿ ಸಿಎಂ ಸಿದ್ದರಾಮಯ್ಯ.. ಇದೇನು ಕತೆ ನೀವೇ ನೋಡ್ಕಂಡು ಬನ್ನಿ..
Karnataka Districts Aug 20, 2019, 5:54 PM IST
ರಾಜ್ಯದಲ್ಲಿ ವರುಣನ ಆರ್ಭಟದಿಂದ ಹಲವೆಡೆ ಅಪಾರ ನಷ್ಟ ಸಂಭವಿಸಿದೆ. ಅನೇಕ ಸಾವು ನೋವುಗಳಾಗಿವೆ. ಕೇಂದ್ರ ಇದಕ್ಕೆ ಕ್ಯಾರೇ ಎನ್ನುತ್ತಿಲ್ಲ. ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಮುಖ್ಯಮಂತ್ರಿ ಕೇಂದ್ರದ ಮೇಲೆ ಒತ್ತಡ ತರಬೇಕು, ಇಲ್ಲವೇ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷರು ಆಗ್ರಹಿಸಿದ್ದಾರೆ.
Karnataka Districts Aug 20, 2019, 3:51 PM IST
ಚಿಕ್ಕಮಗಳೂರಿನಲ್ಲಿ ನೆರೆ ಸಂತ್ರಸ್ತರಿಗೆ ಹಾಸಿಗೆ, ಬಟ್ಟೆ, ಗ್ಯಾಸ್ ಸ್ಟೌಗಳನ್ನು ವಿತರಿಸಲಾಗಿದೆ. ಸಂತ್ರಸ್ತರ ಮನೆಗೆ ಅಗತ್ಯವಾಗಿ ಬೇಕಿದ್ದ ವಿವಿಧ ಪರಿಕರಗಳು, ಬಟ್ಟೆಮತ್ತಿತರರ ವಸ್ತುಗಳನ್ನು ಅವರ ಮನೆಗೆ ಬಾಗಿಲಿಗೆ ನೇರವಾಗಿ ತಲುಪಿಸಲಾಗಿದೆ. ಸಂತ್ರಸ್ತರಿಗೆ ನೀಡಲು ತಂದಿದ್ದ ಸಾಮಗ್ರಿಗಳನ್ನು ಮೂಡಿಗೆರೆ ಭಾಗಕ್ಕೂ ಕಳಿಸಿಕೊಡಲಾಯಿತು.
Karnataka Districts Aug 20, 2019, 12:14 PM IST
ಪ್ರವಾಹ ಪರಿಸ್ಥಿತಿಯನ್ನು ನಿರ್ವಹಿಸಲು, ಪರಿಹಾರ ಕಾರ್ಯಗಳಿಗೆ ಹಾಗೂ ನೆರೆ ಸಂತ್ರಸ್ತರಿಗೆ ಬಟ್ಟೆ, ಮತ್ತಿತರ ಸೌಲಭ್ಯ ಒದಗಿಸಲು ರಾಜ್ಯ ಸರ್ಕಾರ ಒಟ್ಟು 195 ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ.
NEWS Aug 20, 2019, 10:29 AM IST
ವಿದ್ಯಾರ್ಥಿನಿಯ ಶೈಕ್ಷಣಿಕ ದಾಖಲೆಗಳು, ಕಾಲೇಜು ಶುಲ್ಕಕ್ಕಾಗಿ ಆಕೆಯ ತಂದೆ ತೆಗೆದಿಟ್ಟಿದ್ದ .1 ಲಕ್ಷ ಕಷ್ಣಾ ನದಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಾಗನೂರು ಪಿಕೆ ಗ್ರಾಮದಲ್ಲಿ ನಡೆದಿದೆ.
NEWS Aug 20, 2019, 10:16 AM IST