ಬೆಳಗಾವಿ(ಆ.21): ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನಲ್ಲಿ ಮುಳಗಡೆಯಾಗಿದ್ದ 10 ಸೇತುಗಳ ಪೈಕಿ 6 ಸೇತುವೆ ಸಂಚಾರಕ್ಕೆ ಮುಕ್ತವಾಗಿವೆ. ಇನ್ನೂ 4 ಸೇತುವೆ ಮುಳಗಡೆಯಾಗಿ ಸಂಪರ್ಕ ಕಡಿತವಾಗಿದೆ.

ಚಿಕ್ಕೋಡಿ ತಾಲೂಕಿನ ಬೇಡಕಿಹಾಳ-ಶಿರದವಾಡ, ಸದಲಗಾ-ಬೋರಗಾಂವ, ಯಕ್ಸಂಬಾ-ದಾನವಾಡ ಮತ್ತು ಎರಡು ಬದಿಗೆ ನೀರು ಬಂದು ಸಂಪರ್ಕ ಕಡಿತಗೊಂಡಿದ್ದ ಅಂಕಲಿ-ಮಾಂಜರಿ ಸೇತುವೆಗಳ ಮೇಲಿನ ನೀರು ಖಾಲಿಯಾಗಿ ಸಂಚಾರಕ್ಕೆ ಮುಕ್ತವಾಗಿವೆ. ನಿಪ್ಪಾಣಿ ತಾಲೂಕಿನ ಕಾರದಗಾ-ಭೋಜ ಮತ್ತು ಬೋಜವಾಡಿ-ಕುನ್ನೂರ ಸೇತುವೆ ಸಂಚಾರಕ್ಕೆ ಮುಕ್ತವಾಗಿವೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಚಿಕ್ಕೋಡಿ ತಾಲೂಕಿನ ಕಲ್ಲೋಳ-ಯಡೂರ ಮತ್ತು ಮಲಿಕವಾಡ-ದತ್ತವಾಡ ಹಾಗೂ ನಿಪ್ಪಾಣಿ ತಾಲೂಕಿನ ಸಿದ್ನಾಳ-ಅಕ್ಕೋಳ ಮತ್ತು ಜತ್ರಾಟ-ಭಿವಶಿ ಸೇತುವೆಗಳು ಇನ್ನೂ ಜಲಾವೃತಗೊಂಡು ಜನ ಸಂಪರ್ಕಕ್ಕೆ ಮುಕ್ತವಾಗಿರುವುದಿಲ್ಲ. ಈ ಗ್ರಾಮಗಳಿಗೆ ಪರ್ಯಾಯ ಮಾರ್ಗಗಳಿವೆ. ಆದರೆ ಹತ್ತಾರು ಕಿಮೀ ಸುತ್ತುಬಳಸಿ ಸಂಚರಿಸಬೇಕಾದ ಅನಿವಾರ್ಯತೆ ಇದೆ.

ಬೆಳಗಾವಿ ಯುವತಿ ಬೆತ್ತಲಾಗಿ ಬೈಕ್ ಓಡಿಸಿದ್ದಕ್ಕೆ ಕಾರಣ ಇದೇನಾ?