ಶಿವಮೊಗ್ಗ(ಆ.21): ಪ್ರವಾಹದಲ್ಲಿ ಮನೆ ಸಂಪೂರ್ಣವಾಗಿ ಕಳೆದುಕೊಂಡು ಪರಿಹಾರಕ್ಕೆ ಅರ್ಹರಾದ ಕುಟುಂಬಗಳಿಗೆ ಮಾಸಿಕ 5 ಸಾವಿರ ರು. ಬಾಡಿಗೆ ಹಣ ಪಾವತಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ರೀತಿ ಬಾಡಿಗೆ ಹಣ ಗರಿಷ್ಟ10 ತಿಂಗಳಿಗೆ ಸೀಮಿತಗೊಳಿಸಿ, ಮನೆ ಮತ್ತೆ ನಿರ್ಮಿಸುವವರೆಗೆ ತಾತ್ಕಾಲಿಕ ನೀಡಲಾಗುವುದು. ಒಂದು ವೇಳೆ ನಿರ್ವಸಿತ ಕುಟುಂಬ 10 ತಿಂಗಳ ಅವಧಿಯ ಮುಂಚಿತವಾಗಿ ಮನೆ ನಿರ್ಮಿಸಿದರೆ, ಬಾಕಿ ಅವಧಿಯ ಬಾಡಿಗೆ ಮೊತ್ತ ಒಂದೇ ಕಂತಿನಲ್ಲಿ ಆ ಕುಟುಂಬಕ್ಕೆ ನೀಡಲಾಗುವುದು ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾತ್ಕಾಲಿಕ ಶೆಡ್ ನಿರ್ಮಾಣ:

ಪರ್ಯಾಯವಾಗಿ ನಿರಾಶ್ರಿತ ಕುಟುಂಬ ತಾತ್ಕಾಲಿಕ ತಗಡಿನ ಶೆಡ್‌ ವಸತಿ ನಿರ್ಮಾಣ ಮಾಡಿಕೊಂಡರೆ ಅವರಿಗೆ 50 ಸಾವಿರ ರು. ನೀಡಲಾಗುವುದು. ಪ್ರವಾಹ ಪೀಡಿತ ಕುಟುಂಬಗಳಿಗೆ ಮನೆ ನಿರ್ಮಾಣಕ್ಕಾಗಿ ಪರಿಹಾರದ ಮೊದಲ ಕಂತನ್ನು ಮುಂಗಡವಾಗಿ ಬಿಡುಗಡೆ ಮಾಡಲಾಗುವುದು.

ಬಾಡಿಗೆ ಮನೆಯಲ್ಲಿದ್ದವರಿಗೆ ವಸತಿ:

ಬಾಡಿಗೆ ಮನೆಯಲ್ಲಿದ್ದು ಮನೆ ಕಳೆದುಕೊಂಡಿರುವವರ ವಿವರ ಸಂಗ್ರಹಿಸಲಾಗುತ್ತಿದೆ. ಇವರಿಗೆ ವಸತಿ ಯೋಜನೆಯಡಿ ಮನೆಗಳನ್ನು ಒದಗಿಸುವ ಕುರಿತು ಪರಿಶೀಲನೆ ನಡೆಸಲು ಮುಖ್ಯಮಂತ್ರಿ ಈಗಾಗಲೇ ಸೂಚನೆ ನೀಡಿದ್ದು, ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಉಗ್ರರ ಹಾವಳಿ: ಶಿವಮೊಗ್ಗದಲ್ಲಿ ಹೈ ಅಲರ್ಟ್‌