ಜನರ ಮುಂದೆ ಕಣ್ಣೀರಿಟ್ಟ ನೂತನ ಸಚಿವ ಸಿ.ಟಿ.ರವಿ
ನೂತನ ಸಚಿವ ಸಿ.ಟಿ ರವಿ ತಮ್ಮ ಕ್ಷೇತ್ರದ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಜನರ ಮುಂದೆ ಸಚಿವರು ಕಣ್ಣೀರು ಹಾಕಿದರು.
ಚಿಕ್ಕಮಗಳೂರು [ಆ.21]: ರಾಜ್ಯ ತೀವ್ರ ಪ್ರವಾಹದಿಂದ ತತ್ತರಿಸಿದ್ದು ಪ್ರವಾಹ ಪೀಡಿತ ಪ್ರದೇಶಗಳಿಗೆ ನೂತನ ಸಚಿವರು ಭೇಟಿ ನೀಡಲು ಮೊದಲ ಟಾಸ್ಕ್ ನೀಡಲಾಗಿದೆ.
ಈ ನಿಟ್ಟಿನಲ್ಲಿ ಚಿಕ್ಕಮಗಳೂರಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ನೂತನ ಸಚಿವ ಸಿ.ಟಿ.ರವಿ, ಮಾಧುಸ್ವಾಮಿ ಭೇಟಿ ನೀಡಿದ್ದಾರೆ.
ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮೂಡಿಗೆರೆ ತಾಲೂಕಿನ ನೆರೆ ಪೀಡಿತ ಪ್ರದೇಶಗಳಾದ ಮಲೆಮನೆ, ಚನ್ನಹಡ್ಲು, ಬಣಕಲ್, ಬಾಳೂರು ಹೊರಟ್ಟಿ, ದುರ್ಗದ ಹಟ್ಟಿ ಗ್ರಾಮಗಳಿಗೆ ತೆರಳಿ ನಿರಾಶ್ರಿತರಿಗೆ ಸಾಂತ್ವನ ಹೇಳಿದ್ದಾರೆ.
ಜನರ ಕಷ್ಟಗಳನ್ನು ಆಲಿಸಿದ ಸಚಿವ ಸಿ.ಟಿ.ರವಿ ಪ್ರವಾಹದಿಂದ ತತ್ತರಿಸಿದ ದುಸ್ಥಿತಿಗೆ ಮರುಗಿ ಕಣ್ಣೀರು ಹಾಕಿದ್ದಾರೆ.
ಹಳ್ಳಿಗಾಡು ಪ್ರದೇಶಗಳಿಗೆ ತೆರಳಿ ಜನರ ಸಂಕಷ್ಟ ಆಲಿಸುತ್ತಿದ್ದು, ಇವರಿಗೆ ಮೂಡಿಗೆರೆ ಶಾಸಕ ಕುಮಾರಸ್ವಾಮಿ ಸಾಥ್ ನೀಡಿದರು.