ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ರಕ್ಷಣೆಗೆ ಸಿದ್ಧವಾಯ್ತು 'ರಕ್ಷಾ ಕವಚ'!
ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣದ ತನಿಖೆಗೆ ಸಿಬಿಐ ಬಳಕೆಗೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದೆ. ಸಿಬಿಐ ತನಿಖೆಯಿಂದ ಸಿದ್ದರಾಮಯ್ಯ ಅವರನ್ನು ರಕ್ಷಿಸಲು ಸರ್ಕಾರ 'ರಕ್ಷಾ ಕವಚ' ಸಿದ್ಧಪಡಿಸಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.
ಇಡೀ ದೇಶದಲ್ಲಿ ದಂಡಿಗೆ ಹೆದರದ, ದಾಳಿಗೆ ಬಗ್ಗದ ನಾಯಕ ಸಿದ್ದರಾಮಯ್ಯಗೆ ಶುರುವಾಗಿದ್ಯಾ ಸಿಬಿಐ ಭಯ? ತಮ್ಮ ನಾಯಕನ ರಕ್ಷಣೆಗೆ ಸಿದ್ದು ಸಚಿವ ಸಂಪುಟ ರಕ್ಷಾ ಕವಚವನ್ನು ಸಿದ್ಧಪಡಿಸಿದೆ. ಸಿಬಿಐ ದಾಳಿಯಿಂದ ಸಿದ್ದರಾಮಯ್ ಅವರನ್ನು ರಕ್ಷಣೆ ಮಾಡಲು ಮುಂದಾಗಿದೆ. ಈವರೆಗೆ ರಾಜ್ಯದಲ್ಲಿ ಸ್ವತಂತ್ರವಾಗಿ ಬಂದು ತನಿಖೆ ಮಾಡುತ್ತಿದ್ದ ಸಿಬಿಐಗೆ ಇದೀಗ ರಾಜ್ಯ ಸರ್ಕಾರ ಬಾಗಿಲು ಬಂದ್ ಮಾಡಿದೆ. ಇದಕ್ಕೆ ರಾಜ್ಯ ಸರ್ಕಾರ ದೊಡ್ಡ ಮಾಸ್ಟರ್ ಪ್ಲಾನ್ ಮಾಡಿದೆ.
ರಾಜ್ಯ ಸರ್ಕಾರದ ಮಖ್ಯಸ್ಥ ಸಿಎಂ ಸಿದ್ದರಾಮಯ್ಯ ವಿರುದ್ಧವೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆಯ ಹಗರಣ ಸುತ್ತಿಕೊಂಡ ಬೆನ್ನಲ್ಲಿಯೇ ಕೇಂದ್ರ ಸರ್ಕಾರದ ಅಧೀನದ ತನಿಖಾ ಸಂಸ್ಥೆ ಸಿಬಿಐ ಅನ್ನು ರಾಜ್ಯದೊಳಗೆ ಸುಲಭವಾಗಿ ಬಂದು ಹೋಗುವ ಗೇಟ್ ಅನ್ನು ಮುಚ್ಚಿ ಹಾಕಿದೆ. ಈ ಮೂಲಕ ಸಿದ್ದರಾಮಯ್ಯ ಕೇಸನ್ನು ಸ್ವತಂತ್ರವಾಗಿ ತನಿಖೆಗೆ ಕಯಗೆತ್ತಿಕೊಳ್ಳುವುದಕ್ಕೆ ಬ್ರೇಕ್ ಹಾಕಿದೆ. ಆದರೆ, ಇದಕ್ಕೆ ರಾಜ್ಯ ಸರ್ಕಾರದಿಂದ ಸಿದ್ದರಾಮಯ್ಯನನ್ನು ರಕ್ಷಣೆ ಮಾಡಲು ರಕ್ಷಾಕವಚ ಸಿದ್ಧಪಡಿಸಲಾಗಿದೆ.
ಮುಡಾ ಪ್ರಕರಣ ಸಿದ್ದರಾಮಯ್ಯ ಅವರ ಕುತ್ತಿಗೆ ಬಂದು ಕೂತಿದೆ. ಈ ಹೊತ್ತಲ್ಲಿ ಸಿದ್ದು ಸರ್ಕಾರ ಸಿಬಿಐಗೆ ಬಿಗ್ ಶಾಕ್ ಕೊಟ್ಟಿದೆ. ರಾಜ್ಯದಲ್ಲಿ ತನಿಖೆ ಮಾಡಬೇಕು ಎಂದರೆ ಕಡ್ಡಾಯವಾಗಿ ಸರ್ಕಾರದ ಸಮ್ಮತಿ ತೆಗೆದುಕೊಳ್ಳಬೇಕು ಅಂತ ತೀರ್ಮಾನಿಸಿದೆ. ಈ ನಿರ್ಧಾರದಿಂದ ಮೂಡಾ ಪ್ರಕರಣದ ತನಿಖೆಯನ್ನ ಸಿಬಿಐ ನಡೆಸಬೇಕು ಎಂದರೆ ಅದು ಸಾಧ್ಯವಾಗೋದಿಲ್ಲ. ಆದರೆ, ಇದೀಗ ಸಿದ್ದರಾಮಯ್ಯ ಅವರ ಮುಡಾ ಹಗರಣವನ್ನು ತನಿಖೆಯನ್ನು ಸಿಬಿಐ ಸಂಸ್ಥೆಯೇ ಮಾಡಬೇಕು ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಒಂದು ವೇಳೆ ಕೋರ್ಟ್ ಇದಕ್ಕೆ ಅಸ್ತು ಎಂದರೆ, ಸಿದ್ದರಾಮಯ್ಯ ಅವರ ಸಂಕಷ್ಟ ಇನ್ನಷ್ಟು ಹೆಚ್ಚಾಗುತ್ತದೆ. ಸಿಬಿಐ ತನಿಖೆಯ ಸವಾಲು ಎದುರಿಸಬೇಕಾಗಿ ಬರುತ್ತದೆ.