ಪುಷ್ಪ 2 ಅಡ್ಡದಲ್ಲಿ ಸ್ಟಾರ್ ಡೈರೆಕ್ಟರ್ ಕಾಣಿಸಿದ್ದೇಕೆ?: ಪುಷ್ಪರಾಜ್‌ಗೂ ರಾಜಮೌಳಿಗೂ ಏನು ಸಂಬಂಧ?

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಕೂಡ ಬೇರೆಲ್ಲಾ ಪ್ರಾಜೆಕ್ಟ್ ಬದಿಗಿಟ್ಟು  ಇದಕ್ಕಾಗಿ ಮೂರು ವರ್ಷಗಳನ್ನ ಮೀಸಲಿಟ್ರು. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಮೊದಲು ಪ್ಲಾನ್ ಮಾಡಿದ್ದಕ್ಕಿಂತ ಹತ್ತು ಪಟ್ಟು ಬಜೆಟ್ ಹೆಚ್ಚು ಸುರಿಯೋಕೆ ಸಿದ್ದವಾಯ್ತು. ಹಾಗೆ ರೆಡಿಯಾಗಿದ್ದೇ ಪುಷ್ಪ - ದಿ ರೂಲ್. ಪುಷ್ಪ-2ಗಾಗಿ ಅಲ್ಲು ಅರ್ಜುನ್ ತುಂಬಾನೇ ಶ್ರಮವಹಿಸಿದ್ದಾರೆ. 

First Published Sep 29, 2024, 5:44 PM IST | Last Updated Sep 29, 2024, 5:44 PM IST

ಪುಷ್ಪರಾಜನ ರೂಲಿಂಗ್ ಕಹಾನಿ ನೋಡೋದಕ್ಕೆ ಸದ್ಯ ಇಡೀ ಪ್ಯಾನ್ ಇಂಡಿಯಾ ದೊಡ್ಡ ನಿರೀಕ್ಷೆಯೊಂದಿಗೆ ಕಾಯ್ತಾ ಇದೆ. ಪುಷ್ಪ-2 ರಿಲೀಸ್ ಗೆ ಇನ್ನೇರೆಡೇ ತಿಂಗಳು ಬಾಕಿ ಇದೆ. ಆದ್ರೆ ಈಗಲೂ ಪುಷ್ಪ ಟೀಮ್  ಒಂದಿಷ್ಟು ಪ್ಯಾಚ್ ವರ್ಕ್ ನ ಶೂಟಿಂಗ್ ಮಾಡ್ತಾ ಇದೆ. ಇತ್ತೀಚಿಗೆ ಪುಷ್ಪ ಸೆಟ್ ಗೆ ನಿರ್ದೇಶಕ ಎಸ್.ಎಸ್ ರಾಜಮೌಳಿ ಭೇಟಿ ಕೊಟ್ಟಿದ್ದು, ಅದರ ಹಿಂದಿನ ಸೀಕ್ರೆಟ್ ಏನು ಅಂತ ಫ್ಯಾನ್ಸ್ ತಲೆಕೆಡಿಸಿಕೊಂಡಿದ್ದಾರೆ. ಹಾಗಾದ್ರೆ ಪುಷ್ಪನ ಅಡ್ಡದಲ್ಲಿ ಏನು ನಡೀತಾ ಇದೆ. ಮೌಳಿ ಮಾಸ್ಟರ್ ಅಲ್ಲಿಗೆ ಹೋಗಿದ್ದೇಕೆ. ಈ ಇಂಟ್ರೆಸ್ಟಿಂಗ್ ವಿಚಾರವನ್ನ ನೋಡ್ಕೊಂಡ್ ಬರೋಣ ಬನ್ನಿ. ಪುಷ್ಪ-2 ಅಡ್ಡದಿಂದ ಒಂದು ತಾಜಾ ಖಭರ್ ಬಂದಿದೆ. ಈಗಾಗ್ಲೇ ತೆರೆಗೆ ಬರಬೇಕಿದ್ದ ಈ ಸಿನಿಮಾ  ಶೂಟಿಂಗ್ ತಡವಾದ ಕಾರಣ ಡಿಸೆಂಬರ್ 6ಕ್ಕೆ ಬಿಡುಗಡೆ ಅಂತ ಅನೌನ್ಸ್ ಮಾಡಿದೆ. ಇನ್ನೇನು ಎರಡೇ ಎರಡು ತಿಂಗಳು ಮಾತ್ರ ರಿಲೀಸ್ ಗೆ ಬಾಕಿ ಇದೆ. 

ಆದ್ರೆ ಈಗಲೂ ಸಿನಿಮಾದ ಒಂದಿಷ್ಟು ದೃಶ್ಯಗಳನ್ನ ರೀ ಶೂಟ್ ಮಾಡಲಾಗ್ತಾ ಇದೆ. ಪುಷ್ಪ - ದಿ ರೈಸ್ ಸಿನಿಮಾ ಪ್ಯಾನ್ ಇಂಡಿಯಾ ದೊಡ್ಡ ಸಕ್ಸಸ್ ಕಂಡ ಮೇಲೆ ನಿರ್ದೇಶಕ ಸುಕುಮಾರ್ ಇದ್ರ ಸೀಕ್ವೆಲ್ ನ ನೆಕ್ಸ್ಟ್ ಲೆವೆಲ್ ಗೆ ತೆಗೆದುಕೊಂಡು ಹೋಗಬೇಕು ಅಂತ ಪ್ಲಾನ್ ಮಾಡಿದ್ರು. ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಕೂಡ ಬೇರೆಲ್ಲಾ ಪ್ರಾಜೆಕ್ಟ್ ಬದಿಗಿಟ್ಟು  ಇದಕ್ಕಾಗಿ ಮೂರು ವರ್ಷಗಳನ್ನ ಮೀಸಲಿಟ್ರು. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಮೊದಲು ಪ್ಲಾನ್ ಮಾಡಿದ್ದಕ್ಕಿಂತ ಹತ್ತು ಪಟ್ಟು ಬಜೆಟ್ ಹೆಚ್ಚು ಸುರಿಯೋಕೆ ಸಿದ್ದವಾಯ್ತು. ಹಾಗೆ ರೆಡಿಯಾಗಿದ್ದೇ ಪುಷ್ಪ - ದಿ ರೂಲ್. ಪುಷ್ಪ-2ಗಾಗಿ ಅಲ್ಲು ಅರ್ಜುನ್ ತುಂಬಾನೇ ಶ್ರಮವಹಿಸಿದ್ದಾರೆ. 

ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್, ಫಹಾದ್ ಫಾಸಿಲ್ ಕೂಡ ಪ್ಲ್ಯಾನ್ ಮಾಡಿದ್ದಕ್ಕಿಂತ ಹೆಚ್ಚು ಡೆಟ್ಸ್  ಈ ಸಿನಿಮಾಗೆ ಕೊಟ್ಟಿದ್ದಾರೆ.  ಎಲ್ಲಾ ಅಂದುಕೊಂಡಂತೇ ಆಗಿದ್ರೆ ಆಗಸ್ಟ್ 15ಕ್ಕೆ ಪುಷ್ಪ-2 ರಿಲೀಸ್ ಆಗಬೇಕಿತ್ತು. ಆದ್ರೆ ಚಿತ್ರವನ್ನ ದೊಡ್ಡ ಕ್ವಾನ್ವಾಸ್ ನಲ್ಲಿ ತೆರೆಗೆ ತರುವ ಶಪತ ಮಾಡಿರೋ ಸುಕುಮಾರ್ ಮೇಕಿಂಗ್ ಗೆ ಮತ್ತಷ್ಟು ಸಮಯ ತೆಗೆದುಕೊಂಡ್ರು. ಈ ನಡುವೆ ಚಿತ್ರದ ಕೆಲ ಸೀನ್ಸ್ ಲೀಕ್ ಆಗಿದ್ದರಿಂದ ರೀ ಶೂಟ್ ಮಾಡೋಕೆ ಮತ್ತಷ್ಟು ಸಮಯ ಕಳೆದುಹೋಯ್ತು. ಆದ್ರೆ ಅದೆಷ್ಟೇ ತಡವಾದ್ರೂ ಮೊದಲ ಭಾಗವನ್ನ ಮೀರಿಸುವ ಸಿನಿಮಾ ಇದಾಗಬೇಕು ಅಂತ ಟೀಮ್ ಕೆಲಸ ಮಾಡ್ತಾ ಇದೆ. 

ಸದ್ಯ ಡಿಸೆಂಬರ್ ಗೆ 6 ರಿಲೀಸ್ ಅಂತ ಫಿಕ್ಸ್ ಮಾಡಲಾಗಿದೆಯಾದ್ರೂ ಇದು ಕೂಡ ಮುಂದಕ್ಕೆ ಹೋದ್ರೂ ಅಚ್ಚರಿಯೇನಿಲ್ಲ. ಈ ನಡುವೆ ಪುಷ್ಪ-2 ಸೆಟ್ ಗೆ ಸ್ಟಾರ್ ಡೈರೆಕ್ಟರ್ ರಾಜಮೌಳಿ ಭೇಟಿ ಕೊಟ್ಟಿರೋದು ಮತ್ತಷ್ಟು ನಿರೀಕ್ಷೆ ಗರಿಗೆದರುವಂತೆ ಮಾಡಿದೆ. ಇತ್ತೀಚಿಗೆ ಪುಷ್ಪ-2 ಶೂಟಿಂಗ್ ಅಡ್ಡಕ್ಕೆ ಭೇಟಿ ಕೊಟ್ಟಿದ್ದ ಸ್ಟಾರ್  ನಿರ್ದೇಶಕ ರಾಜಮೌಳಿ ಚಿತ್ರೀಕರಣವನ್ನ ವೀಕ್ಷಣೆ ಮಾಡಿದ್ದಾರೆ. ನಿರ್ದೇಶಕ ಸುಕುಮಾರ್ ಮತ್ತು ಸಿನಿಮಾಟೋಗ್ರಾಫರ್ ಮಿರೋಸ್ಲಾ ಬ್ರೊಸೇಜ್ ಜೊತೆಗೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋವನ್ನ ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿರೋ ನಿರ್ದೇಶಕ ಸುಕುಮಾರ್, ರಾಜಮೌಳಿ ಭೇಟಿಯಿಂದ ನಮ್ ಸೆಟ್ ಗೆ ಮತ್ತಷ್ಟು ಹುರುಪು ಬಂದಿದೆ ಅಂತ ಪೋಸ್ಟ್ ಮಾಡಿದ್ದಾರೆ. 

ಇದನ್ನ ನೋಡಿ ಕಲ್ಕಿ ತರಹ ಪುಷ್ಪ-2ನಲ್ಲೇದ್ರೂ ರಾಜಮೌಳಿ ಗೆಸ್ಟ್ ರೋಲ್ ಮಾಡ್ತಿದ್ದಾರಾ ಅಂತ ಊಹೆ ಮಾಡ್ತಾ ಇದ್ದಾರೆ. ಯಾಕಂದ್ರೆ ಪ್ರಭಾಸ್ ರ ಕಲ್ಕಿ ಸಿನಿಮಾದಲ್ಲಿ ರಾಜಮೌಳಿ ಗೆಸ್ಟ್ ರೋಲ್ ನಲ್ಲಿ ಬಂದು ಹೋಗಿದ್ರು. ರಾಜಮೌಳಿ ಆನ್ ಸ್ಕ್ರೀನ್ ಕಾಣಿಸಿಕೊಳ್ಳೋದು ಹೊಸತೇನಲ್ಲ. ಬಾಹುಬಲಿ ನಲ್ಲಿ ಒಂದು ಪುಟ್ಟ ಪಾತ್ರದಲ್ಲಿ ರಾಜಮೌಳಿ ಕಾಣಿಸಿಕೊಂಡಿದ್ರು. ಪ್ರಭಾಸ್ ನಟನೆಯ ಕಲ್ಕಿಯಲ್ಲೂ ಸ್ಪೆಷಲ್ ಅಪೀಯರೆನ್ಸ್ ಮಾಡಿದ್ರು. ಇದೀಗ ಈ ಲಕ್ಕಿ ಡೈರೆಕ್ಟರ್ ಪುಷ್ಪ-2ನಲ್ಲೂ ಕಾಣಿಸಿಕೊಂಡ್ರೆ ಖಂಡಿತ ಅದು ಪುಷ್ಪನಿಗೆ  ಬಿಗ್ ಪ್ಲಸ್ ಪಾಯಿಂಟ್ ಆಗೋದ್ರಲ್ಲಿ ಡೌಟೇ ಇಲ್ಲ. ಇದಕ್ಕೆಲ್ಲಾ ಉತ್ತರ ಪುಷ್ಪ ೨ ರಿಲೀಸ್ ಆದಾಗ ಸಿಗಲಿದೆ.