ಬೆಂಕಿ ಹೊತ್ತಿಸಿತ್ತು ರಿಷಬ್ ಶೆಟ್ಟಿಯ ಆ ಮಾತು: ‘ಬಾಲಿವುಡ್‌ಗೆ ಬೈದಿಲ್ಲ’.. ಶೆಟ್ಟರ ಡ್ಯಾಮೇಜ್ ಕಂಟ್ರೋಲ್!

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ತಮ್ಮೀಡಿ ಕರೀಯರ್ ನ ಉದ್ದಕ್ಕೂ ಒಂದೇ ಒಂದು ಕಾಂಟ್ರವರ್ಸಿ ಮಾಡಿಕೊಂಡವರಲ್ಲ. ಆದ್ರೆ ಇತ್ತೀಚಿಗೆ ರಿಷಬ್ ಬಾಲಿವುಡ್ ಬಗ್ಗೆ ಮಾತನಾಡಿದ ಒಂದು ಮಾತು ಮಾತ್ರ ವಿವಾದದ ಕಿಡಿ ಹತ್ತಿಸಿತ್ತು.

First Published Sep 29, 2024, 5:51 PM IST | Last Updated Sep 29, 2024, 5:51 PM IST

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ತಮ್ಮೀಡಿ ಕರೀಯರ್ ನ ಉದ್ದಕ್ಕೂ ಒಂದೇ ಒಂದು ಕಾಂಟ್ರವರ್ಸಿ ಮಾಡಿಕೊಂಡವರಲ್ಲ. ಆದ್ರೆ ಇತ್ತೀಚಿಗೆ ರಿಷಬ್ ಬಾಲಿವುಡ್ ಬಗ್ಗೆ ಮಾತನಾಡಿದ ಒಂದು ಮಾತು ಮಾತ್ರ ವಿವಾದದ ಕಿಡಿ ಹತ್ತಿಸಿತ್ತು. ರಿಷಬ್ ಬಾಲಿವುಡ್ ಬಗ್ಗೆ ಚೀಪ್ ಆಗಿ  ಮಾತನಾಡಿದ್ದಾರೆ ಅಂತ ಉತ್ತರ ಭಾರತದ ಫ್ಯಾನ್ಸ್ ರಿಷಬ್ ಮೇಲೆ ಮುನಿಸಿಕೊಂಡಿದ್ರು. ಆದ್ರೀಗ ಶೆಟ್ರು ಈ ಬಗ್ಗೆ ಕ್ಲಾರಿಟಿ ಕೊಟ್ಟು ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದಾರೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ರಿಷಬ್ ಶೆಟ್ರು ಬಾಲಿವುಡ್ ಬಗ್ಗೆ ಮಾತನಾಡಿದ್ದು, ಅದು ವಿವಾದದ ಕಿಡಿ ಹೊತ್ತಿಸಿದ್ದು ನಿಮಗೆ ಗೊತ್ತೇ ಇದೆ. ಈ ವಿವಾದದಿಂದ ಕೊಂಚ ಅಪ್ ಸೆಟ್ ಆಗಿದ್ದ ರಿಷಬ್ ಕೊನೆಗೂ ಈ ಬಗ್ಗೆ ಸ್ಪಷ್ಟನೆ ಕೊಟ್ಟು ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದಾರೆ. 

ಇತ್ತೀಚಿಗೆ ಅಬುದಾಬಿಯಲ್ಲಿ ನಡೆದ ಐಫಾ ಅವಾರ್ಡ್ ಫಂಕ್ಷನ್ ನಲ್ಲಿ ಭಾಗಿಯಾಗಿದ್ದ ರಿಷಬ್, ಈ ಬಗ್ಗೆ ಮಿಡಿಯಾಗಳ ಎದುರು ಮಾತನಾಡಿ ನಾನು ಬಾಲಿವುಡ್ ಗೆ ಬೈದಿಲ್ಲ. ನನ್ನ ಹೇಳಿಕೆಯನ್ನ ತಿರುಚಲಾಗಿದೆ. ಈ ಕುರಿತು ಮುಂದಿನ ದಿನಗಳಲ್ಲಿ ದೀರ್ಘವಾಗಿ ಮಾತನಾಡೋಣ ಅಂದಿದ್ದಾರೆ. ಅಷ್ಟಕ್ಕೂ ಚಿತ್ರಬದುಕಿನಲ್ಲಿ ಒಂದೊಂದೇ ಮೆಟ್ಟಿಲು ಏರ್ತಾ ಇವತ್ತು ಗ್ಲೋಬಲ್ ಸ್ಟಾರ್ ಆಗಿರೋ ರಿಷಬ್, ತಮ್ಮ ಕರಿಯರ್ ನಲ್ಲಿ ಒಂದೇ ಒಂದು ವಿವಾದ ಮಾಡಿಕೊಂಡವರಲ್ಲ. ಆದ್ರೆ ಕೆಲ ದಿನಗಳ ಹಿಂದೆ ತಮ್ಮ ನಿರ್ಮಾಣದ ಲಾಫಿಂಗ್ ಬಿದ್ದ ಪ್ರಮೋಷನ್ಸ್ ವೇಳೆ, ರಿಷಬ್ ಒಂದು ಶಾಕಿಂಗ್ ಸ್ಟೇಟ್ ಮೆಂಟ್ ಕೊಟ್ಟಿದ್ರು. 

ಕೆಲ ಬಾಲಿವುಡ್ ಸಿನಿಮಾಗಳು ನಮ್ಮ ದೇಶವನ್ನ ಕೆಟ್ಟದಾಗಿ ಬಿಂಬಿಸಿ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿವೆ ಅನ್ನೋ ಅರ್ಥದಲ್ಲಿ ಮಾತನಾಡಿದ್ರು. ಇದು ಸಹಜವಾಗೇ ಬಾಲಿವುಡ್ ತಾರೆಯರ, ಮತ್ತು ಬಿ ಟೌನ್ ನ  ಚಿತ್ರಪ್ರಿಯರ ಕಣ್ಣು ಕೆಂಪಗಾಗಿಸಿತ್ತು. ಕಾಂತಾರಗೆ ನಾವು ಎಷ್ಟೆಲ್ಲಾ ಸಪೋರ್ಟ್ ಮಾಡಿದ್ವಿ. ಆದ್ರೆ ರಿಷಬ್ ಮಾತ್ರ ಬಾಲಿವುಡ್ ಬಗ್ಗೆ ಹೀಗೆ ಮಾತನಾಡಿದ್ದಾರಲ್ಲಾ ಅಂತ ಅನೇಕರು ಬೇಸರಿಕೊಂಡಿದ್ರು. ಹಿಂದಿ ಬೆಲ್ಟ್ ನ ಫ್ಯಾನ್ಸ್ ನಾವು ಕಾಂತಾರ ಚಾಪ್ಟರ್-1 ನೋಡಲ್ಲ ಅಂತ ಕಾಮೆಂಟ್ ಮಾಡಿದ್ರು. ತಮ್ಮ ಮಾತಿಗೆ ಬಂದ ಪ್ರತಿಕ್ರಿಯೆಗಳಿಂದ ರಿಷಬ್ ಡಿಸ್ಟರ್ಬ್ ಆಗಿದ್ದು ಸುಳ್ಳಲ್ಲ. 

ಆದ್ರಲ್ಲೂ  ಕಾಂತಾರ ಚಾಪ್ಟರ್-1 ಮೂಲಕ ವಿಶ್ವವನ್ನೇ ಮೆಚ್ಚಿಸುವಂಥ ಸಿನಿಮಾ ಮಾಡಬೇಕು ಅಂತ ಕಾಯ್ತಿರೋ ರಿಷಬ್ , ತಮ್ಮ ಒಂದು ಮಾತು ಇಷ್ಟೊಂದು ಹೇಟರ್ಸ್ ನ ಸೃಷ್ಟಿಸಿಬಿಟ್ತಲ್ಲಾ ಅಂತ ಬೇಸರ ಮಾಡಿಕೊಂಡಿದ್ರು. ಕಾಂತಾರ ಸಿನಿಮಾಗೆ ದೊಡ್ಡ ಮಟ್ಟದ ರೆಸ್ಪಾನ್ಸ್ ಸಿಕ್ಕಿದ್ದು ಉತ್ತರ ಭಾರತದ ಹಿಂದಿ ಭಾಷಿಕ ರಾಜ್ಯಗಳಲ್ಲಿ. ಬಾಲಿವುಡ್ ಕುರಿತ ಹೇಳಿಕೆಯಿಂದ ಅವರನ್ನ ಕಳೆದುಕೊಂಡ್ರೆ ಖಂಡಿತ ತಮ್ಮ ಚಾಪ್ಟರ್-1ಗೆ ಬಿಗ್ ಡ್ಯಾಮೇಜ್ ಆಗುತ್ತೆ ಅನ್ನೋದು ಶೆಟ್ಟರಿಗೆ ಅರ್ಥ ಆಗಿದೆ. ಅಷ್ಟೇ ಅಲ್ಲ ಹಲವು ಬಾಲಿವುಡ್ ಸ್ಟಾರ್ಸ್ ಗೂ ಬೇಸರ ಆಗಿದೆ.

ಕಾಂತಾರವನ್ನ ಬೆಂಬಲಿಸಿದಂತೆ ಚಾಪ್ಟರ್-1 ನ ಅವರು ಬೆಂಬಲಿಸಲಾರರು ಅನ್ನೋದು ಕೂಡ ರಿಷಬ್ ಗೆ ಅರ್ಥ ಆಗಿದೆ. ಸೋ ರಿಷಬ್ ಈಗ ಬಾಲಿವುಡ್ ಬೈದಿಲ್ಲ ಅಂತ ಹೇಳಿ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದಾರೆ. ತನ್ನ ಹೇಳಿಕೆ ತಿರುಚಲಾಗಿದೆ ಎಂದಿರೋ ಶೆಟ್ರು ಮುಂದಿನ ದಿನಗಳಲ್ಲಿ ಈ ಬಗ್ಗೆ ಡಿಟೈಲ್ ಆಗಿ ಮತನಾಡ್ತಿನಿ ಅಂದಿದ್ದಾರೆ. ಬಹುಶಃ ಕಾಂತಾರ ಚಾಪ್ಟರ್-1 ಪ್ರಮೋಷನ್ಸ್ ಸಮಯದಲ್ಲಿ ಈ ಬಗ್ಗೆ ರಿಷಬ್ ಮತ್ತಷ್ಟು ಮಾತನಾಡಲಿದ್ದಾರೆ. ಸದ್ಯಕ್ಕಂತೂ ತಮ್ಮ ಸುತ್ತ ಸುತ್ತಿಕೊಂಡಿದ್ದ ವಿವಾದದಿಂದ ನೈಸ್ ಆಗಿ ಹೊರಬಂದಿದ್ದಾರೆ.