ತೆಲುಗು ಸಿನಿಮಾಗಳ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ನವೀನ್ ಪೊಲಿಶೆಟ್ಟಿ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಅಮೆರಿಕದಲ್ಲಿ ಬೈಕ್ ಅಪಘಾತವಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
Cine World Mar 28, 2024, 10:20 PM IST
ಖ್ಯಾತ ಗಾಯಕ ಕೈಲಾಶ್ ಖೇರ್ ಇತ್ತೀಚೆಗಷ್ಟೇ ದುಬಾರಿ ರೇಂಜ್ ರೋವರ್ ಸ್ಪೋರ್ಟ್ ಕಾರು ಖರೀದಿಸಿದ್ದರು. ಇದೀಗ ಹೊಚ್ಚ ಹೊಸ ಜಾವಾ ಬಾಬರ್ ಬೈಕ್ ಖರೀದಿಸಿದ್ದಾರೆ. ಈ ಬೈಕ್ ತಮ್ಮ ಹಳೇ ನೆನಪುಗಳನ್ನು ತೆರೆದಿಟ್ಟಿದೆ ಎಂದಿದ್ದಾರೆ. ಯೆಜ್ಡಿಯಿಂದ ಆರಂಭಗೊಂಡ ಬೈಕ್ ಜರ್ನಿ ಕುರಿತು ಗಾಯಕ ಹೇಳಿದ್ದಾರೆ.
Bikes Mar 26, 2024, 6:03 PM IST
ರೀಲ್ಸ್ ಮಾಡಿ ಹೆಚ್ಚು ಲೈಕ್ಸ್, ಕಮೆಂಟ್ ಪಡೆಯಬೇಕು ಅನ್ನೋ ಆಸೆಯಿಂದ ಮಹಿಳೆ ರಸ್ತೆಯಲ್ಲಿ ಶೂಟ್ ಮಾಡಿದ್ದಾಳೆ. ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ. ಕಾರಣ ಈಕೆ ರೀಲ್ಸ್ ವಿಡಿಯೋ ಶೂಟ್ ಮಾಡುತ್ತಿದ್ದಂತೆ ಬೈಕ್ನಲ್ಲಿ ಬಂದ ಕಳ್ಳ, ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದಾನೆ.
CRIME Mar 24, 2024, 8:10 PM IST
ನಾನು ಬಿಜೆಪಿಯಲ್ಲಿ ಹಲವು ಹುದ್ದೆ ಅನುಭವಿಸಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷ ಕುಟುಂಬದ ಕೈಯಲ್ಲಿ ಇದೆ ಅಂತಾರೆ. ಆದ್ರೆ ರಾಜ್ಯ ಬಿಜೆಪಿಯಲ್ಲಿ ಏನು ನಡೆಯುತ್ತಿದೆ ಎಂಬುದು ತಿಳಿದಿಲ್ಲವೇ? ರಾಜ್ಯ ಬಿಜೆಪಿಯಲ್ಲಿ ಸಹ ಕಾಂಗ್ರೆಸ್ ಸಂಸ್ಕೃತಿ ಇದೆ ಎಂದು ಮಾಜಿ ಸಚಿವ, ಬಂಡಾಯ ಅಭ್ಯರ್ಥಿ ಕೆಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದರು.
Politics Mar 24, 2024, 6:56 PM IST
ಮಹಿಳೆಯರು ಬುಲೆಟ್ ಸೇರಿದಂತೆ ಹೆಚ್ಚಿನ ಸಿಸಿ ಬೈಕ್ ರೈಡ್ ಮಾಡುವುದು, ಸಾಹಸ ಮಾಡುವುದು ಅಚ್ಚರಿಯ ವಿಚಾರವಲ್ಲ. ಇದೀಗ ಮಹಿಳೆಯರು ಸೀರೆಯಲ್ಲಿ, ಸ್ಯಾಂಡಲ್ಸ್ ಧರಿಸಿ ಡರ್ಟ್ ಬೈಕ್ನಲ್ಲಿ ಸಾಹಸ ಮಾಡಿದ್ದಾರೆ. ಸಾರ್ವಜನಿಕ ರಸ್ತೆಯಲ್ಲೇ ಮಹಿಳೆಯರು ಡರ್ಟ್ ಬೈಕ್ ಮೂಲಕ ಸಾಗಿದ ವಿಡಿಯೋ ವೈರಲ್ ಆಗಿದೆ.
Bikes Mar 23, 2024, 4:58 PM IST
ವೈಯಾಲಿಕಾವಲ್ ನಿವಾಸಿ ಪ್ರತೀಕ್ ಆರ್.ಶಿಂಧೆ ಬಂಧಿತ. ಸದಾಶಿವನಗರ ಸಂಚಾರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಪಿ.ವೈ.ಶಿವರಾಜು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
CRIME Mar 22, 2024, 6:17 AM IST
ಮನೆಯಲ್ಲಿ ಹೆಂಡತಿ ಯಾವಾಗಲೂ ಜಗಳ ಮಾಡುತ್ತಾಳೆ ಎಂದು ಮನನೊಂದು ಪತ್ನಿಯ ಮುಖಕ್ಕೆ ಗಂಡನೇ ಆಸಿಡ್ ಎರಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
CRIME Mar 19, 2024, 8:42 PM IST
ಮದುವೆಯಾದ ತಿಂಗಳಲ್ಲೇ ಬುಲೆಟ್ ಬೈಕ್ ಹಾಗೂ 2 ಲಕ್ಷ ರೂಪಾಯಿ ವರದಕ್ಷಿಣೆ ನೀಡುವುದಾಗಿ ಹೇಳಿದ್ದಾರೆ. ಆದರೆ ಇನ್ನೂ ನೀಡಿಲ್ಲ ಎಂದು ಪತ್ನಿ ದೂರವಾಣಿ ಮೂಲಕ ಪತ್ನಿಗೆ ವಿಚ್ಚೇದನ ನೀಡಿದ ಘಟನೆ ನಡೆದಿದೆ.
CRIME Mar 12, 2024, 7:59 PM IST
ಮೂರು ತಿಂಗಳ ಹಿಂದೆ ನಡೆದ ಅಪಘಾತ. ಕುಡಿದು ಕಾರು ಓಡಿಸುವುದು, ಅವಾಚ್ಯ ಶಬ್ದಗಳನ್ನು ಬಳಸಿದ್ದು ನಿಜವೇ?
Small Screen Mar 9, 2024, 6:07 PM IST
ಮೂರು ತಿಂಗಳ ಅಪಘಾತ ಈಗ ಬೆಳಕಿಗೆ, ಕಿರುತೆರೆ ನಟಿ ಲಕ್ಷ್ಮಿ ಸಿದ್ಧಯ್ಯ ಅಷ್ಟೊಂದು ಪವರ್ ಪುಲ್?
Small Screen Mar 9, 2024, 10:59 AM IST
21 ವರ್ಷದ ಬುಡಕಟ್ಟು ಜನಾಂಗದ ರಾಬಿನ್ ಮಿನ್ಜು ಅವರನ್ನು ಕಳೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಬರೋಬ್ಬರಿ 3.60 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಇದೀಗ ರಾಬಿನ್ ಮಿನ್ಜ್ ಸೂಪರ್ ಬೈಕ್ ಚಲಾಯಿಸುವಾಗ ಅಪಫಾತಕ್ಕೊಳಗಾಗಿದ್ದಾರೆ ಎಂದು ಅವರ ತಂದೆ ಖಚಿತಪಡಿಸಿದ್ದಾರೆ.
Cricket Mar 3, 2024, 6:33 PM IST
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಮತ್ತೆ ಉಡುಪಿ - ಚಿಕ್ಕಮಗಳೂರು ಕ್ಷೇತ್ರಕ್ಕೆ ಟಿಕೆಟ್ ನೀಡುವುದರ ವಿರುದ್ಧ ಮಲ್ಪೆ ಭಾಗದ ಬಿಜೆಪಿ ಕಾರ್ಯಕರ್ತರು ಶನಿವಾರ ಬೃಹತ್ ಬೈಕ್ ರ್ಯಾಲಿ ನಡೆಸಿದರು. ಮಲ್ಪೆ ಏಳೂರ ಮೊಗವೀರ ಸಮುದಾಯ ಭವನದಿಂದ ಹೊರಟ ಈ ಬೈಕ್ ರ್ಯಾಲಿ, ಜಿಲ್ಲಾ ಬಿಜೆಪಿ ಕಚೇರಿಗೆ ತೆರಳಿ, ಬಿಜೆಪಿ ಜಿಲ್ಲಾಧ್ಯಕ್ಷಕರಿಗೆ ಮನವಿ ಸಲ್ಲಿಸಿ, ಸ್ಥಳೀಯ ಅಭ್ಯರ್ಥಿಗೆ ಈ ಬಾರಿ ಟಿಕೆಟ್ ನೀಡಬೇಕು ಎಂದು ಆಗ್ರಹಿಸಲಾಯಿತು.
Politics Mar 3, 2024, 1:41 PM IST
rape of spanish woman in jharkhand ತನ್ನ ಪತಿಯೊಂದಿಗೆ ಬೈಕ್ ಪ್ರವಾಸದಲ್ಲಿದ್ದ ಸ್ಪೇನಿಷ್ ಮಹಿಳೆ ಜಾರ್ಖಂಡ್ನ ಧುಮ್ಕಾ ಮೂಲಕ ಹಾದು ಹೋಗುತ್ತಿದ್ದರು. ಈ ವೇಳೆ ಆಕೆಯ ಮೇಲೆ ಎರಗಿದ ಏಳು ಮಂದಿ ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿದ ಹೀನ ಘಟನೆ ನಡೆದಿದೆ.
CRIME Mar 2, 2024, 6:07 PM IST
ಬಿಎಂಟಿಸಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ. ದೇಬಶೀಶ್ ಬೆಹ್ರಾ (28) ಮೃತ ವ್ಯಕ್ತಿಯಾಗಿದ್ದಾರೆ. ನಿನ್ನೆ ಮಧ್ಯಾಹ್ನ 12.30ರ ಸುಮಾರಿಗೆ ಹೊಸ್ಮಾಟ್ ಜಂಕ್ಷನ್ನಲ್ಲಿ ಘಟನೆ ನಡೆದಿದೆ.
CRIME Mar 1, 2024, 2:58 PM IST
ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿಗಳ ಸಾಧನೆಗೆ ಜಗತ್ತೆ ಸಲಾಂ ಹೇಳಿದೆ. ಅತ್ಯಾಧುನಿಕ ತಂತ್ರಜ್ಞಾನದ ಎಲೆಕ್ಟ್ರಿಕ್ ಬೈಕ್ ಅಭಿವೃದ್ಧಿಪಡಿಸಲಾಗಿದೆ. ರೈಡರ್ ಮದ್ಯ ಕುಡಿದು ಬಂದರೆ ಈ ಬೈಕ್ ಸ್ಟಾರ್ಟ್ ಆಗಲ್ಲ. ಒಂದು ಬಾರಿ ಚಾರ್ಜ್ ಮಾಡಿದರೆ 60 ಕಿ.ಮಿ ಮೈಲೇಜ್ ನೀಡಬಲ್ಲ ಈ ಬೈಕ್ನಲ್ಲಿ ಎಮರ್ಜೆನ್ಸಿ ಫೀಚರ್ಸ್, ಹಿಲ್ ಅಸಿಸ್ಟ್ ಸೇರಿದಂತೆ ಹಲವು ಅತ್ಯಾಧುನಿಕ ಫೀಚರ್ಸ್ ಇದೆ.
Bikes Feb 28, 2024, 10:28 AM IST