ರಸ್ತೆಯಲ್ಲಿ ರೀಲ್ಸ್ ಮಾಡುತ್ತಿದ್ದ ಮಹಿಳೆಯ ಚಿನ್ನದ ಸರ ಎಗರಿಸಿದ ಕಳ್ಳ, ವಿಡಿಯೋ ವೈರಲ್!
ರೀಲ್ಸ್ ಮಾಡಿ ಹೆಚ್ಚು ಲೈಕ್ಸ್, ಕಮೆಂಟ್ ಪಡೆಯಬೇಕು ಅನ್ನೋ ಆಸೆಯಿಂದ ಮಹಿಳೆ ರಸ್ತೆಯಲ್ಲಿ ಶೂಟ್ ಮಾಡಿದ್ದಾಳೆ. ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ. ಕಾರಣ ಈಕೆ ರೀಲ್ಸ್ ವಿಡಿಯೋ ಶೂಟ್ ಮಾಡುತ್ತಿದ್ದಂತೆ ಬೈಕ್‌ನಲ್ಲಿ ಬಂದ ಕಳ್ಳ, ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದಾನೆ.
ಘಾಜಿಯಾಬಾದ್(ಮಾ.24) ಇದು ರೀಲ್ಸ್ ವಿಡಿಯೋ ಜಮಾನ. ಸಾಮಾಜಿಕ ಮಾಧ್ಯಮ ಸೇರಿದಂತೆ ಎಲ್ಲೆಡೆ ರೀಲ್ಸ್ ಸದ್ದು ಮಾಡುತ್ತಿದೆ. ಶಾರ್ಟ್ ವಿಡಿಯೋ ಮೂಲಕ ಹಲವರು ಭಾರಿ ಜನಪ್ರಿಯತೆ ಗಳಿಸಿದ್ದಾರೆ. ಹೀಗೆ ಒಂದು ಕೈ ನೋಡೇ ಬಿಡೋಣ ಅಂತಾ ನಡು ರಸ್ತೆಯಲ್ಲಿ ರೀಲ್ಸ್ ಮಾಡುತ್ತಿದ್ದ ಮಹಿಳೆಗೆ ಆಘಾತ ಎದುರಾಗಿದೆ. ಮೆಲ್ಲನೆ ನಡೆದುಕೊಂಡು ಬರುವ ರೀಲ್ಸ್ ಶೂಟ್ ಮಾಡುತ್ತಿದ್ದ ವೇಳೆ ಬೈಕ್‌ನಲ್ಲಿ ಎಂಟ್ರಿಕೊಟ್ಟ ಕಳ್ಳ ಈಕೆಯ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದಾನೆ. ಹೆಚ್ಚು ಲೈಕ್ಸ್, ಕಮೆಂಟ್ ಬರಬೇಕು, ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯ ಆಗಬೇಕು ಅನ್ನೋ ಕಾರಣದಲ್ಲಿ ಮಾಡಿದ ಈ ರೀಲ್ಸ್ ಇದೀಗ ಭಾರಿ ವೈರಲ್ ಆಗಿದೆ. ಈ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ನಡೆದಿದೆ.
ಇಂದ್ರಾಪುರಂನ ಬಳಿಯ ರಸ್ತೆಯಲ್ಲಿ ಸುಷ್ಮಾ ಅನ್ನೋ ಮಹಿಳೆ ರೀಲ್ಸ್ ಮಾಡಲು ಸಜ್ಜಾಗಿದ್ದರು. ಸೆಲ್ವಾರ್ ಧರಿಸಿ ಮೆಲ್ಲನೆ ನಡೆದು ಬರುವ ರೀಲ್ಸ್ ಶೂಟ್ ಮಾಡಲು ಪ್ಲಾನ್ ಮಾಡಲಾಗಿತ್ತು. ಇದರಂತೆ ಸುಷ್ಮಾ ಹಾಗೂ ಮತ್ತೊರ್ವ ಮಹಿಳೆ ರಸ್ತೆಯ ಪಕ್ಕದಲ್ಲಿನ ಸರ್ವೀಸ್ ರಸ್ತೆಯಲ್ಲಿ ನಿಂತು ಶೂಟಿಂಗ್ ಮಾಡಲು ರೆಡಿಯಾಗಿದ್ದಾರೆ. ಮೊದಲೇ ಹೇಳಿದಂತೆ ಮೆಲ್ಲನೆ ನಡೆದುಕೊಂಡು ಬರುವ ವಿಡಿಯೋ ಶೂಟ್ ಇದಾಗಿತ್ತು.
₹25 ಲಕ್ಷ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ 'ಮುಡಾ' ಆಯುಕ್ತ ಮನ್ಸೂರ್ ಅಲಿ!
ಸುಷ್ಮಾ ಮೆಲ್ಲನೆ ನಡೆದುಕೊಂಡು ಮುಂದೆ ಬರುತ್ತಿದ್ದಂತೆ ಬೈಕ್‌ನಲ್ಲಿ ಓರ್ವ ಈಕೆಯತ್ತ ತೆರಳಿದ್ದಾನೆ. ರೀಲ್ಸ್ ಭರದಲ್ಲಿ ಸುಷ್ಮಾಗೆ ಬೈಕರ್ ಯಾಕೆ ಈ ರೀತಿ ಬರುತ್ತಿದ್ದಾನೆ ಅನ್ನೋದು ತಲೆಗೆ ಹೊಳೆಯಲೇ ಇಲ್ಲ. ಈತ ನನ್ನ ರೀಲ್ಸ್ ಅಡ್ಡಿಪಡಿಸುತ್ತಿದ್ದಾನೆ ಎಂದು ಕೈ ಸನ್ನೆ ಮೂಲಕ ಏನು ಎಂದು ಕೇಳಿದ್ದಾಳೆ. ಅಷ್ಟೇ ನೋಡಿ, ಬೈಕರ್ ಹತ್ತಿರ ಬರುತ್ತಿದ್ದಂತೆ ಈಕೆಯ ಕೊರಳಲ್ಲಿದ್ದ ಚಿನ್ನದ ಸರವನ್ನು ಎಳೆದಿದ್ದಾನೆ.
महिला वीडियो बना रही थी, तभी एक बाइक वाले ने महिला का मंगलसूत्र गले में से तोड़ा। #Indirapuram की घटना Live Video.
— Amrit Yaduvanshi (@AmritYaduvanshi) March 24, 2024
Mobile छीन कर भागने वालों, गहनों के गले से तोड़कर भागने वालों का ग्राफ बढ़ रहा है।
@ghaziabadpolice, @Uppolice #Crime #GhaziabadCrime pic.twitter.com/2b6B2atDHU
ಒಂದೇ ರಭಸಕ್ಕೆ ಈಕೆಯ ಚಿನ್ನದ ಸರ ಕಳ್ಳನ ಪಾಲಾಗಿದೆ.ಇತ್ತ ಸುಷ್ಮಾ ಏಯ್ ಏಯ್ ಎಂದು ಕಿರುಚಿದರೂ ಪ್ರಯೋಜನವಾಗಲಿಲ್ಲ. ಬೈಕ್‌ನಲ್ಲಿ ಬಂದ ಕಳ್ಳ ವೇಗವಾಗಿ ಸ್ಥಳದಿಂದ ಪರಾರಿಯಾಗಿದ್ದಾನೆ. ಹೆಲ್ಮೆಟ್ ಧರಿಸಿ ಬಂದಿದ್ದ ಕಳ್ಳ ಚೈನ್ ಎಗರಿಸಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಇತ್ತ ಮಹಿಳೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಇದೀಗ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ದಾರೆ.
ಭೀಕರ ರಸ್ತೆ ಅಪಘಾತದಲ್ಲಿ ಮಹಿಳೆ ಸಾವು; ಕುಟುಂಬಸ್ಥರ ಆಕ್ರಂದನ ಕಂಡು ಕಾರು ನಿಲ್ಲಿಸಿ ಸಾಂತ್ವನ ಹೇಳಿದ ಗೃಹ ಸಚಿವ