Asianet Suvarna News Asianet Suvarna News

ಜಾವಾ ಪೆರಾಕ್ ಬೈಕ್ ಖರೀದಿಸಿದ ಕೈಲಾಶ್ ಖೇರ್, ಮರುಕಳಿಸಿದ ಹಳೇ ನೆನಪು ಎಂದ ಗಾಯಕ!

ಖ್ಯಾತ ಗಾಯಕ ಕೈಲಾಶ್ ಖೇರ್ ಇತ್ತೀಚೆಗಷ್ಟೇ ದುಬಾರಿ ರೇಂಜ್ ರೋವರ್ ಸ್ಪೋರ್ಟ್ ಕಾರು ಖರೀದಿಸಿದ್ದರು. ಇದೀಗ ಹೊಚ್ಚ ಹೊಸ ಜಾವಾ ಬಾಬರ್ ಬೈಕ್ ಖರೀದಿಸಿದ್ದಾರೆ. ಈ ಬೈಕ್ ತಮ್ಮ ಹಳೇ ನೆನಪುಗಳನ್ನು ತೆರೆದಿಟ್ಟಿದೆ ಎಂದಿದ್ದಾರೆ. ಯೆಜ್ಡಿಯಿಂದ ಆರಂಭಗೊಂಡ ಬೈಕ್ ಜರ್ನಿ ಕುರಿತು ಗಾಯಕ ಹೇಳಿದ್ದಾರೆ.
 

Singer Kailash Kher purchase Jawa Perak Bobber motorcycle share video on Social media ckm
Author
First Published Mar 26, 2024, 6:03 PM IST

ಮುಂಬೈ(ಮಾ.26) ಅದ್ಭುತ ಕಂಠದ ಮೂಲಕ ಮೋಡಿ ಮಾಡುತ್ತಿರುವ ಭಾರತದ ಖ್ಯಾತ ಗಾಯಕ ಕೈಲಾಶ್ ಖೇರ್ ಇದೀಗ ಹೊಚ್ಚ ಹೊಸ ಜಾವಾ ಪೆರಾಕ್ ಬಾಬರ್ ಬೈಕ್ ಖರೀದಿಸಿದ್ದಾರೆ. ಕೆಲ ತಿಂಗಳ ಹಿಂದಷ್ಟೆ ರೇಂಜ್ ರೋವರ್ ಸ್ಪೋರ್ಟ್ ಐಷಾರಾಮಿ ಕಾರು ಖರೀದಿಸಿದ್ದ ಗಾಯಕ, ಇದೀಗ ತಮ್ಮ ಹಳೇ ನೆನಪುಗಳು ಈ ಬೈಕ್ ಮೂಲಕ ಮರುಕಳಿಸಿದೆ ಎಂದಿದ್ದಾರೆ. ಇದರ ಜೊತೆಗೆ ತಮ್ಮ ಬೈಕ್ ಪಯಣ ಆರಂಭಿಕ ದಿನಗಳನ್ನು ಕೈಲಾಶ್ ಖೇರ್ ನೆನೆಪಿಸಿಕೊಂಡಿದ್ದಾರೆ.

ಕೈಲಾಶ್ ಖೇರ್ ತಮ್ಮ ಹೊಸ ಬೈಕ್ ಕುರಿತ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಲಾಲಾ ನೀನು ಮೋಟಾರ್‌ಸೈಕಲ್ ಮೆಕಾನಿಕ್ ಆಗಿದ್ದೀಯಾ? ಎಂದು ನನ್ನ ತಾಯಿ ಯಾವತ್ತೂ ಕೇಳುತ್ತಿದ್ದರು. ನಾವಾಗ ಹೌದು ಎಂದು ಉತ್ತರಿಸುತ್ತಿದ್ದೇವು. ನಾನು ಯೆಜ್ಡಿಯಿಂದ ಬೈಕ್ ಪಯಣ ಆರಂಭಿಸಿದ್ದೆ. ಬಳಿಕ ಈ ಮೋಟಾರ್‌ಸೈಕಲ್ ನಮ್ಮ ಜೀವನದ ಭಾಗವೇ ಆಗಿತ್ತು. ಇದೀಗ ಅವಶ್ಯಕತೆ ಜೊತೆಗೆ ಸ್ಟೈಲೀಶ್ ಜಾವಾ ಮೋಟಾರ್‌ಸೈಕಲ್ ಬಾಬಾರ್ ಬೈಕ್ ಮನೆಗೆ ಬಂದಿದೆ. ಈ ಬೈಕ್ ಅನೇಕ ನೆನಪುಗಳನ್ನು ಮರುಕಳಿಸಿದೆ.  ಈಗ ಕೈಲಾಶ್ ಖೇರ್ ಸ್ಟುಡಿಯೋಗೋ ಇದರಲ್ಲೇ ಸವಾರಿ ಎಂದು ಖೇರ್ ಹೇಳಿದ್ದಾರೆ.  

 

6 ಕೋಟಿ ರೂ ದುಬಾರಿ ಕಾರು ಖರೀದಿಸಿದ ಕಾರ್ತಿಕ್ ಆರ್ಯನ್, ಮುದ್ದಿನ ನಾಯಿ ಜೊತೆ ಫೋಸ್!

ಜಾವಾ ಡೀಲರ್‌ ಬಳಿ ತೆರಳಿ ಬೈಕ್ ಡೆಲಿವರಿ ಪಡೆದ ಕೈಲಾಸ್ ಖೇರ್‌ಗೆ ಬೈಕ್ ಕಿ, ಜಾವಾ ಹೆಲ್ಮೆಟ್ ಸೇರಿದಂತೆ ಕೆಲ ಉಡುಗೊರೆಗಳನ್ನು ನೀಡಲಾಗಿದೆ. ಇದೀಗ ಖೇರ್ ಮನೆಯಲ್ಲಿ ಹೊಸ ಅತಿಥಿಗಳ ಸಮಾಗಮವಾಗಿದೆ. ಬೈಕ್ ಪಡೆದ ಕೈಲಾಶ್ ಖೇರ್ ಒಂದು ಸುತ್ತು ಬೈಕ್‌ನಲ್ಲಿ ರೈಡ್ ಮಾಡಿ ಸಂಭ್ರಮಿಸಿದ್ದಾರೆ. ಜಾವಾಗೆ ಯಾವತ್ತೂ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ. ಈ ಹೊಸ ಬೈಕ್ ನನ್ನ ಬೈಕ್ ಪ್ಯಾಶನ್ ಮತ್ತಷ್ಟು ಹೆಚ್ಚಿಸಿದೆ ಎಂದು ಖೇರ್ ಹೇಳಿದ್ದಾರೆ.

 

 

ಜಾನಾ ಪೆರಾಕ್ ಬೈಕ್ ಫ್ಯಾಕ್ಟರಿ ಕಸ್ಟಮ್ ಬಾಬರ್ ಬೈಕ್ ಆಗಿದೆ. ಬಾಬರ್ ಸೆಗ್ಮೆಂಟ್‌ನಲ್ಲಿ ಸದ್ಯ ಅತೀ ಹೆಚ್ಚು ಮಾರಾಟವಾಗುತ್ತಿರುವ ಹಾಗೂ ಅತ್ಯುತ್ತಮ ಬೈಕ್ ಎಂದೇ ಗುರುತಿಸಿಕೊಂಡಿದೆ. ಜಾವಾ ಪರೇಕ್ 334cc ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ ಫ್ಯೂಯೆಲ್ ಇಂಜೆಕ್ಟೆಡ್, ಲಿಕ್ವಿಡ್ ಕೂಲ್ಡ್ ಎಂಜಿನ್ 30.64 Ps ಪವರ್ ಹಾಗೂ 32.74 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 6 ಸ್ಪೀಡ್ ಗೇರ್‌ಬಾಕ್ಸ್ ಹೊಂದಿದೆ. ಡ್ಯುಯೆಲ್ ಚಾನೆಲ್ ಎಬಿಎಸ್ ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ. ನೂತನ ಪೆರಾಕ್ ಬೈಕ್ ಬೆಲೆ 2.13 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)

ಪ್ರೋರ್ಶ್, ರೇಂಜ್ ರೋವರ್: ಗದರ್ 2 ಹೀರೋ ಸನ್ನಿ ಡಿಯೋಲ್ ಬಳಿ ಇದೆ ಕೋಟಿ ಕೋಟಿ ಮೌಲ್ಯದ ಕಾರು!
 
 

Follow Us:
Download App:
  • android
  • ios