ಕುಡಿದ ಮತ್ತಿನಲ್ಲಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಿರುತೆರೆ ನಟಿ ಲಕ್ಷ್ಮಿ ಸಿದ್ಧಯ್ಯ!
ಮೂರು ತಿಂಗಳ ಹಿಂದೆ ನಡೆದ ಅಪಘಾತ. ಕುಡಿದು ಕಾರು ಓಡಿಸುವುದು, ಅವಾಚ್ಯ ಶಬ್ದಗಳನ್ನು ಬಳಸಿದ್ದು ನಿಜವೇ?
ಕನ್ನಡ ಜನಪ್ರಿಯ ಕಿರುತೆರೆ ನಟಿ ಲಕ್ಷ್ಮಿ ಸಿದ್ದಯ್ಯ ಕಾರು ಮತ್ತು ಮಾಧುರಿ ಹುಡುಗಿಯ ದ್ವಿಚಕ್ರವಾಹ ಅಪಘಾತ ಮೂರು ತಿಂಗಳ ನಂತರ ಬೆಳಕಿಗೆ ಬಂದಿದೆ.
ತಮ್ಮ ಸ್ಕೂಟರ್‌ಗೆ ಕಾರು ಡಿಕ್ಕಿ ಹೊಡೆದಿದ್ದನ್ನು ಪ್ರಶ್ನಿಸಿದ್ದಕ್ಕೆ ಹುಡುಗರನ್ನು ಕರೆತಂದು ದೌರ್ಜನ್ಯ ನಡೆಸಿದ್ದಾರೆ ಎಂದು ಕಿರುತೆರೆಯ ಖ್ಯಾತ ನಟಿ ಲಕ್ಷ್ಮೀ ಸಿದ್ದಯ್ಯ ವಿರುದ್ಧ ಇಬ್ಬರು ಯುವತಿಯರು ಗಂಭೀರ ಆರೋಪ ಮಾಡಿದ್ದಾರೆ.
ಅಲ್ಲದೆ ಲಕ್ಷ್ಮಿ ಸಿದ್ಧಯ್ಯ ಕುಡಿದು ಕಾರು ಚಲಾಯಿಸುತ್ತಿದ್ದರು. ಪ್ರಶ್ನೆ ಮಾಡಿದಾಗ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಹಾಗೂ ಫೋನ್ ಕಿತ್ತುಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎಂದು ಮಾಧುರಿ ಹೇಳಿದ್ದಾರೆ.
ಅಲ್ಲದೆ ಒಂದು ಗುಂಪಿನ ಹುಡುಗರನ್ನು ಕರೆಸಿ ಹಲ್ಲೆ ಮಾಡಿದ್ದಾರೆ. ದೂರು ಪಡೆಯಲು ನಿರಾಕರಿಸಿದ್ದಾರೆ ಹೀಗಾಗಿ ಕಾನೂನು ಮೊರೆ ಹೋಗಿರುವುದಾಗಿ ಯುವತಿಯರು ಹೇಳಿದ್ದಾರೆ.
ನಾನು ಕಾರು ಓಡಿಸುವಾಗ ದ್ವಿಚಕ್ರ ವಾಹನಕ್ಕೆ ಗುದ್ದಿದ್ದು ನಾನಲ್ಲ ಟ್ರಾಫಿಕ್ ತುಂಬಾನೇ ಇದ್ದ ಕಾರಣ ಸ್ಲೋ ಹೋಗುತ್ತಿದ್ದೆ ಅವರೇ ಬಂದು ಗುದ್ದಿದ್ದು ಎಂದು ಲಕ್ಷ್ಮಿ ಸ್ಪಷ್ಟನೆ ನೀಡಿದ್ದಾರೆ.
ಲ್ಲದೆ ನಾನು ಅಂದು ರಾತ್ರಿ ಶೂಟಿಂಗ್ ಹೋಗುತ್ತಿದ್ದೆ ಹೀಗಿರುವಾಗ ಹೇಗೆ ದುಡಿದು ಕಾರು ಚಲಾಯಿಸಲಿ? ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಲಕ್ಷ್ಮಿ ಹೇಳಿದ್ದಾರೆ.