21 ವರ್ಷದ ಬುಡಕಟ್ಟು ಜನಾಂಗದ ರಾಬಿನ್ ಮಿನ್ಜು ಅವರನ್ನು ಕಳೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಬರೋಬ್ಬರಿ 3.60 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಇದೀಗ ರಾಬಿನ್ ಮಿನ್ಜ್ ಸೂಪರ್ ಬೈಕ್ ಚಲಾಯಿಸುವಾಗ ಅಪಫಾತಕ್ಕೊಳಗಾಗಿದ್ದಾರೆ ಎಂದು ಅವರ ತಂದೆ ಖಚಿತಪಡಿಸಿದ್ದಾರೆ.
ರಾಂಚಿ(ಮಾ.03): 2024ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಹೀಗಿರುವಾಗಲೇ ಗುಜರಾತ್ ಟೈಟಾನ್ಸ್ ತಂಡಕ್ಕೆ ಪದೇ ಪದೇ ಪೆಟ್ಟು ಬೀಳುತ್ತಿದೆ. ಮೊದಲಿಗೆ ನಾಯಕ ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್ ತಂಡವನ್ನು ತೊರೆದು ಮುಂಬೈ ಇಂಡಿಯನ್ಸ್ ತಂಡವನ್ನು ಕೂಡಿಕೊಂಡಿದ್ದರು. ಇದರ ಬೆನ್ನಲ್ಲೇ ತಂಡದ ಪ್ರಮುಖ ವೇಗಿ ಮೊಹಮ್ಮದ್ ಶಮಿ ಗಾಯದ ಸಮಸ್ಯೆಯಿಂದ ಸಂಪೂರ್ಣ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಈ ಶಾಕ್‌ನಿಂದ ಹೊರಬರುವ ಮುನ್ನವೇ ಗುಜರಾತ್‌ಗೆ ಮತ್ತೊಂದು ಶಾಕ್ ಎದುರಾಗಿದ್ದು, ಪ್ರತಿಭಾನ್ವಿತ ಕ್ರಿಕೆಟಿಗ ರಾಬಿನ್ ಮಿನ್ಜು ಗಂಭೀರವಾಗಿ ಗಾಯಗೊಂಡಿದ್ದಾರೆ.
21 ವರ್ಷದ ಬುಡಕಟ್ಟು ಜನಾಂಗದ ರಾಬಿನ್ ಮಿನ್ಜು ಅವರನ್ನು ಕಳೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಬರೋಬ್ಬರಿ 3.60 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಇದೀಗ ರಾಬಿನ್ ಮಿನ್ಜ್ ಸೂಪರ್ ಬೈಕ್ ಚಲಾಯಿಸುವಾಗ ಅಪಫಾತಕ್ಕೊಳಗಾಗಿದ್ದಾರೆ ಎಂದು ಅವರ ತಂದೆ ಖಚಿತಪಡಿಸಿದ್ದಾರೆ.
IPL 2024: ಕಲರ್ ಫುಲ್ ಲೀಗ್‌ಗೆ ಇಂಜುರಿ ಕಾಟ..! ಈಗಾಗಲೇ ಮೂವರು ಟೂರ್ನಿಯಿಂದ ಔಟ್
ವರದಿಗಳ ರಾಬಿನ್ ಮಿನ್ಜು ಕವಾಸಕಿ ಸೂಪರ್ ಬೈಕ್ ಓಡಿಸುತ್ತಿದ್ದರು. ಈ ಸಂದರ್ಭದಲ್ಲಿ ಮತ್ತೊಂದು ಬೈಕ್‌ಗೆ ರಾಬಿನ್ ಮಿನ್ಜು ಅವರ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ. ಈ ಕುರಿತಂತೆ News18 ವಾಹಿನಿ ಜತೆ ಮಾತನಾಡಿರುವ ರಾಬಿನ್ ಮಿನ್ಜು ಅವರ ತಂದೆ ಫ್ರಾನ್ಸಿಸ್ ಮಿನ್ಜು, "ರಾಬಿನ್ ಮಿನ್ಜು ಅವರ ಬೈಕ್ ನಿಯಂತ್ರಣ ತಪ್ಪಿ ಮತ್ತೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಸದ್ಯದ ಮಟ್ಟಿಗೆ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಸದ್ಯ ಅವರು ವೈದ್ಯರ ನಿಗಾದಲ್ಲಿದ್ದಾರೆ" ಎಂದು ತಿಳಿಸಿದ್ದಾರೆ.
ಇಲ್ಲಿದೆ ನೋಡಿ ಆ ವಿಡಿಯೋ
ಮಾಧ್ಯಮಗಳ ವರದಿಯ ಪ್ರಕಾರ, ರಾಬಿನ್ ಮಿನ್ಜು ಅವರು ಓಡಿಸುತ್ತಿದ್ದ ಬೈಕ್‌ನ ಮುಂದಿನ ಅರ್ಧಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಎಡಗೈ ಸ್ಪೋಟಕ ಬ್ಯಾಟರ್ ರಾಬಿನ್ ಮಿನ್ಜು ಅವರ ಎಡಗಾಲಿಗೆ ತರಚಿದ ಗಾಯವಾಗಿದೆ ಎಂದು ವರದಿಯಾಗಿದೆ.
BJP ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಯುವಿ ಸ್ಪರ್ಧೆ..? ವಿಶ್ವಕಪ್ ಹೀರೋ ಹೇಳಿದ್ದೇನು?
ರಾಬಿನ್ ಮಿನ್ಜು ಅವರ ತಂದೆ ಓರ್ವ ನಿವೃತ್ತ ಆರ್ಮಿ ಸಿಬ್ಬಂದಿಯಾಗಿದ್ದಾರೆ. ಸದ್ಯ ರಾಂಚಿಯಲ್ಲಿರುವ ಬಿರ್ಸಾ ಮುಂಡ ಏರ್‌ಪೋರ್ಟ್‌ನಲ್ಲಿ ಗಾರ್ಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇನ್ನು 2023ರ ಐಪಿಎಲ್ ಆಟಗಾರರ ಹರಾಜಿನಲ್ಲಿ ರಾಬಿನ್ ಮಿನ್ಜು ಲಖನೌ ಸೂಪರ್ ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಟ್ರಯಲ್ಸ್‌ಗೆ ಕರೆದಿದ್ದವು. ಆದರೆ ಆಟಗಾರರ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದರು. ಆದರೆ ಕಳೆದ ಡಿಸೆಂಬರ್ 19ರಂದು ದುಬೈನಲ್ಲಿ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ರಾಬಿನ್ ಮಿನ್ಜು ಅವರನ್ನು ಖರೀದಿಸಲು ಹಲವು ಫ್ರಾಂಚೈಸಿಗಳು ಪೈಪೋಟಿ ನಡೆಸಿದ್ದವು. ಅಂತಿಮವಾಗಿ 3.60 ಕೋಟಿ ರುಪಾಯಿಗೆ ಗುಜರಾತ್ ಟೈಟಾನ್ಸ್ ಪಾಲಾದರು.
ರಾಂಚಿ ಟೆಸ್ಟ್ ಮುಗಿದ ಬಳಿಕ ಮಿನ್ಜು ತಂದೆ ಭೇಟಿಯಾಗಿದ್ದ ಗಿಲ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 5 ವಿಕೆಟ್ ಜಯ ಸಾಧಿಸಿತ್ತು. ಈ ಪಂದ್ಯ ಮುಕ್ತಾಯದ ಬಳಿಕ ಏರ್‌ಪೋರ್ಟ್‌ಗೆ ಬಂದಾಗ ತಮ್ಮ ಗುಜರಾತ್ ಟೈಟಾನ್ಸ್ ತಂಡದ ರಾಬಿನ್ ಮಿನ್ಜು ಅವರ ತಂದೆಯನ್ನು ಶುಭ್‌ಮನ್ ಗಿಲ್ ಬಿರ್ಸಾ ಮುಂಡ ಏರ್‌ಪೋರ್ಟ್‌ನಲ್ಲಿ ಭೇಟಿ ಮಾತುಕತೆ ನಡೆಸಿದ್ದರು. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.
