ಬಿಸಿ ನೀರಿನ ಬುಗ್ಗೆಗಳ ಪಕ್ಕದಲ್ಲಿ ಶತಕೋಟಿ ವರ್ಷಗಳಿಂದ ಜೀವಿಸುತ್ತಿರುವ ಬ್ಯಾಕ್ಟೀರಿಯಾಗಳಿಂದ ರೂಪಗೊಂಡಿರುವ ಜೀವಂತ ಕಾಮನಬಿಲ್ಲು ಪ್ರವಾಸಿ ತಾಣದಲ್ಲಿ ಪ್ರವಾಸಿಗರು ಹುಚ್ಚಾಟ ಮೆರೆದಿದ್ದಾರೆ. ಈ ಇಲ್ಲಿ ಓಡಾಡಿದರೆ ಜೀವಕ್ಕೆ ಅಪಾಯ ಮಾತ್ರವಲ್ಲ, ಪ್ರಕೃತಿಯೂ ನಾಶ.

ಕೆಲ ಪ್ರಕೃತಿ ವಿಸ್ಮಯಗಳನ್ನು ರಕ್ಷಿಸಲಾಗಿದೆ. ಹಲವೆಡೆ ನಿರ್ಬಂಧಿತ ಪ್ರದೇಶಗಳಾಗಿದೆ. ಆದರೆ ಸೂಚನೆ ನಿರ್ಲಕ್ಷಿಸಿ ಪ್ರವಾಸಿಗರು ಹುಚ್ಚಾಟ ಮೆರೆಯುತ್ತಾರೆ. ಹೀಗೆ ಜೀವಂತ ಕಾಮನ ಬಿಲ್ಲು ಪ್ರದೇಶದಲ್ಲಿ ಪ್ರವಾಸಿಗರು ಓಡಾಡಿದ್ದಾರೆ. ನಿರ್ಬಂಧಿತ ಪ್ರದೇಶಕ್ಕೆ ಯಾರಿಗೂ ಎಂಟ್ರಿ ಇಲ್ಲ. ಆದರೂ ಇಬ್ಬರು ಯುವತಿಯರು ಈ ಪ್ರದೇಶದಲ್ಲಿ ಓಡಾಡಿದ್ದಾರೆ. ಫೋಟೋ, ವಿಡಿಯೋ ಸೆರೆ ಹಿಡಿದಿದ್ದಾರೆ. ಅದೃಷ್ಟವಶಾತ್ ಈ ಯುವತಿಯರು ಜೀವಂತವಾಗಿ ಮರಳಿದ್ದಾರೆ. ಆದರೆ ಜೀವಂತ ಬ್ಯಾಕ್ಟೀರಿಯಾಗಳು ನಾಶವಾಗಿದೆ.

ಜೀವಂತ ಕಾಮನ ಬಿಲ್ಲು

ಯೆಲ್ಲೋ ಸ್ಟೋನ್ ನ್ಯಾಷನಲ್ ಪಾರ್ಕಾ( ಹಳದಿ ಕಲ್ಲಿನ ರಾಷ್ಟ್ರೀಯ ಉದ್ಯಾನವನ) ಅಮೆರಿಕದ ಅತ್ಯಂತಕ ಪ್ರಸಿದ್ಧ ಪ್ರವಾಸಿ ತಾಣ. ಇಲ್ಲಿನ 'ಗ್ರಾಂಡ್ ಪ್ರಿಸ್ಮಾಟಿಕ್ ಸ್ಪ್ರಿಂಗ್' ಪ್ರದೇಶ ವಿಶ್ವ ವಿಖ್ಯಾತವಾಗಿದೆ. ಇದು ಬಿಸಿ ನೀರಿನ ಬುಗ್ಗೆಯ ಪ್ರದೇಶ. ಆಕರ್ಷಕ ಕಾಮನ ಬಿಲ್ಲಿನ ನಡುವೆ ಇರುವ ಜಲ ಪ್ರದೇಶಗಳಲ್ಲಿನ ನೀರಿನ ತಾಪಮಾನ 80 ಡಿಗ್ರಿ ಸೆಲ್ಶಿಯಸ್‌ಗೂ ಅಧಿಕವಾಗಿದೆ. ನೀರಿಗೆ ಬಿದ್ದರೆ ಜೀವಂತವಾಗಿ ಬೆಂದು ಹೋಗುವುದು ಖಚಿತ. ಈ ಬಿಸಿ ನೀರಿನ ಬುಗ್ಗೆ 113 ಮೀಟರ್ ಅಗಲ ಹಾಗೂ 37 ಮೀಟರ್‌ಗಿಂತಲೂ ಹೆಚ್ಚು ಆಳ ಹೊಂದಿದೆ. ಈ ಬಿಸಿ ನೀರಿನ ಬುಗ್ಗೆ ಪಕ್ಕದಲ್ಲಿನ ಪ್ರದೇಶ ಜೀವಂತ ಕಾಮನ ಬಿಲ್ಲಿನ ಪ್ರದೇಶವಾಗಿದೆ. ಇದು ಬ್ಯಾಕ್ಟೀರಿಯಾಗಳಿಂದ ರಚನೆಗೊಂಡ ಜೀವಂತ ಕಾಮನಬಿಲ್ಲು. ಈ ಕಾಮನ ಬಿಲ್ಲಿನ ಮೇಲೆ ಇಬ್ಬರು ಯುವತಿಯರು ನಡೆದಿದ್ದಾರೆ.

ತೆಳುವಾದ ಪದರ ಒಡೆಯುವ ಸಾಧ್ಯತೆ

ಇಬ್ಬರು ಯುವತಿಯರು ಈ ಜೀವಂತ ಕಾಮನಬಿಲ್ಲಿನ ಮೇಲೆ ಓಡಾಡಿದ್ದಾರೆ. ಇದು ಅತ್ಯಂತ ಅಪಾಯಕಾರಿಯಾಗಿದೆ. ಕಾರಣ ಪ್ರವಾಸಿಗರು ನಡೆದಾಡಿದ ಈ ಭೂಮಿ ಕಲ್ಲು, ಮಣ್ಣು, ಮರಳಿನ ನೆಲವಲ್ಲ. ಇದು ಬಿಸಿ ನೀರಿನ ಬುಗ್ಗೆ ಮೇಲಿರುವ ಅಥ್ಯಂತ ತೆಳುವಾದ ಪದರವಾಗಿದೆ. ಈ ಪದರದ ಅಡಿಯಲ್ಲಿ ಪಕ್ಕದಲ್ಲಿರುವ ಬಿಸಿ ನೀರು ಇದೆ. ನಡೆದಾಡುವಾಗ ಈ ಪದರ ಒಡೆದು ಹೋಗುವ ಸಾಧ್ಯತೆ ಇದೆ. ಕಾರಣ ಇದು ಅತ್ಯಂತ ಸೂಕ್ಷ್ಮ ಬ್ಯಾಕ್ಟೀರಿಯಾಗಳಿಂದ ರೂಪುಗೊಂಡಿರುವ ಜೀವಂತ ಕಾಮನಬಿಲ್ಲು. ಹೀಗಾಗಿ ಈ ಪದರ ಒಡೆದರು ಯುವತಿಯರು ಬಿಸಿನೀರಿಗೆ ಬೀಳಲಿದ್ದಾರೆ. ಕೆಲವೇ ಕ್ಷಣಗಳಲ್ಲಿ ಜೀವ ಬೆಂದು ಹೋಗಲಿದೆ.

ಹಳದಿ, ಕಿತ್ತಳೆ, ಕೆಂಪು, ಹಳದಿ, ಕೆಂಪು ಬಣ್ಣಗಳ ಕಾಮನ ಬಿಲ್ಲು ಖನಿಜಗಳಿಂದ ರೂಪುಗೊಂಡಿಲ್ಲ. ಇದು ಬಿಸಿ ನೀರಿನ ಬುಗ್ಗೆ ಬಳಿ ಮಾತ್ರ ಜೀವಿಸುವ ಥರ್ಮೋಫೈಲ್ಸ್ ಎಂಬ ವಿಶೇಷ ಬ್ಯಾಕ್ಟೀರಿಯಾಗಳಿಂದ ರೂಪುಗೊಂಡಿದೆ. ಅತಿಯಾದ ತಾಪಮಾನದಲ್ಲಿ ಜೀವಿಸುವ ಬ್ಯಾಕ್ಟೀರಿಯಾಗಳು ತಮ್ಮ ರಕ್ಷಣೆಗಾಗಿ ಹೊರಸೂಸುವ ಬಣ್ಣ ಬಣ್ಣದ ವರ್ಣದ್ರವ್ಯಗಳಾಗಿದೆ. ಇದು ಶತಕೋಟಿ ವರ್ಷಗಳಿಂದ ಜೀವಿಸುತ್ತಿರುವ ಬ್ಯಾಕ್ಟಿರಿಯಾಗಳಿದೆ. ಹೀಗಾಗಿ ಈ ಪ್ರದೇಶ ಅತ್ಯಂತ ಸೂಕ್ಷ್ಮ ಪ್ರದೇಶಗಳಾಗಿದೆ. ಈ ಬ್ಯಾಕ್ಟೀರಿಯಾ ಮೇಲೆ ಓಡಾಡಿದರೆ ನಾಶವಾಗುತ್ತದೆ. ಒಂದು ಹೆಜ್ಜೆಯಿಂದ ದಶಕಗಳ ಕಾಲದ ಪ್ರಕೃತಿ ನಾಶವಾಗಲಿದೆ. ಈ ಜೀವಂತ ಸೌಂದರ್ಯ ಖನಿಗಳ ಮೇಲೆ ಪ್ರವಾಸಿಗರು ಓಡಾಡಿ ಪ್ರಕೃತಿ ನಾಶ ಮಾಡಿದ್ದಾರೆ. ಇದೀಗ ಪ್ರವಾಸಿಗರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.

Scroll to load tweet…