ಚಂದ್ರನ ಮೇಲಿನಿಂದ ಸೂರ್ಯ ಉದಯ ಹೇಗೆ ಕಾಣುತ್ತೆ ಗೊತ್ತಾ? ಇತ್ತೀಚೆಗೆ ನಾಸಾ ಕಳುಹಿಸಿದ ಬ್ಲೂ ಘೋಸ್ಟ್ ನೌಕೆ ಅದ್ಭುತ ದೃಶ್ಯ ಸೆರೆ ಹಿಡಿದಿದೆ. ಭೂಮಿ ಮೇಲಿನಿಂದ ಎಲ್ಲರೂ ಸೂರ್ಯೋದಯ ನೋಡಿರುತ್ತೇವೆ, ಆದರೆ ಚಂದ್ರನ ಮೇಲಿನಿಂದ ಕಾಣುವ ಸೂರ್ಯೋದ ದೃಶ್ಯ ಇಲ್ಲಿದೆ. 

ನಾಸಾ(ಮಾ.04) ಎಲ್ಲರೂ ಸೂರ್ಯೋದನ ನೋಡಿದ್ದೇವೆ. ಹಲವರು ಶಿಖರ ಮೇಲೆ, ಅದ್ಭುತ ತಾಣಗಳಲ್ಲಿ ಸೂರ್ಯೋದವನ್ನು ಆಸ್ವಾದಿಸಿದ್ದಾರೆ. ಸೂರ್ಯೋದ ನೋಡಲು ಟ್ರೆಕ್ಕಿಂಗ್ ಮಾಡಿ ನಿಟ್ಟುಸಿರು ಬಿಟ್ಟವರು ಇದ್ದಾರೆ. ಇವೆಲ್ಲವೂ ಭೂಮಿ ಮೇಲಿನಿಂದ ನೋಡಿದ ಸೂರ್ಯ ಉದಯ. ಆದರೆ ಚಂದ್ರನ ಮೇಲಿನಿಂದ ಸೂರ್ಯನ ಉದಯ ಹೇಗೆ ಕಾಣುತ್ತೆ ಗೊತ್ತಾ? ಈ ಅದ್ಬುತ ದೃಶ್ಯವನ್ನು ನಾಸಾ ಕಳುಹಿಸ ಬ್ಲೂ ಘೋಸ್ಟ್ ಲ್ಯಾಂಡರ್ ಕಳುಹಿಸಿದೆ. ಈ ಚಿತ್ರ ಹಲವರ ಕುತೂಹಲ ಹೆಚ್ಚಿಸಲಿದೆ. ಇಷ್ಟೇ ಅಲ್ಲ ಬಾಹ್ಯಾಕಾಶ ಕುರಿತು ಹಲವರಿಗೆ ಇರುವ ಗೊಂದಲವನ್ನು ನಿವಾರಿಸಲಿದೆ.

ನಾಸಾ ಇತ್ತೀಚೆಗೆ ಕಳುಹಿಸಿದ ಬ್ಲೂ ಘೋಸ್ಟ್ ನೌಕೆ ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡ್ ಆಗಿದೆ. ಈ ಲ್ಯಾಂಡರ್ ಇದೀಗ ಚಂದ್ರನ ಮೇಲಿನಿಂದ ಸೂರ್ಯನ ಚಿತ್ರ ಸೆರಿ ಹಿಡಿದೆ. ಈ ಚಿತ್ರದಲ್ಲಿ ಕೆಲ ವಿಶೇಷತೆಗಳಿವೆ. ಒಂದು ಸೂರ್ಯೋದ ಹೇಗಿದೆ ಅನ್ನೋದು ಬಹಿರಂಗವಾದರೆ, ಮತ್ತೊಂದೆಡೆ ಚಂದ್ರನ ಮೇಲ್ಮೈ ಕುರಿತು ಸ್ಪಷ್ಟ ಚಿತ್ರವಿದೆ. ನಾಸಾ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಈ ಚಿತ್ರವನ್ನು ಪೋಸ್ಟ್ ಮಾಡಿದೆ.

ಭೂಮಿಗೆ ಮರಳುತ್ತಿದ್ದಾರೆ ಸುನಿತಾ ವಿಲಿಯಮ್ಸ್, ದಿನಾಂಕ, ಲ್ಯಾಂಡಿಂಗ್ ಮಾಹಿತಿ ಬಹಿರಂಗ

ಬ್ಲೂಘೋಸ್ಟ್ ಲ್ಯಾಂಡರ್ ಚಂದ್ರನ ಮೇಲಿನಿಂದ ಮೊದಲ ಸೂರ್ಯೋದ ಚಿತ್ರವನ್ನು ಸೆರೆ ಹಿಡಿದಿದೆ. ಚಂದ್ರನ ಮೇಲೆ ಬ್ಲೂಘೋಸ್ಟ್ ಲ್ಯಾಂಡರ್ ಕೆಲಸ ಆರಂಭಿಸಿದೆ. ಮಂದಿನ 2 ವಾರ ಲ್ಯಾಂಡರ್ ತನ್ನ ಕೆಲಸ ಪೂರ್ಣಗೊಳಿಸಲಿದೆ. ಇದರ ನಡುವೆ ಅದ್ಭುತ ದೃಶ್ಯಗಳನ್ನು ಸೆರೆ ಹಿಡಿದು ಭೂಮಿಗೆ ರವಾನಿಸಲಿದೆ ಎಂದು ನಾಸಾ ಹೇಳಿದೆ. 

Scroll to load tweet…

ಜನವರಿ 15 ರಂದು ನಾಸಾ ಸಹಯೋಗದೊಂದಿಗೆ ಖಾಸಗಿ ಬಾಹ್ಯಾಕಾಶ ಉಡಾವಣಾ ಕಂಪನಿಯಾದ ಸ್ಪೇಸ್ ಎಕ್ಸ್ ಉಡಾಯಿಸಿದ ಅವಳಿ ಚಂದ್ರ ಪರಿಶೋಧನಾ ಮಾನವರಹಿತ ನೌಕೆಗಳಲ್ಲಿ ಬ್ಲೂ ಘೋಸ್ಟ್ ಒಂದಾಗಿದೆ. ಫೈರ್‌ಫ್ಲೈ ಏರೋಸ್ಪೇಸ್ ಕಂಪನಿಯು ಬ್ಲೂ ಘೋಸ್ಟ್ ಲೂನಾರ್ ಲ್ಯಾಂಡರ್‌ನ ತಯಾರಕರು ಈ ಲ್ಯಾಂಡರ್ ಅಭಿವೃದ್ಧಿಪಡಿಸಿದ್ದಾರೆ. ಇದು ಚಂದ್ರನ ಈಶಾನ್ಯದಲ್ಲಿ ಲ್ಯಾಂಡ್ ಆಗಿದೆ. ಚಂದ್ರನ ಮೇಲೆ ಇಳಿಯಲು ಒಟ್ಟು 45 ದಿನಗಳನ್ನು ಈ ಲ್ಯಾಂಡರ್ ತೆಗೆದುಕೊಂಡಿತ್ತು. ಬ್ಲೂ ಘೋಸ್ಟ್ ಸಣ್ಣ ಪ್ರಮಾಣದಲ್ಲಿ ಚಂದ್ರನಲ್ಲಿ ರಂದ್ರ ಮಾಡಿ ಅದರ ಮಾದರಿಯ ಫಲಿತಾಂಶವನ್ನು ಭೂಮಿಗೆ ರವಾನಿಸಲಿದೆ.

ಇತ್ತೀಚೆಗೆ ಇದೇ ಬ್ಲೂ ಘೋಸ್ಟ್ ಭೂಮಿಯ ಸುಂದರ ವಿಡಿಯೋವನ್ನು ಕಳುಹಿಸಿತ್ತು. ದುಂಡಗಿರುವ ಭೂಮಿಯ ವಿಡಿಯೋ ಭಾರಿ ಕುತೂಹಲಕ್ಕೆ ಕಾರಣವಾಗಿತ್ತು.ಬ್ಲೂ ಘೋಸ್ಟ್ ಚಂದ್ರನತ್ತ ಪಯಣದಲ್ಲಿರುವಾಗ ಈ ದೃಶ್ಯ ಸೆರೆ ಹಿಡಿತ್ತು. ಭೂಮಿಯಿಂದ ದೂರದಲ್ಲಿ ಸಾಗುವಾಗ ಈ ದೃಶ್ಯವನ್ನು ಬ್ಲೂ ಘೋಸ್ಟ್ ನೌಕೆ ಸೆರೆಹಿಡಿದಿದೆ. ಭೂಮಿ ನೀಲಿ ಗೋಳ ಎಂದು ಬ್ಲೂ ಘೋಸ್ಟ್ ಸೆರೆಹಿಡಿದ ಈ ವಿಡಿಯೋ ಸಾರಿ ಹೇಳುತ್ತದೆ. ನಮ್ಮ ವಾಸಸ್ಥಾನದ ಅದ್ಭುತ ದೃಶ್ಯಗಳನ್ನು ಸೆರೆಹಿಡಿಯುವುದು ಮುಂದುವರಿಯುತ್ತದೆ ಎಂದು ಫೈರ್‌ಫ್ಲೈ ಏರೋಸ್ಪೇಸ್ ಟ್ವೀಟ್ ಮಾಡಿತ್ತು.


ಆಳ ಸಮುದ್ರದಲ್ಲಿ ಮೀನುಗಾರರ ಬಲೆಗೆ ಸಿಕ್ಕ ವಿಚಿತ್ರ ಜೀವಿ, ಇದು ಏಲಿಯನ್ ಇರಬಹುದೇ?