ಆಳ ಸಮುದ್ರ ಮೀನುಗಾರಿಕೆಯಲ್ಲಿ ಮೀನುಗಾರರ ಬಲೆಗೆ ವಿಚಿತ್ರ ಜೀವಿಯೊಂದು ಸಿಕ್ಕಿದೆ. ಬಲೆಯಲ್ಲಿ ಮೀನುಗಳ ನಡುವೆ ಇದ್ದ ಈ ಜೀವಿ ಕಂಡು ಮೀನುಗಾರರು ಅಚ್ಚರಿಗೊಂಡಿದ್ದಾರೆ. ಇದು ಏಲಿಯನ್ ಇರಬಹುದೇ?

ಮಾಸ್ಕೋ(ಫೆ.27) ಏಲಿಯನ್ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದಕ್ಕೆ ಪೂರಕ ಬೆಳವಣಿಗೆಗಳು ನಡೆಯುತ್ತಿದೆ. ಏಲಿಯನ್ ರೂಪದಲ್ಲಿ ವಿಚಿತ್ರ ಜೀವಿ ಗೋಚರ, ಏಲಿಯನ್ ವಿಮಾನ ಪತ್ತೆ ಸೇರಿದಂತೆ ಹಲವು ವಿಚಿತ್ರ ಘಟನೆಗಳು ಸಂಭವಿಸಿದೆ. ಇದರ ನಡುವೆ ಇದೀಗ ಮೀನುಗಾರರಿಗೆ ವಿಚಿತ್ರ ಜೀವಿಯೊಂದು ಸಿಕ್ಕಿದೆ. ಆಳ ಸಮುದ್ರ ಮೀನುಗಾರಿಕೆ ವೇಳೆ ಈ ಜೀವಿ ಪತ್ತೆಯಾಗಿದೆ. ಮೀನುಗಾರರ ಬಲೆಗೆ ಸಿಲುಕಿದ ಈ ವಿಚಿತ್ರ ಜೀವಿ ಏಲಿಯನ್ ಆಗಿರಬಹುದೇ? ಅನ್ನೋ ಅನುಮಾನ, ಕುತೂಹಲ ಹೆಚ್ಚಾಗುತ್ತಿದೆ. ಈ ವಿಚಿತ್ರ ಜೀವಿ ನೋಡಿ ಮೀನುಗಾರರು ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ. ಬಳಿಕ ಈ ಜೀವಿಯ ವಿಡಿಯೋ ತೆಗೆದಿದ್ದಾರೆ. ಈ ವಿಡಿಯೋ ಇದೀಗ ಹಲವರ ಅನುಮಾನಗಳನ್ನು ಹೆಚ್ಚಿಸಿದೆ.

ರಷ್ಯಾ ಮೀನುಗಾರರಿಗೆ ಈ ವಿಚಿತ್ರ ಜೀವಿ ಸಿಕ್ಕಿದೆ. ಗರ್ಲ್ ವಲಯದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ರಷ್ಯಾ ಮೀನುಗಾರರು ಈ ವಿಚಿತ್ರ ಜೀವಿಯಿಂದ ಒಂದು ಕ್ಷಣ ಗಾಬರಿಯಾಗಿದ್ದಾರೆ. ಇಷ್ಟು ವರ್ಷಗಳ ಇತಿಹಾಸದಲ್ಲಿ ಮೀನುಗಾರರು ಈ ರೀತಿಯ ವಿಚಿತ್ರ ಜೀವಿಯನ್ನು ಕಂಡಿಲ್ಲ. ಹಲವು ಬಾರಿ ಮೀನು, ಚಿಪ್ಪು ಸೇರಿದಂತೆ ಹಲವು ಪ್ರಭೇದಕ್ಕೆ ಸೇರಿದ ಹಲವು ಜಲಚರಗಳನ್ನು ಗಮನಿಸಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಏಲಿಯನ್ ರೂಪದ ಜೀವಿಯನ್ನು ಕಂಡು ಅಚ್ಚರಿಗೊಂಡಿದ್ದಾರೆ.

ಆಗಸದಲ್ಲಿ ಪತ್ತೆಯಾಯ್ತಾ ಆನ್ಯಗ್ರಹ ಜೀವಿ ವಿಮಾನ? ಅನುಮಾನ ಹೆಚ್ಚಿಸಿದ ಘಟನೆ ವಿಡಿಯೋ

ಒಂದು ಅಡೀ ಗಾತ್ರದ ಇದು ಏಲಿಯನ್ ತಲೆಯನ್ನು ಹೋಲುತ್ತಿದೆ. ತಲೆ, ಕಣ್ಣು, ಮೂಗು, ಬಾಯಿ ಎಲ್ಲವೂ ಚಾಲ್ತಿಯಲ್ಲಿರುವ ಏಲಿಯನ್ ರೀತಿಯಲ್ಲೇ ಇದೆ. ಆದರೆ ಕೈ ಕಾಲುಗಳು ಇಲ್ಲ, ದೇಹ ಮೀನಿನ ರೀತಿಯಲ್ಲೇ ಇದೆ. ರಷ್ಯಾ ಮೀನುಗಾರರು ಆಳ ಸಮುದ್ರದಲ್ಲಿ ಮೀನುಗಾರಿಗೆ ಮಾಡುತ್ತಿದ್ದ ತಮ್ಮ ಬಲೆಯಲ್ಲಿ ವಿಚಿತ್ರ ಜೀವಿ ಇರುವುದು ಪತ್ತೆ ಹಚ್ಚಿದ್ದಾರೆ. ನೀರಿನಲ್ಲಿ ಬೀಸಿದ ಬಲೆಯಲ್ಲಿ ಸಿಕ್ಕ ಮೀನುಗಳನ್ನು ತಮ್ಮ ಬೋಟಿಗೆ ವರ್ಗಾಯಿಸುವಾಗ ಈ ವಿಚಿತ್ರ ಜೀವಿ ಇತರ ಮೀನುಗಳ ನಡುವೆ ಪತ್ತೆಯಾಗಿದೆ.

ಆದರೆ ಬಲೆಗೆ ಸಿಕ್ಕ ಕೆಲ ಹೊತ್ತಲ್ಲೇ ವಿಲ ವಿಲ ಒದ್ದಾಡಿ ಈ ವಿಚಿತ್ರ ಜೀವಿ ಮೃತಪಟ್ಟಿದೆ. ವಿಚಿತ್ರ ಜೀವಿಯ ವಿಡಿಯೋವನ್ನು ಮೀನುಗಾರರು ಮಾಡಿದ್ದಾರೆ. ಈ ವಿಡಿಯೋ ಇದೀಗ ಕೋಲಾಹಲ ಸೃಷ್ಟಿಸಿದೆ. ಲಂಪ್‌ಫಿಶ ಜಾತಿಗೆ ಸೇರಿದ ಪ್ರಭೇದ ಇದು ಆಗಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಮೊದಲ ನೋಟಕ್ಕೆ ಏಲಿಯನ್ ರೀತಿಯಲ್ಲೇ ಕಾಣುತ್ತಿದೆ. 

View post on Instagram

ವಿಶ್ವದ ಹಲವು ಭಾಗದಲ್ಲಿ ಏಲಿಯನ್ ಕುರುಹುಗಳ ಪತ್ತೆಯಾಗಿರುವ ವರದಿ ಇದೆ. ಇತ್ತ ವಿಜ್ಞಾನಿಗಳು ಏಲಿಯನ್ ಇರುವಿಕೆ ಕುರಿತು ನಿರಂತರ ಅಧ್ಯಯನ ಮಾಡುತ್ತಲೇ ಇದ್ದಾರೆ. ಈ ಪೈಕಿ ಕೆಲವು ವರದಿಗಳು, ಏಲಿಯನ್ ಇರುವಿಕೆಯನ್ನು ಉಲ್ಲೇಖಿಸಿದೆ. ಇದಕ್ಕೆ ಕೆಲ ಉದಾಹರಣೆ ಹಾಗೂ ಕಾರಣಗಳನ್ನು ನೀಡಿದೆ. ಏಲಿಯನ್ ಬೇರೆ ಗ್ರಹದಲ್ಲಿದೆ ಅನ್ನೋದು ಒಂದು ವಾದವಾದರೆ, ಏಲಿಯನ್ ಮನುಷ್ಯರ ವೇಷದಲ್ಲಿ ಭೂಮಿಯಲ್ಲಿ ವಾಸಿಸುತ್ತಿದೆ ಅನ್ನೋದು ಮತ್ತೊಂದು ವಾದ. ಈ ವಾದದ ಮುಂದುವರಿದ ಭಾಗವಾಗಿ ಇದೀಗ ಏಲಿಯನ್ ಸಮುದ್ರದಲ್ಲಿ ಇತರ ಜಲಚರಗಳ ಜೊತೆಗೂ ವಾಸಿಸುತ್ತಿದೆ ಅನ್ನೋದು ಇದೀಗ ಸಮುದ್ರದಲ್ಲಿ ಸಿಕ್ಕ ವಿಚಿತ್ರ ಜೀವಿ ಆಗಿರಬಹುದು ಎಂದು ಹಲವರು ಕಮೆಂಟ್ ಮಾಡುತ್ತಿದ್ದಾರೆ.

ಈ ವಿಡಿಯೋಗೆ ಹಲವರು ಕಮೆಂಟ್ ಮಾಡಿದ್ದಾರೆ. ಇದು ಏಲಿಯನ್ ಎಂದಿದ್ದಾರೆ. ಮತ್ತೆ ಈ ಏಲಿಯನ್ ಬಲೆಗೆ ಬೀಳಿಸುವ ಸಾಹಸ ಮಾಡಬೇಡಿ. ಇತ್ತೆ ಇದೇ ಸ್ಥಳದಲ್ಲಿ ಮೀನು ಹಿಡಿಯುವ ಪ್ರಯತ್ನ ಮಾಡಬೇಡಿ. ನಿಮ್ಮ ಜೀವಕ್ಕೆ ಏಲಿಯನ್ ಅಪಾಯ ತಂದೊಡ್ಡುವ ಸಾಧ್ಯತೆ ಇದೆ ಎಂದು ಹಲವರು ಎಚ್ಚರಿಸಿದ್ದಾರೆ.

ಕೊನೆಗೂ ಏಲಿಯನ್ ಪ್ಲಾನೆಟ್ ಪತ್ತೆ ಹಚ್ಚಿದ ಭಾರತೀಯ ಸೈಂಟಿಸ್ಟ್, ಈ ಗ್ರಹ ಎಲ್ಲಿದೆ?