ಕಳೆದ 8 ತಿಂಗಳಿನಿಂದ ತಾಂತ್ರಿಕ ದೋಷದಿಂದ ಬಾಹ್ಯಾಕಾಶದಲ್ಲೇ ಉಳಿದುಕೊಂಡಿರುವ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಭೂಮಿಗೆ ಮರಳಲು ಸಜ್ಜಾಗಿದ್ದಾರೆ. ಇದೀಗ ನಾಸಾ ಮಹತ್ವದ ಘೋಷಣೆ ಮಾಡಿದೆ. ಸುನಿತಾ ವಿಲಿಯಮ್ಸ್ ಮರಳುತ್ತಿರುವ ದಿನಾಂಕ, ಲ್ಯಾಂಡಿಂಗ್, ಸಮಯ ಸೇರಿದಂತೆ ಹಲವು ಮಾಹಿತಿ ಬಹಿರಂಗವಾಗಿದೆ.

ವಾಶಿಂಗ್ಟನ್(ಮಾ.2) ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಕಳೆದ 9 ತಿಂಗಳಿನಿಂದ ಬಾಹ್ಯಾಕಾಶದಲ್ಲೇ ಉಳಿದುಕೊಂಡಿದ್ದಾರೆ. ನೌಕೆಯಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದ ಇಬ್ಬರು ಗನನಯಾತ್ರಿಗಳು ಬಾಹ್ಯಾಕಾಶದಲ್ಲೇ ಕಾಲಕಳೆಯುವಂತಾಗಿದೆ. ಇಬ್ಬರನ್ನು ಕರೆತರವು ನಾಸಾದ ಹಲವು ಪ್ರಯತ್ನಕ್ಕೆ ಆರಂಭದಲ್ಲೇ ಹಿನ್ನಡೆಯಾಗಿತ್ತು. ಕಳೆದ 8 ತಿಂಗಳಿನಿಂದ ಅನಿವಾರ್ಯವಾಗಿ ಬಾಹ್ಯಾಕಾಶದಲ್ಲಿ ಉಳಿದುಕೊಂಡಿರುವ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಭೂಮಿಗೆ ಮರಳವು ದಿನಾಂಕ ಖಚಚಿತವಾಗಿದೆ.ಈ ಕುರಿತು ನಾಸಾ ಅಧಿಕೃತವಾಗಿ ಘೋಷಣೆ ಮಾಡಿದೆ. 

Add Asianetnews Kannada as a Preferred SourcegooglePreferred

ಮಾರ್ಚ್ 12ರಂದು ಕ್ರ್ಯೂ 10 ಉಡಾವಣೆಯಾಗಲಿದೆ. ಈ ನೌಕೆಯಲ್ಲಿ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಮರಳುತ್ತಿದ್ದಾರೆ. ಅಂದರೆ ಮಾರ್ಚ್ 19 ರಂದು ಇಬ್ಬರು ಗಗನಯಾತ್ರಿಗಳು ಭೂಮಿಗೆ ಮರಳಲಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಸಿಹಿ ಸುದ್ದಿ ಬಂದಿದ್ದು, ಇದೀಗ ತಯಾರಿಗಳು ಆರಂಭಗೊಂಡಿದೆ. 

ಬಾಹ್ಯಾಕಾಶದಲ್ಲಿ 7 ತಿಂಗಳ ವಾಸ, ನಡೆಯೋದನ್ನೇ ಮರೆತುಹೋದ ಸುನೀತಾ ವಿಲಿಯಮ್ಸ್‌

ಬೋಯಿಂಗ್‌ನ ಸ್ಟಾರ್‌ಲೈನರ್ ನೌಕೆಯಲ್ಲಿ 2024 ಜೂನ್ 5 ರಂದು ಕೇವಲ 8 ದಿನಗಳ ಕಾರ್ಯಾಚರಣೆಗಾಗಿ ನಾಸಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದರು. ಆದರೆ ಸ್ಟಾರ್‌ಲೈನರ್ ನೌಕೆಯ ತಾಂತ್ರಿಕ ದೋಷದಿಂದಾಗಿ ವಾಪಸಾತಿ ಪ್ರಯಾಣವನ್ನು ಹಲವು ಬಾರಿ ಮುಂದೂಡಿದ್ದರಿಂದ ಸುನಿತಾ ಮತ್ತು ಬುಚ್ ಎಂಟು ತಿಂಗಳಿಂದ ISS ನಲ್ಲಿಯೇ ಇದ್ದಾರೆ. ಮಾರ್ಚ್ 19 ರಂದು ಸುದೀರ್ಘ ಕಾಯುವಿಕೆ ಮುಗಿದ ನಂತರ ಭೂಮಿಗೆ ಮರಳುವುದಾಗಿ ಬುಚ್ ಸಿಎನ್‌ಎನ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಇಬ್ಬರನ್ನೂ ಸುರಕ್ಷಿತವಾಗಿ ಭೂಮಿಗೆ ಕರೆತರುವ ಜವಾಬ್ದಾರಿಯನ್ನು ಸ್ಪೇಸ್ ಎಕ್ಸ್‌ನ ಡ್ರ್ಯಾಗನ್ ಕ್ಯಾಪ್ಸುಲ್ ಹೊತ್ತಿದೆ. ಇದಕ್ಕಾಗಿ ಕ್ರೂ-10 ಮಿಷನ್ ತಂಡದೊಂದಿಗೆ ಡ್ರ್ಯಾಗನ್ ಕ್ಯಾಪ್ಸುಲ್ ಅನ್ನು ಸ್ಪೇಸ್ ಎಕ್ಸ್ ಮಾರ್ಚ್ 12 ರಂದು ಉಡಾವಣೆ ಮಾಡಲಿದೆ.

ಆರು ತಿಂಗಳ ಹೊಸ ಕಾರ್ಯಾಚರಣೆಗಾಗಿ ನಾಸಾ ಕ್ರೂ-10 ಮಿಷನ್‌ನಲ್ಲಿ ನಾಲ್ವರು ಗಗನಯಾತ್ರಿಗಳನ್ನು ಕಳುಹಿಸುತ್ತಿದೆ. ನಾಸಾದ ಆನ್ ಮೆಕ್ಲೈನ್, ನಿಕೋಲ್ ಏಯರ್ಸ್, ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜೆನ್ಸಿಯ ತಕುಯಾ ಒನಿಷಿ ಮತ್ತು ರೋಸ್ಕೋಸ್ಮೊಸ್‌ನ ಕಿರಿಲ್ ಪೆರ್ಸೊವ್ ಕ್ರೂ-10 ಮಿಷನ್‌ನಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಲಿದ್ದಾರೆ. ಇವರು ನಿಲ್ದಾಣಕ್ಕೆ ಬಂದ ನಂತರ ಒಂದು ವಾರಗಳ ಕಾಲ ಜವಾಬ್ದಾರಿಗಳನ್ನು ಹಸ್ತಾಂತರಿಸುವ ಸಮಯವಿರುತ್ತದೆ. ಪ್ರಸ್ತುತ ಸ್ಪೇಸ್ ಸ್ಟೇಷನ್‌ನ ಕಮಾಂಡರ್ ಆಗಿರುವ ಸುನಿತಾ ವಿಲಿಯಮ್ಸ್ ಕ್ರೂ-10 ಮಿಷನ್‌ನಲ್ಲಿ ಬರುವ ಹೊಸ ಕಮಾಂಡರ್‌ಗೆ ISS ನ ಜವಾಬ್ದಾರಿಯನ್ನು ಹಸ್ತಾಂತರಿಸುತ್ತಾರೆ. ಇದರ ನಂತರ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಡ್ರ್ಯಾಗನ್ ನೌಕೆಯಲ್ಲಿ ಮಾರ್ಚ್ 19 ರಂದು ಭೂಮಿಗೆ ಅನ್‌ಡಾಕ್ ಮಾಡುತ್ತಾರೆ.

ಇಂದು ಜೀವನದ ಅತ್ಯಂತ ಕಠಿಣ ಬಾಹ್ಯಾಕಾಶ ನಡಿಗೆಯಲ್ಲಿ ಭಾಗಿಯಾಗಲಿದ್ದಾರೆ ಸುನೀತಾ ವಿಲಿಯಮ್ಸ್‌!