ಸೊಳ್ಳೆಗಳು ಕೆಲವರನ್ನು ಮಾತ್ರ ಆಯ್ದು ಕಚ್ಚಲು ವೈಜ್ಞಾನಿಕ ಕಾರಣವಿದೆ. 'O' ರಕ್ತದ ಗುಂಪಿನ ಜನರನ್ನು ಸೊಳ್ಳೆಗಳು ಇತರರಿಗಿಂತ ಹೆಚ್ಚು ಇಷ್ಟಪಡುತ್ತವೆ, ಅದ್ಯಾಕೆ ಹಾಗೆ? ಮುಂದಿನ ಸ್ಥಾನದಲ್ಲಿ ಇರೋರು ಯಾರು? ಇಲ್ಲಿದೆ ಸಕತ್​ ಇಂಟರೆಸ್ಟಿಂಗ್​ ವಿಷ್ಯ

ನೀವು ಎಲ್ಲಿಯಾದರೂ ನಿಂತುಕೊಂಡಿದ್ದರೆ ಅಥವಾ ಹೊರಗಡೆ ಇದ್ದರೆ ಇಲ್ಲವೇ ನಿಮ್ಮ ಮನೆಯಲ್ಲಿಯೇ ಇದ್ದಾಗ ಸೊಳ್ಳೆಗಳು ಕಚ್ಚೋದು ಮಾಮೂಲು. ಆದರೆ ನೀವು ಅದೆಷ್ಟೋ ಬಾರಿ ನಿಮ್ಮ ಪಕ್ಕದಲ್ಲಿಯೇ ಇರೋರಿಗೆ ಹೆಚ್ಚು ಕಚ್ಚದೇ ನಿಮ್ಮ ಬಳಿಯೇ ಸೊಳ್ಳೆ ಬಂದು ಕಚ್ಚೋದನ್ನು ಗಮನಿಸಿ ಇರಬಹುದು, ಇಲ್ಲವೇ ನಿಮಗೆ ಕಚ್ಚದೇ ನಿಮ್ಮ ಜೊತೆ ಇರುವ ಇನ್ನಾರೋ ಗಿರಿಗಿರಿ ಎಂದು ಕೆರೆದುಕೊಳ್ತಾನೇ ಇರ್ತಾರೆ, ಈ ಸೊಳ್ಳೆ ನನಗಷ್ಟೇ ಯಾಕೆ ಕಚ್ಚುತ್ತಿದ್ಯಪ್ಪಾ ಎನ್ನುತ್ತಾರೆ. ಕೆಲವೊಮ್ಮೆ ಇದು ಸುಳ್ಳೆ ಎಂದು ಎನ್ನಿಸಿದರೂ, ಇದರ ಹಿಂದೆ ಸಕತ್​ ಇಂಟರೆಸ್ಟಿಂಗ್​ ಕಾರಣವಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಾಮಾನ್ಯವಾಗಿ ಸೊಳ್ಳೆಗಳು ದೇಹದ ವಾಸನೆ, ಬೆವರು, ಮತ್ತು ಉಸಿರಾಡುವಾಗ ಬಿಡುಗಡೆಯಾಗುವ ಇಂಗಾಲದ ಡೈಆಕ್ಸೈಡ್‌ಗೆ (Carbon dioxide) ಕೂಡ ಹೆಚ್ಚು ಆಕರ್ಷಿತವಾಗುತ್ತವೆ. ಆದ್ದರಿಂದ ಇಂಥವರಿಗೆ ಸೊಳ್ಳೆ ಕಚ್ಚುವುದು ಮಾಮೂಲು. ಆದರೆ ತುಂಬಾ ಶುಚಿಯಾಗಿದ್ದರೂ ಸೊಳ್ಳೆ ನಿಮ್ಮನ್ನೇ ಹುಡುಕಿ ಬರೋ ಹಿಂದೆ ವೈಜ್ಞಾನಿಕ ಕಾರಣವಿದೆ. ವಿಜ್ಞಾನದ ಪ್ರಕಾರ, ಸೊಳ್ಳೆಗಳು O ಪಾಸಿಟಿವ್' (O+) ರಕ್ತದ ಗುಂಪಿನ ಜನರಿಗೆ ಹೆಚ್ಚು ಆಕರ್ಷಿತರಾಗುತ್ತವೆ. ಅದಕ್ಕಾಗಿಯೇ ನಿಮ್ಮದು O+ ಆಗಿದ್ದರೆ, ನಿಮ್ಮ ಬಳಿ ಸೊಳ್ಳೆಗಳು A, B, AB ರಕ್ತದ ಗುಂಪಿನವರಿಗಿಂತಲೂ ಹೆಚ್ಚಾಗಿ ಕಚ್ಚುತ್ತವೆ.

2,3,4ನೇ ಸ್ಥಾನ ಯಾರಿಗೆ?

ಇದಾಗಲೇ ಹೇಳಿದಂತೆ, ವಿಜ್ಞಾನಿಗಳ ಪ್ರಕಾರ, ಸೊಳ್ಳೆಗಳು 'O' ರಕ್ತದ ಗುಂಪಿನ ಜನರನ್ನು ಇತರರಿಗಿಂತ ಸುಮಾರು ಎರಡು ಪಟ್ಟು ಹೆಚ್ಚು ಆಕರ್ಷಿಸುತ್ತವೆ. 'B' ರಕ್ತದ ಗುಂಪಿನವರು ಎರಡನೇ ಆದ್ಯತೆಯಾಗಿದ್ದರೆ, 'A' ರಕ್ತದ ಗುಂಪಿನ ಜನರಿಗೆ ಸೊಳ್ಳೆಗಳು ಕಡಿಮೆ ಆಕರ್ಷಿತವಾಗುತ್ತವೆ.

ಏಕಿದು?

ಸೊಳ್ಳೆಗಳು 'O' ಗುಂಪನ್ನು ಹೆಚ್ಚಾಗಿ ಆಕರ್ಷಿಸಲು ಮತ್ತು ಕಚ್ಚಲು ಕಾರಣಗಳು:'O' ಬ್ಲಡ್ ಗ್ರೂಪ್ ಹೊಂದಿರುವ ಜನರು ತಮ್ಮ ಚರ್ಮದ ಮೂಲಕ ನಿರ್ದಿಷ್ಟ ರಾಸಾಯನಿಕಗಳನ್ನು (ಕಾರ್ಬಾಕ್ಸಿಲಿಕ್ ಆಮ್ಲಗಳು) ಹೆಚ್ಚು ಬಿಡುಗಡೆ ಮಾಡುತ್ತಾರೆ. ಈ ವಾಸನೆಯು ಸೊಳ್ಳೆಗಳನ್ನು ಆಕರ್ಷಿಸುತ್ತದೆ.'O' ಗುಂಪಿನ ಸುಮಾರು ಶೇಕಡಾ 85 ರಷ್ಟು ಜನರು ತಮ್ಮ ರಕ್ತದ ಪ್ರಕಾರವನ್ನು ಸೂಚಿಸುವ ನಿರ್ದಿಷ್ಟ ಸಂಕೇತಗಳನ್ನು (ಪ್ರತಿಜನಕಗಳನ್ನು) ದೇಹದ ಸ್ರವಿಸುವಿಕೆಗಳ ಮೂಲಕ ಹೊರಹಾಕುತ್ತಾರೆ. ಇದನ್ನು ಸೊಳ್ಳೆಗಳು 50 ಮೀಟರ್ ದೂರದಿಂದಲೇ ಗ್ರಹಿಸುತ್ತವೆ. ಆದ್ದರಿಂದಲೇ ಸೊಳ್ಳೆಗೆ ನೀವೆಂದ್ರೆ ತುಂಬಾ ಪ್ರೀತಿಯಾಗಿಬಿಡುತ್ತದೆ.