MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • Dileep Raj's death: ಜಿಮ್​ಗೆ ಹೋಗ್ತಿರೋರೇ ಹೆಚ್ಚು ಹೃದಯಾಘಾತದಿಂದ ಸಾಯ್ತಿರೋದು ಯಾಕೆ? ತಜ್ಞರು ಏನಂದ್ರು

Dileep Raj's death: ಜಿಮ್​ಗೆ ಹೋಗ್ತಿರೋರೇ ಹೆಚ್ಚು ಹೃದಯಾಘಾತದಿಂದ ಸಾಯ್ತಿರೋದು ಯಾಕೆ? ತಜ್ಞರು ಏನಂದ್ರು

ಇತ್ತೀಚೆಗೆ ದಿಲೀಪ್ ರಾಜ್ ಅವರಂತಹ ಸೆಲೆಬ್ರಿಟಿಗಳು ಹೃದಯಾಘಾತದಿಂದ ನಿಧನರಾಗುತ್ತಿರುವುದು ಆತಂಕ ಮೂಡಿಸಿದೆ. ಜಿಮ್‌ಗೆ ಹೋಗುವ ಯುವಕರಲ್ಲಿ ಹೆಚ್ಚುತ್ತಿರುವ ಈ ಸಮಸ್ಯೆಗೆ ಅತಿಯಾದ ವ್ಯಾಯಾಮ, ವಿಶ್ರಾಂತಿ ಕೊರತೆ, ಮತ್ತು ಸಪ್ಲಿಮೆಂಟ್‌ಗಳ ಪಾತ್ರವೇನು ಎಂದು ಪೌಷ್ಟಿಕತಜ್ಞ ನವೀನ್ ಕುಮಾರ್ ವಿವರಿಸಿದ್ದಾರೆ.

2 Min read
Author : Suchethana D
Published : May 13 2026, 05:16 PM IST
Share this Photo Gallery
  • FB
  • TW
  • Linkdin
  • Whatsapp
16
ಸೆಲೆಬ್ರಿಟಿಗಳ ಸಾವಿನ ಸಾಲು
Image Credit : social media

ಸೆಲೆಬ್ರಿಟಿಗಳ ಸಾವಿನ ಸಾಲು

ಕಿರುತೆರೆ ನಟ, ಹಿಟ್ಲರ್​ ಕಲ್ಯಾಣದ ಜೆಕೆಯಾಗಿ, ವಿವಿಧ ಸಿನಿಮಾ, ಸೀರಿಯಲ್​ಗಳಲ್ಲಿ ನಟಿ, ನಿರ್ದೇಶಕ, ನಿರ್ಮಾಪಕ ಆಗಿ ಎಲ್ಲರ ಮನಗೆದ್ದಿದ್ದ ದಿಲೀಪ್​ ರಾಜ್ ಅವರು ಇಂದು ಹೃದಯಾಘಾತದಿಂದ ನಿಧನರಾಗಿ ಬಣ್ಣದ ಲೋಕಕ್ಕೇ ಶಾಕ್ ಕೊಟ್ಟಿದ್ದಾರೆ. ಕೆಲ ತಿಂಗಳ ಹಿಂದೆ ಇದೇ ಸೀರಿಯಲ್​ನಲ್ಲಿ ನಟಿಸಿದ್ದ ರಾಕೇಶ್​ ಅವರೂ ಹೃದಯಾಘಾತದಿಂದ ನಿಧನರಾಗಿದ್ದರು. ಪುನೀತ್​ ರಾಜ್ ಅವರೂ ಚಿಕ್ಕ ವಯಸ್ಸಿನಲ್ಲಿಯೇ ಇದೇ ರೀತಿ ಸಾವನ್ನಪ್ಪಿದ್ದರು.

Add Asianetnews Kannada as a Preferred SourcegooglePreferred
26
ಹೃದಯಾಘಾತದಿಂದ ಸಾವೇಕೆ?
Image Credit : our own

ಹೃದಯಾಘಾತದಿಂದ ಸಾವೇಕೆ?

ಇದು ಸೆಲೆಬ್ರಿಟಿಗಳ ಮಾತಾದರೆ, ಇಂದು ಸೋಷಿಯಲ್​ ಮೀಡಿಯಾ ಓಪನ್​ ಮಾಡಿದ್ರೆ ಸಾಕು, RIP ಸಂದೇಶಗಳೇ ತುಂಬಿ ಹೋಗಿರುತ್ತವೆ. ಗಟ್ಟುಮುಟ್ಟಾಗಿ ಇದ್ದವರೇ ಅದರಲ್ಲಿಯೂ 40-50 ವರ್ಷ ಒಳಗಿನವರೇ ಹೃದಯಾಘಾತದಿಂದ ಸಾಯುತ್ತಿದ್ದಾರೆ. ಅದರಲ್ಲಿಯೂ ಜಿಮ್​ಗೆ ಹೋಗುವವರಲ್ಲಿಯೇ ಹೆಚ್ಚು ಹೃದಯಾಘಾತದಿಂದ ಸಾಯುತ್ತಿದ್ದಾರೆ. ಇದಕ್ಕೆ ಕಾರಣ ಏನು? ಇದರ ಕಾರಣವನ್ನು ನ್ಯೂಟ್ರೀಷಿಯನ್​ ನವೀನ್​ ಕುಮಾರ್​ heggadde_studioಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

Related Articles

Related image1
ಸ್ಮಾರ್ಟ್​ವಾಚ್​ ನಂಬಿ ಜೀವ ಕಳೆದುಕೊಂಡ್ರಾ ನಟ ದಿಲೀಪ್​ ರಾಜ್​? ಮಧ್ಯರಾತ್ರಿ ಆಗಿದ್ದೇನು
Related image2
Dileep Raj Death: ಪತ್ನಿಗೆ ಆ ಟ್ಯಾಲೆಂಟ್‌ ಇರೋದಿಕ್ಕೆ ಸೀರಿಯಲ್‌ ನಿರ್ಮಾಣ ಮಾಡ್ತಿದ್ದೀವಿ ಎಂದಿದ್ದ ದಿಲೀಪ್‌ ರಾಜ್
36
ಜಿಮ್​ಗೆ ಹೋಗುವುದು ಸಮಸ್ಯೆ ಅಲ್ಲ, ಆದ್ರೆ...
Image Credit : heggadde studio instagram

ಜಿಮ್​ಗೆ ಹೋಗುವುದು ಸಮಸ್ಯೆ ಅಲ್ಲ, ಆದ್ರೆ...

ಜಿಮ್​ಗೆ ಹೋಗುವುದು ಸಮಸ್ಯೆ ಅಲ್ಲ. ಆದರೆ ದೇಹದಲ್ಲಿ ಪ್ರೊಟೀನ್​ ರಿಕ್ವೈರ್​ಮೆಂಟ್​ ಎಷ್ಟು ಹೆಚ್ಚುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ದೇಹಕ್ಕೆ ಮೈಕ್ರೋನ್ಯೂಟ್ರೆಂಟ್​ ಕೂಡ ಬೇಕಾಗುತ್ತದೆ. ಆದರೆ ಜಿಮ್​ಗೆ ಹೋಗುವ ಹಲವರು ಎಡವುತ್ತಿರುವುದು ಇಲ್ಲಿಯೇ ಎಂದು ಇದರ ಬಗ್ಗೆ ಇನ್ನಷ್ಟು ಮಾಹಿತಿ ನೀಡಿದ್ದಾರೆ ನವೀನ್​ ಕುಮಾರ್​.

46
ಹಾರ್ಮೋನ್​ ವ್ಯತ್ಯಾಸ
Image Credit : Instagram

ಹಾರ್ಮೋನ್​ ವ್ಯತ್ಯಾಸ

ಜಿಮ್​ಗೆ ಹೋಗುವವರು ಪ್ರತಿದಿನ ದೇಹಕ್ಕೆ ಪ್ರೆಷನ್​ ಕೊಡುತ್ತಿರುತ್ತಾರೆ. ವರ್ಕ್​ ಔಟ್​ ಹೆಚ್ಚಿಗೆ ಮಾಡಿ ದೇಹಕ್ಕೆ ಹೆಚ್ಚು ಒತ್ತಡ ಕೊಡುತ್ತಾರೆ. ಈ ಸಂದರ್ಭದಲ್ಲಿ ದೇಹದಲ್ಲಿ ಬದಲಾವಣೆ ಆಗುತ್ತಿರುತ್ತದೆ. ದೇಹಕ್ಕೆ ಸ್ಟ್ರೆಸ್​ ಆದಾಗ ಕೆಲವೊಂದು ಹಾರ್ಮೋನ್​ಗಳು ವ್ಯತ್ಯಾಸವಾಗುತ್ತದೆ. ಆದರೆ ಅದು ಆ ಕ್ಷಣದಲ್ಲಿ ತಿಳಿಯುವುದಿಲ್ಲ ಎನ್ನುತ್ತಾರೆ ನವೀನ್​.

56
ರೆಸ್ಟೇ ಇಲ್ಲದೇ ಕೆಲಸ
Image Credit : Getty

ರೆಸ್ಟೇ ಇಲ್ಲದೇ ಕೆಲಸ

ಇವೆನ್ನೆಲ್ಲಾ ಸರಿದೂಗಿಸಲು ಮುಖ್ಯವಾಗಿ ಬೇಕಾಗುವುದು ನಿದ್ದೆ. ಹೆಚ್ಚಿನವರು ದೇಹಕ್ಕೆ ರೆಸ್ಟೇ ಕೊಡುವುದಿಲ್ಲ, ಮೈಕ್ರೋ ನ್ಯೂಟ್ರೆಂಟ್ಸ್​ ಸರಿಯಾಗಿ ಫುಲ್​ಫಿಲ್​ ಆಗದೇ ಇರುವಾಗಲೇ ಮೇಲಿಂದ ಮೇಲೆ ವರ್ಕ್​ಔಟ್​ ಮಾಡುತ್ತಲೇ ಇರುತ್ತಾರೆ. ಇದರ ಅರ್ಥ ಡಿಮಾಂಡ್​ ಜಾಸ್ತಿಯಾಗಿದೆ, ಸಪ್ಲೈ ದೇಹಕ್ಕೆ ಕಡಿಮೆಯಾಗುತ್ತಿದೆ. ಇದರಿಂದ ರೆಸ್ಟ್​ ಇಲ್ಲದೇ ವರ್ಕ್​ಔಟ್​ ಮಾಡುವುದರಿಂದ ಹೃದಯಾಘಾತದ ಸಂಭವ ಹೆಚ್ಚಾಗುತ್ತಿದೆ ಎನ್ನುವುದು ನವೀನ್​ ಕುಮಾರ್​ ಅಭಿಮತ.

66
ಸಪ್ಲಿಮೆಂಟರಿನಿಂದ ಸಾವು?
Image Credit : instagram

ಸಪ್ಲಿಮೆಂಟರಿನಿಂದ ಸಾವು?

ಅದೇ ರೀತಿ ಇದಾಗಲೇ ಕೆಲವು ಜಿಮ್​ಗಳಲ್ಲಿ ಕೊಡುವ ಸಪ್ಲಿಮೆಂಟರಿಗಳ ಬಗ್ಗೆಯೂ ಇದಾಗಲೇ ಸಾಕಷ್ಟು ಬಾರಿ ಚರ್ಚೆಯಾಗಿದೆ, ಆಗುತ್ತಲೇ ಇದೆ. ಈ ಸಪ್ಲಿಮೆಂಟರಿಗಳಲ್ಲಿ ಸ್ಟಿರಾಯ್ಡ್​ ಹೆಚ್ಚು ಇರುವ ಕಾರಣ, ಆರೋಗ್ಯದ ಮೇಲೆ ವಿಪರೀತ ಪರಿಣಾಮ ಬೀರುತ್ತದೆ, ಇದು ಜಿಮ್​ಗೆ ಹೋಗುವವರ ಸಾವಿಗೆ ಕಾರಣವಾಗುತ್ತಿದೆ ಎನ್ನುವ ಗಂಭೀರ ಆರೋಪ ಪದೇ ಪದೇ ಕೇಳಿ ಬರುತ್ತಿದೆ. ಇದರ ಬಗ್ಗೆ ಹೇಳೀರುವ ನವೀನ್​ ಕುಮಾರ್​, ಕೆಲವೊಂದು ಸರ್ಟಿಫೈಡ್​ ಸಪ್ಲಿಮೆಂಟರಿಗಳು ಇರುತ್ತವೆ. ಅವುಗಳತ್ತ ಗಮನ ಕೊಡಬೇಕು ಎಂದಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಹೃದಯಾಘಾತ
ಮನರಂಜನಾ ಸುದ್ದಿ
ಆಹಾರ
ಆರೋಗ್ಯ
ಆರೋಗ್ಯ ಸಮಸ್ಯೆಗಳು

Latest Videos
Recommended Stories
Recommended image1
ಅನ್ನ ಬೇಯಿಸುವಾಗ ಕೇವಲ ಒಂದೇ ಒಂದು ಪಲಾವ್ ಎಲೆ ಹಾಕಿ, ಆಮೇಲೆ ಬದಲಾವಣೆ ನೋಡಿ ನೀವೇ ಶಾಕ್!
Recommended image2
ಮಾತು ಕಡಿಮೆ ಮಾಡಿ ನೋಡಿ.. ಅದೆಷ್ಟೋ ದೈಹಿಕ-ಮಾನಸಿಕ ಚಮತ್ಕಾರಗಳು ನಡೆದು ನೆಮ್ಮದಿ ಸಿಗುತ್ತೆ!
Recommended image3
Heart Healthy food: ಹೃದಯದ ಆರೋಗ್ಯಕ್ಕೆ ನೀವು ಸೇವಿಸಲೇಬೇಕಾದ ಸೂಪರ್ ಆಹಾರಗಳಿವು
Related Stories
Recommended image1
ಸ್ಮಾರ್ಟ್​ವಾಚ್​ ನಂಬಿ ಜೀವ ಕಳೆದುಕೊಂಡ್ರಾ ನಟ ದಿಲೀಪ್​ ರಾಜ್​? ಮಧ್ಯರಾತ್ರಿ ಆಗಿದ್ದೇನು
Recommended image2
Dileep Raj Death: ಪತ್ನಿಗೆ ಆ ಟ್ಯಾಲೆಂಟ್‌ ಇರೋದಿಕ್ಕೆ ಸೀರಿಯಲ್‌ ನಿರ್ಮಾಣ ಮಾಡ್ತಿದ್ದೀವಿ ಎಂದಿದ್ದ ದಿಲೀಪ್‌ ರಾಜ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved