ಇಸ್ರೋದ ‘ಗಗನಯಾನ’ ನೌಕೆ ಫೋಟೋ ಬಿಡುಗಡೆ: 2024ಕ್ಕೆ ಮೊದಲ ಮಾನವಸಹಿತ ಯಾನ
ಚಂದ್ರಯಾನ, ಆದಿತ್ಯಯಾನದ ಬಳಿಕ ಮಾನವರನ್ನು ಅಂತರಿಕ್ಷಕ್ಕೆ ಕಳುಹಿಸುವ ‘ಗಗನಯಾನ’ಕ್ಕೆ ಸಜ್ಜಾಗುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಗಗನಯಾನ ನೌಕೆಯ (Spaceship) ಫೋಟೋಗಳನ್ನು ಅನಾವರಣಗೊಳಿಸಿದೆ.
ನವದೆಹಲಿ: ಚಂದ್ರಯಾನ, ಆದಿತ್ಯಯಾನದ ಬಳಿಕ ಮಾನವರನ್ನು ಅಂತರಿಕ್ಷಕ್ಕೆ ಕಳುಹಿಸುವ ‘ಗಗನಯಾನ’ಕ್ಕೆ ಸಜ್ಜಾಗುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಗಗನಯಾನ ನೌಕೆಯ (Spaceship) ಫೋಟೋಗಳನ್ನು ಅನಾವರಣಗೊಳಿಸಿದೆ. ಹೀಗಾಗಿ ಈ ಯಾನದ ಬಗ್ಗೆ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. 2024ರ ಡಿಸೆಂಬರ್‌ಗೆ ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಯೋಜನೆಯನ್ನು ಇಸ್ರೋ ಹೊಂದಿದೆ. ಅದಕ್ಕೆ ಪೂರ್ವಭಾವಿಯಾಗಿ ಮಾನವರಹಿತ ಯಾನಗಳನ್ನು ಇಸ್ರೋ ಶೀಘ್ರದಲ್ಲೇ ಆರಂಭಿಸಲಿದೆ.
ಇಬ್ಬರು ಅಥವಾ ಮೂವರು ಗಗನಯಾತ್ರಿಗಳನ್ನು ನೌಕೆಯಲ್ಲಿ ಭೂಮಿಯಿಂದ 400 ಕಿ.ಮೀ. ದೂರದಲ್ಲಿರುವ ವೃತ್ತಾಕಾರದ ಕಕ್ಷೆಗೆ ಕಳುಹಿಸಿ, ಅಲ್ಲೇ ಒಂದರಿಂದ ಮೂರು ದಿನ ಇರುವಂತೆ ನೋಡಿಕೊಂಡು, ಬಳಿಕ ಸುರಕ್ಷಿತವಾಗಿ ವಾಪಸ್ ಕರೆತರುವುದು ಗಗನಯಾನ ಯೋಜನೆಯ ಉದ್ದೇಶ. ಗಗನಯಾನ ನೌಕೆಯನ್ನು ಸಮುದ್ರದಲ್ಲಿ ಇಳಿಸಿ ಗಗನಯಾನಿಗಳನ್ನು ಅಂತರಿಕ್ಷದಿಂದ ಭೂಮಿಗೆ ಬರ ಮಾಡಿಕೊಳ್ಳಲಾಗುತ್ತದೆ. ಈ ಮೂಲಕ ಬಾಹ್ಯಾಕಾಶಕ್ಕೆ ಮಾನವರನ್ನು ಕಳುಹಿಸುವ ಸಾಮರ್ಥ್ಯವನ್ನು ಗಳಿಸಿಕೊಳ್ಳಲು ಇಸ್ರೋ ಮುಂದಾಗಿದೆ.
ಭಾರಿ ಪೂರ್ವ ತಯಾರಿಯೊಂದಿಗೆ ಇಸ್ರೇಲ್ ಮೇಲೆ ಮುಗಿಬಿದ್ದಿದ್ದ ಹಮಾಸ್ ಉಗ್ರರು
ಗುರುತ್ವಾಕರ್ಷಣೆಯೇ ಇಲ್ಲದ ಬಾಹ್ಯಾಕಾಶದಲ್ಲಿ ಕಾಫಿ ಕುಡಿಯೋದು ಹೇಗೆ: ಗಗನಯಾತ್ರಿ ತೋರಿಸಿದ್ದಾರೆ ನೋಡಿ?