'ಚಂದ್ರಯಾನ-3' ರಾಕೆಟ್ ನೋಡಿ ತಂತ್ರಜ್ಞಾನ ಕೇಳಿತ್ತು ಅಮೆರಿಕಾ: ಸೋಮನಾಥ್

ಬಾಹ್ಯಾಕಾಶ ಸಂಶೋಧನೆಯಲ್ಲಿ ಜಗತ್ತಿನಲ್ಲೇ ಮುಂಚೂಣಿಯಲ್ಲಿರುವ ಅಮೆರಿಕದ ವಿಜ್ಞಾನಿಗಳೇ ಈಗ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ)ದಿಂದ ಬಾಹ್ಯಾಕಾಶ ತಂತ್ರಜ್ಞಾನವನ್ನು ಕೇಳುತ್ತಿದ್ದಾರೆ ಎಂಬ ಕುತೂಹಲಕರ ಸಂಗತಿಯನ್ನು ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ (S Somnath) ಬಹಿರಂಗಪಡಿಸಿದ್ದಾರೆ.

ISRO chief S Somnath said American scientist saw the Chandrayaan 3 making process and asked for technology akb

ರಾಮೇಶ್ವರ: ಬಾಹ್ಯಾಕಾಶ ಸಂಶೋಧನೆ ಯಲ್ಲಿ ಜಗತ್ತಿನಲ್ಲೇ ಮುಂಚೂಣಿಯಲ್ಲಿರುವ ಅಮೆರಿಕದ ವಿಜ್ಞಾನಿಗಳೇ ಈಗ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ)ದಿಂದ ಬಾಹ್ಯಾಕಾಶ ತಂತ್ರಜ್ಞಾನವನ್ನು ಕೇಳುತ್ತಿದ್ದಾರೆ ಎಂಬ ಕುತೂಹಲಕರ ಸಂಗತಿಯನ್ನು ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ (S Somnath) ಬಹಿರಂಗಪಡಿಸಿದ್ದಾರೆ.

'ಕಾಲ ಬದಲಾಗಿದೆ. ಭಾರತವೀಗ ಉತ್ಕೃಷ್ಟ ಬಾಹ್ಯಾಕಾಶ ಉಪಕರಣಗಳು ಹಾಗೂ ರಾಕೆಟ್‌ಗಳನ್ನು ಉತ್ಪಾದಿಸುತ್ತಿದೆ. ಅವುಗಳ ಗುಣಮಟ್ಟ ಹಾಗೂ ಅತಿ ಕಡಿಮೆ ವೆಚ್ಚವನ್ನು ನೋಡಿದ ಅಮೆರಿಕದ ಬಾಹ್ಯಾಕಾಶ ವಿಜ್ಞಾನಿಗಳು ಈಗ ಭಾರತದಿಂದ ಬಾಹ್ಯಾಕಾಶ ತಂತ್ರಜ್ಞಾನವನ್ನು ( Space Technology)ಕೇಳುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿ ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿ ಕಂಪನಿಗಳಿಗೂ ತೆರೆದಿದ್ದಾರೆ ಎಂದು ಸೋಮನಾಥ್ ತಿಳಿಸಿದ್ದಾರೆ.

ಆದಿತ್ಯ ನೌಕೆಯ ಪಥ ಸರಿಪಡಿಸಿದ ಇಸ್ರೋ: ಸೂರ್ಯನತ್ತ ಯಶಸ್ವಿಯಾಗಿ ಸಾಗುತ್ತಿರುವ ನೌಕೆ

ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ (APJ Abdul Kalam) ಅವರ ಹುಟ್ಟುಹಬ್ಬದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದ ಅವರು, 'ನಾವು ಚಂದ್ರಯಾನ-3 ರಾಕೆಟ್ ಹಾಗೂ ಉಪಕರಣಗಳನ್ನು ತಯಾರಿಸುತ್ತಿದ್ದಾಗ ಅಮೆರಿಕದ ನಾಸಾದ 5-6 ವಿಜ್ಞಾನಿಗಳು ಬಂದಿದ್ದರು. ಅವರಿಗೆ ನಮ್ಮ ಉಪಕರಣಗಳನ್ನು ತೋರಿಸಿ, ಹೇಗೆ ನಾವು ಚಂದ್ರನ ಮೇಲೆ ಇಳಿಯಲಿದ್ದೇವೆ ಎಂಬುದನ್ನು ವಿವರಿಸಿದೆವು. ನಂತರ ಖರ್ಚಿನ ಬಗ್ಗೆ ಕೇಳಿದ ಅವರು ಆಶ್ಚರ್ಯ ಚಕಿತರಾಗಿದ್ದರು. ಏಕೆ ನೀವು ಅಮೆರಿಕಕ್ಕೆ ಇವುಗಳನ್ನು ಮಾರಾಟ ಮಾಡುವುದಿಲ್ಲ ಎಂದು ನಮ್ಮನ್ನು ಕೇಳಿದರು' ಎಂದು ಸೋಮನಾಥ್‌ ಹೇಳಿದರು.

'ಭಾರತದಲ್ಲಿ ಇಂದು ಖಾಸಗಿ ಕಂಪನಿಗಳೂ ರಾಕೆಟ್ ಉತ್ಪಾದಿಸುತ್ತಿವೆ. ಯುವ ವಿಜ್ಞಾನಿಗಳು ಬಾಹ್ಯಾಕಾಶ ಸಂಶೋಧನಾ ಕ್ಷೇತ್ರಕ್ಕೆ ಬರಬೇಕು. ಇಲ್ಲಿ ಸಾಕಷ್ಟು ಅವಕಾಶಗಳಿವೆ' ಎಂದೂ ಇಸ್ರೋ ಮುಖ್ಯಸ್ಥ (ISRO chief) ಸೋಮನಾಥ್ ಕಿವಿಮಾತು ಹೇಳಿದರು.

ಗುರುತ್ವಾಕರ್ಷಣೆಯೇ ಇಲ್ಲದ ಬಾಹ್ಯಾಕಾಶದಲ್ಲಿ ಕಾಫಿ ಕುಡಿಯೋದು ಹೇಗೆ: ಗಗನಯಾತ್ರಿ ತೋರಿಸಿದ್ದಾರೆ ನೋಡಿ?

Latest Videos
Follow Us:
Download App:
  • android
  • ios