ಆದಿತ್ಯ ನೌಕೆಯ ಪಥ ಸರಿಪಡಿಸಿದ ಇಸ್ರೋ: ಸೂರ್ಯನತ್ತ ಯಶಸ್ವಿಯಾಗಿ ಸಾಗುತ್ತಿರುವ ನೌಕೆ
ಸೂರ್ಯನ ಅಧ್ಯಯನಕ್ಕಾಗಿ ಹಾರಿಬಿಟ್ಟಿರುವ ಮಹತ್ವಾಕಾಂಕ್ಷಿ ಆದಿತ್ಯ ಎಲ್1 ನೌಕೆಯ ಪಥ ಸರಿಪಡಿಸುವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ISRO) ತಿಳಿಸಿದೆ.
ಬೆಂಗಳೂರು: ಸೂರ್ಯನ ಅಧ್ಯಯನಕ್ಕಾಗಿ ಹಾರಿಬಿಟ್ಟಿರುವ ಮಹತ್ವಾಕಾಂಕ್ಷಿ ಆದಿತ್ಯ ಎಲ್1 ನೌಕೆಯ ಪಥ ಸರಿಪಡಿಸುವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ISRO) ತಿಳಿಸಿದೆ.
ಭೂಮಿಯಿಂದ 15 ಲಕ್ಷ ಕಿ.ಮೀ. ದೂರದಲ್ಲಿರುವ ಲ್ಯಾಗ್ರೇಂಜಿಯನ್ ಪಾಯಿಂಟ್‌ನತ್ತ ಆದಿತ್ಯ ನೌಕೆ (Aditya L1) ಸಾಗುತ್ತಿದೆ. ನೌಕೆ ಆರೋಗ್ಯಕರವಾಗಿದೆ. ಅದರ ಪಥವನ್ನು ಸರಿಪಡಿಸುವ ಅಗತ್ಯವಿತ್ತು. ಅದನ್ನು ಅ.6ರಂದು ಪೂರ್ಣಗೊಳಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಅದರಲ್ಲಿರುವ ಮ್ಯಾಗ್ನೆಟೋಮೀಟರನ್ನು ಮತ್ತೆ ಚಾಲೂ ಮಾಡಲಾಗುತ್ತದೆ ಎಂದು ಇಸ್ರೋ ಮಾಹಿತಿ ನೀಡಿದೆ.
ವಿದೇಶದ ಅತಿ ದೊಡ್ಡ ಹಿಂದೂ ದೇಗುಲ ಅಮೆರಿಕದಲ್ಲಿ ಉದ್ಘಾಟನೆ: ಆ.18ರಿಂದ ಭಕ್ತರಿಗೆ ಮುಕ್ತ ಪ್ರವೇಶ
ಸೆ.2ರಂದು ಶ್ರೀಹರಿಕೋಟಾದಿಂದ (Sriharikota) ಆದಿತ್ಯ ಎಲ್1 ನೌಕೆ ಹಾರಿಬಿಡಲಾಗಿತ್ತು. ಅದು 125 ದಿನಗಳ ಕಾಲ ಪ್ರಯಾಣಿಸಿ ಸೂರ್ಯನ ಅತಿ ಸಮೀಪದ ಬಿಂದುವಾದ ಲ್ಯಾಗ್ರೇಂಜಿಯನ್ ಪಾಯಿಂಟ್ ತಲುಪಬೇಕಿದೆ. ಈಗಾಗಲೇ 36 ದಿನಗಳ ಪ್ರಯಾಣ ಪೂರ್ಣಗೊಂಡಿದ್ದು, ಇನ್ನೂ 89 ದಿನಗಳ ಪ್ರಯಾಣ ಬಾಕಿಯಿದೆ. ನಿಗದಿತ ಗುರಿ ತಲುಪಿದ ಮೇಲೆ ಆದಿತ್ಯ ನೌಕೆಯು ಈವರೆಗೆ ಯಾರೂ ಸೆರೆಹಿಡಿಯದಷ್ಟು ಹತ್ತಿರದಿಂದ ಸೂರ್ಯನ ಚಿತ್ರಗಳನ್ನು ಸೆರೆಹಿಡಿದು ಇಸ್ರೋಗೆ ಕಳುಹಿಸಲಿದೆ.
ಸೆ.19ರಂದು ಎಲ್1 ನೌಕೆಯನ್ನು ಭೂಮಿಯ ಕಕ್ಷೆಯಿಂದ ಹೊರಗೆ ಚಿಮ್ಮಿಸಿ ಲ್ಯಾಗ್ರೇಂಜಿಯನ್ ಪಾಯಿಂಟ್‌ನ ದಾರಿಗೆ ನಿಯೋಜಿಸುವ (ಟಿಎಲ್1ಐ) ಕಾರ್ಯ ನಡೆದಿತ್ತು. ಬಳಿಕ ಅದರ ಪಥವನ್ನು ಕೊಂಚ ಬದಲಿಸುವ ಅಗತ್ಯ ಕಂಡುಬಂದಿದ್ದರಿಂದ ಈಗ ಪಥ ಬದಲಿಸಲಾಗಿದೆ ಎಂದು ಇಸ್ರೋ ತಿಳಿಸಿದೆ.
ಅಯ್ಯೋ ದೇವ್ರೆ... ಸತ್ತವರ ಶವ ಹೂಳೋ ಬದ್ಲು ತಿನ್ತಿದ್ರಾ ಯುರೋಪಿಯನ್ನರು?