Asianet Suvarna News Asianet Suvarna News

ಸೈಕಲ್ ಎತ್ತಿನಗಾಡಿಯಿಂದ ಶುರುವಾಗಿ ಚಂದ್ರನ ಅಂಗಳದಲ್ಲಿ ಓಡಾಡುವವರೆಗೆ... ಇದು ಇಸ್ರೋ ಯಶೋಗಾಥೆ

1969ರಲ್ಲಿ ಇಸ್ರೋ ಸ್ಥಾಪನೆಯಾದಾಗ ಹಾಗೂ ಅದಕ್ಕೂ ಮೊದಲು ಪರೀಕ್ಷೆಗಾಗಿ ರಾಕೆಟ್‌ಗಳನ್ನು ಭಾರತದ ವಿಜ್ಞಾನಿಗಳು ಸೈಕಲ್‌ ಮೇಲೆ ಕೊಂಡೊಯ್ಯುತ್ತಿದ್ದರು. ಇದಾದ ಬಳಿಕ ಉಪಗ್ರಹಗಳನ್ನು ಎತ್ತಿನ ಗಾಡಿಯ ಮೇಲಿಟ್ಟು, ಉಡ್ಡಯನ ಕೇಂದ್ರಗಳಿಗೆ ಸಾಗಿಸಲಾಗುತ್ತಿತ್ತು. ಇದಕ್ಕೆ ಹಲವು ದೇಶಗಳು ಕುಹಕವಾಡಿದ್ದವು.

from cycle bullock cart to landing on Moon Landing everything is fine akb
Author
First Published Aug 24, 2023, 9:35 AM IST

ಬೆಂಗಳೂರು: 1969ರಲ್ಲಿ ಇಸ್ರೋ ಸ್ಥಾಪನೆಯಾದಾಗ ಹಾಗೂ ಅದಕ್ಕೂ ಮೊದಲು ಪರೀಕ್ಷೆಗಾಗಿ ರಾಕೆಟ್‌ಗಳನ್ನು ಭಾರತದ ವಿಜ್ಞಾನಿಗಳು ಸೈಕಲ್‌ ಮೇಲೆ ಕೊಂಡೊಯ್ಯುತ್ತಿದ್ದರು. ಇದಾದ ಬಳಿಕ ಉಪಗ್ರಹಗಳನ್ನು ಎತ್ತಿನ ಗಾಡಿಯ ಮೇಲಿಟ್ಟು, ಉಡ್ಡಯನ ಕೇಂದ್ರಗಳಿಗೆ ಸಾಗಿಸಲಾಗುತ್ತಿತ್ತು. ಇದಕ್ಕೆ ಹಲವು ದೇಶಗಳು ಕುಹಕವಾಡಿದ್ದವು. ಅಲ್ಲದೇ ಪೋಖ್ರಾನ್‌ ಅಣು ಪರೀಕ್ಷೆಯ ಬಳಿಕ ಹಲವು ದೇಶಗಳು ಭಾರತಕ್ಕೆ ನೀಡುತ್ತಿದ್ದ ಸಹಕಾರವನ್ನು ನಿಲ್ಲಿಸಿದವು. ಆದರೂ ಧೃತಿಗೆಡದ ಇಸ್ರೋ, ದೇಶೀಯವಾಗಿ ಹಲವು ಸಂಶೋಧನೆ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಚಂದ್ರ ಹಾಗೂ ಮಂಗಳನ ಅಂಗಳವನ್ನು ತಲುಪಿದೆ. ಈ ಫೋಟೋಗಳು ಇಸ್ರೋದ ಸಾಧನೆಯನ್ನು ತೋರಿಸುವ ಪ್ರಮುಖ ಸಾಧನಗಳಾಗಿವೆ.

ಪರ್ಯಾಯ ಮಾರ್ಗ, ಮುಂದೂಡಿಕೆ ಇಲ್ಲದೆ ಯಶಸ್ವಿ ಲ್ಯಾಂಡಿಂಗ್‌

ಚಂದ್ರಯಾನ-2 ಯೋಜನೆಯ ವಿಫಲತೆಯಿಂದ ಪಾಠ ಕಲಿತ ಇಸ್ರೋ ಚಂದ್ರಯಾನ-3 (Chandrayaan3) ಯೋಜನೆಯನ್ನು ಯಶಸ್ವಿಯಾಗಿ ನಡೆಸಿದೆ. ಜು.14ರಂದು ಉಡಾವಣೆಗೊಂಡ ಚಂದ್ರಯಾನ ನೌಕೆ ಆ.23ರಂದು ಸುರಕ್ಷಿತವಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್‌ ಆಗಿದೆ. ಉಡಾವಣೆಯಾದಾಗಿನಿಂದ ಲ್ಯಾಂಡ್‌ವರೆಗೆ ಎಲ್ಲಾ ಪ್ರಕ್ರಿಯೆಗಳು ಇಸ್ರೋ ರೂಪಿಸಿದ್ದಂತೆ ಸುಸೂತ್ರವಾಗಿ ನಡೆದಿವೆ. ಜು.14ರಂದು ಶ್ರೀಹರಿಕೋಟಾದಿಂದ (Sriharikota) ಹೊರಟ ಎಲ್‌ಎಂವಿ-3 ನೌಕೆ ಚಂದ್ರಯಾನ ನೌಕೆಯನ್ನು ಯಶಸ್ವಿಯಾಗಿ ಭೂ ಕಕ್ಷೆಯಲ್ಲಿ (Orbitor) ಕೂರಿಸಿತು. ಇದಾದ ಬಳಿಕ ನಿಗದಿತವಾಗಿ ಈ ನೌಕೆಯ ಕಕ್ಷೆ ಎತ್ತರಿಸುವ ಕಾರ್ಯ ಕೈಗೊಳ್ಳುವ ಮೂಲಕ ಅದನ್ನು ಭೂಮಿಯಿಂದ ದೂರ ಕೊಂಡೊಯ್ಯಲಾಯಿತು. ಬಳಿಕ ಆ.1ರಂದು ಒಂದೇ ಬಾರಿ ಭೂಮಿಯ ಕಕ್ಷೆಯಿಂದ ಚಂದ್ರನ ಕಕ್ಷೆಗೆ ನೌಕೆಯನ್ನು ಕಳುಹಿಸಲಾಯಿತು. ಚಂದ್ರನ ಕಕ್ಷೆಯನ್ನು ತಲುಪಿದ ನೌಕೆಯ ಕಕ್ಷೆ ಇಳಿಸುವ ಕಾರ್ಯವನ್ನು ನಿಗದಿತವಾಗಿ ಕೈಗೊಂಡು ಲ್ಯಾಂಡರನ್ನು ನೌಕೆಯಿಂದ ಬೇರ್ಪಡಿಸಲಾಯಿತು.

Chandrayaan-3 Mission: ಲ್ಯಾಂಡರ್‌ನಿಂದ ಯಶಸ್ವಿಯಾಗಿ ಕೆಳಗಿಳಿದ ರೋವರ್‌, ಚಂದ್ರನ ಮೇಲೆ ನಡೆದಾಡಿದ ಭಾರತ

ಇದಾದ ಬಳಿಕ ಮೊದಲು ನಿಗದಿ ಪಡಿಸಿದ್ದಂತೆ ಆ.23ರಂದು ಲ್ಯಾಂಡರ್‌ (Lander)ವೇಗವನ್ನು ತಗ್ಗಿಸುತ್ತಾ ಅದನ್ನು ಮೊದಲು ನಿಗದಿಪಡಿಸಿದ್ದ ಕಾಲಕ್ಕೆ ಚಂದ್ರನ ಮೇಲೆ ಇಳಿಸಲಾಯಿತು. ಒಂದು ವೇಳೆ ಲ್ಯಾಂಡ್‌ ವೇಳೆ ಸಮಸ್ಯೆಯಾದರೆ ಮತ್ತೊಂದು ಸ್ಥಳ ಬದಲಾವಣೆಗೂ ಅವಕಾಶ ಮಾಡಿಕೊಳ್ಳಲಾಗಿತ್ತು. ಹಾಗೆಯೇ ಲ್ಯಾಂಡರ್‌ ನೇರಗೊಳ್ಳುವ ಪ್ರಕ್ರಿಯೆಯಲ್ಲಿ ಸಮಸ್ಯೆಯಾದರೆ ಲ್ಯಾಂಡಿಂಗ್‌ ದಿನಾಂಕವನ್ನು ಜು.27ಕ್ಕೆ ಮುಂದೂಡಲು ನಿರ್ಧರಿಸಲಾಗಿತ್ತು. ಆದರೆ ಈ ಯಾವುದೇ ಅಡೆತಡೆಗಳು ಉಂಟಾಗದೇ ಚಂದ್ರಯಾನ-3 ಲ್ಯಾಂಡರ್‌ ಸುರಕ್ಷಿತವಾಗಿ ಚಂದ್ರನ ಮೇಲೆ ಇಳಿಯಿತು.

ಚಂದ್ರಯಾನ ಯಶಸ್ಸಿನ ಸಿಹಿ: ಬಾಹ್ಯಾಕಾಶ, ರಕ್ಷಣಾ ಕ್ಷೇತ್ರದ ಷೇರುಗಳೂ ಗಗನಕ್ಕೆ

Follow Us:
Download App:
  • android
  • ios