Elon Musk Masterplan: ನೀವು ಕೇವಲ ಮನಸ್ಸಿನಲ್ಲಿ ಯೋಚಿಸಿದ್ದನ್ನು ರೋಬೋಟ್ ಮಾಡಿಕೊಡುವ ಕಾಲ ದೂರವಿಲ್ಲ! ಎಲಾನ್ ಮಸ್ಕ್ ನಿರ್ಮಿಸುತ್ತಿರುವ ಟೆಸ್ಲಾ, ಟ್ವಿಟರ್ ಮತ್ತು ನ್ಯೂರಾಲಿಂಕ್ ಸಾಮ್ರಾಜ್ಯದ ಹಿಂದಿರುವ ಆ ಅಪಾಯಕಾರಿ ಸತ್ಯ ಇಲ್ಲಿದೆ ನೋಡಿ.

ಟ್ವಿಟರ್ (X) ಖರೀದಿ, ಟೆಸ್ಲಾ ರೋಬೋಟ್‌ಗಳು, ಬಾಹ್ಯಾಕಾಶದಲ್ಲಿ ಡೇಟಾ ಸೆಂಟರ್, ಮತ್ತು ಮೆದುಳಿಗೆ ಚಿಪ್ ಅಳವಡಿಸುವ 'ನ್ಯೂರಾಲಿಂಕ್'... ಇವೆಲ್ಲವೂ ಪ್ರತ್ಯೇಕ ಕಂಪನಿಗಳಲ್ಲ, ಬದಲಿಗೆ ಮನುಷ್ಯನ ದೈನಂದಿನ 70% ಬದುಕನ್ನು ಒಂದೇ ಕಂಪನಿಯಡಿ ತರುವ ಎಲಾನ್ ಮಸ್ಕ್ ಅವರ ಅತ್ಯಂತ ಸಂಕೀರ್ಣ ಮತ್ತು ಭಯಾನಕ ಮಾಸ್ಟರ್ ಪ್ಲಾನ್! ಅದು ಹೇಗೆ? ಇಲ್ಲಿದೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಶ್ಲೇಷಣೆ.

ಎಲಾನ್ ಮಸ್ಕ್ ರೂಪಿಸುತ್ತಿರುವ 'ಸೂಪರ್ ಇಕೋಸಿಸ್ಟಮ್'ನ 5 ಪ್ರಮುಖ ಕೊಂಡಿಗಳು

ಟೆಸ್ಲಾ ಕೇವಲ ಕಾರು ಕಂಪನಿಯಲ್ಲ, ಭವಿಷ್ಯ ಮಾರುವ ಬುಗ್ಗೆ (Future Selling)

ಟೊಯೋಟಾ ಕಂಪನಿ ವರ್ಷಕ್ಕೆ $330 ಬಿಲಿಯನ್ ಮೌಲ್ಯದ ಕಾರುಗಳನ್ನು ಮಾರಾಟ ಮಾಡುತ್ತದೆ, ಆದರೆ ಅದರ ಮಾರುಕಟ್ಟೆ ಮೌಲ್ಯ $240 ಬಿಲಿಯನ್ ಮಾತ್ರ. ಆದರೆ ಟೆಸ್ಲಾ ಕೇವಲ $100 ಬಿಲಿಯನ್ ಕಾರು ಮಾರಿ, ಬರೋಬ್ಬರಿ $1.45 ಟ್ರಿಲಿಯನ್ ಮೌಲ್ಯ ಹೊಂದಿದೆ! ಇದಕ್ಕೆ ಕಾರಣ ಮಸ್ಕ್ ಕಾರುಗಳನ್ನು ಮಾತ್ರ ಮಾರುತ್ತಿಲ್ಲ, ಬದಲಿಗೆ "ನಾಳೆ ಹಾರುವ ಕಾರು ತರ್ತೀವಿ, ಮನೆ ಮನೆಗೂ ರೋಬೋಟ್ ತರ್ತೀವಿ" ಎಂದು ನಿರಂತರವಾಗಿ ಭವಿಷ್ಯದ ಕನಸುಗಳನ್ನು ಮಾರ್ಕೆಟಿಂಗ್ ಮಾಡುತ್ತಿದ್ದಾರೆ.

ಎಕ್ಸ್ (ಟ್ವಿಟರ್) ಮತ್ತು ಗ್ರಾಕ್ (AI ಮೆದುಳು)

ಯಾವುದೇ ಕೃತಕ ಬುದ್ಧಿಮತ್ತೆ (AI) ಮಾದರಿಯನ್ನು ತರಬೇತುಗೊಳಿಸಲು ಅಪಾರ ಪ್ರಮಾಣದ 'ಡೇಟಾ' ಬೇಕು. ಮಸ್ಕ್ ಟ್ವಿಟರ್ (X) ಅನ್ನು ಖರೀದಿಸಿದ್ದೇ ಅದಕ್ಕಾಗಿ! ಜಗತ್ತಿನ ಲಕ್ಷಾಂತರ ಜನರು ಹೇಗೆ ಯೋಚಿಸುತ್ತಾರೆ, ಏನು ಬರೆಯುತ್ತಾರೆ ಎಂಬ ಡೇಟಾವನ್ನು ಬಳಸಿ ತಮ್ಮದೇ ಆದ 'ಗ್ರಾಕ್' (Grok AI) ಎಂಬ ಡಿಜಿಟಲ್ ಮೆದುಳನ್ನು ಸೃಷ್ಟಿಸಿದ್ದಾರೆ.

ಸ್ಪೇಸ್‌ಎಕ್ಸ್ ಮತ್ತು ಸ್ಟಾರ್‌ಲಿಂಕ್ (ಬಾಹ್ಯಾಕಾಶದ ಡೇಟಾ ಸೆಂಟರ್)

ಭೂಮಿಯ ಮೇಲೆ AI ಡೇಟಾ ಸೆಂಟರ್‌ಗಳನ್ನು ನಡೆಸಲು ಅಪಾರ ಪ್ರಮಾಣದ ವಿದ್ಯುತ್ ಮತ್ತು ತಂಪಾಗಿಸಲು (Cooling) ಕೋಟ್ಯಂತರ ಲೀಟರ್ ನೀರು ಬೇಕು.
ಇದಕ್ಕೆ ಮಸ್ಕ್ ಕಂಡುಕೊಂಡ ಪ್ಲಾನ್: ಡೇಟಾ ಸೆಂಟರ್‌ಗಳನ್ನೇ ಬಾಹ್ಯಾಕಾಶಕ್ಕೆ (Space) ಕಳುಹಿಸುವುದು! ಅಲ್ಲಿ 24 ಗಂಟೆಯೂ ಸೌರಶಕ್ತಿ (Solar Power) ಸಿಗುತ್ತದೆ ಮತ್ತು ಬಾಹ್ಯಾಕಾಶ ನೈಸರ್ಗಿಕವಾಗಿಯೇ ತಣ್ಣಗಿರುತ್ತದೆ. ಅಲ್ಲಿಂದ ಭೂಮಿಗೆ ಇಂಟರ್ನೆಟ್ ಸಂಪರ್ಕ ನೀಡಲು ಈಗಾಗಲೇ ತಮ್ಮದೇ ಆದ 'ಸ್ಟಾರ್‌ಲಿಂಕ್' (Starlink) ಉಪಗ್ರಹ ಜಾಲ ಸಿದ್ಧವಾಗಿದೆ.

ಟೆಸ್ಲಾ ರೋಬೋಟ್ (ಭೌತಿಕ ಶರೀರ)

'ಗ್ರಾಕ್' ಒಂದು ಡಿಜಿಟಲ್ ಮೆದುಳಾದರೆ, ಆ ಮೆದುಳಿಗೆ ಒಂದು ಶರೀರ ಬೇಕಲ್ಲವೇ? ಅದೇ ಟೆಸ್ಲಾದ ಹ್ಯೂಮನಾಯ್ಡ್ ರೋಬೋಟ್‌ಗಳು (Optimus). ಡಿಜಿಟಲ್ ಕೆಲಸಗಳನ್ನು ಗ್ರಾಕ್ ಮಾಡಿದರೆ, ಮನೆಯ ಕಸ ಗುಡಿಸುವುದು, ಸಾಮಾನು ತರುವುದು, ಕಚೇರಿಯ ಕೆಲಸಗಳನ್ನು ಟೆಸ್ಲಾ ರೋಬೋಟ್‌ಗಳು ಮಾಡುತ್ತವೆ.

ಎಕ್ಸ್ ಮನಿ ಮತ್ತು ನ್ಯೂರಾಲಿಂಕ್ (ಅಂತಿಮ ನಿಯಂತ್ರಣ)

ಎಕ್ಸ್ ಮನಿ (X Money): ಈ ರೋಬೋಟ್‌ಗಳು ಶಾಪಿಂಗ್ ಮಾಡಲು ಬ್ಯಾಂಕ್‌ಗಳ ಹಂಗಿಲ್ಲದೆ ಸ್ವಂತ ಹಣಕಾಸು ವ್ಯವಸ್ಥೆ.

ನ್ಯೂರಾಲಿಂಕ್ (Neuralink): ನೀವು ಬಾಯಿಂದ ಕಮಾಂಡ್ ಕೊಡುವ ಅಗತ್ಯವೂ ಇರುವುದಿಲ್ಲ! ತಲೆಯಲ್ಲಿ ಕೂರಿಸುವ ಈ ಚಿಪ್ ನಿಮ್ಮ ಮೆದುಳಿನ ಆಲೋಚನೆಯನ್ನು ಓದಿ, ನೇರವಾಗಿ ರೋಬೋಟ್‌ಗೆ ಆದೇಶ ನೀಡುತ್ತದೆ. ನೀವು ಯೋಚಿಸಿದ್ದೇ ತಡ, ರೋಬೋಟ್ ಕೆಲಸ ಮುಗಿಸಿರುತ್ತದೆ!

ಇದರ ಹಿಂದಿರುವ ಆತಂಕವೇನು? (The Scary Reality)

ಇದು ಮೇಲ್ನೋಟಕ್ಕೆ ಅದ್ಭುತ ವಿಜ್ಞಾನ ಮತ್ತು ಸೌಲಭ್ಯದಂತೆ ಕಂಡರೂ, ವಾಸ್ತವದಲ್ಲಿ ಅತ್ಯಂತ ಅಪಾಯಕಾರಿ.. ನಿಮ್ಮ ಆಲೋಚನೆ, ಹಣಕಾಸು, ದೈನಂದಿನ ಕೆಲಸ ಮತ್ತು ಇಂಟರ್ನೆಟ್ ಸಂಪರ್ಕ—ಎಲ್ಲವೂ ಒಬ್ಬನೇ ವ್ಯಕ್ತಿಯ, ಒಂದೇ ಕಂಪನಿಯ ಕೈಯಲ್ಲಿರುತ್ತದೆ. ಭವಿಷ್ಯದಲ್ಲಿ ಕಚೇರಿಯ ಕೆಲಸವೂ ಉಳಿಯಲ್ಲ, ದೈಹಿಕ ಕೆಲಸವೂ ಮನುಷ್ಯನಿಗೆ ಇರಲ್ಲ ಎಂದಾದರೆ ಮಾನವನ ಅಸ್ತಿತ್ವಕ್ಕೆ ಬೆಲೆ ಎಲ್ಲಿದೆ? ಈ ಮಟ್ಟದ ಏಕಸ್ವಾಮ್ಯ (Monopoly) ಸೃಷ್ಟಿಯಾದರೆ ಸರ್ಕಾರದ ನಿಯಮಗಳಿಗೂ ಬೆಲೆ ಇರುವುದಿಲ್ಲ.