Chandrayaan 3: ಚಂದ್ರನ ನೆಲದ ಮೇಲೆ ಕಾಲಿಟ್ಟ ಬಳಿಕ ತೆಗೆದ ಮೊದಲ ಚಿತ್ರ!

ಇಲ್ಲಿಯವರೆಗೂ ಚಂದ್ರನ ಮೇಲಿನಿಂದಷ್ಟೇ ಚಂದ್ರನ ಚಿತ್ರಗಳನ್ನು ನೋಡುತ್ತಿದ್ದ ಭಾರತೀಯರಿಗೆ ಇಸ್ರೋ ಹೊಸ ಚಿತ್ರ ನೀಡಿದೆ. ಚಂದ್ರನ ನೆಲದ ಮೇಲೆ ನಿಂತು ವಿಕ್ರಮ್‌ ಲ್ಯಾಂಡರ್‌ ತೆಗೆದಿರುವ ಚಿತ್ರವನ್ನು ಇಸ್ರೋ ಪ್ರಕಟಿಸಿದೆ.
 

Chandrayaan 3 Vikram Lander First Moon Image after Landing in Lunar san

ಬೆಂಗಳೂರು (ಆ.23): ಇಲ್ಲಿಯವರೆಗೂ ಚಂದ್ರನ ಮೇಲ್ಮೈನ ಚಿತ್ರಗಳನ್ನು ಕ್ಯಾಮೆರಾಗಳ ಮೂಲಕ ಸೆರೆಹಿಡಿದಿದ್ದನ್ನು ಇಸ್ರೋ ಪ್ರಕಟ ಮಾಡುತ್ತಿತ್ತು. ಈಗ ಚಂದ್ರನ ನೆಲದ ಮೇಲೆ ಕಾಲಿಟ್ಟು, ಚಂದ್ರನ ಅಂತ್ಯಂತ ಸನಿಹದ ಫೋಟೋಗಳನ್ನು ಇಸ್ರೋ ಪ್ರಕಟಿಸಿದೆ. ವಿಕ್ರಮ್‌ ಲ್ಯಾಂಡರ್‌ ಚಂದ್ರನ ನೆಲದ ಮೇಲೆ ಕಾಲಿಟ್ಟ ಬಳಿಕ ತೆಗೆದಿರುವ ಚಿತ್ರವನ್ನು ಬೆಂಗಳೂರಿನ ಇಸ್ಟ್ರಾಕ್‌ ಪಡೆದುಕೊಂಡಿದ್ದು, ಅದನ್ನು ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದೆ. ಇದರಲ್ಲಿ ಚಂದ್ರನ ಮೇಲಿನ ವಿಕ್ರಮ್‌ ಲ್ಯಾಂಡರ್‌ನ ಒಂದು ಕಾಲು ಹಾಗೂ ಅದರ ಜೊತೆಗಿರುವ ನೆರಳು ಕೂಡ ಸೆರೆಯಾಗಿದೆ. 'ಚಂದ್ರನ ಮೇಲೆ ವಿಕ್ರಮ್‌ ಲ್ಯಾಂಡರ್‌ ಲ್ಯಾಂಡ್‌ ಆದ ಬಳಿಕ, ಲ್ಯಾಂಡಿಂಗ್‌ ಇಮೇಜರ್‌ ಕ್ಯಾಮೆರಾ ಸೆರೆ ಹಿಡಿದಿರುವ ಚಿತ್ರವಿದು. ಇದು ಚಂದ್ರಯಾನ-3 ಲ್ಯಾಂಡಿಂಗ್‌ ಸೈಟ್‌ನ ಸಣ್ಣ ಭಾಗವನ್ನು ತೋರಿಸುತ್ತದೆ. ವಿಕ್ರಮ್‌ ಲ್ಯಾಂಡರ್‌ನ ಒಂದು ಕಾಲು ಹಾಗೂ ಅದರ ನೆರಳು ಸ್ಪಷ್ಟವಾಗಿ ಕಂಡಿದೆ. ಚಂದ್ರನ ಮೇಲ್ಮೈ ಮೇಲೆ ಚಂದ್ರಯಾನ-3 ಅತ್ಯಂತ ಸಮತಟ್ಟಾದ ಜಾಗವನ್ನು ಇಳಿಯಲು ಆಯ್ಕೆ ಮಾಡಿಕೊಂಡಿದೆ' ಎಂದು ಇಸ್ರೋ ತನ್ನ ಟ್ವೀಟ್‌ನಲ್ಲಿ ಬರೆದುಕೊಂಡಿದೆ.

ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ಯಾತ್ರಿಗಳಿಗೆ ಸಲಾಂ, ಕಾಂಗ್ರೆಸ್ ಕ್ರೀಡಾ ಸಚಿವರ ಎಡವಟ್ಟು ವೈರಲ್!

ಇದಕ್ಕಿಂತ ಮುಂಚೆ ಇಸ್ರೋ ಹಂಚಿಕೊಂಡ ಚಂದ್ರನ ಚಿತ್ರಗಳೆಲ್ಲವೂ ಅಲ್ಲಿನ ವಾತಾವರಣದ ಮೇಲಿನಿಂದ ತೆಗೆದ ಚಿತ್ರಗಳಾಗಿದ್ದವು. ಈ ಚಿತ್ರ ಪೋಸ್ಟ್‌ ಮಾಡುವ ಮುನ್ನ ಇಸ್ರೋ, ಲ್ಯಾಂಡರ್‌ನ ಹಾರಿಜಾಂಟಲ್‌ ವೆಲಾಸಿಟಿ ಕ್ಯಾಮೆರಾ ಇಳಿಯುವ ಹಂತದ ವೇಳೆ ತೆಗೆದ ನಾಲ್ಕು ಚಿತ್ರಗಳನ್ನು ಕೂಡ ಇಸ್ರೋ ಪ್ರಕಟ ಮಾಡಿತ್ತು.

ಚಂದ್ರಯಾನ 3.0 ಮಹತ್ವ ಮತ್ತು ಸವಾಲುಗಳು

Latest Videos
Follow Us:
Download App:
  • android
  • ios