ತಾವು ಕಲಿತ ವಿದ್ಯಾಸಂಸ್ಥೆಗೆ ತಲಾ 25 ಲಕ್ಷ ರೂ ದಾನ ಮಾಡಿದ ಚಂದ್ರಯಾನ 3 ವಿಜ್ಞಾನಿಗಳು!
ಭಾರತ ಚಂದ್ರಯಾನ 3 ಮೂಲಕ ಯಶಸ್ವಿಯಾಗಿ ಚಂದ್ರನ ಮೇಲೆ ಕಾಲಿಟ್ಟಿದೆ. ಈ ಸಾಧನೆಯನ್ನು ಜಗತ್ತೇ ಕೊಂಡಾಡುತ್ತಿದೆ. ಈ ಸಾಧನೆಯ ಹಿಂದಿರುವ ವಿಜ್ಞಾನಿಗಳ ಕೊಡುಗೆ, ಸತತ ಪರಿಶ್ರಮಕ್ಕೆ ದೇಶವೇ ಸಲಾಂ ಹೇಳಿದೆ. ಇದೀಗ ಈ ವಿಜ್ಞಾನಿಗಳು ತಮಗೆ ಸರ್ಕಾರ ನೀಡಿದ 25 ಲಕ್ಷ ರೂಪಾಯಿ ಬಹುಮಾನವನ್ನು ತಾವು ಕಲಿತ ವಿದ್ಯಾಸಂಸ್ಥೆಗೆ ದಾನ ಮಾಡಿ ಮಾದರಿಯಾಗಿದ್ದಾರೆ.
ಬೆಂಗಳೂರು(ನ.10) ಇಸ್ರೋ ವಿಜ್ಞಾನಿಗಳ ಸತತ ಪರಿಶ್ರಮದ ಮೂಲಕ ಚಂದ್ರಯಾನ 3 ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದು ಇತಿಹಾಸ ರಚಿಸಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದು ಅಧ್ಯಯನ ನಡೆಸಿರುವ ಚಂದ್ರಯಾನ 3, ಹಲವು ಮಾಹಿತಿಗಳನ್ನು ರವಾನಿಸಿದೆ. ಇಸ್ರೋ ಸಾಧನೆಗೆ ವಿಶ್ವದೆಲ್ಲೆಡೆ ಪ್ರಶಂಸೆಗಳು ವ್ಯಕ್ತವಾಗುತ್ತಿದೆ. ಇದೀಗ ಇಸ್ರೋ ವಿಜ್ಞಾನಿಗಳ ನಡೆ ಎಲ್ಲರಿಗೂ ಮಾದರಿಯಾಗಿದೆ. ಮನೆ ಸಾಲ ಸೇರಿದಂತೆ ಹಲವು ಸಾಲಗಳಿದ್ದರೂ ಸರ್ಕಾರ ನೀಡಿದ 25 ಲಕ್ಷ ರೂಪಾಯಿ ಹಣ ದೇಣಿಗೆ ನೀಡಿದ್ದಾರೆ. ಹೌದು, ಇಸ್ರೋದ ಮೂವರು ಪ್ರಮುಖ ವಿಜ್ಞಾನಿಗಳು ತಮಗೆ ಸರ್ಕಾರ ನೀಡಿದ 25 ಲಕ್ಷ ರೂಪಾಯಿ ಹಣವನ್ನು ದಾನ ಮಾಡಿದ್ದಾರೆ.
ರೈಲ್ವೇ ಟೆಕ್ನೀಶಿಯನ್ ಪುತ್ರ, 46 ವರ್ಷ ವೀರಮುತ್ತುವೇಲ್ ಚಂದ್ರಯಾನ 3 ಪ್ರಾಜೆಕ್ಟ್ ಡೈರೆಕ್ಟರ್ ಆಗಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ವೀರಮುತ್ತುವೇಲ್ ಸೇರಿದಂತೆ ಪ್ರಮುಖ 8 ವಿಜ್ಞಾನಿಗಳಿಗೆ ತಮಿಳುನಾಡು ಸರ್ಕಾರ ತಲಾ 25 ಲಕ್ಷ ರೂಪಾಯಿ ನಗದು ಬಹುಮಾ ನೀಡಿ ಸನ್ಮಾನಿಸಿತ್ತು. ವೀರಮುತ್ತುವೇಲ್ ಮನೆ ಸಾಲ ಸೇರಿದಂತೆ ಹಲವು ಸಾಲಗಳು ಇನ್ನೂ ಬಾಕಿ ಇವೆ. ಇದರ ನಡುವೆ ಸರ್ಕಾರ ನೀಡಿದ 25 ಲಕ್ಷ ರೂಪಾಯಿ ಬಹುಮಾನ ಮೊತ್ತವನ್ನು ವೀರಮುತ್ತುವೇಲ್ ತಾವು ಕಲಿತ ವಿದ್ಯಾಸಂಸ್ಥೆಗೆ ದಾನ ಮಾಡಿದ್ದಾರೆ.
ಚಂದ್ರಯಾನ ಬೆನ್ನಲ್ಲೇ ಇಸ್ರೋಗೆ ಮತ್ತೊಂದು ಸಕ್ಸಸ್, ಸೂರ್ಯನ ಶಕ್ತಿ ಸ್ಫೋಟ ಸೆರೆ ಹಿಡಿದ ಆದಿತ್ಯ L1!
ಇಸ್ರೋದ ಯುಆರ್ ರಾವ್ ಸ್ಯಾಟಲೈಟ್ ಸೆಂಟರ್ ಬೆಂಗಳೂರಿನ ಮತ್ತೊರ್ವ ವಿಜ್ಞಾನಿ ಡಾ.ಶಂಕರನ್ ಕೂಡ ತಮಗೆ ತಮಿಳುನಾಡು ಸರ್ಕಾರ ನೀಡಿದ 25 ಲಕ್ಷ ರೂಪಾಯಿ ಹಣವನ್ನ ತಾವು ಕಲಿತ ತಾಂತೈ ಪೆರಿಯಾರ್ ಸರ್ಕಾರಿ ಕಲೆ ಹಾಗೂ ವಿಜ್ಞಾನ ಕಾಲೇಜು ತಮಿಳುನಾಡಿಗೆ ದಾನ ಮಾಡಿದ್ದರೆ.
ಈ ಕುರಿತು ಮಾತನಾಡಿರುವ ವೀರಮುತ್ತುವೇಲ್, ನಾನು ಬಡ ಕುಟುಂಬದಿಂದ ಬಂದಿರುವ ವ್ಯಕ್ತಿ. ನಾನು ಕಷ್ಟವನ್ನು ನೋಡಿದ್ದೇನೆ. ಫೀಸ್ ಕಟ್ಟಲು ಸಾಧ್ಯವಾಗದ ಪರಿಸ್ಥಿತಿಯನ್ನು ಎದುರಿಸಿದ್ದೇನೆ. ಸರ್ಕಾರಿ ಶಾಲೆ, ಕಾಲೇಜಿನಲ್ಲಿ ಓದಿದ್ದೇನೆ. ಸರ್ಕಾರಿ ಶಾಲೆಯಲ್ಲಿ ಕಲಿಯುವ ಬಹುತೇಕ ವಿದ್ಯಾರ್ಥಿಗಳ ಕನಸು ದೊಡ್ಡದಾಗಿರುತ್ತದೆ. ಆಧರೆ ಆರ್ಥಿಕ ನೆರವಿನ ಕೊರತೆಯಿಂದ ತಮ್ಮ ಕನಸು ಕೈಬಿಡುತ್ತಾರೆ. ಹೀಗಾಗಿ ನನಗೆ ಬಂದಿರು ಬಹುಮಾನ ಮೊತ್ತವನ್ನು ಸರ್ಕಾರಿ ಶಾಲೆಗೆ ದಾನ ನೀಡುತ್ತಿದ್ದೇನೆ. ಈ ಹಣ ದೊಡ್ಡ ಕನಸು ಕಟ್ಟಿಕೊಂಡ ಬಡ ವಿದ್ಯಾರ್ಥಿಗಳಿಗೆ ನೆರವಾಗಲಿ ಎಂದಿದ್ದಾರೆ.
ಮಾನವಸಹಿತ ಗಗನಯಾನಕ್ಕೆ ಮುನ್ನುಡಿ ಬರೆದ ಭಾರತ: ಇಸ್ರೋ ಮಹತ್ ವಿಕ್ರಮ